spot_img
spot_img

ಭಾರತ ತಂಡಕ್ಕೆ ಟೆನ್ಷನ್; ಎದುರಾಯ್ತು 4 ಬಿಗ್ಗೆಸ್ಟ್ ಚಾಲೆಂಜ್.!!

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ತವರಿನಲ್ಲಿ ಟೀಮ್ ಭಾರತ  ಹುಲಿಗಳು ಬಾಂಗ್ಲಾ ಹುಲಿಗಳನ್ನ ಸುಲಭವಾಗಿ ಭೇಟೆಯಾಡುವ ಲೆಕ್ಕಚಾರದಲ್ಲಿದೆ. ಅದಕ್ಕಾಗಿ ತಂಡವು ಸಜ್ಜಾಗಿದೆ. ಆದ್ರೀಗ  ಸೈನ್ಯದ ನಾಯಕ ರೋಹಿತ್ ಶರ್ಮಾ ಹಾಗೂ ಗಂಭೀರ್​ ಅವರನ್ನು ಸಂಕಷ್ಟಕ್ಕೆ ದೂಡಿದೆ.

ಬಾಂಗ್ಲಾ ಭೇಟೆಯಾಡೋ ಇಂಡಿಯಾ ಟೆನ್ಷನ್ ಟೆನ್ಷನ್​​
ಭಾರತ-ಬಾಂಗ್ಲಾದೇಶ ಟೆಸ್ಟ್​​ ದಂಗಲ್​ ಸಮೀಪಿಸಿದೆ. ಸಪ್ಟೆಂಬರ್​​ 19 ರಿಂದ ಉಭಯ ದೇಶಗಳ ನಡುವೆ ರೆಡ್​ಬಾಲ್​​​​ ವಾರ್​ ಆರಂಭಗೊಳ್ಳಲಿದ್ದು, ಎಲ್ಲರ ಚಿತ್ತ ಈ ಸರಣಿ ಮೇಲೆ ನೆಟ್ಟಿದೆ. ಬಿಸಿಸಿಐ ಆಯ್ಕೆ ಸಮಿತಿ ಏನೋ ಬಾಂಗ್ಲಾ ಸಂಹಾರಕ್ಕೆ ಬಲಿಷ್ಠ 16 ಸದಸ್ಯರ ಸೈನ್ಯವನ್ನ ಪ್ರಕಟಿಸಿದೆ. ಆದ್ರೆ ಆಡುವ ಹನ್ನೊಂದರ ಬಳಗದ ಆಯ್ಕೆ ಕ್ಯಾಪ್ಟನ್ ರೋಹಿತ್​ ಶರ್ಮಾ ಹಾಗೂ ಹೆಡ್​ಕೋಚ್​​ ಗೌತಮ್ ಗಂಭೀರ್​ ದೊಡ್ಡ ತಲೆನೋವಾಗಿದೆ. ನಾಲ್ಕು ಸ್ಥಾನಕ್ಕೆ ಇನ್ನಿಲ್ಲದ ಪೈಪೋಟಿ ಏರ್ಪಟ್ಟಿದ್ದು, ಈ ಕಗ್ಗಂಟನ್ನ ಬಿಡಿಸೋದು ಟೀಮ್ ಮ್ಯಾನೇಜ್​​​​ಮೆಂಟ್​ ದೊಡ್ಡ ಸವಾಲಾಗಿದೆ.

