Mansa (Punjab) News:
TEACHER GOT 21 DEGREES, ರಾಷ್ಟ್ರಪತಿ ಪ್ರಶಸ್ತಿ, ಹಲವು ಚಿನ್ನದ ಪದಕಗಳು, ದೇಶದ ಎಲ್ಲ ಭಾಷೆಗಳ ಸುದ್ದಿ ಪತ್ರಿಕೆ, ಪುಸ್ತಕಗಳ ಸಂಗ್ರಹಕಾರರಾಗಿರುವ ಜೊತೆಗೆ ಶಿಕ್ಷಕ ವೃತ್ತಿ. ಇದು ಇಲ್ಲಿನ ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರ ಸಾಧನೆಯ ಪಟ್ಟಿ. ಈ ಶಿಕ್ಷಣ ದಾಹಿಯ ಹೆಸರು ವಿಜಯ್ಕುಮಾರ್.
ಪಂಜಾಬ್ನ ಮಾನ್ಸ ಜಿಲ್ಲೆಯ ಬುಧ್ಲಾಡಾದ ಸರ್ಕಾರಿ ಬಾಲಕರ ಮಾಧ್ಯಮಿಕ ಶಾಲೆಯ ಪ್ರಾಂಶುಪಾಲರು. ಶಿಕ್ಷಣದ ಮೇಲಿನ ಅವರ ಅಪರಿಮಿತ ಪ್ರೀತಿ ಮತ್ತು ಶ್ರದ್ಧೆ ಅವರನ್ನು ಈ ಹಂತಕ್ಕೆ ತಂದು ನಿಲ್ಲಿಸಿದೆ. ನಿವೃತ್ತಿಯ ಗೆರೆಯಲ್ಲಿರುವ ಪ್ರಾಂಶುಪಾಲರ ಶಿಕ್ಷಣ ಪ್ರೇಮಕ್ಕೆ ನಿವೃತ್ತಿಯೇ ಇಲ್ಲವಾಗಿದೆ. ಇದಕ್ಕೆ ಉದಾಹರಣೆ, ಈವರೆಗೂ TEACHER GOT 21 DEGREES, 22ನೇ ಪದವಿಗೆ ಅಧ್ಯಯನದಲ್ಲಿ ತೊಡಗಿರುವುದು.
ಹೌದು, ಸರ್ಕಾರಿ ಶಾಲೆಯ ಪ್ರಾಂಶುಪಾಲರೊಬ್ಬರು ಒಂದಲ್ಲ, ಎರಡಲ್ಲ TEACHER GOT 21 DEGREES. ಈ ಸಾಧಕನ ಮುಕುಟಕ್ಕೆ ಮತ್ತೊಂದು ಗರಿ ಎಂಬಂತೆ 22ನೇ ಪದವಿಗಾಗಿ ಅಧ್ಯಯನ ನಡೆಸುತ್ತಿದ್ದಾರೆ.
Study for knowledge in all fields:
ಈ ಬಗ್ಗೆ ಮಾತನಾಡಿರುವ ಪ್ರಾಂಶುಪಾಲ ವಿಜಯ್ಕುಮಾರ್, “ಜೀವನದಲ್ಲಿ ವಿವಿಧ ವಿಷಯಗಳಲ್ಲಿ ಅಧ್ಯಯನ ಮಾಡುವ ಮೂಲಕ ಜ್ಞಾನವನ್ನು ಪಡೆಯುವ ಬಯಕೆ ಇದೆ. ಹೀಗಾಗಿ, ವಿವಿಧ ವಿಷಯಗಳಲ್ಲಿ 21 ಸ್ನಾತಕೋತ್ತರ ಪದವಿ ಪಡೆದಿದ್ದೇನೆ. ಇದೀಗ, 22ನೇ ಪದವಿ ಅಧ್ಯಯನವೂ ಮುಗಿಯುವ ಹಂತದಲ್ಲಿದೆ. ಶಿಕ್ಷಣ ಯಾರೂ ಕಸಿಯಲಾಗದ ನಿಧಿ. ಜೀವನದ ಕೊನೆಯವರೆಗೂ ಅಧ್ಯಯನ ಮಾಡಿ, ಜ್ಞಾನಾರ್ಜನೆ ಮಾಡಿಕೊಳ್ಳಬೇಕು” ಎಂದು ಯುವ ಸಮೂಹಕ್ಕೆ ಸಲಹೆ ನೀಡುತ್ತಾರೆ.
