spot_img
spot_img

ಪ್ರತಿ ಪಾಲಕರೂ ತಮ್ಮ ಮಕ್ಕಳಿಗೆ ಕಲಿಸಲೇಬೇಕು ಈ ಹೂಡಿಕೆ ಪಾಠ

spot_img
spot_img

Share post:

ಹೈದರಾಬಾದ್​:ಬಾಲ್ಯದಿಂದಲೇ ಮಕ್ಕಳಿಗೆ ಅನೇಕ ವಿಷಯಗಳನ್ನು ಕಲಿಸುತ್ತೇವೆ. ಆದರೆ, ಷೇರು ಮಾರುಕಟ್ಟೆ ಬಗ್ಗೆ ಅವರೊಂದಿಗೆ ಮಾತನಾಡುವುದಿಲ್ಲ. ಸದ್ಯ ಮಕ್ಕಳು ಸುಲಭವಾಗಿ ಎಲ್ಲ ವಿಷಯಗಳನ್ನು ಕಲಿಯುತ್ತಿದ್ದಾರೆ.

ಚಿಕ್ಕ ವಯಸ್ಸಿನಲ್ಲಿಯೇ ಹೂಡಿಕೆ ಬಗ್ಗೆ ಯೋಚಿಸುವುದು ಸ್ವಲ್ಪ ಉತ್ಪ್ರೇಕ್ಷೆ ಅನಿಸಬಹುದು. ಆದರೆ, ಹೂಡಿಕೆ ಮಾಡುವುದನ್ನು ತ್ವರಿತವಾಗಿ ಪ್ರಾರಂಭಿಸಿದರೆ, ಅದು ವೃದ್ಧಿಯಾಗುವುದಕ್ಕೆ ಸಾಕಷ್ಟು ಸಮಯ ಸಿಗುತ್ತದೆ ಮತ್ತು ಅದಷ್ಟು ಬೇಗ ಮಕ್ಕಳಿಗೆ ಆರ್ಥಿಕ ಸ್ವಾತಂತ್ರ್ಯವನ್ನು ಪಡೆಯಲು ಸಾಧ್ಯವಾಗುತ್ತದೆ ಎಂಬುದು ಹಣಕಾಸು ತಜ್ಞರು ಅಭಿಪ್ರಾಯವಾಗಿದೆ.

ಖರ್ಚಿಗಾಗಿ ಮಕ್ಕಳಗೆ ಒಂದಷ್ಟು ಹಣ ಕೊಡುವುದು ಸಾಮಾನ್ಯ. ಇದರಲ್ಲಿ ಸ್ವಲ್ಪ ಮೊತ್ತವನ್ನು ಹೂಡಿಕೆ ಮಾಡುವಂತೆ ಅವರನ್ನು ಪ್ರೋತ್ಸಾಹಿಸಬೇಕು.

ಈ ಮೊತ್ತದಿಂದ ನೇರವಾಗಿ ಷೇರುಗಳಲ್ಲಿ ಹೂಡಿಕೆ ಮಾಡಬಹುದು ಅಥವಾ ಈಕ್ವಿಟಿ ಆಧಾರಿತ ಮ್ಯೂಚುವಲ್ ಫಂಡ್‌ಗಳಲ್ಲಿ ಸಿಪ್​ ತೆರೆಯಬಹುದು. ಇದರಲ್ಲಿ ದೀರ್ಘಾವಧಿ ಹೂಡಿಕೆ ಮಾಡಲು ಅವಕಾಶವಿದೆ. ಆದ್ದರಿಂದ, ಮಾರುಕಟ್ಟೆಯ ಏರಿಳಿತಗಳ ನಡುವೆ ಪ್ರಯೋಜನ ಪಡೆಯುತ್ತಾರೆ. ಜೊತೆ ಮಕ್ಕಳಿಗೆ ಮಾರುಕಟ್ಟೆಯ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಸಹ ಅವಕಾಶ ಇರುತ್ತದೆ.

ಮಕ್ಕಳು ಚಿಕ್ಕಂದಿನಿಂದಲೇ ಹೂಡಿಕೆಯತ್ತ ಆಕರ್ಷಿತರಾದರೆ ಅವರಿಗೆ ಹಣದ ಬಗ್ಗೆ ಜ್ಞಾನ ಹೆಚ್ಚುತ್ತದೆ. ಆರ್ಥಿಕ ಶಿಸ್ತು ಬೆಳೆಯುತ್ತದೆ. ಇದರಿಂದ ಅವರು ಅನಾವಶ್ಯಕವಾಗಿ ಹಣ ಖರ್ಚು ಮಾಡಲು ಇಷ್ಟಪಡುವುದಿಲ್ಲ. ಹಣ ವೃದ್ಧಿಸಿದಂತೆ ಹೆಚ್ಚು ಹೂಡಿಕೆ ಮಾಡುವ ಯೋಚನೆ ಬರುತ್ತದೆ.

