spot_img
spot_img

ಈ ಪಟ್ಟಣದಲ್ಲಿ ಇಂಟರ್​ನೆಟ್, ಫೋನ್, ವೈಫೈ, ಮೈಕ್ರೋವೇವ್ ಯಾವುದು ಇಲ್ಲ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ಇದು ತಂತ್ರಜ್ಞಾನದ ಯುಗ. ಹಳ್ಳಿ ಹಳ್ಳಿಗಳಿಗೂ ಈಗ ಅಂತರ್ಜಾಲ ಹರಡಿಕೊಂಡಿದೆ. ಅಂಗೈನಲ್ಲಿಯೇ ಈಗ ಜಗತ್ತು ಬಂದು ಕೂತಿದೆ. ಎಐ ಎಂಬ ಅತ್ಯಾಧುನಿಕ ತಂತ್ರಜ್ಞಾನ ಇಂದು ಜಗತ್ತನ್ನು ಆಳಲು ಮುಂದಡಿ ಇಟ್ಟಿದೆ. ಎಲ್ಲದಕ್ಕೂ ಮನುಷ್ಯ ಈಗ ಮೊಬೈಲ್ ಹಾಗೂ ಇಂಟರ್​ನೆಟ್​ ಮೇಲೆ ಅವಲಂಬಿತನಗಿದ್ದಾನೆ.

ಇಂಟರ್​ನೆಟ್,ಮೊಬೈಲ್ ಇಲ್ಲದ ಊರು ಅಂದ್ರೆ ಅದು ಯಾವುದೋ ಗುಡ್ಡುಗಾಡು ಪ್ರದೇಶಗಳಲ್ಲಿ ತೀರ ಹಿಂದಿನ ಬುಡಕಟ್ಟು ಜನಾಂಗದವರು ಸೇರಿದ ಪ್ರದೇಶ ಇರಬೇಕು ಎಂಬ ಭಾವನೆಯೂ ಗಟ್ಟಿಯಾಗಿ ಕುಳಿತಿದೆ. ಆದ್ರೆ ನೆನಪಿರಲಿ ಅಮೆರಿಕಾದ ಈ ಒಂದು ಪಟ್ಟಣದಲ್ಲಿ ಒಂದೇ ಒಂದು ಮೊಬೈಲ್ ಫೋನ್ ರಿಂಗಣಿಸುವುದಿಲ್ಲ.

ವಾಷಿಂಗ್ಟನ್​ ಡಿಸಿಯಿಂದ ಕೇವಲ 4 ಗಂಟೆ ಪ್ರಯಾಯಣದಲ್ಲಿ ತಲುಪುವ ಈ ಒಂದು ನಗರದಲ್ಲಿ ಇಂದಿಗೂ ಕೂಡ ಅಲ್ಲಿ ಒಂದೇ ಒಂದು ಫೋನಿನ ಕರೆಗಂಟೆ. ಇಂಟರ್​ನೆಟ್​ನ ಜಾಲ ಇದ್ಯಾವುದು ಕಂಡು ಬರುವುದಿಲ್ಲ.
ಅಮೆರಿಕಾ ಅಂದರೇನೆ ತಂತ್ರಜ್ಞಾನಕ್ಕೆ ಆಧುನಿಕತೆಗೆ, ಹೊಸ ಆವಿಷ್ಕಾರಗಳಿಗೆ ಇನ್ನೊಂದು ಹೆಸರು.

