Top 10 Businesses Under 50000 News:
ಅಂದುಕೊಂಡಿರುವುದನ್ನು ಸಾಧಿಸಲು ಆಗದಿದ್ದಾಗ ಅವರು ಖಿನ್ನತೆಗೆ ಒಳಗಾಗುತ್ತಾರೆ. ಇನ್ನು ಕೆಲವರು ಬ್ಯಾಂಕ್ ಸಾಲಗಳು ಮತ್ತು ವಿವಿಧ ಸರ್ಕಾರಿ ಯೋಜನೆಗಳ ಮೂಲಕ ಆರ್ಥಿಕ ಬೆಂಬಲವನ್ನು ಪಡೆಯಲು ಮುಂದಾಗುತ್ತಾರೆ. ಅಂತಹವರಿಗೆಲ್ಲ ಆದಷ್ಟು ಕಡಿಮೆ ಬಂಡವಾಳದಲ್ಲಿ ಅಂದರೆ ಗರಿಷ್ಠ 50 ಸಾವಿರ ರೂ.ಗಳಲ್ಲಿ ಮಾಡಬಹುದಾದ ವ್ಯವಹಾರಗಳ ಬಗ್ಗೆ ನಾವು ತಿಳಿಸಿಕೊಡುವ ಪ್ರಯತ್ನ ಮಾಡುತ್ತಿದ್ದೇವೆ.
ಅನೇಕರು ಈ ನೌಕರಿಯ ಸಹವಾಸ ಸಾಕಪ್ಪ ಏನಾದರೂ ಬಿಸಿನೆಸ್ ಮಾಡೋಣ ಎಂದು ಯೋಚಿಸುತ್ತಿರುತ್ತಾರೆ. ಆದರೆ, ಇದು ಕೇವಲ ಭರವಸೆ ಮೂಲಕ ಆಗುವ ವಿಷಯವಲ್ಲ. ಏಕೆಂದರೆ BUSINESSESಕ್ಕೆ ಹೂಡಿಕೆಯ ಅಗತ್ಯವಿದೆ. ಸಾಕಷ್ಟು ಹಣವಿಲ್ಲದೇ ಅನೇಕ ಜನರು ವ್ಯವಹಾರವನ್ನು ಪ್ರಾರಂಭಿಸಲು ಆಗುವುದಿಲ್ಲ. ತಲೆಯಲ್ಲಿ ಏನೇನೋ ಇರುತ್ತೆ ಆದರೆ, ತಮ್ಮ ವ್ಯವಹಾರ ಕಲ್ಪನೆಯನ್ನು ಕಲ್ಪನೆಯ ಹಂತದಲ್ಲಿ ಸಮಾಧಿ ಮಾಡಿ ಬಿಡುತ್ತಾರೆ. ಇದಕ್ಕೆ ಕಾರಣ ಬಂಡವಾಳ ಮತ್ತು ಹೂಡಿಕೆ.
Homemade Food Services:ಅಥವಾ ಯಾವುದೇ ಜನದಟ್ಟಣೆ ಇರುವ ಪ್ರದೇಶದಲ್ಲಿ ಸ್ವಂತ ಆಹಾರ ಮಳಿಗೆಯನ್ನು ನೀವು ನಡೆಸಬಹುದು. ಅಡುಗೆ ಪಾತ್ರೆಗಳು, ಅಡುಗೆ ಅನಿಲ, ತಯಾರಿ ಸಾಮಗ್ರಿಗಳು ಬೇಕಾಗತ್ತದೆ.
ಇನ್ನು ಬಾಳೆ ಎಲೆಯಲ್ಲಿ ಆಹಾರ ಪದಾರ್ಥಗಳನ್ನು ಬಡಿಸಿದರೆ ಆಹಾರ ಪ್ರಿಯರು ತುಂಬಾ ಪ್ರಭಾವಿತರಾಗುತ್ತಾರೆ. ಆಹಾರ ಟೇಸ್ಟಿ ಮತ್ತು ಕ್ಲೀನ್ ಆಗಿದ್ದರೆ, ನೀವು ಯಾವುದೇ ಸಮಯದಲ್ಲಿ ಉತ್ತಮ ಹೆಸರನ್ನು ಗಳಿಸಬಹುದು.ರುಚಿಕರವಾದ ಭಕ್ಷ್ಯಗಳನ್ನು ತಯಾರಿಸುವ ಕೌಶಲ್ಯ ಹೊಂದಿರುವ ಜನರು ‘ಮನೆಯಲ್ಲಿ ತಯಾರಿಸಿದ ಆಹಾರ ಸೇವೆಗಳನ್ನು’ ಪ್ರಾರಂಭಿಸಬಹುದು. ಬೆಳಗಿನ ಉಪಾಹಾರ (ಟಿಫಿನ್) ಮತ್ತು ಪೇಸ್ಟ್ರಿಗಳನ್ನು ತಯಾರಿಸಿ ಪ್ರಮುಖ ಹೋಟೆಲ್‌ಗಳಿಗೆ ಸರಬರಾಜು ಮಾಡಬಹುದು.