15-16 ವರ್ಷ ವಯಸ್ಸಿನ ಮಕ್ಕಳಿಗೆ ಆರ್ಥಿಕ ವಿಷಯಗಳ ಬಗ್ಗೆ ಶಿಕ್ಷಣ ನೀಡುವುದನ್ನು ಪ್ರಾರಂಭಿಸಬೇಕು. ಬ್ಯಾಂಕ್ ಖಾತೆ ತೆರೆಯುವುದರ ಜೊತೆಗೆ ಷೇರು ಮಾರುಕಟ್ಟೆ, ಮ್ಯೂಚುವಲ್ ಫಂಡ್ ಮುಂತಾದ ಹಣಕಾಸಿನ ವಿಷಯಗಳನ್ನು ಅವರೊಂದಿಗೆ ಚರ್ಚಿಸಬೇಕು. ಕೆಲವೊಮ್ಮೆ ಈ ವಿವರಗಳು ನಮಗೆ ತಿಳಿದಿಲ್ಲದಿರಬಹುದು. ಈ ಸಂದರ್ಭದಲ್ಲಿ ಆರ್ಥಿಕ ಸಲಹೆಗಾರರನ್ನು ಸಂಪರ್ಕಿಸಬಹುದು , ಹಣದ ವಿಚಾರದಲ್ಲಿ ಸಾಕಷ್ಟು ಕಾಳಜಿ ವಹಿಸಬೇಕಾಗುತ್ತದೆ. ಈಕ್ವಿಟಿ ಆಧಾರಿತ ಹೂಡಿಕೆಗಳಲ್ಲಿ ನಷ್ಟದ ಅಪಾಯ ಹೆಚ್ಚಾಗಿರುತ್ತದೆ. ಈ ಬಗ್ಗೆ ಮೊದಲೇ ಅವರಿಗೆ ತಿಳಿಸಿ , ಆರ್ಥಿಕ ವಿಷಯದಲ್ಲಿ ಅಪರಿಚಿತರ ಮಾತುಗಳನ್ನು ನಂಬಬಾರದು ಎಂದು ತಿಳಿಸಬೇಕು ಮತ್ತು ಕಡಿಮೆ ಸಮಯದಲ್ಲಿ ಕೋಟಿಗಟ್ಟಲೆ ಹಣ ಗಳಿಸಲು ಸಾಧ್ಯವಿಲ್ಲ ಎಂದು ಮನವರಿಕೆ ಮಾಡಿಕೊಡಬೇಕು , ಸದ್ಯ ಮಾಹಿತಿ ಯುಗದಲ್ಲಿ ಯಾವುದು ಸತ್ಯ ಮತ್ತು ಯಾವುದು ಸುಳ್ಳು ಎಂದು ಪತ್ತೆ ಮಾಡುವುದು ಕಷ್ಟ. ಹೀಗಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಸಿಗುವ ಸಲಹೆಗಳನ್ನು ಆಧರಿಸಿ ಹೂಡಿಕೆ ಮಾಡುವುದು ಸರಿಯಲ್ಲ. ಈ ಬಗ್ಗೆ ಅವರಿಗೆ ವಿವರಿಸಬೇಕು, ಸಂಶೋಧನೆ ಮಾಡುವುದನ್ನು ಕಲಿಸಬೇಕು. ಷೇರು, ಮ್ಯೂಚುವಲ್ ಫಂಡ್ ಅನ್ನು ಹೇಗೆ ಆಯ್ಕೆ ಮಾಡಿಕೊಳ್ಳಬೇಕು ಮತ್ತು ಅದರ ಬಗ್ಗೆ ಎಲ್ಲಾ ವಿವರಗಳನ್ನು ಸಂಪೂರ್ಣವಾಗಿ ತಿಳಿದುಕೊಳ್ಳಬೇಕು ಎಂದು ತಿಳಿಸಬೇಕು. ಅವರಿಗೆ ಈ ಬಗ್ಗೆ ಜ್ಞಾನವಿದ್ದಾಗ ಮಾತ್ರ ಹೂಡಿಕೆ ಮಾಡುವ ಆಲೋಚನೆ ಬರುತ್ತದೆ , ಷೇರುಗಳು ಮತ್ತು ಮ್ಯೂಚುವಲ್ ಫಂಡ್ ಆಯ್ಕೆಮಾಡಿಕೊಳ್ಳಲು ಮಕ್ಕಳಿಗೆ ಸ್ವಾತಂತ್ರ್ಯ ನೀಡಿ. ಆದರೆ, ಹೂಡಿಕೆ ಮಾಡುವ ಮೊದಲು ಅವುಗಳನ್ನು ಪರಿಶೀಲಿಸಿದ ನಂತರ ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕು.

