ಆರ್ಸಿಬಿ ಬೆನ್ನೆಲುಬು ವಿರಾಟ್ ಕೊಹ್ಲಿ ಕೂಡ ಕ್ಯಾಪ್ಟನ್ಸಿ ರೇಸ್ ಹೆಸರಲ್ಲಿ ಕೇಳಿಬಂದಿದೆ.
ಆರ್ಸಿಬಿ ಮ್ಯಾನೇಜ್ಮೆಂಟ್ ಕೊಹ್ಲಿಗೆ ನಾಯಕತ್ವ ಜವಾಬ್ದಾರಿಯನ್ನು ಮೊತ್ತೊಮ್ಮೆ ನೀಡಲು ಮುಂದಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಅದಕ್ಕೆ ವಿರಾಟ್ ಅವರಿಂದ ಗ್ರೀನ್ ಸಿಗ್ನಲ್ ಸಿಗಬೇಕಿದೆ.
ಆರ್ಸಿಬಿಯ ಮೊದಲ ಆಯ್ಕೆ ಕೊಹ್ಲಿ. ಒಂದು ವೇಳೆ ಕೊಹ್ಲಿ ಒಪ್ಪಿಕೊಳ್ಳದಿದ್ದರೆ ಎರಡನೇ ಆಯ್ಕೆಯಲ್ಲಿ ಕೆಎಲ್ ರಾಹುಲ್ ಇದ್ದಾರೆ. ಎಲ್ಎಸ್ಜಿ ತಂಡದಿಂದ ಬಿಡುಗಡೆ ಆಗಿರುವ ಇವರನ್ನು ಹರಾಜಿನಲ್ಲಿ ಖರೀದಿಸಿ ಪಟ್ಟ ಕಟ್ಟುವ ಆಲೋಚನೆಯಲ್ಲಿದೆ.
ನವೆಂಬರ್ 24 ರಿಂದ ಐಪಿಎಲ್ ಮೆಗಾ ಹರಾಜು ಆರಂಭವಾಗಲಿದೆ. ನಮ್ಮ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹೊಸ ನಾಯಕನ ಹುಡುಕಾಟದಲ್ಲಿದೆ. ಕೆಲವು ವರದಿಗಳ ಪ್ರಕಾರ, ಆರ್ಸಿಬಿ ನಾಯಕತ್ವ ರೇಸ್ನಲ್ಲಿ ಮೂವರು ಆಟಗಾರರಿದ್ದಾರೆ ಎಂದು ಹೇಳಲಾಗಿದೆ.
ಇನ್ನೂ ಆರ್ಸಿಬಿಯ ಮೂರನೇ ಆಯ್ಕೆ ಕೆಕೆಆರ್ಗೆ ಟ್ರೋಫಿ ಗೆಲ್ಲಿಸಿಕೊಟ್ಟ ಶ್ರೇಯಸ್ ಅಯ್ಯರ್. ಅಯ್ಯರ್ ಅವರನ್ನು ಕೆಕೆಆರ್ ತಂಡದಿಂದ ರಿಲೀಸ್ ಮಾಡಿದೆ. ಅವರು ಸಹ ಮೆಗಾ ಹರಾಜಿಗೆ ಎಂಟ್ರಿಯಾಗಿದ್ದಾರೆ.
ಅಯ್ಯರ್ ಅವರನ್ನು ಖರೀದಿಸಿ ಆರ್ಸಿಬಿ ಕಪ್ ಗೆಲ್ಲುವ ಲೆಕ್ಕಾಚಾರದಲ್ಲಿದೆ. ಆದರೆ ಹರಾಜು ಪ್ರಕ್ರಿಯೆ ವೇಳೆ ಡಿಮ್ಯಾಂಡ್ ಇರುವ ಆಟಗಾರರು ಯಾವ ಬೆಲೆಗೆ ಯಾವ ತಂಡಕ್ಕೆ ಸೇಲ್ ಆಗ್ತಾರೆ ಅನ್ನೋದ್ರ ಮೇಲೆ ನಿಂತಿದೆ.