cooking classes;ಈ ಬಗ್ಗೆ ಆಸಕ್ತಿ ಇದ್ದ ಉತ್ಸಾಹಿಗಳು ಬಂದು ಕಲಿಯುತ್ತಾರೆ.ನೀವು ಮನೆಯಲ್ಲಿ ಅಡುಗೆ ತರಗತಿಗಳನ್ನು ಪ್ರಾರಂಭಿಸಬಹುದು. ಸಾಂಪ್ರದಾಯಿಕ ಪಾಕವಿಧಾನಗಳು, ಪೇಸ್ಟ್ರಿಗಳು, ಚಾಕೊಲೇಟ್ , ಕೇಕ್ ಗಳನ್ನು ತಯಾರಿಸುವುದು ಹೇಗೆ ಎಂಬುದನ್ನು ಕಲಿಸಬಹುದು.
Day Care Center:ಮಕ್ಕಳ ಬಗ್ಗೆ ಕಾಳಜಿ ವಹಿಸಿ ಪ್ರಾಥಮಿಕ ಶಿಕ್ಷಣ ಕಲಿಸಿದರೆ ಸಾಕು. ನಿಮ್ಮ ವಿಶ್ವಾಸಾರ್ಹತೆ ಹೆಚ್ಚಾಗುತ್ತದೆ. ಒಂದೊಮ್ಮೆ ನೀವು ವಿಶ್ವಾಸಪೂರ್ಣ ಆರೈಕೆ ಹಾಗೂ ಮಕ್ಕಳ ಪಾಲನೆ ಮಾಡಿದರೆ ಗ್ರಾಹಕರು ಕ್ರಮೇಣ ಹೆಚ್ಚಾಗುತ್ತಾರೆ.
ನೀವು ಮಕ್ಕಳೊಂದಿಗೆ ಸಮಯ ಕಳೆಯಲು ಇಷ್ಟಪಡುತ್ತೀರಾ? ಅಂತಹವರು ಡೇ ಕೇರ್ ಸೆಂಟರ್ ತೆರೆಯಬಹುದು. ಇದು ಕಡಿಮೆ ವೆಚ್ಚದಲ್ಲಿಇದನ್ನು ಮಾಡಬಹುದು.
Are you able to train?:ಇದಕ್ಕಾಗಿ ನಿಮಗೆ ಲ್ಯಾಪ್ ಟಾಪ್ ಮತ್ತು ಇಂಟರ್ನೆಟ್ ಸಂಪರ್ಕದ ಅಗತ್ಯವಿದೆ. ಅದರ ಜತೆಗೆ ನಿಮಗೆ ಉತ್ತಮ ವಿಷಯ ಜ್ಞಾನ ಇದ್ದರೆ ಕೋಚಿಂಗ್ ಸೆಂಟರ್ ಅತ್ಯಂತ ಸುಲಭವಾದ ಮಾರ್ಗಕೋಚಿಂಗ್ ಕ್ಲಾಸ್ ತೆರೆಯಲು ನಿಮಗೆ ಯಾವುದಾದರೂ ಚಿಕ್ಕ ಕೋಣೆ, ಕುಳಿತುಕೊಳ್ಳಲು ಟೇಬಲ್ ಗಳು, ಕಪ್ಪು ಹಲಗೆ, ಮಾರ್ಕರ್ ಪೆನ್ ಇತ್ಯಾದಿ ಇದ್ದರೆ ಸಾಕು. ಕರೋನಾ ಬಿಕ್ಕಟ್ಟಿನ ನಂತರ ನಮ್ಮ ದೇಶದಲ್ಲಿ ಆನ್‌ಲೈನ್ ತರಗತಿಗಳಿಗೆ ಬೇಡಿಕೆ ಹೆಚ್ಚಾಗಿದೆ.
