spot_img
spot_img

THREE BUS EXPLOSION IN ISRAEL:ಉಗ್ರರ ಕೃತ್ಯದ ಶಂಕೆ, ವ್ಯಗ್ರಗೊಂಡ ಇಸ್ರೇಲ್

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

Bat Yam News:

ಒಂದೂವರೆ ವರ್ಷಗಳ ಕಾಲ ನಡೆದ ಯುದ್ದದ ಬಳಿಕ ಕದನ ವಿರಾಮಕ್ಕೆ ಹಮಾಸ್​, ISRAEL​ ಒಪ್ಪಿದ್ದು, ಇದರ ಭಾಗವಾಗಿ ಹಸ್ತಾಂತರ ಪ್ರಕ್ರಿಯೆ ಕೂಡ ಮುಂದುವರೆದಿದೆ. ನಿನ್ನೆಯಷ್ಟೇ ಮಗು ಸೇರಿದಂತೆ ನಾಲ್ವರ ಮೃತ ಶರೀರವನ್ನು ಹಮಾಸ್​ ISRAEL​ಗೆ ಹಸ್ತಾಂತರಿಸಿದ್ದು, ಈ ದುಃಖದಲ್ಲಿದ್ದ ISRAELನಲ್ಲಿ ಈ ದುರ್ಘಟನೆ ನಡೆದಿದೆ.ಹಮಾಸ್​ ಜೊತೆ ಕದನ ವಿರಾಮ ಒಪ್ಪಂದ ನಡೆಸಿರುವ ISRAELನಲ್ಲಿ ಮತ್ತೊಂದು ವಿಧ್ವಂಸಕ ಕೃತ್ಯ ವರದಿಯಾಗಿದೆ.

ರಸ್ತೆ ಬದಿ ನಿಂತಿದ್ದ ಮೂರು ಬಸ್​ಗಳು ಸರಣಿ ಸ್ಫೋಟಕ್ಕೆ ಒಳಗಾಗಿದ್ದು, ಇದೊಂದು ಉಗ್ರಗಾಮಿ ಕೃತ್ಯ ಎಂದು ಶಂಕಿಸಲಾಗಿದೆ. ಅದೃಷ್ಟವಶಾತ್​, ಯಾವುದೇ ಹಾನಿಯಾಗಿಲ್ಲ.ಟೆಲ್ ಅವೀವ್‌ನ ಹೊರವಲಯದ ಬ್ಯಾಟ್ ಯಾಮ್‌ನ ಪಾರ್ಕಿಂಗ್ ಸ್ಥಳದಲ್ಲಿ ಈ ಅನಾಹುತ ಸಂಭವಿಸಿದೆ. ಈ ವೇಳೆ ಸುಟ್ಟುಹೋದ ಮೆಟಲ್​ ಶೆಲ್​ಗಳು ಲಭ್ಯವಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಅದೃಷ್ಟವಶಾತ್​ ಯಾವುದೇ ಅನಾಹುತವಾಗಿಲ್ಲ. ಬಸ್​ಗಳು ಸಂಚಾರ ಮುಗಿಸಿ ಇಲ್ಲಿ ನಿಂತಿದ್ದಾಗ ಈ ಘಟನೆ ಸಂಭವಿಸಿದೆ ಎಂದು ನಗರದ ಮೇಯರ್ ಟ್ಜ್ವಿಕಾ ಬ್ರೋಟ್ ತಿಳಿಸಿದ್ದಾರೆ.

ಸ್ಫೋಟಗೊಂಡ ಎರಡು ಬಸ್​ನಲ್ಲಿ ಸ್ಫೋಟಕಗಳು ಕಂಡು ಬಂದಿವೆ. ಆದರೆ, ಇವು ಸ್ಪೋಟಗೊಂಡಿಲ್ಲ. ಈ ವೇಳೆ ಐದು ಬಾಂಬ್​ಗಳು ಪತ್ತೆಯಾಗಿದ್ದು, ಅವೆಲ್ಲ ಒಂದೇ ರೀತಿಯಲ್ಲಿದ್ದು, ಇದಕ್ಕೆ ಟೈಮರ್​ ಅಳವಡಿಕೆ ಮಾಡಲಾಗಿದೆ. ಇವುಗಳನ್ನು ನಿಷ್ಕ್ರಿಯ ಮಾಡಲಾಗಿದೆ ಎಂದು ಪೊಲೀಸ್ ವಕ್ತಾರ ಅಸಿ ಅಹರೋನಿ ಚಾನೆಲ್ 13 ಟಿವಿಗೆ ತಿಳಿಸಿದ್ದಾರೆ.ಈ ಘಟನೆ ಓರ್ವನ ಕೃತ್ಯವೇ ಅಥವಾ ಅನೇಕರ ಸೇರಿ ಎಸಗಿರುವ ಕೃತ್ಯವೇ ಎಂಬುದನ್ನು ನಾವು ಪತ್ತೆ ಮಾಡಬೇಕಿದೆ. ಇಲ್ಲಿಗೆ ಬಳಕೆಯಾದ ಸ್ಪೋಟಕಗಳು ವೆಸ್ಟ್​ ಬ್ಯಾಂಕ್​ಗೆ ಬಳಕೆಯಾದ ಸ್ಪೋಟಕವಾಗಿದೆ ಎಂದು ಪೊಲೀಸ್ ವಕ್ತಾರ ಹೈಮ್ ಸರ್ಗ್ರೋಫ್ ತಿಳಿಸಿದ್ದಾರೆ.

