spot_img
spot_img

ಬೆಂಗಳೂರು ಪುಸ್ತಕ ಸಂತೆಯಲ್ಲಿ ಮೂರು ಕೋಟಿ ರೂ. ವಹಿವಾಟು

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ಬೆಂಗಳೂರು : ಬೆಂಗಳೂರಿನ ಜಯನಗರದ ಶಾಲಿನಿ ಮೈದಾನದಲ್ಲಿ ನ. 15ರಿಂದ 17ರವರೆಗೆ ಪುಸ್ತಕ ಸಂತೆ -2 ಆಯೋಜಿಸಲಾಗಿತ್ತು. ವೀರಲೋಕ ಪುಸ್ತಕ ಪ್ರಕಾಶನ ಸಂಸ್ಥೆಯ ಸಾರಥ್ಯದಲ್ಲಿ ಆಯೋಜಿಸಲಾಗಿದ್ದ ಈ ಪುಸ್ತಕ ಸಂತೆಯಲ್ಲಿ ಸುಮಾರು 3 ಕೋಟಿ ರೂ.ಗಳಷ್ಟು ಪುಸ್ತಕ ಮಾರಾಟವಾಗಿವೆ ಎಂದು ಆಯೋಜಕರು ತಿಳಿಸಿದ್ದಾರೆ.

ಮೇಳದಲ್ಲಿ ಕನ್ನಡ ಹಲವಾರು ಖ್ಯಾತ ಲೇಖಕರ, ಉದಯೋನ್ಮುಖ ಲೇಖಕರ ಕೃತಿಗಳನ್ನು ಮಾರಾಟಕ್ಕಿಡಲಾಗಿತ್ತು.

ಕಡೆಯ ದಿನವಂತೂ ಸಾವಿರಾರು ಸಂಖ್ಯೆಯಲ್ಲಿ ಪುಸ್ತಕ ಪ್ರೇಮಿಗಳು ಆಗಮಿಸಿ ಪುಸ್ತಕಗಳನ್ನು ಕೊಂಡು ಹೋಗಿದ್ದಾರೆಂದು ಆಯೋಜಕರು ತಿಳಿಸಿದ್ದಾರೆ.

ಕನ್ನಡ ಪ್ರೇಮ ಮತ್ತು ಓದಿನ ಆಸಕ್ತಿಯನ್ನು ಬೆಳೆಸುವ, ಸಾಹಿತ್ಯಾಭಿರುಚಿಯನ್ನು ಪಸರಿಸಲು ಮೂರು ದಿನಗಳ ಕಾಲ ಆಯೋಜಿಸಿದ್ದ ‘ವೀರಲೋಕ ಪುಸ್ತಕ ಸಂತೆ-2’ ಸಂಪನ್ನಗೊಂಡಿದ್ದು, ಸುಮಾರು 3 ಕೋಟಿ ರೂ.ಮೌಲ್ಯದ ಪುಸ್ತಕಗಧಿಳು ಮಾರಾಟವಾಗಿವೆ.

ಓದುಗರು, ಸಾಹಿತ್ಯಾಸಕ್ತರಿಂದ ಅಭೂತಪೂರ್ವ ಸ್ಪಂದನೆ ದೊರೆಯುವ ಮೂಲಕ ವೀರಲೋಕ ಸಂಸ್ಥೆಯು ಜಯನಗರದ ಶಾಲಿನಿ ಮೈದಾನದಲ್ಲಿಆಯೋಜಿಸಿದ್ದ ಪುಸ್ತಕ ಸಂತೆ ಯಶಕಂಡಿದೆ.

ಶುಕ್ರವಾರ ಮತ್ತು ಶನಿವಾರ ಮಧ್ಯಾಹ್ನ ಕೊಂಚ ಮಳೆ ಅಡಚಣೆ ಮಾಡಿದರೂ, ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ಕೊನೆಯ ದಿನವಾದ ಭಾನುವಾರ ಪುಸ್ತಕ ಸಂತೆ ಅಕ್ಷರಶಃ ಜಾತ್ರೆಯಂತೆ ಕಳೆಗಟ್ಟಿತ್ತು.

ಮಕ್ಕಳ ಮೇಳದಲ್ಲಿಮಕ್ಕಳೂ ಆಟವಾಡಿ ಸಂಭ್ರಮಿಸಿದರು. ಇದರ ನಡುವೆ ‘ಕವಿತೆ ಹುಟ್ಟುವ ಸಮಯ’ ಎಂಬ ವಿಷಯದ ಕುರಿತು ಕಾರ್ಯಾಗಾರ ನಡೆಯಿತು. ಕವಿ ವಾಸುದೇವ ನಾಡಿಗ್‌ ನಡೆಸಿಕೊಟ್ಟರು.

