spot_img
spot_img

NEET UG 2025 – ನೀಟ್ ಯುಜಿ 2025ರ ಅರ್ಜಿ ಸಲ್ಲಿಕೆಯಲ್ಲಿ ಇಳಿಕೆ; ಎಂಬಿಬಿಎಸ್ ಕಡೆ ವಿದ್ಯಾರ್ಥಿಗಳ ನಿರಾಸಕ್ತಿ

spot_img
spot_img

Share post:

Kota (Rajasthan):

ದೇಶದ ಅತಿ ದೊಡ್ಡ ವೈದ್ಯಕೀಯ ಪ್ರವೇಶ ಪರೀಕ್ಷೆಯಾಗಿರುವ ನೀಟ್​ (ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ) NEET UG 2025 ಗೆ ಆನ್​ಲೈನ್ ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಮಾರ್ಚ್​ 7 ಆಗಿದೆ. ಈ ಪರೀಕ್ಷೆಗೆ ಇಲ್ಲಿಯವರೆಗೆ 15.50 ಲಕ್ಷ ಅರ್ಜಿ ಸಲ್ಲಿಕೆ ಆಗಿದ್ದು, ಮುಂದಿನ ಒಂದು ವಾರದಲ್ಲಿ 4 ರಿಂದ 5 ಲಕ್ಷ ಅರ್ಜಿಗಳು ಸಲ್ಲಿಕೆಯಾಗುವ ನಿರೀಕ್ಷೆ ಇದೆ.

ಕಳೆದ ಬಾರಿಗೆ ಹೋಲಿಕೆ ಮಾಡಿದಾಗ ಈ ಬಾರಿ ಅರ್ಜಿ ಸಲ್ಲಿಕೆಯ ಪ್ರಕ್ರಿಯೆ ನಿಧಾನಗೊಂಡಿದ್ದು, ಎಂಬಿಬಿಎಸ್ ಸೀಟುಗಳಿಗೆ ಪೈಪೋಟಿ ಕಡಿಮೆಯಾಗಲಿದೆ. ಏಕೆಂದರೆ ಈ ಬಾರಿ 1.20 ಲಕ್ಷ ಎಂಬಿಬಿಎಸ್ ಸೀಟುಗಳಿಗೆ ನೀಟ್ ಯುಜಿ ಮೂಲಕ ಪ್ರವೇಶ ನೀಡಲಾಗುತ್ತದೆ ಎಂದು ವರದಿಯಾಗಿದೆ.

ಈ ಕುರಿತು ಆನ್​ಲೈನ್​ ಅರ್ಜಿ ಸಲ್ಲಿಕೆ ಕೇಂದ್ರದ ಆಪರೇಟರ್​​ ಪಂಕಜ್​ ಖಂಡೆಲ್ವಾಲ್​ ಮಾತನಾಡಿ, ಅರ್ಜಿ ಸಲ್ಲಿಕೆಯಲ್ಲಿ ಕಳೆದ ವರ್ಷಕ್ಕಿಂತ ಈ ಬಾರಿ ವೇಗ ಕಡಿಮೆಯಾಗಿದೆ. ಇನ್ನು ಕೇವಲ 7 ದಿನಗಳು ಮಾತ್ರ ಉಳಿದಿವೆ. ಕಳೆದ ವರ್ಷ ಅಪ್ಲಿಕೇಶನ್ ಅಂಕಿಅಂಶವನ್ನು ತಲುಪಲು ಸಾಧ್ಯವಾಗುತ್ತಿಲ್ಲ. ಜೆಇಇ ಮೇನ್‌ನ ಜನವರಿ ಮತ್ತು ಏಪ್ರಿಲ್ ಅಧಿವೇಶನಕ್ಕೆ ಒಮ್ಮೆಯೂ ಅರ್ಜಿ ದಿನಾಂಕವನ್ನು ವಿಸ್ತರಿಸಲಾಗಿಲ್ಲ. ಈ ಆಧಾರದ ಮೇಲೆ ನೀಟ್​​ ಯುಜಿ ಅರ್ಜಿ ದಿನಾಂಕವನ್ನು ವಿಸ್ತರಿಸುವುದು ಕಷ್ಟ. ಆದಾಗ್ಯೂ, ನೀಟ್​ ಯುಜಿ ಪರೀಕ್ಷೆಗೆ ಅರ್ಜಿಗಳು ಕಡಿಮೆಯಾಗಿದ್ದು, ಎನ್​ಟಿಎ ಮತ್ತೆ ಅರ್ಜಿ ಸಲ್ಲಿಕೆಗೆ ಮುಂದಾಗುವ ಸಾಧ್ಯತೆ ಇದೆ ಎಂದಿದ್ದಾರೆ.

