spot_img
spot_img

ಕೇವಲ 9 ತರಗತಿ  ಓದಿರೋ ಯುವಕ 2 ಕೋಟಿ ಹಣ ಕೊಳ್ಳೆ ಹೊಡೆದಿದ್ದನ್ನು ನೋಡಿ ಪೊಲೀಸರೇ ಶಾಕ್ ಆಗಿದ್ದಾರೆ…!

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ಬಳ್ಳಾರಿ: ನಕಲಿ ಇ-ಮೇಲ್ (Email) ಬಳಸಿ ಕೋಟಿ ಕೋಟಿ ವಂಚಿಸಿದ್ದ ಆರೋಪಿಯನ್ನ ಹಣದ ಸಮೇತ ಬಳ್ಳಾರಿ ಪೊಲೀಸರ ಭರ್ಜರಿ ಕಾರ್ಯಾಚರಣೆ ನಡೆಸಿ ಅರೆಸ್ಟ್ ಮಾಡಿದ್ದಾರೆ. ಮಧ್ಯ ಪ್ರದೇಶ ಮೂಲದ ಅಜಯ್ ಕುಮಾರ್ ಜೈಸ್ವಾಲ್ ಬಂಧಿತ ಆರೋಪಿ.

ಇದನ್ನೂ ಓದಿ : ಮತ್ತೆ ಶುರುವಾಯಿತು ಮಹಾಮಾರಿ ವೈರಸ್‌ಗಳ ಹಾವಳಿ ಮಂಕಿಪಾಕ್ಸ್, ಎಂಪಾಕ್ಸ್ ವೈರಸ್..!

ಬಂಧಿತ ಆರೋಪಿಯೂ ಕಲ್ಲಿದ್ದಲು ಸಪ್ಲೈ ಮಾಡುವ ಕಂಪನಿಗೆ 2 ಕೋಟಿ 11 ಲಕ್ಷದ 50 ಸಾವಿರ ರೂ ವಂಚನೆ ಮಾಡಿದ್ದಾನೆ. ಮಧ್ಯ ಪ್ರದೇಶ ಅಗರ್ವಾಲ್ ಕೋಲ್ ಕಾರ್ಪೋರೇಷನ್ ಕಂಪನಿಗೆ ಕಲ್ಲಿದ್ದಲು ಖರೀದಿಗೆ ಹಿಂದೂಸ್ತಾನ ಕಂಪನಿಗೆ ಹಣ ಹಾಕಲಾಗಿತ್ತು.

ಹಣ ವರ್ಗಾವಣೆ ಬಗ್ಗೆ ಖದೀಮ ಅಜಯ್ ಕುಮಾರ್ ಜೈಸ್ವಾಲ್ ಮಾಹಿತಿ ಪಡೆದಿದ್ದ. ಆಗ ಅಜಯ್ ಕುಮಾರ್​ ಪಕ್ಕಾ ಪ್ಲಾನ್​ ಮಾಡಿ ಅಗರ್ವಾಲ್ ಕಂಪನಿಯ ನಕಲಿ ಇ-ಮೇಲ್ ಕ್ರಿಯೇಟ್ ಮಾಡಿ ಕಂಪನಿಯ ಬ್ಯಾಂಕ್ ಅಕೌಂಟ್ ನಂಬರ್ ಚೇಂಜ್ ಆಗಿದೆ ಎಂದು ಹಿಂದುಸ್ತಾನ್​ಗೆ ಕಳಿಸಿದ್ದಾನೆ.

ಇದನ್ನೂ ಓದಿ : ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಆಧಾರ್ ದೃಢೀಕರಣ ಕಡ್ಡಾಯ; ನಕಲಿ ಆಧಾರ್ ಕಾರ್ಡ್ ಬಳಕೆಗೆ ಕಡಿವಾಣ..!

