ಕಾಬೂಲ್ : ಮಹಿಳೆಯರು ಪರಸ್ಪರರ ಉಪಸ್ಥಿತಿಯಲ್ಲಿ ಜೋರು ಧ್ವನಿಯಲ್ಲಿ ಪ್ರಾರ್ಥನೆ ಮಾಡುವುದನ್ನು ತಾಲಿಬಾನ್ ನಿಷೇಧಿಸಿ ಆದೇಶ ಹೊರಡಿಸಿದೆ.
‘ಸದ್ಗುಣಗಳ ಮೈಗೂಡಿಸಿಕೊಳ್ಳುವಿಕೆ ಹಾಗೂ ದುಷ್ಕೃತ್ಯಗಳ ತಡೆ’ಗಾಗಿ ತಾಲಿಬಾನ್ ಸಚಿವ ಮೊಹಮ್ಮದ್ ಖಾಲಿದ್ ಹನಾಫಿ ಈ ಆದೇಶ ಹೊರಡಿಸಿದ್ದಾರೆ’ ‘ಮಹಿಳೆಯ ಧ್ವನಿಯನ್ನು ‘ಅವ್ರಾ’ (ಮರೆಮಾಚುವಿಕೆ) ಎಂದು ಪರಿಗಣಿಸಲಾಗುತ್ತದೆ.
ಈ ನಡುವೆ ಮೇಲ್ನೋಟಕ್ಕೆ ಇದು ಪ್ರಾರ್ಥನೆಗೆ ಸೀಮಿತವಾಗಿದ್ದರೂ, ಇದನ್ನು ತಾಲಿಬಾನ್ ಸಾರ್ವತ್ರಿಕಗೊಳಿಸುವ ಅಪಾಯ ಇದೆ. ಹೀಗಾದಲ್ಲಿ ಮಹಿಳೆಯರು ಮುಕ್ತವಾಗಿ ಮಾತನಾಡುವ ಸ್ವಾತಂತ್ರ್ಯ ಕಳೆದುಕೊಳ್ಳಲಿದ್ದಾರೆ. ಅವರು ಸಾರ್ವಜನಿಕ ಜೀವನದಿಂದ ದೂರ ಉಳಿಯಲಿದ್ದಾರೆ’ ಎಂದು ಅನೇಕರು ಆತಂಕ ವ್ಯಕ್ತಪಡಿಸಿದ್ದಾರೆ.
ಮಹಿಳೆಯರು ಶಿರವಸ್ತ್ರ (ಹಿಜಾಬ್) ಧರಿಸುವುದು, ಮುಖ ಸೇರಿ ಸಂಪೂರ್ಣ ದೇಹ ಮುಚ್ಚುವ ಬಟ್ಟೆ (ಬುರ್ಖಾ) ಧರಿಸುವುದು, ಜೋರು ಧ್ವನಿಯಲ್ಲಿ ಸಂಗೀತ ಹಾಕಿ ಪುರುಷರು-ಮಹಿಳೆಯರು ಬೆರೆಯುವುದು ನಿರ್ಬಂಧಿಸಿದೆ.
ಸಂಬಂಧ ಪಡದ ಮಹಿಳೆಯರನ್ನು ಮುಸ್ಲಿಂ ಪುರುಷರು ನೋಡುವುದು ಹಾಗೂ ಸಂಬಂಧಪಡದ ಪುರುಷರನ್ನು ಮುಸ್ಲಿಂ ಮಹಿಳೆಯರು ನೋಡುವುದನ್ನೂ ನಿರ್ಬಂಧಿಸಿ ‘ಹರಾಂ’ ಎಂದು ಕರೆಯಲಾಗಿದ್ದು, ಇದರ ಜಾರಿಯ ಮೇಲುಸ್ತುವಾರಿಯನ್ನು ಓಂಬುಡ್ಸ್‌ಮನ್‌ಗಳಿಗೆ ವಹಿಸಲಾಗಿದೆ.
ಮನೆಯ ಹೊರಗೆ ಕೆಲಸ ಮಾಡಲು ಅನುಮತಿಸಲಾದ ಕೆಲವು ಅಫ್ಘಾನ್ ಮಹಿಳೆಯರು ಸಾರ್ವಜನಿಕವಾಗಿ, ವಿಶೇಷವಾಗಿ ಪುರುಷ ಸಂಬಂಧಿಕರೊಂದಿಗೆ ಮಾತನಾಡುವುದನ್ನು ನಿರ್ಬಂಧಿಸಲಾಗಿದೆ. ಕೆಲಸ ಮತ್ತು ಶಿಕ್ಷಣಕ್ಕೆ ಮಹಿಳೆಯರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಕುಟುಂಬದ ಗಂಡಸಿನ ಜೊತೆ ಇಲ್ಲದಂತೆ ಮಹಿಳೆ ಏಕಾಂಗಿಯಾಗಿ ಓಡಾಡುವಂತಿಲ್ಲ ಎಂಬ ನಿಯಮ ಹೇರಿದೆ.