spot_img
spot_img

ಟೈಟಾನಿಕ್​​​ ದುರಂತದಲ್ಲಿ ಸಾಹಸ ಮೆರೆದಿದ್ದ ಕ್ಯಾಪ್ಟನ್​​

spot_img
spot_img

Share post:

ಟೈಟಾನಿಕ್ ಹಡಗು ದುರಂತ, ಜಗತ್ತು ಎಂದೂ ಕೂಡ ಮರೆಯದ ಒಂದು ಮಹಾ ದುರ್ಘಟನೆ. ಸಮುದ್ರದ ನಡುವೆ ಎರಡು ಹೋಳಾಗಿ ಹೋದ ಹಡಗು ನೂರಾರು ಜನರನ್ನು ಬಲಿ ತೆಗೆದುಕೊಂಡಿತ್ತು. ಹಾಗೆ ನೂರಾರು ಜನರು ಬದುಕುಳಿದುಕೊಂಡಿದ್ದರು ಕೂಡ. ಅದಕ್ಕೆ ಕಾರಣವಾಗಿದ್ದವರು ಕ್ಯಾಪ್ಟನ್ ಆರ್ಥರ್ ರೊಸ್ಟ್ರಾನ್ ಕೂಡ ಒಬ್ಬರು. ಅವರು ಸುಮಾರು 700 ಜನರನ್ನು ಮಹಾ ದುರಂತದಿಂದ ಪಾರು ಮಾಡಿದ್ದರು.

ತಮ್ಮ ಸಾಹಸ ಪ್ರವೃತ್ತಿಯಿಂದಲೇ ಬರೋಬ್ಬರಿ 700 ಜನರನ್ನು ರಕ್ಷಿಸಿದ್ದರು.

ಜೀವ ಬದುಕಿಸಿಕೊಂಡು ಬಂದ ಮೂವರು ಮಹಿಳೆಯರು ಆರ್ಥರ್​ಗೆ 18 ಕ್ಯಾರೆಟ್​ನ ಬಂಗಾರದ ಟಿಫಿನಿ ಅಂಡ್ ಕಂಪನಿಯ ವಾಚ್​ ಉಡುಗೊರೆಯಾಗಿ ನೀಡಿದ್ದರು.

ಈ ವಾಚು ಈಗ ಹರಾಜು ಆಗಿದೆ. ಹರಾಜು ಆದ ಮೊತ್ತ ಕೇಳಿದ್ರೆನೇ ಎಂತವರು ಕೂಡ ಶಾಕ್​ಗೆ ಒಳಗಾಗುತ್ತಾರೆ. ಲಂಡನ್​ನಲ್ಲಿ ಈ ಒಂದು ವಾಚು 1.5ಮಿಲಿಯನ್ ಬ್ರಿಟನ್​ ಪೌಂಡ್​ಗಳಿಗೆ ಅಂದ್ರೆ ಭಾರತದ 16 ಕೋಟಿ 61 ಲಕ್ಷ ರೂಪಾಯಿಗೆ ಹರಾಜು ಆಗಿದೆ.

ಹರಾಜುದಾರರಾದ ಹೆನ್ರಿ ಅಲ್ಡ್ರಿಡ್ಜ್ ಅಂಡ್ ಸನ್ಸ್ ಗೋಲ್ಡ್ ವಾಚ್​ ಅನ್ನು ಹರಾಜು ಮಾಡಿದೆ.

ಈ ಒಂದು ವಾಚ್ ದುರಂತದಲ್ಲಿ ಮಡಿದು ಹೋಗಿದ್ದ ಶ್ರೀಮಂತ ವ್ಯಕ್ತಿ ಜೊಕೊಬ್ ಅಸ್ಟೊರ್​ ಎಂಬುವರ ಪತ್ನಿ ರೊಸ್ಟ್ರಾನ್​ಗೆ ನೀಡಿದ್ದರು. ಅವರ ಜೊತೆ ಇನ್ನುಳಿದ ಇಬ್ಬರು ಅದೇ ದುರಂತದಲ್ಲಿ ಮೃತಪಟ್ಟಿದ್ದ ಬ್ಯುಸಿನೆಸ್​ ಮೆನ್​​​ಗಳ ಪತ್ನಿಯರು ಇದ್ದರು.

ದುರಂತ ನಡೆದ 7 ದಿನಗಳ ಬಳಿಕ ಆಸ್ಟರ್ ಮೃತದೇಹ ಸಿಕ್ಕಾಗ ಅವರ ದೇಹದ ಮೇಲೆ ಈ ವಾಚ್ ಇತ್ತು ಈ ವಾಚ್​ನ್ನು ಕ್ಯಾಪ್ಟನ್ ಆರ್ಥರ್ ರೊಸ್ಟ್ರಾನ್​ಗೆ ನೀಡಿದ್ದರು. ಅದು ಈಗ 16 ಕೋಟಿ ರೂಪಾಯಿಗೆ ಹರಾಜು ಆಗಿದೆ.