ಹೂಡಿಕೆ ಮಾಡುವ ಅವಶ್ಯಕತೆ ಇಲ್ಲದೇ, ಆಟದಂತೆ ಷೇರುಗಳನ್ನು ಆಯ್ಕೆ ಮಾಡಿಕೊಂಡು, ಹೂಡಿಕೆ ಮಾಡಲು ಅವಕಾಶ ನೀಡುವ ಅನೇಕ ವರ್ಚುವಲ್ ಪ್ಲಾಟ್‌ಫಾರ್ಮ್‌ಗಳಿವೆ. ಇವುಗಳಲ್ಲಿ ಕೆಲ ವರ್ಷಗಳವರೆಗೆ ಶಿಕ್ಷಣ ಪಡೆಯಬಹುದು.

ಅಪ್ರಾಪ್ತರ ಹೆಸರಿನಲ್ಲಿ ಡಿಮ್ಯಾಟ್ ಖಾತೆ ತೆರೆಯಬಹುದು. ಆದರೆ, ಅದಕ್ಕೆ ಹಲವು ಷರತ್ತುಗಳಿವೆ. ವಯಸ್ಕರ ಖಾತೆಯ ಮೂಲಕ ಮಕ್ಕಳಿಗಾಗಿ ಹೂಡಿಕೆ ಮಾಡಬಹುದು. ಇಲ್ಲಿ ಮಕ್ಕಳೊಂದಿಗೆ ಚರ್ಚಿಸಿ ಹೂಡಿಕೆ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಯಾವುದೇ ಸಂದರ್ಭದಲ್ಲೂ ಖಾತೆಯನ್ನು ಸಂಪೂರ್ಣವಾಗಿ ಅವರಿಗೆ ಹಸ್ತಾಂತರಿಸಬಾರದು.

ನಿಮ್ಮ ಮೇಲ್ವಿಚಾರಣೆ ಅತ್ಯಗತ್ಯ. ಮಕ್ಕಳು ಮೇಜರ್ ಆದ ನಂತರ, ಅವರು ತಮ್ಮ ಹೆಸರಿನಲ್ಲಿ ತಮ್ಮದೇ ಖಾತೆಯನ್ನು ತೆರೆಯಬಹುದು. ನಂತರ ಅವರು ತಮ್ಮ ಖಾತೆಯಲ್ಲಿ ಅದೇ ಸಂಖ್ಯೆಯ ಷೇರುಗಳು ಮತ್ತು ಮ್ಯೂಚುವಲ್ ಫಂಡ್ ಯುನಿಟ್​ಗಳನ್ನು ಖರೀದಿಸಲು ಅವಕಾಶವಿರುತ್ತದೆ.

ಷೇರು ಮಾರುಕಟ್ಟೆಯಲ್ಲಿ ಹೊಸ ಹೂಡಿಕೆಯನ್ನು ಪ್ರಾರಂಭಿಸುವಾಗ ಕೆಲವು ವಿಷಯಗಳ ಬಗ್ಗೆ ಜಾಗರೂಕರಾಗಿರಬೇಕು , ಇಂದು ಹೂಡಿಕೆ ಮಾಡಿದರೆ ನಾಳೆಯೇ ದುಪ್ಪಟ್ಟಾಗುತ್ತದೆ ಎಂದು ನಿರೀಕ್ಷಿಸಬೇಡಿ , ಯಾವುದೇ ಸಂದರ್ಭದಲ್ಲಿ ಎಫ್​ ಅಂಡ್ ​ಒ ಮತ್ತು ಡೇ ಟ್ರೇಡಿಂಗ್ ಮಾಡಬೇಡಿ.