ಅಂತಹ ದೇಶದ ಒಂದು ನಗರದಲ್ಲಿ ಈ ಮೇಲೆ ಹೇಳಿದ ಯಾವ ವ್ಯವಸ್ಥೆಯೂ ಇಲ್ಲ. ಆ ನಗರದ ಹೆಸರು ಪಶ್ಚಿಮ ವರ್ಜಿನಿಯಾದ ಗ್ರೀನ್ ಬ್ಯಾಂಕ್​. ಈ ಗ್ರೀನ್ ಬ್ಯಾಂಕ್​ನಲ್ಲಿ ಇಂದಿನವರೆಗೂ ಅಂತರ್ಜಾಲ ವ್ಯವಸ್ಥೆಯಿಲ್ಲ, ಇಲ್ಲಿ ಮೈಕ್ರೋವೇವ್ ಬಳಸುವಂತಿಲ್ಲ. ಮೊಬೈಲ್​ನ್ನು ಬಳಸುವಂತೆಯೇ ಇಲ್ಲ ಇಲ್ಲಿಗೆ ಭೇಟಿ ನೀಡುವ ಯಾವುದೇ ಪ್ರವಾಸಿಗರು ಅದರ ಪರಂಪರೆಯನ್ನು ಪಾಲನೆ ಮಾಡಲೇಬೇಕು.

ಈ ಒಂದು ಪಟ್ಟಣ ಎರಡು ಚರ್ಚಗಳನ್ನು ಹೊಂದಿದೆ, ಒಂದು ಪ್ರೈಮರಿ ಸ್ಕೂಲ್, ಒಂದು ಲೈಬ್ರರಿ ಹಾಗೂ ವಿಶ್ವದ ಅತಿದೊಡ್ಡ ಸ್ಟೇರೆಬಲ್​ ರೆಡಿಯೋ ಟೆಲಿಸ್ಕೋಪವನ್ನು ಹೊಂದಿದೆ. ಇದೇ ಕಾರಣದಿಂದ ಇಲ್ಲಿ ಇಂಟರ್​ನೆಟ್​ನ್ನು ಬಳಸುವುದಿಲ್ಲ

ಗ್ರೀನ್ ಬ್ಯಾಂಕ್​ ಯುನೈಟೆಡ್ ಸ್ಟೇಟ್ಸ್​ನ ಒಂದು ಪಟ್ಟಣ 1958ರಲ್ಲಿ ಈ ಒಂದು ನಗರಿ33 ಸಾವಿರ ಸ್ಕ್ವೇರ್ ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಸೃಷ್ಟಿಯಾಯ್ತು. ಇದನ್ನು ರಾಷ್ಟ್ರೀಯ ರೆಡಿಯೋ ನಿಶ್ಯಬ್ದ ವಲಯ (NRQZ) ಎಂದು ಗುರುತಿಸಲಾಯ್ತು. ಈ ಒಂದು ಕಾರಣಕ್ಕಾಗಿ ಟೆಲಿಸ್ಕೋಪ್ ಆಪರೇಷನ್​ಗಳಿಗೆ ಯಾವುದೇ ಅಡ್ಡಿಯಾಗಬಾರದು ಎಂದು ಎಲೆಕ್ಟ್ರೋ ಮ್ಯಾಗ್ನೆಟಿಕ್ ಅಲೆಗಳನ್ನು ಸೃಷ್ಟಿಸುವ ವೈಫೈ, ಇಂಟರ್​ನೆಟ್, ಮೊಬೈಲ್ ಮೈಕ್ರೋವೇವ್ ಓವನ್ಸ್​ ಇವೆಲ್ಲವುಗಳಿಗೆ ಇಲ್ಲಿ ನಿಷೇಧವಿದೆ.

ಇಡೀ ಗ್ರೀನ್ ಬ್ಯಾಂಕ್​ನ್ನೇ ರೇಡಿಯೋ ಬಾಹ್ಯಾಕಾಶದಿಂದ ಬರುವ ರೇಡಿಯೋ ತರಂಗಗಳನ್ನು ಕಂಡುಹಿಡಿಯುವ ನಿಟ್ಟಿನಲ್ಲಿಯೇ ಸೃಷ್ಟಿಸಲಾಗಿದೆ. ವೈಫೈ, ಸೆಲ್​ಫೋನ್ಸ್ ಮತ್ತು ಇತರ ಎಲೆಕ್ಟ್ರಾನಿಕ್ ಡಿವೈಸ್​ಗಳು ಟೆಲಿಸ್ಕೋಪ್ ಕಾರ್ಯಕ್ಷಮತೆಗೆ ದಕ್ಕೆ ತರುವ ಸಾಧ್ಯತೆ ಹೆಚ್ಚು ಹೀಗಾಗಿಯೇ ಇಲ್ಲಿ ಮೊಬೈಲ್​ ಫೋನ್​ಗಳು, ಮೈಕ್ರೋವೇವ್​ ಹಾಗೂ ಕೆಲವು ವಾಹನಗಳಿಗೂ ಕೂಡ ನಿಷೇಧವಿದೆ.