ರಾಹುಲ್​ vs ಸರ್ಫರಾಜ್​​​.. ಯಾರಿಗೆ ಚಾನ್ಸ್​​​..?
ಬಾಂಗ್ಲಾ ಎದುರಿನ ಮೊದಲ ಟೆಸ್ಟ್​​​​​​​ನಲ್ಲಿ ರೋಹಿತ್​​​​ ಶರ್ಮಾ, ಯಶಸ್ವಿ ಜೈಸ್ವಾಲ್​​​​, ಶುಭ್​ಮನ್ ಗಿಲ್​ ಹಾಗೂ ಕಿಂಗ್ ಕೊಹ್ಲಿ ಆಡುವುದು ಬಹುತೇಕ ಕನ್ಫರ್ಮ್​. 5ನೇ ಕ್ರಮಾಂಕದಲ್ಲಿ ಆಡೋದ್ಯಾರು ಅನ್ನೋ ಪ್ರಶ್ನೆಗೆ ಉತ್ತರವಿಲ್ಲ. ಈ ಸ್ಲಾಟ್​​ ಮೇಲೆ ಕನ್ನಡಿಗ ಕೆಎಲ್ ರಾಹುಲ್ ಹಾಗೂ ಸರ್ಫರಾಜ್ ಖಾನ್ ಕಣ್ಣಿಟ್ಟಿದ್ದಾರೆ. ಸರ್ಫರಾಜ್​​​​​​ ಕಳೆದ ಇಂಗ್ಲೆಂಡ್ ಸರಣಿಯಲ್ಲಿ ಇಂಪ್ರೆಸ್ಸಿವ್ ಆಟವಾಡಿದ್ರೆ, ರಾಹುಲ್ ಕೂಡ ನಂಬಿಗಸ್ಥ ಪ್ಲೇಯರ್​​. ದುಲೀಪ್ ಟ್ರೋಫಿಯಲ್ಲಿ ಅರ್ಧಶತಕ ಗಳಿಸಿ ಮಿಂಚಿದ್ದು, ಯಾರನ್ನ ಆಡಿಸ್ಬೇಕು ಅನ್ನೋದು ಕ್ಯಾಪ್ಟನ್ ರೋಹಿತ್​​​ರನ್ನ ಚಿಂತೆಗೀಡು ಮಾಡಿದೆ.

ಪಂತ್​​​​ vs ಧ್ರುವ್ ಜುರೆಲ್​​..ಯಾರು ಉತ್ತಮ..?
ಟೀಮ್ ಮ್ಯಾನೇಜ್​​ಮೆಂಟ್​​ಗಿರೋ ಎರಡನೇ ಬಿಗ್ಗೆಸ್ಟ್​ ಚಾಲೆಂಜ್​​​ ಅಂದ್ರೆ ವಿಕೆಟ್ ಕೀಪಿಂಗ್ ಆಯ್ಕೆ. ಒಂದು ಸ್ಥಾನಕ್ಕೆ ಇಬ್ಬರ ಮಧ್ಯೆ ಪೈಪೋಟಿ ಇದೆ. ರಿಷಬ್​ ಪಂತ್​ 21 ತಿಂಗಳ ಬಳಿಕ ಟೆಸ್ಟ್​​ ತಂಡದಲ್ಲಿ ಸ್ಥಾನ ಪಡೆದಿದ್ದು, ಕಮ್​​ಬ್ಯಾಕ್​ಗೆ ಎದುರು ನೋಡ್ತಿದ್ದಾರೆ. ಇನ್ನು ಪಂತ್ ಅಲಭ್ಯತೆಯಲ್ಲಿ ಆಡಿದ್ದ ದೃವ್​​ ಜುರೆಲ್ ಕೂಡ ರೇಸ್​​ನಲ್ಲಿದ್ದಾರೆ. ಇಬ್ಬರ ಪೈಕಿ ಪಂತ್​​​​​​ ಹೆಸರು ಮುಂಚೂಣಿಯಲ್ಲಿದ್ರು, ಜುರೆಲ್​ ಆಯ್ಕೆಯನ್ನ ಕಡೆಗಣಿಸುವಂತಿಲ್ಲ. ಯಾಕಂದ್ರೆ ಇಂಗ್ಲೆಂಡ್​​ ವಿರುದ್ಧ 190 ರನ್ ಗಳಿಸಿ ಆಯ್ಕೆಯ್ನ ಸಮರ್ಥಿಸಿಕೊಂಡಿದ್ರು. ಹೀಗಾಗಿ ಪಂತ್​​​​​ ವರ್ಸಸ್​​ ಜುರೆಲ್​​​​​​​​​​ ಆಯ್ಕೆ ನಿರ್ಧರಿಸೋದು ಕಠಿಣವೆನಿಸಿದೆ.

