spot_img
spot_img

17ಕೋಟಿಗೆ ತಲುಪಿದ ಡಿಮ್ಯಾಟ್​ ಖಾತೆಗಳ ಸಂಖ್ಯೆ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ಮುಂಬೈ: ಜಾಗತಿಕ ಮಾರುಕಟ್ಟೆಗಳಿಗೆ ಹೋಲಿಸಿದರೆ ಭಾರತೀಯ ಷೇರು ಮಾರುಕಟ್ಟೆಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಹಿನ್ನೆಲೆಯಲ್ಲಿ ದೇಶದಲ್ಲಿ ಒಟ್ಟು ಡಿಮ್ಯಾಟ್ ಖಾತೆಗಳ ಸಂಖ್ಯೆ ಅಕ್ಟೋಬರ್ ನಲ್ಲಿ 179 ಮಿಲಿಯನ್ ಗೆ (ಅಂದರೆ ಸುಮಾರು 17.9ಕೋಟಿ) ಏರಿಕೆಯಾಗಿದೆ ಎಂದು ವರದಿಯೊಂದು ಸೋಮವಾರ ತಿಳಿಸಿದೆ.
ಅಕ್ಟೋಬರ್​ನಲ್ಲಿ ಆರಂಭಿಸಲಾದ ಹೊಸ ಖಾತೆಗಳ ಸಂಖ್ಯೆ 3.5 ಮಿಲಿಯನ್​ಗೆ ಇಳಿಕೆಯಾಗಿದೆ ಎಂದು ಮೋತಿಲಾಲ್ ಓಸ್ವಾಲ್ ಫೈನಾನ್ಷಿಯಲ್ ಸರ್ವೀಸಸ್ ವರದಿ ಹೇಳಿದೆ. ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದಲ್ಲಿ (ಎನ್ಎಸ್ಇ) ಸಕ್ರಿಯ ಗ್ರಾಹಕರ ಸಂಖ್ಯೆ ಅಕ್ಟೋಬರ್​ನಲ್ಲಿ ಶೇಕಡಾ 2.4 ರಷ್ಟು (ತಿಂಗಳಿಗೆ) ಏರಿಕೆಯಾಗಿ 48.9 ಮಿಲಿಯನ್​ಗೆ ತಲುಪಿದೆ.
ಪ್ರಸಕ್ತ ಹಣಕಾಸು ವರ್ಷದಲ್ಲಿ ಇಲ್ಲಿಯವರೆಗೆ ಸರಾಸರಿ ಮಾಸಿಕವಾಗಿ 3.9 ಮಿಲಿಯನ್ ಹೊಸ ಡಿಮ್ಯಾಟ್ ಖಾತೆಗಳನ್ನು ತೆರೆಯಲಾಗಿದೆ. ಆದರೆ, ಕಳೆದ ನಾಲ್ಕು ತಿಂಗಳಲ್ಲಿ ಇದೇ ಮೊದಲ ಬಾರಿಗೆ ಹೊಸ ಡಿಮ್ಯಾಟ್ ಖಾತೆಗಳ ಸಂಖ್ಯೆ 4 ಮಿಲಿಯನ್​ಗಿಂತ ಕಡಿಮೆಯಾಗಿದೆ.
ವರದಿಯ ಪ್ರಕಾರ, CDSL ಅಕ್ಟೋಬರ್​ನಲ್ಲಿ ಒಟ್ಟು ಡಿಮ್ಯಾಟ್ ಖಾತೆಗಳ ಸಂಖ್ಯೆ ಮತ್ತು ಹೊಸ ಡಿಮ್ಯಾಟ್ ಖಾತೆಗಳ ವಿಷಯದಲ್ಲಿ ಅತ್ಯಧಿಕ ಮಾರುಕಟ್ಟೆ ಪಾಲು ಪಡೆದುಕೊಳ್ಳುತ್ತಿದೆ. ವಾರ್ಷಿಕ ಆಧಾರದ ಮೇಲೆ, NSDL ಒಟ್ಟು / ಹೆಚ್ಚಿದ ಡಿಮ್ಯಾಟ್ ಖಾತೆಗಳಲ್ಲಿ 400 ಬಿಪಿ / 210 ಬಿಪಿ ಮಾರುಕಟ್ಟೆ ಪಾಲನ್ನು ಕಳೆದುಕೊಂಡಿದೆ.
