spot_img
spot_img

TIRUMALA TICKETS NEWS – ನಾಳೆಯಿಂದ ‘ಮಾರ್ಚ್ 2025’ರ ದರ್ಶನ ಟಿಕೆಟ್ ರಿಲೀಸ್

spot_img
spot_img

Share post:

Tirupati,( Andhra Pradesh )News :

ವೆಂಕಟೇಶ್ವರನ ಅರ್ಜಿತ ಸೇವಾ ಟಿಕೆಟ್‌ಗಳ ಮಾರ್ಚ್ ತಿಂಗಳ ಕೋಟಾ ಬಿಡುಗಡೆ ಆಗಲಿದೆ. ಭಕ್ತರು ಇದರ ಸದುಪಯೋಗ ಮಾಡಿಕೊಳ್ಳಬಹುದು.ಇಂತಹವರಿಗಾಗಿ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಶುಭ ಸುದ್ದಿ ನೀಡಿದೆ. ಶ್ರೀವಾರಿ ಅರ್ಜಿತ ಸೇವಾ ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಲಾಗುತ್ತಿದೆ.

ತಿರುಮಲ ತಿಮ್ಮಪ್ಪನ ದರ್ಶನಕ್ಕೆ ಅದೆಷ್ಟೋ ಭಕ್ತರು ಕಾತರದಿಂದ ಕಾಯುತ್ತಿರುತ್ತಾರೆ. ತಿರುಪತಿಗೆ ಭೇಟಿ ನೀಡಲು ಎಲ್ಲಿ ಟಿಕೆಟ್ ಸಿಗುತ್ತವೆ, ಹೇಗೆ ಭೇಟಿ ನೀಡುವುದು ಎಂಬುದಾಗಿ ಹುಡುಕಾಟ ನಡೆಸುತ್ತಿರುತ್ತಾರೆ.ಡಿಸೆಂಬರ್​​ 23ರಂದು ಬೆಳಗ್ಗೆ 10ಕ್ಕೆ ಅಂಗಪ್ರದಕ್ಷಿಣಂ ಕೋಟಾ, 11ಕ್ಕೆ ಶ್ರೀ ವಾಣಿ ಟ್ರಸ್ಟ್ ಬ್ರೇಕ್ ದರ್ಶನ ಕೋಟಾ, ಮಧ್ಯಾಹ್ನ 3ಕ್ಕೆ ವೃದ್ಧಾಪ್ಯ, ದೀರ್ಘಕಾಲದ ಅನಾರೋಗ್ಯ ಹಾಗೂ ಅಂಗವಿಕಲರಿಗೆ ಉಚಿತ ವಿಶೇಷ ಪ್ರವೇಶ ದರ್ಶನ ಟೋಕನ್‌ಗಳ ಕೋಟಾಗಳ ಟಿಕೆಟ್​​ ಗಳನ್ನು ಸಹ ಬಿಡುಗಡೆ ಮಾಡಲಾಗುವುದು ಎಂದು ಟಿಟಿಡಿ ತಿಳಿಸಿದೆ.

Ticket release on 18th:

ವೆಂಕಟೇಶ್ವರನ ಭಕ್ತರ ಅನುಕೂಲಕ್ಕಾಗಿ ತಿರುಮಲ ತಿರುಪತಿ ದೇವಸ್ಥಾನಂ ಮಾರ್ಚ್ 2025ರ ಸುಪ್ರಭಾತಂ, ತೋಮಾಲ, ಅಷ್ಟದಳಪದ ಪದ್ಮಾರಾಧನೆ ಸೇವೆಗಳ ಗಳಿಕೆ ಸೇವಾ ಟಿಕೆಟ್‌ಗಳ ಕೋಟಾವನ್ನು ಇದೇ 18 ರಂದು ಬೆಳಗ್ಗೆ 10 ಗಂಟೆಗೆ ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಲಿದೆ. ಈ ಪೈಕಿ ಲಕ್ಕಿ ಡಿಪ್ ಕೋಟಾಕ್ಕಾಗಿ ಇದೇ 20ರ ಬೆಳಗ್ಗೆ 10ರವರೆಗೆ ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಳ್ಳಬಹುದು.

ಬಿ ಕಲ್ಯಾಣೋತ್ಸವ, ಅರ್ಜಿತ ಬ್ರಹ್ಮೋತ್ಸವ, ಊಂಜಾಲ್ ಸೇವೆ, ಸಹಸ್ರದೀಪಾಲಂಕರ ಸೇವಾ ಟಿಕೆಟ್‌ಗಳನ್ನು ಇದೇ 21 ರಂದು ಬೆಳಗ್ಗೆ 10 ಗಂಟೆಗೆ ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಲಿದ್ದಾರೆ. ಅದೇ ದಿನ ಮಧ್ಯಾಹ್ನ 3 ಗಂಟೆಗೆ ಟಿಟಿಡಿ ಅಧಿಕಾರಿಗಳು ವರ್ಚುಯಲ್ ಸೇವಾ ಟಿಕೆಟ್‌ಗಳನ್ನು ರಿಲೀಸ್​​​ ಆಗಲಿವೆ.