2023 ಅಕ್ಟೋಬರ್​ 7ರಂದು ಹಮಾಸ್​ ISRAEL ಮೇಲೆ ಯುದ್ದ ಆರಂಭಿಸಿದಾಗಿನಿಂದ ISRAEL​ ಮಿಲಿಟರಿ ವೆಸ್ಟ್​ ಬ್ಯಾಂಕ್​ ಮೇಲೆ ಪದೇ ಪದೇ ದಾಳಿ ನಡೆಸಿದೆ. ಸ್ಫೋಟದ ಬೆನ್ನಲ್ಲೇ ಬಸ್​ ಕಂಪನಿ ತನ್ನ ಇತರ ಬಸ್​ಗಳ ತಪಾಸಣೆ ನಡೆಸಿ, ಸಂಚಾರ ಮುಂದುವರೆಸುವಂತೆ ತಿಳಿಸಿದೆ. ಘಟನೆ ಮಾಹಿತಿ ಪಡೆದ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕಚೇರಿ, ಮಿಲಿಟರಿ ಕಾರ್ಯದರ್ಶಿಗಳಿಂದ ಘಟನೆ ಕುರಿತು ಮಾಹಿತಿ ಪಡೆಯುತ್ತಿದ್ದು, ಈ ಕುರಿತು ಆಂತರಿಕ ಭದ್ರತಾ ಸಂಸ್ಥೆ ಶಿನ್​ ಬೆಟ್​ ತನಿಖೆಗೆ ಮುಂದಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 

ಇದನ್ನು ಓದಿರಿ :Ajith Kumar Faces Second Major Accident in a Month as His Car Flips Over During Race

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

NARGIS FAKHRI MARRIAGE:ವರ ಟೋನಿ ಬಗ್ಗೆ ಇಲ್ಲಿದೆ ಮಾಹಿತಿ

  Nargis marriage news: ಸೂಪರ್​ ಹಿಟ್​ ರಾಕ್‌ಸ್ಟಾರ್, ಮೆ ತೇರಾ ಹೀರೋ ಮತ್ತು ಹೌಸ್‌ಫುಲ್ 3 ಚಿತ್ರಗಳಿಗೆ ಹೆಸರುವಾಸಿಯಾಗಿರುವ ಬಾಲಿವುಡ್ ನಟಿ ನರ್ಗಿಸ್ ಫಕ್ರಿ (Nargis...

NEW BAT CORONAVIRUS: ಕೋವಿಡ್ ರೀತಿಯ ಮತ್ತೊಂದು ವೈರಸ್ ಬಾವಲಿಯಲ್ಲಿ ಪತ್ತೆ

  Beijing, China News: ಇದು ಜನರಲ್ಲಿ ಆತಂಕ ಮೂಡಿಸಿದೆ. ಈ ಕುರಿತು ಚೀನಾದ ಬ್ಯಾಟ್​ ವುಮೆನ್​ ಎಂದೇ ಖ್ಯಾತಿಯಾಗಿರುವ ವೈರಾಲಾಜಿಸ್ಟ್​​ ಶಿ ಜೆಂಗಾಲಿ ಅಧ್ಯಯನ ನಡೆಸಿದ್ದಾರೆ....

CONTENT CREATORS KUMBH JOURNEY:1500 ಕಿ.ಮೀ ದೂರದ ಪ್ರಯಾಗ್ರಾಜ್ಗೆ ನಯಾಪೈಸೆ ಖರ್ಚಿಲ್ಲದೆ ತಲುಪಿದ ಕಂಟೆಂಟ್ ಕ್ರಿಯೇಟರ್!

New Delhi News: ಮಹಾರಾಷ್ಟ್ರದ ಕಂಟೆಂಟ್​ ಕ್ರಿಯೇಟರ್​ ದಿವ್ಯಾ ಫೋಫಾನಿ ಕುಂಭಮೇಳಕ್ಕೆ ತಾವು ಮುಂಬೈನಿಂದ ಬಂದ ರೀತಿ ಮತ್ತು ಹಾದಿಯ ನಡುವೆ ಜನರು ನೀಡಿದ ನೆರವನ್ನು...

GOLD PRICE PREDICTION:2027ಕ್ಕೆ ಇಷ್ಟು ದರ ತಲುಪಲಿದೆಯಂತೆ ಬಂಗಾರ!

New Delhi News: ಮುಂದಿನ 2 ವರ್ಷಗಳಲ್ಲಿ GOLDದ ಬೆಲೆ ಮತ್ತೆ ಏರಿಕೆಯಾಗಲಿದೆ. ಬೇಡಿಕೆ ಹೆಚ್ಚಿದ ಹಿನ್ನೆಲೆ ಮುಂಗಡ ಬುಕ್ಕಿಂಗ್​ ಕೂಡ ಹೆಚ್ಚಾಗುವ ಸಾಧ್ಯತೆ ಇದೆ....