ಮಾಜಿ ಸಚಿವ ಕುಮಾರ್ ಬಂಗಾರಪ್ಪ ನಿವಾಸದಲ್ಲಿ ಸಭೆ ಬಳಿಕ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್,ಅಪ್ಪ, ಮಕ್ಕಳಿಂದ ಪಕ್ಷ ನಾಶವಾಗುತ್ತಿದೆ. ಹೀಗಾಗಿ ಬಿಎಸ್ ಯಡಿಯೂರಪ್ಪ ಮತ್ತು ವಿಜಯೇಂದ್ರ ವಿರುದ್ಧ ಹೈಕಮಾಂಡ್ಗೆ ದೂರು ನೀಡಲು ಯತ್ನಾಳ್ ತಂಡ ತೀರ್ಮಾನಿಸಿದೆ. ವಿಜಯೇಂದ್ರ ಮತ್ತು ಯಡಿಯೂರಪ್ಪ ಮಾಡಿರುವ ಪಕ್ಷ ವಿರೋಧಿ ಕೆಲಸವನ್ನು ಹೈಕಮಾಂಡ್ಗೆ ತಿಳಿಸಲು ನಿರ್ಧಾರ ಮಾಡಿದ್ದೇವೆ ಎಂದಿದ್ದಾರೆ.
ಯತ್ನಾಳ್ ದೊಡ್ಡ ಹೇಳಿಕೆ ನೀಡಿದ್ದಾರೆ!
BJP ಪಕ್ಷ ನಾಶವಾಗುತ್ತಿದೆ. ಅತೃಪ್ತರೆಲ್ಲಾ ಸೇರಿ ಹೈಕಮಾಂಡ್ ಗಮನಕ್ಕೆ ತರುತ್ತೇವೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Yatnal) ಹೇಳಿದ್ದಾರೆ. ಮಾಜಿ ಸಚಿವ ಕುಮಾರ್ ಬಂಗಾರಪ್ಪ ನಿವಾಸದಲ್ಲಿ ಸಭೆ ನಡೆಸಿದ ಬಳಿಕ ಜೊತೆಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಬಿಜೆಪಿ ಸರಿ ಹೋಗುತ್ತಿಲ್ಲ.
ಬಿಜೆಪಿ ಹಾಳಾಗಲು ಯಾರು ಕಾರಣ?
ಅಪ್ಪ, ಮಕ್ಕಳ(ಬಿಎಸ್ವೈ, ವಿಜಯೇಂದ್ರ ) ಪಕ್ಷವಾಗಿರುವುದನ್ನು ಮುಕ್ತ ಮಾಡಬೇಕು. ಲೋಕಸಭಾ ಚುನಾವಣೆಯಲ್ಲಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಮತ್ತು ಯಡಿಯೂರಪ್ಪ ಪಕ್ಷ ವಿರೋಧಿ ಚಟುವಟಿಕೆ ಮಾಡಿರುವುದನ್ನು ಹೈಕಮಾಂಡ್ ಗಮನಕ್ಕೆ ತರಬೇಕು. ಸಮಾನ ಮನಸ್ಕರು, ಸೋತ ಅಭ್ಯರ್ಥಿಗಳು, ಗೆದ್ದವರು ಎಲ್ಲರೂ ಕೂಡ ಹೈಕಮಾಂಡ್ಗೆ ವಿಜಯೇಂದ್ರ ಮತ್ತು ಯಡಿಯೂರಪ್ಪ ಮಾಡಿರುವ ಪಕ್ಷ ವಿರೋಧಿ ಕೆಲಸವನ್ನು ತಿಳಿಸಲು ನಿರ್ಧಾರ ಮಾಡಿದ್ದೇವೆ ಎಂದು ಹೇಳಿದ್ದಾರೆ. ಮೊದಲು ನಾವೆಲ್ಲರೂ ದೊಡ್ಡ ಸಭೆ ಮಾಡಲು ತೀರ್ಮಾನ ಮಾಡಿದ್ದೇವೆ. ಜೊತೆಗೆ ನಮ್ಮ ಜೊತೆ ಸೇರುವವರು ಬಹಳ ದೊಡ್ಡ ಸಂಖ್ಯೆಯಲ್ಲಿ ಇದ್ದಾರೆ. ಬಿಜೆಪಿಯಲ್ಲಿ ಇಷ್ಟು ಅಸಮಾಧಾನ ಇದೆ ಅಂತಾ ನನಗೆ ಅನ್ನಿಸಿರಲಿಲ್ಲ ಎಂದಿದ್ದಾರೆ.
