WhatsApp Group
Join Now
Telegram Group
Join Now
Instagram Account
Follow Now
Facebook Page
Follow Now
Tollywood news :
ದಕ್ಷಿಣ ಚಿತ್ರರಂಗದ ಖ್ಯಾತ ನಟ ವಿಜಯ್ ಮುಖ್ಯಭೂಮಿಕೆಯ ಕೊನೆ ಸಿನಿಮಾದ ಮೊದಲ ನೋಟ ಬಿಡುಗಡೆ ದಿನಾಂಕ ಘೋಷಣೆಯಾಗಿದೆ.ಎಂದು ಕೋಟ್ಯಂತರ ಪ್ರೇಕ್ಷಕರು ಪ್ರಶ್ನಿಸಿದ್ದರು. ಫೈನಲಿ, ನಿರ್ಮಾಣ ಸಂಸ್ಥೆ ಇಂದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಒಂದನ್ನು ಶೇರ್ ಮಾಡಿದೆ.
ಸಿನಿಮಾದ ಫಸ್ಟ್ ಲುಕ್ ರಿವೀಲ್ ಡೇಟ್ ಅನ್ನು ಅನೌನ್ಸ್ ಮಾಡಿದೆ.ಚಂದನವನದ ಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆ ‘ಕೆವಿಎನ್’ ಸೌತ್ ಸೂಪರ್ ಸ್ಟಾರ್ THALAPATHY ವಿಜಯ್ ನಟನೆಯ ಕೊನೆ ಚಿತ್ರವನ್ನು ನಿರ್ಮಾಣ ಮಾಡುತ್ತಿರೋದು ನಿಮಗೆ ತಿಳಿದಿರೋ ವಿಚಾರವೇ. ಬಹುನಿರೀಕ್ಷಿತ ಚಿತ್ರದ ಅಪ್ಡೇಟ್ಸ್ ಯಾವಾಗ?
Filming in Chennai: 2024ರ ಅಕ್ಟೋಬರ್ 4ರಂದು ಸಿನಿಮಾಗೆ ಚಾಲನೆ ಸಿಕ್ಕಿತ್ತು. ಚೆನ್ನೈನಲ್ಲಿ ಅದ್ಧೂರಿ ಪೂಜಾ ಸಮಾರಂಭದೊಂದಿಗೆ ಆರಂಭಗೊಂಡಿರೋ ಸಿನಿಮಾದ ಫಸ್ಟ್ ಲುಕ್ ಇದೇ ಜನವರಿ 26, ಅಂದರೆ ಭಾನುವಾರದಂದು ಅನಾವರಣಗೊಳ್ಳಲಿದೆ.
ರಾಕಿಂಗ್ ಸ್ಟಾರ್ ಯಶ್ ಅವರ ಮುಂದಿನ ಬಹುನಿರೀಕ್ಷಿತ ಚಿತ್ರ ‘ಟಾಕ್ಸಿಕ್’ ಹಿಂದಿರುವ ‘ಕೆವಿಎನ್’ ನಿರ್ಮಾಣ ಮಾಡುತ್ತಿರುವ ತಮಿಳು ಚಿತ್ರರಂಗದ ಅತ್ಯಂತ ಜನಪ್ರಿಯ ನಟ ವಿಜಯ್ ಮುಖ್ಯಭೂಮಿಕೆಯ ಮುಂದಿನ ಬಹುನಿರೀಕ್ಷಿತ ಚಿತ್ರಕ್ಕೆ ‘THALAPATHY 69’ ಎಂಬ ತಾತ್ಕಾಲಿಕ ಶೀರ್ಷಿಕೆ ಇಡಲಾಗಿದೆ.
KVN Production Post: ಫಸ್ಟ್ ಲುಕ್ ಬಿಡುಗಡೆ ದಿನಾಂಕ ಘೋಷಣೆಗೆ ಕೆವಿಎನ್ ವಿಡಿಯೋ ಒಂದನ್ನು ಶೇರ್ ಮಾಡಿದೆ. ಪೋಸ್ಟ್ಗೆ ‘Update oda vandhurkom, 69% completed’ ಎಂಬ ಕ್ಯಾಪ್ಷನ್ ಕೊಟ್ಟಿದೆ. ವಿಡಿಯೋ ಕೊನೆಯಲ್ಲಿ, ಚಿತ್ರದ ಮೊದಲ ನೋಟ ಜನವರಿ 26ಕ್ಕೆ ಎಂದು ಬರೆದುಕೊಂಡಿದೆ.