ಇದನ್ನ ನಂಬಿದ ಹಿಂದುಸ್ತಾನ್ ಕಂಪನಿ ಅಜಯ್ ಕುಮಾರ್ ಜೈಸ್ವಾಲ್ ಕಳಿಸಿದ್ದ ಅಕೌಂಟ್ ನಂಬರ್​ಗೆ ಹಣ ಹಾಕಿದ್ದಾರೆ. ಆಗ ತನ್ನ ಖಾತೆಗೆ ಬಂದ 2 ಕೋಟಿ 11 ಲಕ್ಷ ಹಣವನ್ನ ಇತರೆ 18 ಖಾತೆಗಳಿಗೆ ಹಾಕಿ ಡ್ರಾ ಮಾಡಿದ್ದಾನೆ. ಬಳಿಕ ಹಣದ ಸಮೇತ ಬಳ್ಳಾರಿಯಿಂದ ಮಧ್ಯಪ್ರದೇಶಕ್ಕೆ ಹೋಗಿದ್ದಾನೆ. ಈ ಮಧ್ಯೆ ಹಿಂದುಸ್ತಾನ್​ ಕಂಪನಿ, ಅರ್ಗವಾಲ ಕಂಪನಿಗೆ ಕಲ್ಲಿದ್ದಲು ಕಳುಹಿಸಿ ಎಂದಾಗ ಹಣ ಹಾಕಿ ಎಂದಿದ್ದಾರೆ. ಆಗ ಸೆಪ್ಟೆಂಬರ್ 3 ನೇ ತಾರೀಖು ಹಣ ಹಾಕಲಾಗಿದೆ ಅಂತಾ ಹಿಂದುಸ್ತಾನ್ ಕಂಪನಿ ತಿಳಿಸಿದೆ. ಆಗಲೇ ಖದೀಮ ಹಣ ಲಪಟಾಯಿಸಿದ್ದು ಬೆಳಕಿಗೆ ಬಂದಿದೆ.

ಸೆಪ್ಟೆಂಬರ್ 3ರಂದು ಹಣ ವಂಚನೆ ಗೊತ್ತಾದ ಕೂಡಲೇ ಹಿಂದುಸ್ತಾನ್ ಕಂಪನಿ ಬಳ್ಳಾರಿ ಸೈಬರ್ ಠಾಣೆಗೆ ದೂರು ನೀಡಿದೆ. ಕೂಡಲೇ ಬಳ್ಳಾರಿ ಎಸ್ಪಿ ಶೊಭಾ ರಾಣಿ ಅವರಿಂದ ಪ್ರಕರಣ ಭೇದಿಸಲು ಡಿ ಎಸ್ ಪಿ ಸಂತೋಷ್ ನೇತೃತ್ವದ ತಂಡ ರಚನೆ ಮಾಡಿತ್ತು. ಕೆವೈಸಿ ಹಾಗೂ ಹಣ ವರ್ಗಾವಣೆಯಾದ ಖಾತೆ ಜಾಡು ಹಿಡಿದು ಮಧ್ಯಪ್ರದೇಶದ ಸಿದ್ದಿ ಜಿಲ್ಲೆಯಲ್ಲಿ ಅಡಗಿದ್ದ ಆರೋಪಿಯನ್ನು ಅರೆಸ್ಟ್​ ಮಾಡಿದ್ದಾರೆ.

ಇದನ್ನೂ ಓದಿ : Google ತೆಗೆದುಕೊಂಡಿದೆ ಮಹತ್ವದ ನಿರ್ಧಾರ; ಸೆಪ್ಟೆಂಬರ್​ 20ರಿಂದ ಈ Gmail​​ ಖಾತೆಗಳು ಸ್ಥಗಿತವಾಗುತ್ತೆ​̤̤!!!!

ಸದ್ಯ ಬಂಧಿತ ಆರೋಪಿಯಿಂದ 1.49 ಲಕ್ಷ ನಗದು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿ ಬೇರೆ ಬೇರೆ ಖಾತೆಗೆ ಹಾಕಿದ್ದ 27.97 ಲಕ್ಷ ಹಣ ಫ್ರೀಜ್ ಮಾಡಿಸಿದ್ದಾರೆ. ಇನ್ನುಳಿದ 62 ಲಕ್ಷ ಹಣದ ಬಗ್ಗೆ ಪೊಲೀಸರು ತನಿಖೆ ನಡೆಸ್ತಿದ್ದಾರೆ. ಆರೋಪಿ ಅಜಯ್ ಕುಮಾರ್ ಜೈಸ್ವಾಲ್ ಹಿಂದೆ ದೆಹಲಿ ಮೂಲದ ಕುಖ್ಯಾತ ವ್ಯಕ್ತಿಯ ಕೈವಾಡ ಇದೆ ಎಂದು ಪೊಲೀಸರ ತನಿಖೆ ಶುರು ಮಾಡಿದ್ದಾರೆ. ಕೇವಲ 9 ತರಗತಿ ಓದಿರೋ ಆರೋಪಿ 2 ಕೋಟಿ ಹಣ ಕೊಳ್ಳೆ ಹೊಡೆದಿದ್ದನ್ನು ನೋಡಿ ಪೊಲೀಸರೇ ಶಾಕ್ ಆಗಿದ್ದಾರೆ.