ಬಿಎಸ್ವೈ ವಿರುದ್ಧ ಯತ್ನಾಳ್ ರಾಣಾ ಕಹಳೆ!
ಬಿಎಸ್ವೈ ವಿರುದ್ಧ ಯತ್ನಾಳ ಸಾಹೇಬ್ರು ಜೊತೆಗೆ ಇವಾಗ ರಮೇಶ್ ಜಾರಕಿಹೊಳಿ ಕೂಡ ಕೈ ಜೋಡಿಸಿ ಬಿಎಸ್ವೈ ಮತ್ತು ವಾರ ಪುತ್ರನ ವಿರುದ್ಧ ರಾಣಾ ಕಹಳೆ ಉಡುತ್ತಿದ್ದರೆ. ಬಿಜೆಪಿ ಯಲ್ಲಿ ನಿಜಕ್ಕೂ ದೊಡ್ಡ ಬಿರುಗಾಳಿ ಬಿಸುತ್ತೆ ಎಂದು ಎಲ್ಲರ ಅಭಿಪ್ರಾಯ ವಾಗಿದೆ.
ಇನ್ನಷ್ಟು ಓದಿರಿ:
ನಮ್ಮ ಕುಟುಂಬಕ್ಕೆ ವಿಷ ಹಾಕಿದವನನ್ನ ಬೆಂಬಲಿಸಬೇಕಾ..? : ಕುಮಾರಣ್ಣ ಗರಂ
BSY ವಿರುದ್ಧ ಮಾಡಿದ್ದೇನು? ಮತ್ತು ಯಾರು? CM Siddaramaiah ಫುಲ್ ಭಯದಲ್ಲಿ!
ಯತ್ನಾಳ ಬೇಸರಕ್ಕೆ ಕಾರಣ ಏನು?
ಅನೇಕ ಜನರ ಊಹೆ ಅಂದ್ರೆ ಯತ್ನಾಳ್ ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣು ಇಟ್ತುಯ್ಕೊಂಡು ಕೂತಿದ್ದಾರೆ, ಜೊತೆಗೆ ರಮೇಶ್ ಜಾರಕಿಹೊಳಿ ಯಂತಹ ಹಣವಂತರ ಹಣ ಪಡೆದುಕೊಂಡು ಹೊಸ ಬಣ ಒಂದನ್ನು ತಯಾರಿಸಲಿದ್ದಾರೆ ಎಂದು ಕೂಡ ಮಾತುಗಳು ಕೇಳಿಬರುತ್ತಿವೆ.. ಬಿಜೆಪಿ ಯವರು ಯತ್ನಾಳ್ ಹಾಗು ಅವರ ಶಾಸಕರ ಮಾತು ಕೇಳದೆ ಹೋದರೆ, ನಿಜಕ್ಕೂ ರಾಜ್ಯ ಬಿಜೆಪಿಯಲ್ಲಿ ದೊಡ್ಡ ಸುನಾಮಿ ಬರುತ್ತೆ ಎಂದು ಸಾಮಾನ್ಯ ಜನ ಹೇಳುತ್ತಿದ್ದಾರೆ.
ಮೂಡ ‘ಭೂ ಚಕ್ರ’ ದಲ್ಲಿ ಸಿಲುಕಿರುವ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರನ್ನು ರಕ್ಷಿಸಲು ಘನತೆವೆತ್ತ ರಾಜ್ಯಪಾಲರು ಸಿದ್ದರಾಮಯ್ಯ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಸಮ್ಮತಿ ನೀಡದಂತೆ ರಾಜ್ಯ ಸಚಿವ ಸಂಪುಟ ರಾಜ್ಯಪಾಲರ ವಿರುದ್ಧವೇ ನಿರ್ಣಯ ಹೊರಡಿಸಿರುವುದು ಸಚಿವ ಸಂಪುಟದ ದುರ್ಬಳಕೆ ಆಗುತ್ತದೆ.
ಈ ರೀತಿಯಾದ ಸಂವಿಧಾನ ವಿರೋಧಿ ಕ್ರಮಗಳನ್ನು…
— Basanagouda R Patil (Yatnal) (@BasanagoudaBJP) August 1, 2024