Obsession with studies that started during graduation:
ಅಧ್ಯಯನದ ಸಾಲಿನಲ್ಲಿ ಅವರಿಗೆ ಪಂಜಾಬ್ ವಿವಿ ಚಿನ್ನದ ಪದಕ ನೀಡಿದೆ. ವಿವಿಧ ಚಟುವಟಿಕೆಗಳಿಗಾಗಿ ರಾಷ್ಟ್ರಪತಿ ಪ್ರಶಸ್ತಿಯೂ ಇವರನ್ನು ಅರಸಿ ಬಂದಿದೆ. ಇದಲ್ಲದೆ, ರಾಜ್ಯ ಪ್ರಶಸ್ತಿ ಮತ್ತು ಜಿಲ್ಲಾ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ.
ಪ್ರಾಂಶುಪಾಲ ವಿಜಯ್ಕುಮಾರ್ ಅವರು ಪದವಿ ವ್ಯಾಸಂಗದ ವೇಳೆ ಶಿಕ್ಷಣದ ಗೀಳು ಬೆಳೆಸಿಕೊಂಡಿದ್ದಾರೆ. ಶಿಕ್ಷಕರಾಗಿ ಸರ್ಕಾರ ಹುದ್ದೆ ಸೇರಿದ ಬಳಿಕವೂ ಅಧ್ಯಯನ ನಿಲ್ಲಿಸಿಲ್ಲ. ಪಟಿಯಾಲಾದ ಪಂಜಾಬಿ ವಿಶ್ವವಿದ್ಯಾಲಯದಿಂದ ವಿವಿಧ ವಿಷಯಗಳಲ್ಲಿ 17 ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
ಜಲಂಧರ್‌ನ ಲವ್ಲಿ ಪ್ರೊಫೆಷನಲ್ ವಿಶ್ವವಿದ್ಯಾಲಯ, ದೆಹಲಿಯ ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ, ಜೈನ್ ವಿಶ್ವವಿದ್ಯಾಲಯದಿಂದಲೂ ಪದವಿ ಗಳಿಸಿದ್ದಾರೆ.
ಅಧ್ಯಯನವನ್ನೇ ಹವ್ಯಾಸವನ್ನಾಗಿ ಮಾಡಿಕೊಂಡಿರುವ ಶಿಕ್ಷಕರು, ವಿವಿಧ ದೇಶಗಳು ಮತ್ತು ಭಾರತದ ಎಲ್ಲಾ ರಾಜ್ಯಗಳ ವಿವಿಧ ಭಾಷೆಗಳ ಸುದ್ದಿ ಪತ್ರಿಕೆಗಳನ್ನು ಸಂಗ್ರಹಿಸಿದ್ದಾರೆ. ಜೊತೆಗೆ, ವಿವಿಧ ಲೇಖಕರ 2500 ಕ್ಕೂ ಅಧಿಕ ಪುಸ್ತಕ, ಗ್ರಂಥಗಳನ್ನು ತಮ್ಮ ಮನೆಯ ಗ್ರಂಥಾಲಯದಲ್ಲಿ ಮಟ್ಟಸವಾಗಿ ಶೇಖರಿಸಿಟ್ಟಿದ್ದಾರೆ.
ಇದನ್ನು ಓದಿರಿ : After a massive opening, how is Ajith Kumar’s latest release