spot_img
spot_img

TIRUPATI ANNAPRASADA MENU : ತಿರುಪತಿ ಅನ್ನಪ್ರಸಾದದಲ್ಲಿ ಮಸಾಲೆ ವಡೆ ಸೇರ್ಪಡೆ

spot_img
spot_img

Share post:

Tirumala (Andhra Pradesh) News:

TIRUPATI ಅನ್ನಪ್ರಸಾದದಲ್ಲಿ ಹೊಸದಾಗಿ ಮಸಾಲೆ ವಡೆ ಸೇರ್ಪಡೆ ಮಾಡಲಾಗಿದೆ. ಮೊದಲ ದಿನ 5 ಸಾವಿರ ಭಕ್ತರಿಗೆ ಸಂತರ್ಪಣೆ ಮಾಡಲಾಗಿದೆ.

ವಿಶ್ವವಿಖ್ಯಾತ TIRUPATI ತಿಮ್ಮಪ್ಪನ ಸನ್ನಿಧಿಯಲ್ಲಿ ಭಕ್ತರಿಗೆ ನೀಡಲಾಗುವ ಅನ್ನದಾಸೋಹದಲ್ಲಿ ಮಸಾಲೆ ವಡೆಯನ್ನು ಹೊಸದಾಗಿ ಸೇರ್ಪಡೆ ಮಾಡಲಾಗಿದೆ. ಮೊದಲ ದಿನವಾದ ಮಂಗಳವಾರ 5 ಸಾವಿರ ಭಕ್ತರಿಗೆ ವಡೆಯನ್ನು ಉಣ ಬಡಿಸಲಾಗಿದೆ.TIRUPATI ತಿರುಮಲ ದೇವಸ್ಥಾನ (ಟಿಟಿಡಿ) ಮಂಡಳಿಯು ದಕ್ಷಿಣ ಭಾರತದ ರುಚಿಕರ ಖಾದ್ಯವಾದ ಮಸಾಲೆ ವಡೆಯನ್ನು ಭಕ್ತರಿಗೆ ಅನ್ನಪ್ರಸಾದದಲ್ಲಿ ನೀಡುವ ಬಗ್ಗೆ ಯೋಚಿಸಿತ್ತು. ಅದರಂತೆ ಇಂದು ಅನ್ನಪ್ರಸಾದದ ಜೊತೆಗೆ ಸಂತರ್ಪಣೆ ಮಾಡಲಾಗಿದೆ.

Masala Vade- TTD ahead of opinion poll: ಮೊದಲ ದಿನ ವಡೆ ಸವಿದ ಭಕ್ತರು ಅದರ ಗುಣಮಟ್ಟದ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು. ಮಸಾಲೆ ವಡೆಯ ನೀಡಿದ್ದನ್ನು ಸ್ವಾಗತಿಸಿ, ಇದು ಊಟದ ರುಚಿಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ತಿಳಿಸಿದ್ದಾಗಿ ಅಧಿಕಾರಿಗಳು ಹೇಳಿದ್ದಾರೆ.ಭಕ್ತರ ದಾಸೋಹದಲ್ಲಿ ಮಸಾಲೆ ವಡೆಯನ್ನು ಮುಂದುವರಿಸಬೇಕೆ ಬೇಡವೇ ಎಂಬುದನ್ನು ತಿಳಿಯಲು ಇನ್ನಷ್ಟು ದಿನ ಈ ಬಗ್ಗೆ ಅಭಿಪ್ರಾಯ ಸಂಗ್ರಹಿಸಲಾಗುವುದು ಎಂದು ಟಿಟಿಡಿ ತಿಳಿಸಿದೆ.

Thippappa’s darshan by 6.83 lakh devotees in 10 days: ಜನವರಿ 10 ರಿಂದ 19 ರ ನಡುವೆ ವೈಕುಂಠ ದ್ವಾರದಲ್ಲಿ 6.83 ಲಕ್ಷ ಭಕ್ತರು ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ಈ ಅವಧಿಯಲ್ಲಿ ಟಿಟಿಡಿ 34.43 ಕೋಟಿ ರೂಪಾಯಿ ಹುಂಡಿ ಆದಾಯ ಪಡೆದಿದೆ. 1,13,132 ಭಕ್ತರು ತಮ್ಮ ಆಚರಣೆಯ ಭಾಗವಾಗಿ ಮುಡಿ ನೀಡಿದ್ದಾರೆ ಎಂದು ಟಿಟಿಡಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

