spot_img
spot_img

TIRUMALA VIGILANCE OFFICER : ತಿರುಮಲದಲ್ಲಿ ಭಕ್ತರು ಕಳೆದುಕೊಂಡ ವಸ್ತುಗಳ ದುರುಪಯೋಗ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

Tirumala,( Andhra Pradesh) News:

2023ರಲ್ಲಿ ಕಮಾಂಡ್​ ಕಂಟ್ರೋಲ್ ವಿಭಾಗದ ವಿಚಕ್ಷಣಾಧಿಕಾರಿಯಾಗಿದ್ದ ಶಿವಶಂಕರ್​ ಈ ರೀತಿ ಅಧಿಕಾರಿ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ತಿರುಮಲದಲ್ಲಿ ಶ್ರೀನಿವಾಸನ ದರ್ಶನಕ್ಕೆ ಬರುವ ಭಕ್ತರು ಅನೇಕ ಬಾರಿ ನಗದು, ಮೊಬೈಲ್​, ಚಿನ್ನಾಭರಣ ಸೇರಿದಂತೆ ಅಗತ್ಯ ಮೌಲ್ಯಯುತ ವಸ್ತುಗಳನ್ನು ಕಳೆದುಕೊಳ್ಳುವುದು ಸಹಜ. ಈ ರೀತಿ ಕಳೆದು ಹೋದ ವಸ್ತುಗಳನ್ನು ಸಂಗ್ರಹಿಸಿ, ಅವುಗಳನ್ನು ಸಂಬಂಧ ಪಟ್ಟ ಭಕ್ತರಿಗೆ ವಾಪಸ್​​ ಮಾಡಲು ತಿರುಮಲದಲ್ಲಿ ವಿಜಿಲೆನ್ಸ್​ (ವಿಚಕ್ಷಣಾ) ಅಧಿಕಾರಿಗಳು ಇರುತ್ತಾರೆ. ಆದರೆ, ಆ ವಿಚಕ್ಷಣಾಧಿಕಾರಿಯೇ ಅವುಗಳ ದುರುಪಯೋಗಪಡಿಸಿಕೊಂಡಿರುವ ಘಟನೆ ವೈಎಸ್​ಆರ್​ಸಿಪಿ ಆಡಳಿತದಲ್ಲಿ ಕಂಡು ಬಂದಿದೆ ಎಂದು ವರದಿ ತಿಳಿಸಿದೆ.

ಭಕ್ತರಿಗೆ ಸಂಬಂಧಿಸಿದ ಕಳೆದು ಹೋದ ಮೌಲ್ಯಯುತ ವಸ್ತುಗಳನ್ನು ಸಂಗ್ರಹಿಸುವಲ್ಲಿ ಈ ಕಮಾಂಡ್​ ಕಂಟ್ರೋಲ್​ ವಿಭಾಗ ನಿರ್ಣಾಯಕ ಪಾತ್ರವನ್ನು ಹೊಂದಿದೆ. ಅದರಲ್ಲಿ ಕೆಲಸ ಮಾಡುತ್ತಿದ್ದ ಶಿವಶಂಕರ್​​, ಸಂಗ್ರಹಿಸಿದ ವಸ್ತುಗಳನ್ನು ದುರ್ಬಳಕೆ ಮಾಡಿರುವುದಾಗಿ ವಿಚಕ್ಷಣಾ ಭದ್ರತಾ ಅಧಿಕಾರಿ ಪದ್ಮನಾಭನ್​ ವರದಿಯಲ್ಲಿ ಬೆಳಕಿಗೆ ಬಂದಿದೆ.

