WhatsApp Group
Join Now
Telegram Group
Join Now
Instagram Account
Follow Now
Facebook Page
Follow Now
Hyderabad News:
ಈ ಎಲ್ಲಾ ತಡೆಯ ನಡುವೆಯೂ ಸೊಳ್ಳೆಗಳ ಸಂಖ್ಯೆ ದ್ವಿಗುಣಗೊಳ್ಳುತ್ತಲೇ ಸಾಗುತ್ತದೆ. ಅಷ್ಟೇ ಅಲ್ಲ ಹೀಗೆ ದಾಂಗುಡಿ ಇಡುವ ಈ ಸೊಳ್ಳೆಗಳಿಂದ ಆರೋಗ್ಯದ ಮೇಲೆ ಗಂಭೀರ ಪರಿಣಾಮಗಳು ಆಗುವ ಸಾಧ್ಯತೆಗಳಿವೆ. ಇಂತಹ ಸಮಸ್ಯೆ ನಿಮ್ಮ ಮನೆಯಲ್ಲೂ ಇದೆಯಾ? ಹಾಗಾದರೆ ಅದರ ನಿವಾರಣೆಗೆ ಸುಲಭ ಮಾರ್ಗ ಇಲ್ಲಿದೆ.ಸಾಮಾನ್ಯವಾಗಿ ಎಲ್ಲ ಋತುಮಾನದಲ್ಲಿ ಎಲ್ಲರನ್ನೂ ಕಾಡುವ ಗಂಭೀರ ಸಮಸ್ಯೆ ಎಂದರೆ ಸೊಳ್ಳೆಯ ಕಾಟ. ಸಂಜೆಯಾದಕ್ಷಣ ಮನೆಗೆ ದಾಳಿ ಇಡುವ ಸೊಳ್ಳೆಗಳು ಯಾವುದೇ ಕಾಯಿಲ್, ಬತ್ತಿ, ಧೂಪಗಳನ್ನು ಹಾಕುವುದು ಸೇರಿದಂತೆ ಯಾವುದೇ ಮಾರ್ಗಕ್ಕೂ ಇವು ಜಗ್ಗುವುದಿಲ್ಲ.
Screen protection: ಈ ಮೂಲಕ ಸೊಳ್ಳೆಗಳು ನಿಮ್ಮ ಮೇಲೆ ದಾಳಿ ಮಾಡದಂತೆ ತಡೆಯಬಹುದು. ತೆಳುವಾದ ಈ ಪರದೆಗಳು ಗಾಳಿ- ಬೆಳಕಿನ ಸರಾಗ ಚಲನೆಗೂ ಅನುಕೂಲ ಮಾಡಿಕೊಡುತ್ತದೆ.ತಜ್ಞರ ಪ್ರಕಾರ, ಸೊಳ್ಳೆಗಳಿಂದ ರಕ್ಷಣೆ ಪಡೆಯಲು ಇರುವ ಪ್ರಮುಖ ಮಾರ್ಗ ಎಂದರೆ ಪರದೆಗಳು. ಮನೆಯ ಬಾಗಿಲು, ಮಲಗುವ ಹಾಸಿಗೆಗೆ ಪ್ರತ್ಯೇಕ ಪರದೆ ವ್ಯವಸ್ಥೆ ಮಾಡಬೇಕು.