What is the official title of the movie? ಚಿತ್ರದ ಟೈಟಲ್ ‘Naalaiya Theerpu’ ಎಂದಿರುವ ಸಾಧ್ಯತೆಗಳಿವೆ. ಅದಾಗ್ಯೂ, ಚಿತ್ರತಂಡದಿಂದ ಅಧಿಕೃತ ಘೋಷಣೆ ನಿರೀಕ್ಷಿಸಲಾಗಿದೆ.
Film coming before politics: ಸೌತ್ ಸೂಪರ್ ಸ್ಟಾರ್ ವಿಜಯ್ ಅವರ ಸಿನಿ ವೃತ್ತಿಜೀವನದಲ್ಲೇ ಈ ಪ್ರಾಜೆಕ್ಟ್ ಅತ್ಯಂತ ಮಹತ್ವದ ಸಿನಿಮಾಗಳಲ್ಲಿ ಒಂದಾಗುವ ಭರವಸೆ ಇದೆ. ಏಕೆ ಅಂತೀರಾ?, ವಿಜಯ್ ಅವರು ರಾಜಕೀಯದಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಕೊಳ್ಳುವುದಕ್ಕೂ ಮುನ್ನ ಬರುತ್ತಿರುವ ಸಿನಿಮಾ ಇದು.
ಹೌದು, ವಿಜಯ್ ನಟನೆಯಲ್ಲಿ ಮೂಡಿಬರುತ್ತಿರುವ ಕೊನೆ ಸಿನಿಮಾ ಇದಾಗಿದೆ.ತ್ರಕ್ಕೆ ‘Naalaiya Theerpu’ ಎಂಬ ಶೀರ್ಷಿಕೆ ಇಟ್ಟಿರುವ ಮಾಹಿತಿ ಇದೆ. ಚಿತ್ರ ತಯಾರಕರು ಫಸ್ಟ್ ಲುಕ್ ಜೊತೆಗೆ ಅಧಿಕೃತ ಶೀರ್ಷಿಕೆಯನ್ನೂ ಬಹಿರಂಗಪಡಿಸುವ ಸಾಧ್ಯತೆ ಇದೆ. ವಿಜಯ್ ನಾಯಕನಾಗಿ ನಟಿಸುತ್ತಿರುವ ಈ ಚಿತ್ರದಲ್ಲಿ ಪೂಜಾ ಹೆಗ್ಡೆ ಮತ್ತು ಬಾಬಿ ಡಿಯೋಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಗೌತಮ್ ವಾಸುದೇವ್ ಮೆನನ್, ಪ್ರಿಯಾಮಣಿ, ಪ್ರಕಾಶ್ ರಾಜ್ ಮತ್ತು ಮಮಿತಾ ಬೈಜು ಕೂಡಾ ಕಾಣಿಸಿಕೊಳ್ಳಲಿದ್ದಾರೆ.ಸಿನಿಮಾಗೆ ಅನಿರುದ್ಧ್ ಸಂಗೀತ ಸಂಯೋಜಿಸುತ್ತಿದ್ದರೆ, ಸತ್ಯನ್ ಸೂರ್ಯನ್ ಅವರ ಕ್ಯಾಮರಾ ಕೈಚಳಕವಿರಲಿದೆ. ವಿಜಯ್ ಕೊನೆಯದಾಗಿ ನಟಿಸಲಿರುವ ಚಿತ್ರವನ್ನು ಪ್ಯಾನ್-ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಮಾಡಲಿದ್ದಾರೆ ಎಂದು ಹೇಳಲಾಗಿದೆ. 2025ರ ಅಕ್ಟೋಬರ್‌ನಲ್ಲಿ ಸಿನಿಮಾ ಬಿಡುಗಡೆ ಮಾಡಲು ಮೇಕರ್ಸ್ ಗಮನ ಹರಿಸಿದ್ದು, ಭಾನುವಾರ ಬಿಡುಗಡೆಯಾಗಲಿರುವ ಫಸ್ಟ್ ಲುಕ್ ಬಳಿಕ ಒಂದಾದ ಮೇಲೆ ಒಂದರಂತೆ ಚಿತ್ರದ ಮಾಹಿತಿ ಸಿಗುವ ನಿರೀಕ್ಷೆಯಿದೆ.