ನವದೆಹಲಿ: 2025ರಲ್ಲಿ ಜನಗಣತಿ ಮಾಡಲು ಕೇಂದ್ರ ಸರ್ಕಾರ ಸಿದ್ಧತೆ ಶುರು ಮಾಡಿ, ಜಾತಿ ಗಣತಿಯ ಬಗ್ಗೆ ಯಾವುದೇ ನಿರ್ಧಾರಕ್ಕೆ ಬಂದಿಲ್ಲ ಎಂದು ಸರ್ಕಾರ ತಿಳಿಸಿದೆ.
ಬಹುನಿರೀಕ್ಷಿತ ಜನಗಣತಿ ಪ್ರಕ್ರಿಯೆಗೆ ಕೇಂದ್ರ ಸರ್ಕಾರ ಸಿದ್ಧತೆ ನಡೆಸುತ್ತಿದೆ. ರಾಷ್ಟ್ರೀಯ ಜನಸಂಖ್ಯಾ ನೋಂದಣಿ-ಎನ್‌ಪಿಆರ್ ನವೀಕರಣ ಮುಂದಿನ ವರ್ಷ ಪ್ರಾರಂಭವಾಗಲಿದೆ.
2026ರವರೆಗೆ ಈ ಪ್ರಕ್ರಿಯೆ ನಡೆಯಲಿದ್ದು, ಜನಗಣತಿ ನಡೆಸುವ ಚಕ್ರವೂ ಬದಲಾಗಲಿದೆ. 2025-2035ರ ನಡುವಿನ ಲೆಕ್ಕಾಚಾರ ಮಾಡಿದರೆ, ಮುಂದಿನ ಬಾರಿ 2035-2045ರ ಅವಧಿಯಲ್ಲಿ ಎಣಿಕೆ ಮಾಡಬೇಕಾಗುತ್ತದೆ.
ಮನೆಯವರ ದೂರವಾಣಿ, ಇಂಟರ್ನೆಟ್ ಸಂಪರ್ಕ, ಮೊಬೈಲ್/ಸ್ಮಾರ್ಟ್‌ಫೋನ್, ಬೈಸಿಕಲ್, ಸ್ಕೂಟರ್ ಅಥವಾ ಮೋಟಾರ್ ಸೈಕಲ್, ಮೊಪೆಡ್, ಕಾರು, ಜೀಪ್ ಅಥವಾ ವ್ಯಾನ್ ಹೊಂದಿರುವ ಬಗ್ಗೆ ಪ್ರಶ್ನೆಗಳು ಬರಲಿವೆ.
ಜನಗಣತಿಯ ನಂತರ ಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡಣೆ ಪ್ರಕ್ರಿಯೆ ನಡೆಯಲಿದೆ. ಜನಸಂಖ್ಯೆ ಅನುಗುಣವಾಗಿ ಪುನರ್ವಿಂಗಡಣೆ ನಡೆದಲ್ಲಿ ಸ್ಥಾನಗಳು ಕಳೆದುಕೊಳ್ಳುವ ಬಗ್ಗೆ ದಕ್ಷಿಣ ಭಾರತದ ರಾಜ್ಯಗಳು ಆತಂಕಕ್ಕೀಡಾಗಿವೆ. ಜನಸಂಖ್ಯೆ ನಿಯಂತ್ರಣ ಮಾಡಿರುವ ಈ ರಾಜ್ಯಗಳಲ್ಲಿ ಲೋಕಸಭಾ ಸ್ಥಾನಗಳೂ ಸಹಜವಾಗಿ ಕಡಿಮೆಯಾಗಲಿವೆ.
ದೇಶದ ರಾಜಕೀಯದಲ್ಲಿ ದಕ್ಷಿಣದ ಪ್ರಾಮುಖ್ಯತೆ ಕಡಿಮೆಯಾಗಲಿದೆ. ಆರ್‌ಜೆಡಿ, ಕಾಂಗ್ರೆಸ್ ಮತ್ತಿತರ ವಿರೋಧ ಪಕ್ಷಗಳು ಜನಗಣತಿಯ ಜೊತೆಗೆ ಜಾತಿ ಗಣತಿ ನಡೆಸುವಂತೆ ತಿಳಿಸಿದೆ.
ಮನೆಯಲ್ಲಿ ಯಾವ ಧಾನ್ಯಗಳ ಬಳಕೆ ಮಾಡಲಾಗುತ್ತದೆ. ಕುಡಿಯುವ ನೀರಿನ ಪ್ರಮುಖ ಮೂಲಗಳ ವಿವರ, ವಿದ್ಯುತ್ ಸಂಪರ್ಕದ ಮೂಲವೇನು?, ಶೌಚಾಲಯ ಮತ್ತು ಅದರ ಪ್ರಕಾರವೇನು?, ತ್ಯಾಜ್ಯ ನೀರು ನಿರ್ವಹಣೆ ಸೌಲಭ್ಯ, ಸ್ನಾನಗೃಹದ ಸೌಲಭ್ಯಗಳ ಲಭ್ಯತೆ
ಅಡುಗೆ ಮನೆ, ಎಲ್ಪಿಜಿ/ಪಿಎನ್ಜಿ ಸಂಪರ್ಕದ ಲಭ್ಯತೆ, ಅಡುಗೆಗೆ ಬಳಸುವ ಮುಖ್ಯ ಇಂಧನ, ರೇಡಿಯೋ, ಟ್ರಾನ್ಸಿಸ್ಟರ್, ಟಿವಿ ಇತ್ಯಾದಿಗಳ ಲಭ್ಯತೆ ಇದೆಯಾ? ಎಂಬ ಪ್ರಶ್ನೆಗಳನ್ನು ಕೇಳುವ ಸಿದ್ಧತೆ ನಡೆಸಿದ್ದಾರೆ.