Belgaum News:
ಪ್ರತಿಭೆ ಯಾರ ಸ್ವತ್ತೂ ಅಲ್ಲ. ಕಠಿಣ ಪರಿಶ್ರಮ, ಸಾಧಿಸುವ ಛಲ, ಸತತ ಪ್ರಯತ್ನಕ್ಕೆ ಫಲ ಸಿಕ್ಕೇ ಸಿಗುತ್ತದೆ ಎಂಬುದಕ್ಕೆ ಬಡ ಕುಟುಂಬದ ಅದರಲ್ಲಿಯೂ ಕುರಿಗಾಹಿ ದಂಪತಿ ಪುತ್ರಿಯೊಬ್ಬರು ಈಗ ರಾಷ್ಟ್ರಮಟ್ಟದಲ್ಲಿ ಸಾಧನೆಗೈಯ್ಯಲು ಅಣಿಯಾಗಿರುವುದೇ ಸಾಕ್ಷಿ. ಇವರು ಪಕ್ಕಾ ಬಡತನದಲ್ಲೇ ಅರಳುತ್ತಿರುವ ಪ್ರತಿಭೆ. ಆದರೆ, ಸರ್ಕಾರ ಮತ್ತು ದಾನಿಗಳ ನೆರವಿನ ನಿರೀಕ್ಷೆಯಲ್ಲಿದ್ದಾರೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಮರಡಿ ನಾಗಲಾಪುರ ಗ್ರಾಮದ ಪವಿತ್ರಾ ತಡಸಲೂರ ಎಂಬುವವರು THROW BALL PLAYER ಎಸೆತದಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿ ಗಮನ ಸೆಳೆದಿರುವ ಬಾಲಕಿ. ಇತ್ತೀಚಿಗೆ ಕೋಲಾರ ಜಿಲ್ಲೆ ಕೆಜಿಎಫ್ ತಾಲೂಕಿನ ಬೇತಮಂಗಲ ಗ್ರಾಮದಲ್ಲಿ ರಾಜ್ಯ ಮಟ್ಟದ ಕ್ರೀಡಾಕೂಟ ನಡೆಯಿತು.
ಈ ವೇಳೆ THROW BALL PLAYER ಪಂದ್ಯದಲ್ಲಿ ಬಾಗಲಕೋಟೆ ಜಿಲ್ಲೆಯ 9 ಮತ್ತು ಖಾನಾಪುರದ ಇಬ್ಬರು ಆಟಗಾರರ ಜೊತೆಗೆ ತಂಡಕ್ಕೆ ಆಯ್ಕೆಯಾಗಿದ್ದರು. ಮೈಸೂರು, ಕಲಬುರ್ಗಿ ಮತ್ತು ಬೆಂಗಳೂರು ತಂಡಗಳ ಜೊತೆಗೆ ಗೆದ್ದು ರಾಷ್ಟ್ರಮಟ್ಟಕ್ಕೆ ಇವರು ಆಯ್ಕೆಯಾಗಿದ್ದಾರೆ. ಮೂರು ಪಂದ್ಯಗಳಲ್ಲಿ ತಂಡದ ಗೆಲುವಿಗೆ ಪವಿತ್ರಾ ಉತ್ತಮ ಕೊಡುಗೆ ನೀಡಿ ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾರೆ. ಮರಡಿ ನಾಗಲಾಪುರದ ಸರ್ಕಾರಿ ಪ್ರೌಢಶಾಲೆಯಲ್ಲಿ ಪವಿತ್ರಾ 10ನೇ ತರಗತಿ ಓದುತ್ತಿದ್ದಾರೆ. ಇವರ ಕುಟುಂಬ ತೀರಾ ಬಡತನದ ಹಿನ್ನೆಲೆ ಹೊಂದಿದೆ. ತಂದೆ ಸಿದ್ದಪ್ಪ, ತಾಯಿ ಸಿದ್ದವ್ವ ಕುರಿಗಾಹಿಗಳು.