3ನೇ ಸ್ಪಿನ್ನರ್​​​​​ ಅಕ್ಷರ್​ ಪಟೇಲಾ?
ಬಾಂಗ್ಲಾ ಸರಣಿಯಲ್ಲಿ ಭಾರತಕ್ಕೆ 3ನೇ ಸ್ಪಿನ್ನರ್​ ಆಯ್ಕೆಯೂ ಕಠಿಣವೆನಿಸಿದೆ. ಲೆಜೆಂಡ್ರಿ ಸ್ಪಿನ್ನರ್​ ಆರ್ ಅಶ್ವಿನ್ ಹಾಗೂ ರವೀಂದ್ರ ಜಡೇಜಾ ಆಡುವುದು ಖಚಿತ. ಇಬ್ಬರಿಗೆ ಸಾಥ್​ ಕೊಡಲು ಮತ್ತೋರ್ವ ಸ್ಪಿನ್ನರ್​​​​ ಯಾರು? ಉತ್ತರ ಸಸ್ಪೆನ್ಸ್​ ಆಗಿದೆ. ಅಕ್ಷರ್ ಪಟೇಲ್​ ಬೆಸ್ಟ್ ಚಾಯ್ಸ್ ನಿಜ. ಆದ್ರೆ ಕುಲ್ದೀಪ್​ ಯಾದವ್ ಕೂಡ ವಿಶ್ವದ ಬೆಸ್ಟ್​ ಸ್ಪಿನ್ನರ್​. ಹಾಗಾಗಿ ಈ ಇಬ್ಬರಲ್ಲಿ ಒಬ್ಬರ ಆಯ್ಕೆ ಸುಲಭವಿಲ್ಲ. ಕ್ಯಾಪ್ಟನ್​ ಹಾಗೂ ಕೋಚ್​​​​ ಯಾರಿಗೆ ಮಣೆ ಹಾಕ್ತಾರೆ ಅನ್ನೋದೆ ಯಕ್ಷ ಪ್ರಶ್ನೆಯಾಗಿದೆ.

ಸಿರಾಜ್​​-ಆಕಾಶ್​ ದೀಪ್​​​​​ ನಡ್ವೆ ಫೈಟ್​​
ರೆಡ್​​​ಬಾಲ್​​​ ಬ್ಯಾಟಲ್​ನಲ್ಲಿ ಸ್ಟಾರ್ ಬೌಲರ್​ ಜಸ್​ಪ್ರೀತ್ ಬೂಮ್ರಾ ವೇಗದ ಬೌಲಿಂಗ್ ಅನ್ನ ಲೀಡ್ ಮಾಡಲಿದ್ದಾರೆ. ಆದ್ರೆ 2ನೇ ವೇಗಿ ಸ್ಥಾನಕ್ಕೆ ಮೊಹಮ್ಮದ್ ಸಿರಾಜ್ ಹಾಗೂ ಆಕಾಶ್ ದೀಪ್ ನಡ್ವೆ ಫೈಟ್​ ಏರ್ಪಟ್ಟಿದೆ. ಇಬ್ಬರೂ ಇಂಗ್ಲೆಂಡ್​ ವಿರುದ್ಧ ಇಂಪ್ರೆಸ್ಸಿವ್ ಪರ್ಫಾಮೆನ್ಸ್​ ನೀಡಿದ್ರು. ಸಿರಾಜ್​ 6 ವಿಕೆಟ್ ಕಬಳಿಸಿದ್ರೆ, ಆಕಾಶ್ ದೀಪ್​​​​ ಡೆಬ್ಯು ಪಂದ್ಯದಲ್ಲಿ 3 ವಿಕೆಟ್ ಬೇಟೆಯಾಡಿದ್ರು. ಇದೀಗ ಟೀಮ್ ಮ್ಯಾನೇಜ್​​​ಮೆಂಟ್​ ಚೆಪಾಕ್​ ಟೆಸ್ಟ್​​​​ನಲ್ಲಿ ಯಾರ ಮೇಲೆ ನಂಬಿಕೆ ಇಡುತ್ತೋ ಅನ್ನೋದು ಸಸ್ಪೆನ್ಸ್ ಆಗಿದೆ.