Padmanabhan who submitted the report;

ಶಿವಶಂಕರ್​ ಸೂಚನೆ ಮೆರೆಗೆ ಭಕ್ತರು ಬಳಕೆ ಮಾಡುತ್ತಿದ್ದ ಸೆಲ್​ ಫೋನ್​ ಮತ್ತು ಬ್ಲೂಟೂತ್​ ಸಾಧನಗಳನ್ನು ಸಿಬ್ಬಂದಿ ಬಳಕೆ ಮಾಡುತ್ತಿದ್ದರು. ಇನ್ನು ಸಿಕ್ಕ ಬಂಗಾರ ಮತ್ತು ಬೆಳ್ಳಿ ಒಡವೆಗಳನ್ನು ಸರಿಯಾದ ದಾಖಲೆ ಇಲ್ಲದೇ ಶ್ರೀವಾರಿ ಹುಂಡಿಗೆ ಹಾಕಲಾಗಿದೆ. ಇವುಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮತ್ತಷ್ಟು ವಸ್ತುಗಳು ದುರ್ಬಳಕೆಯಾಗಿವೆ. ದೇಗುಲದಲ್ಲಿ ಸಿಬ್ಬಂದಿ ನಿಯಮ ಉಲ್ಲಂಘನೆ ಮಾಡುತ್ತಿದ್ದರೂ ಶಿವಶಂಕರ್​ ಕುರುಡಾಗಿದ್ದರು. ಅಲ್ಲದೇ ದುರ್ಬಳಕೆಗೆ ಅವರನ್ನು ಪ್ರೋತ್ಸಾಹಿಸಿದ್ದರು.

ಕಳ್ಳರಿಂದ ಪಡೆದ ಹಣವನ್ನು ಆಹಾರ ಮತ್ತು ಲಡ್ಡು ಪ್ರಸಾದದ ಖರ್ಚಿಗೆ ಬಳಕೆ ಮಾಡಲಾಗಿದೆ ಎಂದು ಹೇಳಲಾಗಿದೆ. ಈ ಸಂಬಂಧ ಸಲ್ಲಿಸಿರುವ ವರದಿಯಲ್ಲಿ ಶಿವಶಂಕರ್​ ಮರು ಪಡೆದ ವಸ್ತುಗಳನ್ನು ಸರಿಯಾದ ದಾಖಲೆಯೊಂದಿಗೆ ನಿರ್ವಹಣೆ ಮಾಡಿಲ್ಲ. ಈ ರೀತಿ ಅಧಿಕಾರ ದುರ್ಬಳಕೆ ಮಾಡಿದ ಅಧಿಕಾರಿ ವಿರುದ್ದ ಕೇವಲ ನಾಮಮಾತ್ರ ಕ್ರಮಕ್ಕೆ ಸರ್ಕಾರ ಮತ್ತು ಅಧಿಕಾರಿಗಳು ಮುಂದಾಗಿದ್ದಾರೆ. ಶಿವಶಂಕರ್​ ಅವರನ್ನು ಅಮಾನತು ಅಥವಾ ಔಪಚಾರಿಕ ತನಿಖೆಗೆ ಒಳಪಡಿಸುವ ಕಾರ್ಯವೂ ನಡೆದಿಲ್ಲ. ಇದು ಸಾರ್ವಜನಿಕರಲ್ಲಿ ಆಕ್ರೋಶಕ್ಕೆ ಗುರಿಯಾಗಿದ್ದು, ಸರ್ಕಾರ ಕ್ರಮಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.

ನನಗೆ ಸಿಕ್ಕ ಒಂದು ಐ ಫೋನ್ ಶಿವಶಂಕರ್ ಅವರಿಗೆ ನೀಡಿದ್ದೆ. ಆದರೆ, ಅವರು ನೋಂದಣಿ ಮಾಡುವ ಬದಲಿಗೆ ತಮ್ಮ ಸಹೋದ್ಯೋಗಿಗೆ ನೀಡಿದರು. ಸಿಸಿಟಿ ಆಪರೇಟರ್​ ರಮೇಶ್​ ಬಾಬು ಹೇಳುವಂತೆ ಅನೇಕ ಬಾರಿ ಈ ರೀತಿ ಸಿಕ್ಕ ಭಕ್ತರ ವಸ್ತುಗಳು ಅಧಿಕೃತ ದಾಖಲೆಯಿಂದ ಕಣ್ಮರೆಯಾಗಿವೆ ಎಂದು ಹೇಳಿದ್ದಾರೆ.