ಈ ತಿಂಗಳ 24 ರಂದು ಬೆಳಿಗ್ಗೆ 10 ಗಂಟೆಗೆ ಮಾರ್ಚ್ 2025 ರ ವಿಶೇಷ ಪ್ರವೇಶ ದರ್ಶನ 300 ರೂಪಾಯಿ ಕೋಟಾ ಟಿಕೆಟ್‌ಗಳನ್ನು ಬಿಡುಗಡೆ ಮಾಡಲಾಗುತ್ತದೆ. ತಿರುಮಲ ಮತ್ತು ತಿರುಪತಿಯಲ್ಲಿ ಬಾಡಿಗೆಗೆ ಕೊಠಡಿಗಳ ಬುಕಿಂಗ್ ಮಧ್ಯಾಹ್ನ 3 ಗಂಟೆಗೆ ಇರುತ್ತದೆ. ಮಾರ್ಚ್ ತಿಂಗಳ ಶ್ರೀವಾರಿ ಸೇವಾ ಕೋಟಾವನ್ನು ಇದೇ ತಿಂಗಳ 27 ರಂದು ಬಿಡುಗಡೆ ಮಾಡಲಿದೆ.

ಅರ್ಜಿತ ಸೇವೆಗಳು ಮತ್ತು ದರ್ಶನ ಟಿಕೆಟ್‌ಗಳನ್ನು ಕಾಯ್ದಿರಿಸಿಕೊಳ್ಳುವಂತೆ ಟಿಟಿಡಿ ಅಧಿಕಾರಿಗಳು ತಿಳಿಸಿದ್ದಾರೆ. ಡಿಸೆಂಬರ್​​ 23ರಂದು ಬೆಳಗ್ಗೆ 10ಕ್ಕೆ ಅಂಗಪ್ರದಕ್ಷಿಣಂ ಕೋಟಾ, 11ಕ್ಕೆ ಶ್ರೀ ವಾಣಿ ಟ್ರಸ್ಟ್ ಬ್ರೇಕ್ ದರ್ಶನ ಕೋಟಾ, ಮಧ್ಯಾಹ್ನ 3ಕ್ಕೆ ವೃದ್ಧಾಪ್ಯ, ದೀರ್ಘಕಾಲದ ಅನಾರೋಗ್ಯ ಹಾಗೂ ಅಂಗವಿಕಲರಿಗೆ ಉಚಿತ ವಿಶೇಷ ಪ್ರವೇಶ ದರ್ಶನ ಟೋಕನ್‌ಗಳ ಕೋಟಾಗಳ ಟಿಕೆಟ್​​ ಗಳನ್ನು ಸಹ ಬಿಡುಗಡೆ ಮಾಡಲಾಗುವುದು ಎಂದು ಟಿಟಿಡಿ ತಿಳಿಸಿದೆ.

 

Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

MOTOROLA EDGE 60 FUSION – ಅದ್ಭುತವಾದ ಕ್ಯಾಮೆರಾ ಸೆಟಪ್, ವಾಟರ್ ಪ್ರೊಟೆಕ್ಷನ್ – ಮೊಟೊರೊಲಾದ ಹೊಸ ಫೋನ್ನ ಬೆಲೆ ಕೇವಲ ಇಷ್ಟೇ!

Motorola Edge 60 Fusion: ಬಹುನಿರೀಕ್ಷಿತ ' MOTOROLA EDGE 60 FUSION' ಕೊನೆಗೂ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಕಂಪನಿಯು ಇದನ್ನು ' MOTOROLA EDGE...

RASHMIKA MANDANNA – ‘ನಾನು ಹೈದರಾಬಾದ್ನವಳು’: ರಶ್ಮಿಕಾ ಮಂದಣ್ಣ ಹೇಳಿಕೆ ವಿಚಾರ; ಮುಂದುವರಿದ ಪರ – ವಿರೋಧ ಚರ್ಚೆ

'ನ್ಯಾಷನಲ್ ಕ್ರಶ್' ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಜನಪ್ರಿಯ ನಟಿ RASHMIKA MANDANNA, ಭಾರತೀಯ ಚಿತ್ರರಂಗದಲ್ಲಿ ಮೋಡಿ ಮಾಡಿದ್ದಾರೆ. ತಮ್ಮ ನಟನಾ ಕೌಶಲ್ಯದಿಂದ ದೇಶಾದ್ಯಂತ ಅಭಿಮಾನಿಗಳ...

IPL SUBSCRIPTION PLANS – ಕೆಲವೇ ದಿನಗಳಲ್ಲಿ IPL ಹವಾ ಶುರು: ಈ ಕಂಪನಿಗಳ ಗ್ರಾಹಕರಿಗೆ ಅಗ್ಗದಲ್ಲಿ ಲಭ್ಯ!

JioHotstar Subscription: ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್‌ ಟೂರ್ನಿ ಮುಗೀತು. ಮುಂದಿನ ಕೆಲವೇ ದಿನಗಳಲ್ಲಿ ಐಪಿಎಲ್​ ಜಾತ್ರೆ ಆರಂಭವಾಗಲಿದೆ. ಇದಕ್ಕಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ...

IPHONE 17 SERIES – ಐಫೋನ್ 17 ಸೀರಿಸ್ ಡಿಟೆಲ್ಸ್ ಲೀಕ್ – ಇದರ ಸ್ಪೆಷಾಲಿಟಿ ಏನ್ ಗೊತ್ತಾ?

iPhone 17 Series: ಟೆಕ್ ದೈತ್ಯ ಆಪಲ್ ತನ್ನ ಹೊಸ ಐಫೋನ್ ಸೀರಿಸ್​ ಅನ್ನು ಪ್ರತಿ ವರ್ಷ ಮಾರುಕಟ್ಟೆಗೆ ಪರಿಚಯಿಸುತ್ತದೆ. ಈ ಕ್ರಮದಲ್ಲಿ ಈ ವರ್ಷವೂ...