ಒಂದೆಡೆ ಅಳೆದು ತೂಗಿ ತಂಡವನ್ನ ಪ್ರಕಟಿಸಿದ್ರೂ ಟೀಮ್ ಮ್ಯಾನೇಜ್​ಮೆಂಟ್​​​ಗೆ ಟೆನ್ಷನ್ ತಪ್ಪಿಲ್ಲ. 16ರ ಪೈಕಿ ಬಲಿಷ್ಠ ಪ್ಲೇಯಿಂಗ್​​​-11 ಆಯ್ಕೆ ಕಬ್ಬಿಣದ ಕಡಲೆಯಾಗಿದೆ. ಕ್ಯಾಪ್ಟನ್ ರೋಹಿತ್​ ಹಾಗೂ ಹೆಡ್​ಕೋಚ್​​ ಗೌತಮ್​ ಗಂಭೀರ್​​​​​​​ ಈ ಕಗ್ಗಂಟನ್ನ ಹೇಗೆ ಬಿಡಿಸ್ತಾರೆ ಅನ್ನೋದನ್ನ ಕಾದು ನೋಡಬೇಕು.

WhatsApp Group Join Now
Telegram Group Join Now
Instagram Account Follow Now
spot_img

Related articles

TESLA BEGINS HIRING IN INDIA:ಮಸ್ಕ್ ಸಂಸ್ಥೆಯಲ್ಲಿ ಕೆಲಸ ಮಾಡಲು ಅದ್ಭುತ ಅವಕಾಶ

New Delhi News: ಇದರೊಂದಿಗೆ ಅಮೆರಿಕದ ದೈತ್ಯ ಎಲೆಕ್ಟ್ರಿಕಲ್​ ಕಾರು ಕಂಪನಿಯಲ್ಲಿ ಕೆಲಸ ಮಾಡಬೇಕೆಂಬ ಕನಸು ಹೊಂದಿರುವವರಿಗೆ ಟೆಸ್ಲಾ ಸುವರ್ಣಾವಕಾಶ ನೀಡಿದೆ. ಮುಂಬೈನಲ್ಲಿ ಹಲವು ಹುದ್ದೆಗಳ...

MAHAKUMBH : ಆ ಅಘೋರಿ ಭವಿಷ್ಯವೇ ನಿಜವಾಯ್ತಾ?

MAHAKUMBH : ಉತ್ತರ ಪ್ರದೇಶದ ದೇವ ಪ್ರಯಾಗದಲ್ಲಿ MAHAKUMBH ನಡೆಯುತ್ತಿದೆ. ಕಳೆದ 30 ದಿನಗಳ ಅಂತರದಲ್ಲಿ 7 ಅಗ್ನಿ ದುರಂತ ಎದುರಾಗಿವೆ. ಈ ಹಿಂದೆ ಹೀಗೆ...

DARSHAN : ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿ ದರ್ಶನ್ ಭಾವುಕ

Darshan News: ಫೆಬ್ರವರಿ 16 ರಂದು ಚಾಲೆಂಜಿಂಗ್ ಸ್ಟಾರ್ DARSHAN ಹುಟ್ಟುಹಬ್ಬವನ್ನು ಆಚರಿಸಿಕೊಂಡರು. 48ನೇ ವರ್ಷಕ್ಕೆ ಕಾಲಿಟ್ಟ ದಾಸನಿಗೆ ಸ್ಯಾಂಡಲ್​ವುಡ್​ ತಾರೆಯರು, ವಿವಿಧ ಕ್ಷೇತ್ರದ ಗಣ್ಯರು...

TULASI GABBARD : ಅಮೆರಿಕ ಗುಪ್ತಚರ ಇಲಾಖೆಯ ನೂತನ ಮುಖ್ಯಸ್ಥೆ

TULASI GABBARD : TULASI GABBARD​, ಈಗ ಅಮೆರಿಕಾದ ರಾಷ್ಟ್ರೀಯ ಗುಪ್ತಚರ ದಳ ನಿರ್ದೇಶನದ ನೂತನ ಮುಖ್ಯಸ್ಥೆಯಾಗಿ ಆಯ್ಕೆಯಾಗಿದ್ದಾರೆ. ಭಾರತದೊಂದಿಗೆ ಅವರಿಗಿರುವ ನಂಟಿನ ಬಗ್ಗೆಯೂ ಕೂಡ...