”ಮೂರು ದಿನಗಳ ಜಾತ್ರೆಯಲ್ಲಿಸುಮಾರು 1.25 ಲಕ್ಷ ಜನರು ಭಾಗವಹಿಸಿದ್ದು, ಸುಮಾರು 3 ಕೋಟಿ ರೂ. ಮೌಲ್ಯದ ಪುಸ್ತಕಗಧಿಳು ಮಾರಾಟವಾಗಿವೆ. ಸಾರ್ವಜನಿಕರಿಂದ ಅತ್ಯುತ್ತಮ ಪ್ರತಿಕ್ರಿಯೆ ದೊರೆತಿದೆ,” ಎಂದು ಆಯೋಜಕ, ಪ್ರಕಾಶಕ ವೀರಕಪುತ್ರ ಶ್ರೀನಿವಾಸ್‌ ಸಂತಸ ವ್ಯಕ್ತಪಡಿಸಿದರು.

ಒಟ್ಟಾರೆ ಮೂರು ದಿನಗಳ ಪುಸ್ತಕ ಸಂತೆಯಲ್ಲಿಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಡಾ.ಯಂಡಮೂರಿ ವೀರೇಂದ್ರನಾಥ್‌, ಎಸ್‌.ಎಲ್‌.ಬೈರಪ್ಪ, ರವಿ ಬೆಳಗೆರೆ, ಶಿವರಾಮ ಕಾರಂತ, ವಿಕ್ರಮ ಸಂಪತ್‌, ಸುಧಾಮೂರ್ತಿ, ಕೆ.ಎಸ್‌. ನಾರಾಯಣಾಚಾರ್ಯ, ಬೀಚಿ ಅವರ ಪುಸ್ತಕಗಳು ಹೆಚ್ಚು ಮಾರಾಟವಾಗಿವೆ.

ಬಹುತೇಕ ಹೊಸ ಮತ್ತು ಯುವ ಓದುಗರು ತೇಜಸ್ವಿ, ರವಿ ಬೆಳಗೆರೆ, ಬೈರಪ್ಪ ಅವರ ಪುಸ್ತಕಗಳನ್ನು ಖರೀದಿಸಿದ್ದಾರೆ. ಇತ್ತೀಚೆಗೆ ಬಿಡುಗಡೆ ಕಂಡ ಲೇಖಕಿ ಸಹನಾ ವಿಜಯಕುಮಾರ್‌ ಅವರ ‘ಮಾಗಧ’ ಪುಸ್ತಕದ 400ಕ್ಕೂ ಹೆಚ್ಚು ಪ್ರತಿಗಳು ಮಾರಾಟವಾಗಿವೆ ಎಂದು ವಿವಿಧ ಮಳಿಗೆಗಳ ಪುಸ್ತಕ ಮಾರಾಟಗಾರರು ತಿಳಿಸಿದರು.

ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್‌, ಡಾ.ಮೂಡ್ನಾಕೂಡು ಚಿನ್ನಸ್ವಾಮಿ, ಶ್ರೀರಾಗಂ, ವಿಶ್ವೇಶ್ವರಭಟ್‌, ಎಂ.ಆರ್‌.ದತ್ತಾತ್ರಿ, ದೀಪಾ ಹಿರೇಗುತ್ತಿ, ನಾಗರಾಜ ವಸ್ತಾರೆ, ಡಾ.ಶರಣು ಹಲ್ಲೂರು, ದಾದಾ ಪೀರ್‌ ಜೈಮನ್‌ ಸೇರಿದಂತೆ ಹಲವು ಲೇಖಕರು ಭಾಗವಹಿಸಿ ಓದುಗರ ಜತೆ ಹರಟಿದರು.

ಲೇಖಕರನ್ನು ಕಂಡು ಪುಸ್ತಕಪೇಮಿಗಳು ಪುಳಕಿತರಾದರಲ್ಲದೆ, ಲೇಖಕರ ಹಸ್ತಾಕ್ಷರ ಪಡೆದು, ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು.

ಡಾ.ಕೆ.ಬಿ.ಸೂರ್ಯಕುಮಾರ್‌ ಅವರ ‘ಮಂಗಳಿ’, ಡಾ.ಮೈಸೂರು ನಾಗರಾಜ ಶರ್ಮ ಅವರ ‘ಸಂಚು ವಂಚನೆಗಳ ಲೋಕದಲ್ಲಿ’, ಸರ್ವಮಂಗಳಾ ಜಯರಾಂ ಅವರ ‘ಸಂಜೆ ಸುರಿದ ಮಳೆ’, ವೆಂಕಟೇಶ ಪಿ.ಮರಕಂದಿನ್ನಿ ಅವರ ‘ಪಡಸಾಲಿ’ ಲೇಖಕಿ ಪಿ.ಚಂದ್ರಿಕಾ ಅವರ ‘ಪ್ಯಾಲೆಟ್‌’, ಮಂಜುನಾಥ್‌ ಚಾಂದ್‌ ಅವರ ‘ಪ್ರಿಯ ಮೀರಾ’, ಡಾ.ಡಿ.ವಿ.ಗುರುಪ್ರಸಾದ್‌ ಅವರ ‘ಸಮರಕಂಡ’, ಡಾ.ಡಿ.ಎಸ್‌.ಚೌಗಲೆ ಅವರ ‘ಸದರ ಬಜಾರ್‌’, ರಾಮ್‌ ಕದಮ್‌ ಅವರ ‘ಮನೆ ಎಂಜಿನಿಯರ್‌’, ಶ್ರೀದೇವಿ ಕಳಸದ ಅವರ ‘ಹಮ್ಮಾ ಹೂ’, ಅನುಬೆಳ್ಳೆ ಅವರ ‘ನಗು ಎಂದಿದೆ ಮಂಜಿನ ಬಿಂದು’ ಪುಸ್ತಕಗಳು ಬಿಡುಗಡೆಗೊಂಡವು.