ಕುರಿ ಕಾಯುವ ವೃತ್ತಿಯಿಂದಲೇ ಜೀವನ ಮಾಡುವ ಈ ಕುಟುಂಬದ ಬಾಲಕಿ ಈಗ ರಾಷ್ಟ್ರ ಮಟ್ಟದಲ್ಲಿ ಮಿಂಚಲು ಮುಂದಾಗಿದ್ದು, ತಂದೆ ತಾಯಿಯ ಖುಷಿಗೆ ಪಾರವೇ ಇಲ್ಲದಂತಾಗಿದೆ.ಕುರಿ ಕಾಯುತ್ತಾ, ಇರುವ ಅಲ್ಪಸ್ವಲ್ಪ ಜಮೀನಿನಲ್ಲಿ ಕೃಷಿ ಮಾಡುತ್ತಿರುವ ಪವಿತ್ರಾ ತಂದೆ ತಾಯಿಗೆ ಒಟ್ಟು ಮೂವರು ಮಕ್ಕಳು. ದೊಡ್ಡ ಮಗ ಮಲ್ಲಿಕಾರ್ಜುನ ಕುರಿ ಕಾಯುತ್ತಾನೆ. ಚಿಕ್ಕ ಮಗಳು 9ನೇ ತರಗತಿ ಓದುತ್ತಿದ್ದಾಳೆ.
ಆಕೆ ಕೂಡ ಉತ್ತಮ ಕಬಡ್ಡಿ ಆಟಗಾರ್ತಿ. ಮನೆಯಲ್ಲಿ ಎಷ್ಟೇ ಬಡತನವಿದ್ದರೂ ಇಬ್ಬರು ಹೆಣ್ಣು ಮಕ್ಕಳ ಓದಿಗೆ ಯಾವುದೇ ತೊಂದರೆ ಆಗದಂತೆ ಅವರ ತಂದೆ-ತಾಯಿ ನೋಡಿಕೊಳ್ಳುತ್ತಿದ್ದಾರೆ. ಆಟದ ಜೊತೆಗೆ ಓದಿನಲ್ಲೂ ಇಬ್ಬರು ಸಹೋದರಿಯರು ಮುಂದಿದ್ದಾರೆ.
Desire to achieve in the field of sports:
”ಮಗಳು ರಾಷ್ಟ್ರಮಟ್ಟಕ್ಕೆ ಆಯ್ಕೆ ಆಗಿದ್ದಕ್ಕೆ ತುಂಬಾ ಖುಷಿ ಮತ್ತು ಹೆಮ್ಮೆ ಇದೆ. ಇಬ್ಬರು ಹೆಣ್ಣುಮಕ್ಕಳು ತುಂಬಾ ಜಾಣೆಯರಿದ್ದಾರೆ. ಚೆನ್ನಾಗಿ ಓದುತ್ತಾರೆ ಮತ್ತು ಆಟ ಆಡುತ್ತಾರೆ. ಮುಂದೇ ಇದೇ ರೀತಿ ಸಾಧನೆ ಮಾಡಲಿ. ಸರ್ಕಾರಿ ನೌಕರಿ ಹಿಡಿದು, ನಮ್ಮ ಬಡತನ ಎಲ್ಲಾ ನಿವಾರಣೆ ಮಾಡಲಿ ಎಂಬುದೇ ನಮ್ಮ ಆಶಯವಾಗಿದೆ. ನಾವೇನೋ ಕುರಿ ಕಾಯ್ದು, ಕೂಲಿ-ನಾಲಿ ಮಾಡಿ ಬದುಕುತ್ತಿದ್ದೇವೆ. ಮಕ್ಕಳ ಬದುಕು ಆ ರೀತಿ ಆಗಬಾರದು ಎಂದು ಎಷ್ಟೇ ಕಷ್ಟ ಆದರೂ ಓದಿಸುತ್ತಿದ್ದೇವೆ. ಆದರೆ, ಹೆಚ್ಚಿಗೆ ಕಲಿಸಲು ನಮಗೆ ತುಂಬಾ ಕಷ್ಟ ಆಗುತ್ತದೆ.