ಪ್ರಸ್ತುತ ಎನ್​ಎಸ್​ಇಯಲ್ಲಿರುವ ಒಟ್ಟಾರೆ ಗ್ರಾಹಕರ ಪೈಕಿ ಅಗ್ರ ಐದು ಡಿಸ್ಕೌಂಟ್​ ಬ್ರೋಕರ್​ ಕಂಪನಿಗಳು ಶೇಕಡಾ 64.5ರಷ್ಟು ಗ್ರಾಹಕರನ್ನು ಹೊಂದಿವೆ. ಇದು ಅಕ್ಟೋಬರ್ 2023 ರಲ್ಲಿ ಶೇಕಡಾ 61.4 ರಷ್ಟಿತ್ತು. ಆನ್ ಲೈನ್ ಬ್ರೋಕರೇಜ್ ಸಂಸ್ಥೆ ಜೆರೋಧಾ ಗ್ರಾಹಕರ ಸಂಖ್ಯೆ ಶೇಕಡಾ 1.2 ರಷ್ಟು ಏರಿಕೆಯಾಗಿ 8.1 ಮಿಲಿಯನ್​ಗೆ ತಲುಪಿದೆ. ಜೆರೋಧಾದ ಮಾರುಕಟ್ಟೆ ಪಾಲು ಶೇಕಡಾ 0.15 ರಷ್ಟು ಕುಸಿದು ಶೇಕಡಾ 16.5 ಕ್ಕೆ ತಲುಪಿದೆ.
ಗ್ರೋ ಗ್ರಾಹಕರ ಸಂಖ್ಯೆ ಶೇಕಡಾ 2.8 ರಷ್ಟು ಏರಿಕೆಯಾಗಿ 12.6 ಮಿಲಿಯನ್​ಗೆ ತಲುಪಿದೆ. ಇದರ ಮಾರುಕಟ್ಟೆ ಪಾಲು ಶೇಕಡಾ 0.20 ರಷ್ಟು ಏರಿಕೆಯಾಗಿ ಶೇಕಡಾ 25.8 ಕ್ಕೆ ತಲುಪಿದೆ. ಏಂಜೆಲ್ ಒನ್ ಗ್ರಾಹಕರ ಸಂಖ್ಯೆ ಶೇಕಡಾ 2.4 ರಷ್ಟು ಏರಿಕೆಯಾಗಿ 7.5 ಮಿಲಿಯನ್​ಗೆ ತಲುಪಿದೆ. ಇದು ಶೇಕಡಾ 15.4 ರಷ್ಟು ಸ್ಥಿರವಾದ ಮಾರುಕಟ್ಟೆ ಪಾಲನ್ನು ಹೊಂದಿದೆ. ಅಪ್ ಸ್ಟಾಕ್ಸ್ ಗ್ರಾಹಕರ ಸಂಖ್ಯೆಯು ಶೇಕಡಾ 1.4 ರಷ್ಟು ಏರಿಕೆಯಾಗಿ 2.9 ಮಿಲಿಯನ್​ಗೆ ತಲುಪಿದೆ. ಇದರ ಮಾರುಕಟ್ಟೆ ಪಾಲು ಶೇಕಡಾ 0.05 ರಷ್ಟು ಕುಸಿದು ಶೇಕಡಾ 5.8 ಕ್ಕೆ ತಲುಪಿದೆ.
ಐಸಿಐಸಿಐ ಸೆಕ್ಯುರಿಟೀಸ್​ನಂತಹ ಸಾಂಪ್ರದಾಯಿಕ ಬ್ರೋಕರ್​ಗಳ ಗ್ರಾಹಕರ ಸಂಖ್ಯೆಯು ಶೇಕಡಾ 0.7 ರಷ್ಟು ಏರಿಕೆಯಾಗಿ 1.9 ಮಿಲಿಯನ್​ಗೆ ತಲುಪಿದೆ. ಕೋಟಕ್ ಸೆಕ್ಯುರಿಟೀಸ್ ಗ್ರಾಹಕರ ಸಂಖ್ಯೆಯು ಶೇಕಡಾ 2.8 ರಷ್ಟು ಏರಿಕೆಯಾಗಿ 1.5 ಮಿಲಿಯನ್​ಗೆ ತಲುಪಿದೆ. ಇದು ಶೇಕಡಾ 3 ರಷ್ಟು ಸ್ಥಿರವಾದ ಮಾರುಕಟ್ಟೆ ಪಾಲನ್ನು ಹೊಂದಿದೆ. ಎಚ್​ಡಿಎಫ್​ಸಿ ಸೆಕ್ಯುರಿಟೀಸ್ ಗ್ರಾಹಕರ ಸಂಖ್ಯೆ ಶೇಕಡಾ 3.2 ರಷ್ಟು ಏರಿಕೆಯಾಗಿ 1.3 ಮಿಲಿಯನ್​ಗೆ ತಲುಪಿದೆ.

