ಟಿಬೆಟ್ ಮತ್ತು ಭೂತಾನ್‌ನ ಗುಡ್ಡಗಾಡು ಪ್ರದೇಶಗಳಲ್ಲಿ ಮಾತ್ರ ಈ ಬ್ಲಾಕ್ ಡೈಮಂಡ್ ಆ್ಯಪಲ್ ಬೆಳೆಯಲಾಗುತ್ತದೆ.ಕಪ್ಪು ವಜ್ರದ ಸೇಬು (Black Diamond Apple) ಬಹಳ ಅಪರೂಪದ ಹಣ್ಣು. ಇದನ್ನು ಎಲ್ಲೆಂದರಲ್ಲಿ ಕೃಷಿ ಮಾಡುವಂತಿಲ್ಲ. ಈ ಸೇಬಿಗೆ ತಂಪಾದ ಪರ್ವತ ಪ್ರದೇಶ ಬೇಕು.
ಇದು ಸೇಬು ಹಣ್ಣುಗಳ ಕಾಲ. ಕಾಶ್ಮೀರದ ಮಾರುಕಟ್ಟೆಗಳಲ್ಲಿ ಸೇಬು ಹಣ್ಣು ತುಂಬು ತುಳುಕುತ್ತದೆ. ಗುಣಮಟ್ಟದ ಕಾಶ್ಮೀರಿ ಸೇಬು ಹಣ್ಣಿನ ಬೆಲೆ 120 ರೂಪಾಯಿ ಆಗಿದೆ.
ಬ್ಲ್ಯಾಕ್ ಡೈಮಂಡ್ ಆಪಲ್ ಅನ್ನು ಪ್ರಪಂಚದ ಕೆಲವೇ ಕೆಲವು ಸ್ಥಳಗಳಲ್ಲಿ ಮಾತ್ರ ಬೆಳೆಯಲಾಗುತ್ತದೆ. ಇದು ಇತರ ಸೇಬುಗಳಂತೆ ಆರೋಗ್ಯಕ್ಕೆ ಒಳ್ಳೆಯದು.ಇದು ಸೇಬು ಹಣ್ಣುಗಳ ಕಾಲ. ಕಾಶ್ಮೀರದ ಮಾರುಕಟ್ಟೆಗಳಲ್ಲಿ ಸೇಬು ಹಣ್ಣು ತುಂಬು ತುಳುಕುತ್ತದೆ.
ಗುಣಮಟ್ಟದ ಕಾಶ್ಮೀರಿ ಸೇಬು ಹಣ್ಣಿನ ಬೆಲೆ 120 ರೂಪಾಯಿ ಆಗಿದೆ. ಆದರೆ ಇದೇ ಮಾರುಕಟ್ಟೆಯಲ್ಲಿ ಸಿಗುವ ಕಪ್ಪು ಸೇಬಿನ ಬೆಲೆ ಸಿಕ್ಕಾಪಟ್ಟೆ. Black Diamond Appleನ ಒಂದು ಹಣ್ಣಿನ ಬೆಲೆ 5 ಕೆಜಿ ಕಾಶ್ಮೀರಿ ಸೇಬಿಗೆ ಸಮ.
ಕಪ್ಪು ಡೈಮಂಡ್ ಸೇಬಿನ ಬಣ್ಣ ಕಪ್ಪು. ಇದರಿಂದಾಗಿ ಈ ಸೇಬು ತಿನ್ನಲು ಪ್ರಯೋಜನಕಾರಿಯಲ್ಲ ಎಂದು ಹಲವರು ಅನುಮಾನಿಸುತ್ತಾರೆ. ಅದು ತಪ್ಪು ಕಲ್ಪನೆ. ಕಪ್ಪು ವಜ್ರದ ಸೇಬು ಕೆಂಪು ಸೇಬು ಮತ್ತು ಹಸಿರು ಸೇಬಿನಂತೆ ಆರೋಗ್ಯಕರವಾಗಿದೆ.
ಈ ಹಣ್ಣುಗಳು ದುಬಾರಿ ಆಗಲು ಕಾರಣ ಕೂಡ ಇದೆ. ಈ ಸೇಬಿನ ಮರವು ಫಲ ನೀಡಲು ಸುಮಾರು 8 ವರ್ಷ ತೆಗೆದುಕೊಳ್ಳುತ್ತದೆ. ಸಾಮಾನ್ಯ ಸೇಬು ಮರಗಳು 5 ವರ್ಷಗಳ ನಂತರ ಫಲ ನೀಡುತ್ತವೆ. ಅಲ್ಲದೇ ಈ ಸೇಬು ಮರಗಳ ಆರೈಕೆ ಮಾಡೋದು ಅಷ್ಟು ಸುಲಭವಲ್ಲ. ತುಂಬಾ ಕೆಲಸ ಮಾಡಿ, ಆರೈಕೆ ಮಾಡುವ ಅಗತ್ಯ ಇದೆ.