ಹಾಗಾಗಿ, ಸರ್ಕಾರ ನಮಗೆ ಸಹಾಯ ಮಾಡಬೇಕು” ಎಂದು ಪವಿತ್ರಾ ತಾಯಿ ಸಿದ್ದವ್ವ ತಡಸಲೂರ ಕೇಳಿಕೊಂಡರು. ಈ ಬಗ್ಗೆ ಪವಿತ್ರ ಅವರು ಮಾತನಾಡಿ, ”ನಾನು ಮೊದಲೇ ಹಳ್ಳಿಯ ಬಡವರ ಮನೆ ಮಗಳು. ರಾಷ್ಟ್ರಮಟ್ಟಕ್ಕೆ ಆಯ್ಕೆ ಆಗಿದ್ದಕ್ಕೆ ಬಹಳ ಖುಷಿ ಆಗುತ್ತಿದೆ. ತಂದೆ-ತಾಯಿ ಹಾಗೂ ಶಿಕ್ಷಕರ ಸಂತಸಕ್ಕೆ ಪಾರವೇ ಇಲ್ಲ. THROW BALL PLAYER ಅಷ್ಟೇ ಅಲ್ಲದೇ ಕಬಡ್ಡಿ, ವಾಲಿಬಾಲ್ ಹಾಗೂ ವೈಯಕ್ತಿಕ ಕ್ರೀಡೆಗಳಲ್ಲೂ ನನಗೆ ತುಂಬಾ ಆಸಕ್ತಿ ಇದೆ. ಮುಂದೆ ಕಾಲೇಜು ಶಿಕ್ಷಣ ಮುಗಿಸಿ, ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡುವ ಆಸೆಯಿದೆ. ಜೊತೆಗೆ ದೊಡ್ಡ ನೌಕರಿ ಹಿಡಿದು ತಂದೆ-ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುವ ಗುರಿ ಇದೆ” ಎಂದು ಹೇಳಿದರು.
PSI thought to do:
ಪವಿತ್ರಾಗೆ ಪ್ರತಿಭೆ, ಸಾಮರ್ಥ್ಯ ಇದೆ. ಆದರೆ, ಉತ್ತಮ ತರಬೇತಿ ಪಡೆಯಲು ಸರ್ಕಾರ ಮತ್ತು ದಾನಿಗಳ ನೆರವಿನ ಅವಶ್ಯಕತೆ ಇದೆ. ನೆರವು ನೀಡಲು ಇಚ್ಛಿಸುವವರು ಪವಿತ್ರಾ ತಂದೆ ಸಿದ್ದಪ್ಪ ಅವರ ಮೊಬೈಲ್ ಸಂಖ್ಯೆ 77609 13214 ಸಂಪರ್ಕಿಸಬಹುದು. ಪವಿತ್ರಾ ಚಿಕ್ಕಪ್ಪ ಭೀರಪ್ಪ ತಡಸಲೂರ ಮಾತನಾಡಿ, ”ಮಗಳು ರಾಷ್ಟ್ರಮಟ್ಟಕ್ಕೆ ಆಯ್ಕೆ ಆಗಿದ್ದಕ್ಕೆ ಹೇಳಿಕೊಳ್ಳಲಾರದಷ್ಟು ಖುಷಿ ಆಗಿದೆ. ಮಗಳ ಬಗ್ಗೆ ನಮ್ಮ ಅಣ್ಣ, ನಾವೆಲ್ಲಾ ದೊಡ್ಡ ಕನಸು ಕಟ್ಟಿಕೊಂಡಿದ್ದೇವೆ. ಕ್ರೀಡೆ ಮತ್ತು ಓದುವುದು ಎರಡರಲ್ಲೂ ಮುಂದೆ ಇರುವುದು ನೋಡಿ ಆಕೆಯನ್ನು ಪಿಎಸ್ಐ ಮಾಡಬೇಕು ಎಂದುಕೊಂಡಿದ್ದೇವೆ. ಸರ್ಕಾರ ಆಕೆಯ ಓದಿಗೆ ಆರ್ಥಿಕ ನೆರವು ನೀಡಿ ಪ್ರೋತ್ಸಾಹಿಸಬೇಕು” ಎಂದು ಮನವಿ ಮಾಡಿಕೊಂಡರು.
ಇದನ್ನು ಓದಿರಿ : KUMBH MELA : ಕುಂಭಮೇಳಕ್ಕೆ ಹುಬ್ಬಳ್ಳಿಯಿಂದ ವಿಶೇಷ ರೈಲು