ಸೆಕ್ಟರ್​ 4ರಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಶಿವಶಂಕರ್, ಕಳ್ಳರಿಂದ ಪಡೆದ ಹಣವನ್ನು​ ಅನೇಕ ಬಾರಿ ಕಚೇರಿಯಲ್ಲಿನ ಟೀ ಮತ್ತು ಟಿಕೆಟ್​ಗೆ ಬಳಕೆ ಮಾಡುತ್ತಿದ್ದರು. ಇಲ್ಲಿನ ಅನೇಕ ಸೆಕ್ಟರ್​ನಲ್ಲಿ ಕಳೆದ 13 ವರ್ಷದಿಂದ ಕಾರ್ಯ ನಿರ್ವಹಿಸುತ್ತಿರುವ ನಾಗರಾಜು ಹೇಳುವಂತೆ, ಅನೇಕ ಸಿಬ್ಬಂದಿ ರಿಜಿಸ್ಟರ್​ನಲ್ಲಿ ದಾಖಲಿಸದೇ, ಸಿಕ್ಕ ಫೋನ್​ಗಳನ್ನು ಬಳಕೆ ಮಾಡುತ್ತಿದ್ದರು.

 

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

MICRO FINANCE TORTURE:ಬೀದಿ ಪಾಲಾದ ಕುಟುಂಬ; ಡಿಸಿ ಹೇಳಿದ್ದಿಷ್ಟು .

Belgaum News: ಒಂದು ತಿಂಗಳ ಹಸುಗೂಸು, ಬಾಣಂತಿ ಸೇರಿ ಮನೆಯವರನ್ನೆಲ್ಲಾ ಹೊರಗೆ ಹಾಕಿರುವ ಮೈಕ್ರೋ FINANCE ಸಿಬ್ಬಂದಿ, ಕುಟುಂಬವೊಂದರ ಮನೆ ಜಪ್ತಿ ಮಾಡಿದೆ.ಕಳೆದ 5 ವರ್ಷಗಳ...

SAMSUNG GALAXY S25 SERIES : ಭಾರತೀಯ ಮಾರುಕಟ್ಟೆಗೆ ಕಾಲಿಟ್ಟ ಸ್ಯಾಮ್ಸಂಗ್ ಹೊಸ ಸ್ಮಾರ್ಟ್ಫೋನ್ಗಳು

Hyderabad News: ಬಹುನಿರೀಕ್ಷಿತ SAMSUNG GALAXY S25ಸರಣಿಯು ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಈ ಫೋನ್‌ಗಳ ಬೆಲೆ ಮತ್ತು ವಿಶೇಷತೆಗಳು ಇಲ್ಲಿವೆ.ದಕ್ಷಿಣ ಕೊರಿಯಾದ ಟೆಕ್ ದೈತ್ಯ...

WANKHEDE STADIUM 50TH ANNIVERSARY:14,505 ಲೆದರ್ ಬಾಲ್ಗಳಿಂದ ‘ವಾಕ್ಯ’ ರಚಿಸಿ ಗಿನ್ನೆಸ್ ದಾಖಲೆ.

Mumbai News: ಎಂಸಿಎ ಈ ದಾಖಲೆಯನ್ನು ಆ ಪಂದ್ಯದಲ್ಲಿ ಶತಕ ಗಳಿಸಿದ ದಿವಂಗತ ಏಕನಾಥ್ ಸೋಲ್ಕರ್ ಮತ್ತು ಕ್ರೀಡೆಗೆ ಅಸಾಧಾರಣ ಕೊಡುಗೆಗಳನ್ನು ನೀಡಿದ ಮುಂಬೈನ ಇತರ...

GALWAN VALLEY IN LEH LADAKH:ಭರದ ಕಾರ್ಯಾಚರಣೆ.

Leh (Ladakh) News: ಭಾರತೀಯ ಸೇನೆ ಮತ್ತು ಸ್ಥಳೀಯ ಮಧ್ಯಸ್ಥಗಾರರ ಸಹಯೋಗದಲ್ಲಿ ಅಧಿಕಾರಿಗಳು ಕಣಿವೆಯಲ್ಲಿ ಈ ಯೋಜನೆಗೆ ಮುಂದಾಗಿದ್ದು, ಸ್ಥಳೀಯ ಪ್ರವಾಸಿಗ ಆಕರ್ಷಿಣೀಯ ತಾಣವಾಗಿ ರೂಪಿಸುವ...