ಶಿಕ್ಷಣ ತಜ್ಞ ದೇವ್ ಶರ್ಮಾ ಪ್ರಕಾರ, ಕಳೆದ ವರ್ಷ, ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ 2024 ರ ನೀಟ್​​ ಯುಜಿ ಪರೀಕ್ಷೆಯಲ್ಲಿ ರಿಗ್ಗಿಂಗ್ ಆರೋಪಗಳಿವೆ. ಕಟ್​ಆಫ್​ ತುಂಬಾ ಹೆಚ್ಚಾಗಿದ್ದು, ಟಾಪರ್ಸ್​ ವಿದ್ಯಾರ್ಥಿಗಳ ಸಂಖ್ಯೆ ಅಧಿಕವಿತ್ತು. 720 ರಲ್ಲಿ 720 ಅಂಕಗಳನ್ನು ಗಳಿಸಿದ ಅಭ್ಯರ್ಥಿಗಳ ಸಂಖ್ಯೆಯು ಈ ಹಿಂದೆ ಐದು ಡಜನ್‌ಗಿಂತಲೂ ಹೆಚ್ಚಿತ್ತು. ಅಲ್ಲದೇ, ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ವಿರುದ್ಧವೂ ಹಲವು ಆರೋಪಗಳು ಕೇಳಿ ಬಂದಿದ್ದವು. ನ್ಯಾಯಾಲಯದ ಸೂಚನೆ ಮೇರೆಗೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಎರಡು ಬಾರಿ ಪರಿಷ್ಕೃತ ಫಲಿತಾಂಶ ಪ್ರಕಟಿಸಿತ್ತು. ಆದರೆ, ಕಳೆದ ವರ್ಷ ಹೆಚ್ಚಿನ ಕಟ್‌ಆಫ್‌ ಈ ಬಾರಿ ಪರೀಕ್ಷೆಯಲ್ಲಿ ಅಭ್ಯರ್ಥಿಗಳ ಆಸಕ್ತಿ ಕಡಿಮೆಯಾಗಿದೆ. ನೀಟ್​2025 ಅರ್ಜಿಯಲ್ಲಿ ಆಸಕ್ತ ಅಭ್ಯರ್ಥಿಗಳು ಕಡಿಮೆಯಾಗುತ್ತಿರುವುದು ಇದೇ ಕಾರಣವಾಗಿದೆ.