 

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

KEN BETWA RIVER LINKING PROJECT – ಕೆನ್-ಬೆಟ್ವಾ ನದಿ ಜೋಡಣೆಗೆ ಪ್ರಧಾನಿ ಮೋದಿ ಶಂಕುಸ್ಥಾಪನೆ

Khajuraho (Central Region): ಮಧ್ಯ ಪ್ರದೇಶದಲ್ಲಿ ಹುಟ್ಟುವ ಎರಡು ನದಿಗಳಾದ ಕೆನ್​ ಮತ್ತು ಬೆಟ್ವಾ ನದಿಗಳನ್ನು ಜೋಡಿಸಿ, ಅದರ ನೀರನ್ನು ಮಧ್ಯ ಪ್ರದೇಶ ಮತ್ತು ಉತ್ತರ...

KERALA NEWS – ಬುಧವಾರ ಸಂಜೆ ಶಬರಿಮಲೆ ಅಯ್ಯಪ್ಪನಿಗೆ ‘ತಂಗ ಅಂಗಿ’ ಆಭರಣ ತೊಡಿಸಿ ದೀಪಾರಾಧನೆ, ಡಿ.26 ರಂದು ಮಂಡಲಪೂಜೆ

 kerala (shabarimale) : ಶಬರಿಮಲೆ ಸನ್ನಿಧಾನದಲ್ಲಿ ಡಿ.25ರಂದು ವಿಶೇಷ ದೀಪಾರಾಧನೆ, ಡಿ.26 ಸಂಜೆ ಮಂಡಲಪೂಜೆ ನಡೆಯಲಿದೆ.ಅಯ್ಯಪ್ಪನಿಗೆ 'ತಂಗ ಅಂಗಿ' ಆಭರಣ ತೊಡಿಸಲಾಗುತ್ತದೆ. ರಾತ್ರಿ 11ಕ್ಕೆ ಹರಿವರಾಸನಂ...

BELAGAVI NEWS – ಬೆಳಗಾವಿ ತಾಲೂಕು ಶಾಲೆಗಳಿಗೆ ಡಿ.26, 27 ರಂದು ರಜೆ

Belagavi News : ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ಆಚರಣೆ- ಗಾಂಧಿ‌ ಭಾರತ ಕಾರ್ಯಕ್ರಮ ನಿಮಿತ್ತ ಬೆಳಗಾವಿ ತಾಲೂಕಿನ ಶೈಕ್ಷಣಿಕ ವಲಯದ (ನಗರ ಮತ್ತು ಗ್ರಾಮೀಣ) ಸರಕಾರಿ,...

BJP MLA MUNIRATHNA – BJP ಶಾಸಕ ಮುನಿರತ್ನ ಮೇಲೆ ಮೊಟ್ಟೆ ದಾಳಿ

Bangalore News: ಅಟಲ್ ಬಿಹಾರಿ ವಾಜಪೇಯಿ ಜನ್ಮದಿನಾಚರಣೆ ಕಾರ್ಯಕ್ರಮ ಮುಗಿಸಿ ಹೋಗುವಾಗ ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ದಾಳಿ ನಡೆದಿದೆ. ಘಟನೆ ನಡೆಯುತ್ತಿದ್ದಂತೆ ಸ್ಥಳದಲ್ಲಿದ್ದ...