Mosquito net: ಸದ್ಯ ಯುಪಿವಿಸಿ ಮತ್ತು ಮರದ ಪ್ಲಾಸ್ಟಿಕ್ ಸಂಯೋಜನೆಯ ಈ ರೀತಿಯ ಚೌಕಟ್ಟುಗಳು ಲಭ್ಯವಿದ್ದು, ಇವುಗಳನ್ನು ಮನೆ ಬಾಗಿಲು, ಕಿಟಕಿಗೆ ಅಳವಡಿಸಬಹುದು. ಇದು ಗಾಳಿಯಾಡಲು ಕೂಡ ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ ಸೊಳ್ಳೆಗಳಿಂದ ರಕ್ಷಣೆಯನ್ನೂ ನೀಡುತ್ತದೆ.ಸೊಳ್ಳೆ ಕಾಟದಿಂದ ರಕ್ಷಣೆ ಪಡೆಯಬಹುದು ಎಂಬ ಕಾರಣಕ್ಕೆ ಕಿಟಕಿಯನ್ನು ಬಂದ್ ಮಾಡಿದರೆ, ಗಾಳಿ- ಬೆಳಕಿನ ಸಮಸ್ಯೆ ಎದುರಾಗುತ್ತದೆ. ಇದನ್ನು ತಪ್ಪಿಸಲು ಕಿಟಕಿಗಳಿಗೆ ಸೊಳ್ಳೆಗಳು ಬಾರದಂತಹ ಪರದೆ ಜಾಲವಗಳನ್ನು ಹಾಕಬಹುದು.
Mesh Door: ಅಲ್ಲದೇ ಇವುಗಳನ್ನು ತೆಗೆಯುವುದು ಮತ್ತು ಶುಚಿ ಮಾಡುವುದು ಕೂಡ ಸುಲಭ. ಇವು ಬಜೆಟ್ಗೆ ಅನುಗುಣವಾಗಿ ಕೂಡ ಲಭ್ಯವಿದೆ. ಮೆಶ್ ಡೋರ್ಗಳು ಕೂಡ ಮನೆಯೊಳಗೆ ಸೊಳ್ಳೆಗಳು ಬಾರದಂತೆ ತಡೆಯೊಡ್ಡುತ್ತದೆ , ಮೆಶ್ ಅಳವಡಿಸಿಕೊಳ್ಳುವುದರಿಂದ ನಿಮ್ಮ ಮನೆ ಬಾಗಿಲು ಮತ್ತು ಕಿಟಕಿಗಳ ಸೌಂದರ್ಯಕ್ಕೇನು ಧಕ್ಕೆ ಆಗುವುದಿಲ್ಲ. ಇವು ದೀರ್ಘಕಾಲಿಕ ಬಾಳಿಕೆ ಕೂಡಾ ಬರುತ್ತವೆ. ಇವುಗಳು ಶಾಶ್ವತವಾಗಿ ಅಳವಡಿಕೆ ಮಾಡಬಹುದಾಗಿದೆ.
Prioritize cleanliness around the house:ಸಾಮಾನ್ಯವಾಗಿ ಸಂಜೆ ಸಮಯದಲ್ಲಿ ಸೊಳ್ಳೆಗಳು ಮನೆಗೆ ಆಗಮಿಸುವ ಹಿನ್ನೆಲೆ ಈ ಹೊತ್ತಲು ಮನೆ ಬಾಗಿಲು, ಕಿಟಕಿ ಮುಚ್ಚುವುದು ಸರಿಯಾದ ಮಾರ್ಗ. ಹೀಗೆ ಮಾಡುವುದರಿಂದ ಸೊಳ್ಳೆಗಳ ಕಾಟವನ್ನು ಸುಲಭವಾಗಿ ತಪ್ಪಿಸಬಹುದು.ಈ ಮುನ್ನೆಚ್ಚರಿಕೆಗಳ ಹೊರತಾಗಿಯೂ ಮನೆಯ ಸುತ್ತಮುತ್ತ ನೀರು ನಿಲ್ಲದಂತೆ. ಶುಚಿಯಾಗಿಡಿ. ತ್ಯಾಜ್ಯ, ಕಸ ಸಂಗ್ರಹವಾಗದಂತೆ ನೋಡಿಕೊಳ್ಳುವುದು ಅವಶ್ಯ.
ಇದನ್ನು ಓದಿರಿ :TRANS BANNED FORM WOMEN SPORTS:ಮಹಿಳಾ ಕ್ರೀಡೆಗಳಲ್ಲಿ ಟ್ರಾನ್ಸ್ಜೆಂಡರ್ಗಳು ಭಾಗವಹಿಸುವುದನ್ನು ನಿಷೇಧಿಸಿದ ಟ್ರಂಪ್