 

WhatsApp Group Join Now
Telegram Group Join Now
Instagram Account Follow Now
spot_img

Related articles

ಕಾರ್ಪೊರೇಟ್ ಯುಗದಲ್ಲಿ Ratan Tata ವ್ಯಾಪಾರ ಸಾಮ್ರಾಜ್ಯ ಕಟ್ಟಿದ್ದು ಹೇಗೆ ?

Ratan Tata Death ವಿಶ್ವದ ಅತ್ಯಂತ ಪ್ರಭಾವಿ ಕೈಗಾರಿಕೋದ್ಯಮಗಳಲ್ಲಿ ಒಬ್ಬರಾದ ರತನ್ ಟಾಟಾ. ೧೦೦ ಕ್ಕೂ ಹೆಚ್ಚು ದೇಶಗಳಲ್ಲಿ ೩೦ ಕ್ಕೂ ಹೆಚ್ಚು ಕಂಪನಿಗಳನ್ನು ಹೊಂದಿದ್ದು...

ಎರಡನೇ ಟೆಸ್ಟ್‌ಗೆ ತಂಡ ಹೇಗೆ ಇರಲಿದೆ ಎಂಬ ಪ್ರಶ್ನೆ ಉದ್ಭವಿಸಿದೆ ? ಸ್ಟಾರ್​ ಆಟಗಾರನಿಗೆ ಕೊಕ್​​̤!

ಬಾಂಗ್ಲಾದೇಶ ತಂಡ ಟೆಸ್ಟ್ ಮತ್ತು ಟಿ20 ಸರಣಿಗಾಗಿ ಭಾರತದ ಪ್ರವಾಸ ಕೈಗೊಂಡಿದೆ. ಈಗಾಗಲೇ ಟೀಮ್​ ಇಂಡಿಯಾ 2 ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ 1-0 ಮುನ್ನಡೆ...

ತಿರುಪತಿ ವಿಚಾರ : ಡಿಸಿಎಂ ಪವನ್ ಕಲ್ಯಾಣ್‌ಗೆ ಕ್ಷಮೆ ಕೇಳಿದ ನಟ ಯಾರು ?

ತಿರುಪತಿ-ತಿರುಮಲ ಲಡ್ಡು ಪ್ರಸಾದದಲ್ಲಿ ಕಲಬೆರಕೆ ವಿಚಾರ ದೇಶಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವಂತೆಯೇ ಲಡ್ಡು ವಿಚಾರವಾಗಿ ಸಾಕಷ್ಟು ರೀಲ್ಸ್ ಗಳು ಮತ್ತು ಮೀಮ್ಸ್ ಗಳು ಹರಿದಾಡುತ್ತಿವೆ....

ನಿಮ್ಮ ಮನೆಯಲ್ಲಿರುವ ತುಪ್ಪ ಶುದ್ಧವಾಗಿದೆಯಾ ಕಲಬೆರಕೆವಾಗಿದೆಯಾ ? ಇಲ್ಲಿವೆ ಸರಳವಾದ ಉಪಾಯಗಳು.!

ತಿರುಪತಿ ಬಾಲಾಜಿಯ ಪ್ರಸಾದದಲ್ಲಿ ಕಲಬೆರಕೆ ಆಗಿದೆ ಎಂಬ ವಿಷಯ ತಿಳಿದಾಗಿನಿಂದ ತುಪ್ಪದ ವಿಚಾರದಲ್ಲಿ ಅನೇಕ ಸಂಶಯಗಳು ಮೂಡುತ್ತಿವೆ. ನಂದಿನಿ ತುಪ್ಪದ ಬಿಟ್ರೆ ಬೇರೆ ಯಾವ...