ಉತ್ತಮ ಷೇರುಗಳಲ್ಲಿ ಹೂಡಿಕೆ ಮಾಡುವುದು ನಿಮ್ಮ ಗುರಿಯಾಗಲ , ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವಾಗ ನೀವು ಲಾಭ ಗಳಿಸಿದರೆ ಸಂತಸಪಡುತ್ತೀರಿ. ಇದರಲ್ಲಿ ಕೆಲವೊಮ್ಮೆ ನಷ್ಟ ಅನುಭವಿಸಬೇಕಾಗುತ್ತದೆ ಎಂದನ್ನು ನೆನಪಿನಲ್ಲಿಡಬೇಕು. ಭಾವನೆಗಳನ್ನು ಹತೋಟಿಯಲ್ಲಿಟ್ಟುಕೊಳ್ಳಬೇಕು , ಸ್ನೇಹಿತರು, ಸಾಮಾಜಿಕ ಮಾಧ್ಯಮಗಳು ಇತ್ಯಾದಿಗಳಿಂದ ಹೂಡಿಕೆ ಸಲಹೆಗಳನ್ನು ನಂಬುವ ಮೊದಲು, ನೀವು ಸಂಶೋಧನೆ ಮಾಡಿ. ಹೂಡಿಕೆಯ ಅಂತಿಮ ನಿರ್ಧಾರ ನಿಮ್ಮದಾಗಿರಲಿ.

Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

MOTOROLA EDGE 60 FUSION – ಅದ್ಭುತವಾದ ಕ್ಯಾಮೆರಾ ಸೆಟಪ್, ವಾಟರ್ ಪ್ರೊಟೆಕ್ಷನ್ – ಮೊಟೊರೊಲಾದ ಹೊಸ ಫೋನ್ನ ಬೆಲೆ ಕೇವಲ ಇಷ್ಟೇ!

Motorola Edge 60 Fusion: ಬಹುನಿರೀಕ್ಷಿತ ' MOTOROLA EDGE 60 FUSION' ಕೊನೆಗೂ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಕಂಪನಿಯು ಇದನ್ನು ' MOTOROLA EDGE...

RASHMIKA MANDANNA – ‘ನಾನು ಹೈದರಾಬಾದ್ನವಳು’: ರಶ್ಮಿಕಾ ಮಂದಣ್ಣ ಹೇಳಿಕೆ ವಿಚಾರ; ಮುಂದುವರಿದ ಪರ – ವಿರೋಧ ಚರ್ಚೆ

'ನ್ಯಾಷನಲ್ ಕ್ರಶ್' ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಜನಪ್ರಿಯ ನಟಿ RASHMIKA MANDANNA, ಭಾರತೀಯ ಚಿತ್ರರಂಗದಲ್ಲಿ ಮೋಡಿ ಮಾಡಿದ್ದಾರೆ. ತಮ್ಮ ನಟನಾ ಕೌಶಲ್ಯದಿಂದ ದೇಶಾದ್ಯಂತ ಅಭಿಮಾನಿಗಳ...

IPL SUBSCRIPTION PLANS – ಕೆಲವೇ ದಿನಗಳಲ್ಲಿ IPL ಹವಾ ಶುರು: ಈ ಕಂಪನಿಗಳ ಗ್ರಾಹಕರಿಗೆ ಅಗ್ಗದಲ್ಲಿ ಲಭ್ಯ!

JioHotstar Subscription: ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್‌ ಟೂರ್ನಿ ಮುಗೀತು. ಮುಂದಿನ ಕೆಲವೇ ದಿನಗಳಲ್ಲಿ ಐಪಿಎಲ್​ ಜಾತ್ರೆ ಆರಂಭವಾಗಲಿದೆ. ಇದಕ್ಕಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ...

IPHONE 17 SERIES – ಐಫೋನ್ 17 ಸೀರಿಸ್ ಡಿಟೆಲ್ಸ್ ಲೀಕ್ – ಇದರ ಸ್ಪೆಷಾಲಿಟಿ ಏನ್ ಗೊತ್ತಾ?

iPhone 17 Series: ಟೆಕ್ ದೈತ್ಯ ಆಪಲ್ ತನ್ನ ಹೊಸ ಐಫೋನ್ ಸೀರಿಸ್​ ಅನ್ನು ಪ್ರತಿ ವರ್ಷ ಮಾರುಕಟ್ಟೆಗೆ ಪರಿಚಯಿಸುತ್ತದೆ. ಈ ಕ್ರಮದಲ್ಲಿ ಈ ವರ್ಷವೂ...