ಬೆಂಗಳೂರು: ಟೆನಿಸ್ ದಿಗ್ಗಜ ರಾಫೇಲ್ ನಡಾಲ್ ಅವರು ನವ್ಹೆಂಬರ್ ಡೇವಿಸ್ ಕಪ್ ಫೈನಲ್‌ನ ನಂತರ ವೃತ್ತಿಪರ ಟೆನಿಸ್‌ನಿಂದ ನಿವೃತ್ತಿ ಹೊಂದುವುದಾಗಿ ಗುರುವಾರ ಘೋಷಿಸಿದ್ದಾರೆ.
22 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಮತ್ತು ಒಲಿಂಪಿಕ್ ಸಿಂಗಲ್ಸ್ ನಲ್ಲಿ ರಾಫೆಲ್ ನಡಾಲ್ ಅವರು ಚಿನ್ನ ಗೆದ್ದಿರುವ ಇವರು 2008 ಮತ್ತು 2010ರಲ್ಲಿ ವಿಂಬಲ್ಡನ್ ಚಾಂಪಿಯನ್ ಆಗಿದ್ದ ನಡಾಲ್ ಕಳೆದೆರಡು ವರ್ಷಗಳಿಂದ ವಿವಿಧ ಗಾಯಗಳಿಂದ ಬಳಲುತ್ತಿದ್ದರು.
“ನಾನು ವೃತ್ತಿಪರ ಟೆನಿಸ್‌ನಿಂದ ನಿವೃತ್ತಿಯಾಗುತ್ತಿದ್ದೇನೆ. ವಾಸ್ತವವೆಂದರೆ ಇದು ವಿಶೇಷವಾಗಿ ಕಳೆದ ಎರಡು ವರ್ಷಗಳು ಅತ್ಯಂತ ಕಷ್ಟಕರ ವರ್ಷಗಳು” ಎಂದು ನಡಾಲ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ ಹೇಳಿದ್ದಾರೆ. “ಇದು ನಿಸ್ಸಂಶಯವಾಗಿ ಕಠಿಣ ನಿರ್ಧಾರವಾಗಿದೆ. ಈ ನಿರ್ಧಾರ ತೆಗೆದುಕೊಳ್ಳಲು ನನಗೆ ಸ್ವಲ್ಪ ಸಮಯ ತೆಗೆದುಕೊಂಡಿತು. ಆದರೆ ಜೀವನದಲ್ಲಿ ಪ್ರತಿಯೊಂದಕ್ಕೂ ಆರಂಭ ಮತ್ತು ಅಂತ್ಯವಿದೆ” ಎಂದು ಹೇಳಿದ್ದಾರೆ.
ಅವರು ಕೊನೆಯ ಬಾರಿ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಪುರುಷರ ಡಬಲ್ಸ್ ಕ್ವಾರ್ಟರ್‌ಫೈನಲ್‌ಗೆ ತಲುಪಿದ್ದರು. ಅಲ್ಲಿ ಅವರು ಎರಡನೇ ಸುತ್ತಿನ ಸಿಂಗಲ್ಸ್‌ನಲ್ಲಿ ನೊವಾಕ್ ಜೊಕೊವಿಕ್ ವಿರುದ್ಧ ನಡಾಲ್ ಸೋಲು ಅನುಭವಿಸಿದ್ದರು. ಕಳೆದ ತಿಂಗಳು US ಓಪನ್‌ನಿಂದ ಹಿಂದೆ ಸರಿದಿದ್ದರು.