ಕಳೆದ 5 ವರ್ಷಗಳಿಂದ ಅಭ್ಯರ್ಥಿಗಳ ಸಂಖ್ಯೆ ಹೆಚ್ಚಾಗಿತ್ತು. ಆದರೆ, ರೀತಿ ಈ ಬಾರಿ ಕಾಣುತ್ತಿಲ್ಲ. ಕಳೆದ 5 ವರ್ಷಗಳ ಅಭ್ಯರ್ಥಿಗಳ ಸಂಖ್ಯೆ 8 ಲಕ್ಷಕ್ಕೂ ಹೆಚ್ಚಾಗಿದೆ. 2024ರಲ್ಲಿ 3 ಲಕ್ಷ, 2023ರಲ್ಲಿ 2 ಲಕ್ಷ ಹಾಗೂ 2022ರಲ್ಲಿ 2.5 ಲಕ್ಷ ಅಭ್ಯರ್ಥಿಗಳು ಹೆಚ್ಚಿದ್ದರು. ಈ ಬಾರಿ 2025ರಲ್ಲಿ ಕಳೆದ ವರ್ಷಕ್ಕಿಂತ ಮೂರರಿಂದ ನಾಲ್ಕು ಲಕ್ಷ ಅಭ್ಯರ್ಥಿಗಳು ಕಡಿಮೆಯಾಗಬಹುದು ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ:  Dr. Sujatha Rathod Advises Medical Graduates At BMCRI Convocation Ceremony

Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

MOTOROLA EDGE 60 FUSION – ಅದ್ಭುತವಾದ ಕ್ಯಾಮೆರಾ ಸೆಟಪ್, ವಾಟರ್ ಪ್ರೊಟೆಕ್ಷನ್ – ಮೊಟೊರೊಲಾದ ಹೊಸ ಫೋನ್ನ ಬೆಲೆ ಕೇವಲ ಇಷ್ಟೇ!

Motorola Edge 60 Fusion: ಬಹುನಿರೀಕ್ಷಿತ ' MOTOROLA EDGE 60 FUSION' ಕೊನೆಗೂ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಕಂಪನಿಯು ಇದನ್ನು ' MOTOROLA EDGE...

RASHMIKA MANDANNA – ‘ನಾನು ಹೈದರಾಬಾದ್ನವಳು’: ರಶ್ಮಿಕಾ ಮಂದಣ್ಣ ಹೇಳಿಕೆ ವಿಚಾರ; ಮುಂದುವರಿದ ಪರ – ವಿರೋಧ ಚರ್ಚೆ

'ನ್ಯಾಷನಲ್ ಕ್ರಶ್' ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಜನಪ್ರಿಯ ನಟಿ RASHMIKA MANDANNA, ಭಾರತೀಯ ಚಿತ್ರರಂಗದಲ್ಲಿ ಮೋಡಿ ಮಾಡಿದ್ದಾರೆ. ತಮ್ಮ ನಟನಾ ಕೌಶಲ್ಯದಿಂದ ದೇಶಾದ್ಯಂತ ಅಭಿಮಾನಿಗಳ...

IPL SUBSCRIPTION PLANS – ಕೆಲವೇ ದಿನಗಳಲ್ಲಿ IPL ಹವಾ ಶುರು: ಈ ಕಂಪನಿಗಳ ಗ್ರಾಹಕರಿಗೆ ಅಗ್ಗದಲ್ಲಿ ಲಭ್ಯ!

JioHotstar Subscription: ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್‌ ಟೂರ್ನಿ ಮುಗೀತು. ಮುಂದಿನ ಕೆಲವೇ ದಿನಗಳಲ್ಲಿ ಐಪಿಎಲ್​ ಜಾತ್ರೆ ಆರಂಭವಾಗಲಿದೆ. ಇದಕ್ಕಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ...

IPHONE 17 SERIES – ಐಫೋನ್ 17 ಸೀರಿಸ್ ಡಿಟೆಲ್ಸ್ ಲೀಕ್ – ಇದರ ಸ್ಪೆಷಾಲಿಟಿ ಏನ್ ಗೊತ್ತಾ?

iPhone 17 Series: ಟೆಕ್ ದೈತ್ಯ ಆಪಲ್ ತನ್ನ ಹೊಸ ಐಫೋನ್ ಸೀರಿಸ್​ ಅನ್ನು ಪ್ರತಿ ವರ್ಷ ಮಾರುಕಟ್ಟೆಗೆ ಪರಿಚಯಿಸುತ್ತದೆ. ಈ ಕ್ರಮದಲ್ಲಿ ಈ ವರ್ಷವೂ...