An unceasing ocean of devotees: ತಿಮ್ಮಪ್ಪನ ದರ್ಶನ ಪಡೆಯಲು ಬರುವ ಭಕ್ತರ ಸಂಖ್ಯೆ ಸ್ಥಿರವಾಗಿದೆ. ಸರ್ವದರ್ಶನ ಟಿಕೆಟ್​ಗಳಿಲ್ಲದೇ ಆಗಮಿಸುವ ಭಕ್ತರ ಸಂಖ್ಯೆ ಹೆಚ್ಚಿದೆ. ವೈಕುಂಠಂ ಕ್ಯೂ ಕಾಂಪ್ಲೆಕ್ಸ್ ಮತ್ತು ನಾರಾಯಣಗಿರಿಯ ಎರಡು ಪ್ರದೇಶದಲ್ಲಿ ಭಕ್ತರು ಸರದಿಯಲ್ಲಿ ನಿಂತಿದ್ದರು. ಟೋಕನ್‌ಗಳಿಲ್ಲದ ಭಕ್ತರು 15 ಗಂಟೆಗಳ ಒಳಗೆ ದರ್ಶನ ಪಡೆಯಲಿದ್ದಾರೆ ಎಂದು ಟಿಟಿಡಿ ಈಗಾಗಲೇ ತಿಳಿಸಿದೆ.

ಇದನ್ನು ಓದಿರಿ : JOB MARKET : ಭಾರತದ ಉದ್ಯೋಗ ನೇಮಕಾತಿ ಶೇ 31ರಷ್ಟು ಹೆಚ್ಚಳ

Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

MOTOROLA EDGE 60 FUSION – ಅದ್ಭುತವಾದ ಕ್ಯಾಮೆರಾ ಸೆಟಪ್, ವಾಟರ್ ಪ್ರೊಟೆಕ್ಷನ್ – ಮೊಟೊರೊಲಾದ ಹೊಸ ಫೋನ್ನ ಬೆಲೆ ಕೇವಲ ಇಷ್ಟೇ!

Motorola Edge 60 Fusion: ಬಹುನಿರೀಕ್ಷಿತ ' MOTOROLA EDGE 60 FUSION' ಕೊನೆಗೂ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಕಂಪನಿಯು ಇದನ್ನು ' MOTOROLA EDGE...

RASHMIKA MANDANNA – ‘ನಾನು ಹೈದರಾಬಾದ್ನವಳು’: ರಶ್ಮಿಕಾ ಮಂದಣ್ಣ ಹೇಳಿಕೆ ವಿಚಾರ; ಮುಂದುವರಿದ ಪರ – ವಿರೋಧ ಚರ್ಚೆ

'ನ್ಯಾಷನಲ್ ಕ್ರಶ್' ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಜನಪ್ರಿಯ ನಟಿ RASHMIKA MANDANNA, ಭಾರತೀಯ ಚಿತ್ರರಂಗದಲ್ಲಿ ಮೋಡಿ ಮಾಡಿದ್ದಾರೆ. ತಮ್ಮ ನಟನಾ ಕೌಶಲ್ಯದಿಂದ ದೇಶಾದ್ಯಂತ ಅಭಿಮಾನಿಗಳ...

IPL SUBSCRIPTION PLANS – ಕೆಲವೇ ದಿನಗಳಲ್ಲಿ IPL ಹವಾ ಶುರು: ಈ ಕಂಪನಿಗಳ ಗ್ರಾಹಕರಿಗೆ ಅಗ್ಗದಲ್ಲಿ ಲಭ್ಯ!

JioHotstar Subscription: ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್‌ ಟೂರ್ನಿ ಮುಗೀತು. ಮುಂದಿನ ಕೆಲವೇ ದಿನಗಳಲ್ಲಿ ಐಪಿಎಲ್​ ಜಾತ್ರೆ ಆರಂಭವಾಗಲಿದೆ. ಇದಕ್ಕಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ...

IPHONE 17 SERIES – ಐಫೋನ್ 17 ಸೀರಿಸ್ ಡಿಟೆಲ್ಸ್ ಲೀಕ್ – ಇದರ ಸ್ಪೆಷಾಲಿಟಿ ಏನ್ ಗೊತ್ತಾ?

iPhone 17 Series: ಟೆಕ್ ದೈತ್ಯ ಆಪಲ್ ತನ್ನ ಹೊಸ ಐಫೋನ್ ಸೀರಿಸ್​ ಅನ್ನು ಪ್ರತಿ ವರ್ಷ ಮಾರುಕಟ್ಟೆಗೆ ಪರಿಚಯಿಸುತ್ತದೆ. ಈ ಕ್ರಮದಲ್ಲಿ ಈ ವರ್ಷವೂ...