ಪೊಲೀಸ್‌ ಆಯುಕ್ತ ಬಿ.ದಯಾನಂದ್‌, ನಿರ್ದೇಶಕ ಟಿ.ಎನ್‌.ಸೀತಾರಾಮ್‌, ಪತ್ರಕರ್ತರಾದ ವಿಶ್ವೇಶ್ವರ್‌ ಭಟ್‌, ರಾಧಾ ಹೀರೇಗೌಡ ಅವರು ಪುಸ್ತಕಗಳನ್ನು ಬಿಡುಗಡೆಗೊಳಿಸಿದರು.

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

ರಸ್ತೆ ಇಲ್ಲದ ಊರು : 3 ಕಿ.ಮೀ ಗರ್ಭಿಣಿಯನ್ನು ಹೊತ್ತು ಸಾಗಿದ ಗ್ರಾಮಸ್ಥರು

ಭದ್ರಾದ್ರಿ ಕೊಥಗುಡೆಂ(ತೆಲಂಗಾಣ): ರಸ್ತೆ ಸೌಲಭ್ಯ ಇಲ್ಲದ ಕಾರಣ ಗರ್ಭಿಣಿ ಮಲಗಿದ್ದ ಮರದ ಮಂಚಕ್ಕೆ ಕೋಲು ಕಟ್ಟಿ, ಸ್ಟ್ರೆಚರ್​ನಂತೆ ಗ್ರಾಮಸ್ಥರು ಮೂರು ಕಿ.ಮೀ ಹೊತ್ತೊಯ್ದ ಘಟನೆ...

‘ಪೂಜಾ ಸ್ಥಳ ಕಾಯ್ದೆ’ಯಡಿ ಹೊಸ ದಾವೆ : ಸುಪ್ರೀಂ ಕೋರ್ಟ್ ಸೂಚನೆ

ನವದೆಹಲಿ: ಪೂಜಾ ಸ್ಥಳಗಳ ಕಾಯ್ದೆಯ ಸಾಂವಿಧಾನಿಕತೆ ಪ್ರಶ್ನಿಸಿದ ಅರ್ಜಿಗಳ ವಿಚಾರಣೆ ಇಂದು ಸುಪ್ರೀಂ ಕೋರ್ಟ್​ನಲ್ಲಿ ನಡೆಯಿತು. ಯಾವುದೇ ಮಸೀದಿಯ ಕೆಳಗೆ ದೇವಾಲಯವಿದೆಯೇ ಎಂಬುದನ್ನು ಪತ್ತೆ...

ಶಾಲೆಗಳ 2024-25 ನೇ ಸಾಲಿನ ‘ಶೈಕ್ಷಣಿಕ’ ಪ್ರವಾಸ ರದ್ದು

ಬೆಂಗಳೂರು: ಶಾಲಾ ಶಿಕ್ಷಣ ಇಲಾಖೆಯ ಶಾಲೆಗಳ 2024-25 ನೇ ಸಾಲಿನ ಶೈಕ್ಷಣಿಕ ಪ್ರವಾಸ ಕುರಿತು ವಾಟ್ಸಾಪ್ನಲ್ಲಿ ಹರಿದಾಡುತ್ತಿದೆ ಎನ್ನಲಾದ ಸಂದೇಶದ ಕುರಿತು ಸೃಷ್ಟಿಕರಣವನ್ನು ನೀಡಲಾಗಿದೆ. ಈ...

ಬಿಗ್​ಬಾಸ್​ ಕೊಟ್ಟ ಟಾಸ್ಕ್​ ಆಡಲು ಸ್ಪರ್ಧಿಗಳ ಹರಸಾಹಸ

ಕನ್ನಡದ ಬಿಗ್​ಬಾಸ್​ ಸೀಸನ್​ 11ರಲ್ಲಿ ವೈಲ್ಡ್​ ಕಾರ್ಡ್​ ಸ್ಪರ್ಧಿಗಳು ಸಖತ್​ ಸದ್ದು ಮಾಡುತ್ತಿದ್ದಾರೆ. ತಮ್ಮ ಹಳ್ಳಿ ಸೊಗಡಿನ ರೀತಿಯಲ್ಲೇ ಹಾಡು ಹಾಡಿ ವೀಕ್ಷಕರಿಗೆ ಮನರಂಜನೆ...