ಈ ದುರಂತ ನಡೆದು 100 ವರ್ಷಗಳ ಮೇಲೇ ಆಗಿದೆ ಇಂದಿಗೂ ಕೂಡ ಟೈಟಾನಿಕ್​ ಹಡಗು ದುರಂತದ ಬಗ್ಗೆ ಹಲವು ಕಥೆಗಳು ಪ್ರಚಲಿತದಲ್ಲಿವೆ. ಬ್ರಿಟನ್​ನ ಪ್ರತಿ ಬೀದಿಯಲ್ಲೂ, ಒಂದು ಮಗು, ಒಂದು ಮಹಿಳೆ, ಒಬ್ಬ ಪುರುಷ ಹೀಗೆ ಎಲ್ಲರಲ್ಲೂ ಅದರ ಬಗ್ಗೆ ಹೇಳಲು ಹಲವು ಕಥೆಗಳಿವೆ.

ಅದು ಬ್ರಿಟನ್​ ದೇಶಕ್ಕೆ ಎಂದಿಗೂ ಆರದ ಗಾಯವಾಗಿ ಇಂದಿಗೂ ಕೂಡ ಉಳಿದುಕೊಂಡಿದೆ.

Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

MOTOROLA EDGE 60 FUSION – ಅದ್ಭುತವಾದ ಕ್ಯಾಮೆರಾ ಸೆಟಪ್, ವಾಟರ್ ಪ್ರೊಟೆಕ್ಷನ್ – ಮೊಟೊರೊಲಾದ ಹೊಸ ಫೋನ್ನ ಬೆಲೆ ಕೇವಲ ಇಷ್ಟೇ!

Motorola Edge 60 Fusion: ಬಹುನಿರೀಕ್ಷಿತ ' MOTOROLA EDGE 60 FUSION' ಕೊನೆಗೂ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಕಂಪನಿಯು ಇದನ್ನು ' MOTOROLA EDGE...

RASHMIKA MANDANNA – ‘ನಾನು ಹೈದರಾಬಾದ್ನವಳು’: ರಶ್ಮಿಕಾ ಮಂದಣ್ಣ ಹೇಳಿಕೆ ವಿಚಾರ; ಮುಂದುವರಿದ ಪರ – ವಿರೋಧ ಚರ್ಚೆ

'ನ್ಯಾಷನಲ್ ಕ್ರಶ್' ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಜನಪ್ರಿಯ ನಟಿ RASHMIKA MANDANNA, ಭಾರತೀಯ ಚಿತ್ರರಂಗದಲ್ಲಿ ಮೋಡಿ ಮಾಡಿದ್ದಾರೆ. ತಮ್ಮ ನಟನಾ ಕೌಶಲ್ಯದಿಂದ ದೇಶಾದ್ಯಂತ ಅಭಿಮಾನಿಗಳ...

IPL SUBSCRIPTION PLANS – ಕೆಲವೇ ದಿನಗಳಲ್ಲಿ IPL ಹವಾ ಶುರು: ಈ ಕಂಪನಿಗಳ ಗ್ರಾಹಕರಿಗೆ ಅಗ್ಗದಲ್ಲಿ ಲಭ್ಯ!

JioHotstar Subscription: ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್‌ ಟೂರ್ನಿ ಮುಗೀತು. ಮುಂದಿನ ಕೆಲವೇ ದಿನಗಳಲ್ಲಿ ಐಪಿಎಲ್​ ಜಾತ್ರೆ ಆರಂಭವಾಗಲಿದೆ. ಇದಕ್ಕಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ...

IPHONE 17 SERIES – ಐಫೋನ್ 17 ಸೀರಿಸ್ ಡಿಟೆಲ್ಸ್ ಲೀಕ್ – ಇದರ ಸ್ಪೆಷಾಲಿಟಿ ಏನ್ ಗೊತ್ತಾ?

iPhone 17 Series: ಟೆಕ್ ದೈತ್ಯ ಆಪಲ್ ತನ್ನ ಹೊಸ ಐಫೋನ್ ಸೀರಿಸ್​ ಅನ್ನು ಪ್ರತಿ ವರ್ಷ ಮಾರುಕಟ್ಟೆಗೆ ಪರಿಚಯಿಸುತ್ತದೆ. ಈ ಕ್ರಮದಲ್ಲಿ ಈ ವರ್ಷವೂ...