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

ಮೀನುಗಾರಿಕೆಗೆ ಕೇಂದ್ರದಿಂದ ₹4,969 ಕೋಟಿ ಅನುದಾನ

ನವದೆಹಲಿ: 4,969.62 ಕೋಟಿ ರೂ.ಗಳ ಪ್ರಸ್ತಾವನೆಗಳಿಗೆ ಕೇಂದ್ರದ ಮೀನುಗಾರಿಕೆ ಇಲಾಖೆ ಅನುಮೋದನೆ ನೀಡಿದೆ. ಸಣ್ಣ ಮೀನುಗಾರ ಸಮುದಾಯಗಳು ಹಾಗೂ ಸಾಂಪ್ರದಾಯಿಕ ಮೀನುಗಾರರ ಅಭಿವೃದ್ಧಿಗಾಗಿ ಮತ್ತು ಅವರ...

ಚಂದ್ರಶೇಖರ ಸ್ವಾಮೀಜಿ ವಿರುದ್ಧ ಎಫ್.ಐ.ಆರ್. : ಸಿದ್ದರಾಮಯ್ಯ

ಬೆಂಗಳೂರು : ಚಂದ್ರಶೇಖರ ಸ್ವಾಮೀಜಿ ಅವರ ಪ್ರಕರಣದಲ್ಲಿ ಪೊಲೀಸರು ಕಾನೂನಿನ ದೃಷ್ಟಿಯಲ್ಲಿ ಏನು ಮಾಡಬೇಕೋ ಅದನ್ನು ಮಾಡುತ್ತಾರೆ. ಕಾನೂನಿನ ಚೌಕಟ್ಟಿನೊಳಗೆ ಬಂದರೆ ಕ್ರಮ ತೆಗೆದುಕೊಳ್ಳಲಾಗುತ್ತದೆ. ಇಲ್ಲವಾದರೆ...

ಶಾಂತಿ, ಸೌಹಾರ್ದತೆ ಕಾಪಾಡಬೇಕು : ಸಂಭಲ್ ಜಾಮಾ ಮಸೀದಿ

ಹೊಸದಿಲ್ಲಿ: ಸಂಭಲ್ ಜಾಮಾ ಮಸೀದಿಯ ಆವರಣದಲ್ಲಿನ ಸಮೀಕ್ಷೆಗೆ ಸುಪ್ರೀಂಕೋರ್ಟ್ ತಡೆ ನೀಡಿದ್ದು, ಶಾಂತಿ ಮತ್ತು ಸೌಹಾರ್ದತೆ ಕಾಪಾಡುವಂತೆ ಹೇಳಿದೆ. ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ಅಲಹಾಬಾದ್...

99.17 crore released to Karnataka

The central government has taken steps to globally develop major tourist destinations that are not so popular in...