ಚಿಕ್ಕೋಡಿ :ಬೆಳಗಾವಿಯಲ್ಲಿ ಹಿಂದೂ – ಮುಸ್ಲಿಮರು ಭಾವೈಕ್ಯತೆಯಿಂದ ದರ್ಗಾದಲ್ಲಿ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿ ಪೂಜೆ ಸಲ್ಲಿಕೆ ಮಾಡಿದ್ದಾರೆ. ಈ ಮೂಲಕ ದೇಶದಲ್ಲಿ ಎಲ್ಲ ಧರ್ಮಗಳನ್ನು ಸಮಾನವಾಗಿ ಕಾಣಬೇಕು ಎಂದು ಸರ್ವಧರ್ಮ ಸಮಾಭಾವದ ಸಂದೇಶ ಸಾರುತ್ತಿದ್ದ ಅನೇಕ ಮಹಾನ್ ವ್ಯಕ್ತಿಗಳ ಕನಸು ಕೊನೆಗೂ ನನಸಾಗಿದೆ.
ಇದನ್ನೂ ಓದಿ : Sandalwood Queen ರಮ್ಯಾ ಮದುವೆ ಫಿಕ್ಸ್.? ಹುಡುಗ ಯಾರು ಗೊತ್ತಾ.?
ಬ್ರಿಟೀಷರ ಆಡಳಿತದಲ್ಲಿ ನಲುಗುತ್ತಿದ್ದ ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಬಾಲಗಂಗಾಧರ ತಿಲಕ್ ಸೇರಿದಂತೆ ಅನೇಕ ನಾಯಕರು ದೇಶದ ಜನರಲ್ಲಿ ಸ್ವಾತಂತ್ರದ ಕಿಚ್ಚು ಹೊತ್ತಿಸುವ ಉದ್ದೇಶದಿಂದ ಸಂಘಟನೆಯಾಗಲು ಗಣೇಶ ಹಬ್ಬವನ್ನು ಆಚರಣೆ ಮಾಡಲು ಮುಂದಾದರು ಎಂಬ ಇತಿಹಾಸವಿದೆ. ಇದಾದ ನಂತರ ದೇಶದ ಎಲ್ಲ ಮಹಾನಗರಗಳು, ನಗರ, ಪಟ್ಟಣಗಳು ಹಾಗೂ ಗ್ರಾಮೀಣ ಭಾಗದ ಗಲ್ಲಿ ಗಲ್ಲಿಗಳಲ್ಲಿಯೂ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿ ಪೂಜಿಸಲಾಗುತ್ತಿದೆ. ಗಣೇಶ ಹಬ್ಬ ದೇಶದ ಸಾರ್ವತ್ರಿಕ ಹಬ್ಬದಂತೆ ಆಚರಣೆ ಮಾಡಲಾಗುತ್ತಿದೆ.
ಇದನ್ನೂ ಓದಿ : ಬೆಳಗಾವಿ : ಹುಡುಗಿಯರೇ ಹುಷಾರ್! ಸ್ವಲ್ಪ ಯಾಮಾರಿದರೂ ನಿಮ್ಮನ್ನ ಬೆತ್ತಲಾಗಿಸಿ ಹಣ ಕೀಳುತ್ತಾರೆ ಈ ಖದೀಮರು
ಗಣೇಶ ಹಬ್ಬವನ್ನು ಹಿಂದೂಗಳು ಆಚರಣೆ ಮಾಡುತ್ತಾರೆ. ಮನೆ ಮನೆಗಳಿಂದ ಪಟ್ಟಿಯನ್ನು ಸಂಗ್ರಹಿಸಿ, ಜೊತೆಗೆ ತಾವೊಂದಿಷ್ಟು ಹಣವನ್ನು ಹಾಕಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿ ಅದನ್ನು ಪೂಜಿಸಿ ನಂತರ ವಿಸರ್ಜನೆ ಮಾಡಿ ಬರುತ್ತಾರೆ. ಆದರೆ, ಬೆಳಗಾವಿ ಜಿಲ್ಲೆ ಕಾಗವಾಡ ತಾಲೂಕಿನ ಉಗಾರ ಬುದ್ರುಕ್ ಗ್ರಾಮದಲ್ಲಿ ಹಿಂದೂಗಳ ಜೊತೆಗೆ ಮುಸ್ಲಿಂ ಯುವಜನರು ಸೇರಿಕೊಂಡು ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದಾರೆ. ಗಣೇಶ ಮೂರ್ತಿ ತರಲು, ಪೂಜೆ ಮಾಡಲು ಹಾಗೂ ವಿಸರ್ಜನೆ ಮಾಡುವ ಕಾರ್ಯದಲ್ಲಿಯೂ ಮುಸ್ಲಿಂ ಯುವಕರು ಸಾಥ್ ನೀಡಿದ್ದಾರೆ.
ಇದನ್ನೂ ಓದಿ : ಅಥಣಿ : ರಸ್ತೆ ಬದಿ ನಿಂತಿದ್ದ ಬಾಲಕನ ಮೇಲೆ ಹರಿದ ಬಸ್; ಸಿಸಿ ಕ್ಯಾಮೆರಾದಲ್ಲಿ ಸೆರೆಯಾದ ಭೀಕರ ದೃಶ್ಯ
ಈ ಕುರಿತು ಮಾತನಾಡಿದ ಗ್ರಾಮಸ್ಥರೊಬ್ಬರು ನಮ್ಮ ಊರಿನಲ್ಲಿ ಗಣೇಶ ಹಬ್ಬದ ಆಚರಣೆಯನ್ನು ಮುಸ್ಲಿಮರು ಕೂಡ ತಮ್ಮದೇ ಧರ್ಮದ ಹಬ್ಬದಂತೆ ಆಚರಣೆ ಮಾಡುತ್ತಾರೆ. ಜೊತೆಗೆ, ಹಿಂದೂಗಳಾದ ನಾವು ಕೂಡ ಮುಸ್ಲಿಂರ ಹಬ್ಬಗಳಾದ ಉರುಸ್, ಇದ್ ಮಿಲಾದ್ ಸೇರಿದಂತೆ ಎಲ್ಲ ಹಬ್ಬಗಳನ್ನು ಆಚರಣೆ ಮಾಡುತ್ತೇವೆ. ನಾವೆಲ್ಲರೂ ಒಂದೇ ಭಾವದಿಂದ ಬೇಧ-ಭಾವ ಮಾಡದೇ ಹಬ್ಬ ಆಚರಿಸುತ್ತೆವೆ ಎಂದರು. ನಂತರ ಮಾತನಾಡಿದ ಮುಸ್ಲಿಂ ಬಾಂಧವ ವ್ಯಕ್ತಿಯೊಬ್ಬ, ನಾವೆಲ್ಲರೂ ಅಣ್ಣ ತಮ್ಮಂದಿರಂತೆ ಕೋಮು ಸೌಹಾರ್ದತೆಯಿಂದ ಹಿಂದೂ- ಇಸ್ಲಾಂ ಧರ್ಮದ ಹಬ್ಬವನ್ನು ಆಚರಣೆ ಮಾಡುತ್ತೆವೆ ಎಂದು ಹೇಳಿದರು.