Freelance Writing:ಅದಕ್ಕಾಗಿ ನೀವು ಲ್ಯಾಪ್‌ಟಾಪ್ ಮತ್ತು ಇಂಟರ್ನೆಟ್ ಸಂಪರ್ಕವನ್ನು ಹೊಂದಿರಬೇಕಾಗುತ್ತದೆ. ನೀವು ನಿಯಮಿತವಾಗಿ ಬರೆಯಲು ಸಿದ್ಧರಿದ್ದರೆ, ಇದು ನಿಮಗೆ ಉತ್ತಮ ವೃತ್ತಿ ಆಯ್ಕೆಯಾಗಿದೆ.
ನೀವು ವಿವರವಾಗಿ ಮತ್ತು ಸುಲಭವಾಗಿ ಏನನ್ನಾದರೂ ಬರೆಯುವ ಸಾಮರ್ಥ್ಯ ಹೊಂದಿದ್ದರೆ, ಅಂತಹವರು ಸ್ವತಂತ್ರ ಬರಹಗಾರರಾಗಿ ನೀವು ಉತ್ತಮ ಖ್ಯಾತಿ ಮತ್ತು ಆದಾಯವನ್ನು ಗಳಿಸಬಹುದು. ಆನ್‌ಲೈನ್‌ನಲ್ಲಿ ನೀವು ಬ್ಲಾಗ್ ಅಥವಾ ವೆಬ್‌ಸೈಟ್ ರೂಪಿಸಿಕೊಂಡು ನಿಮ್ಮ ಆಲೋಚನೆಗಳನ್ನು ಅದರಲ್ಲಿ ಕಾರ್ಯಗತಗೊಳಿಸಬಹುದು.
Vlogging: ಒಮ್ಮೆ ನೀವು ಹಣಗಳಿಕೆಯನ್ನು ಆರಂಭಿಸಿದರೆ, ನೀವು ಪ್ರತಿ ತಿಂಗಳು ಸ್ವಲ್ಪ ಆದಾಯವನ್ನು ಪಡೆಯುತ್ತೀರಿ. ಇದರ ಜೊತೆಗೆ, ಜಾಹೀರಾತುಗಳು ಮತ್ತು ಪ್ರಾಯೋಜಕತ್ವಗಳ ಮೂಲಕ ಆದಾಯವನ್ನು ಜನರೇಟ್ ಮಾಡಿಕೊಳ್ಳಬಹುದು.
ನೀವು ಅರ್ಥವಾಗುವ ರೀತಿಯಲ್ಲಿ ಮಾತನಾಡಲು ಮತ್ತು ವಿವರಿಸಲು ಇಷ್ಟಪಡುತ್ತೀರಾ? ಹಾಗಾದರೆ ನೀವು ವ್ಲಾಗ್ ಮಾಡುವುದನ್ನು ಮುಂದುವರಿಸಿ. ಒಳ್ಳೆಯ ಸ್ಮಾರ್ಟ್ ಫೋನ್ ಮತ್ತು ಕ್ಯಾಮೆರಾ ಇದ್ದರೆ ಸಾಕು ವ್ಲಾಗಿಂಗ್ ಸುಲಲಿತ. YouTube ಮತ್ತು Instagram ನಂತಹ ಜನಪ್ರಿಯ ಪ್ಲಾಟ್‌ಫಾರ್ಮ್‌ಗಳಲ್ಲಿ ನಿಮ್ಮ ವ್ಲಾಗ್‌ಗಳನ್ನು ನೀವು ಪ್ರಕಟಿಸಬಹುದು.
Marketing:ಕೆಲವು ಜನಪ್ರಿಯ ಉತ್ಪನ್ನಗಳನ್ನು ಆನ್‌ಲೈನ್‌ನಲ್ಲಿ ಪ್ರಚಾರ ಮಾಡಬಹುದು ಮತ್ತು ಅವುಗಳ ಮಾರಾಟವನ್ನು ಮಾಡಿದಾಗ ಆಕರ್ಷಕವಾದ ಕಮಿಷನ್ ಪಡೆಯಬಹುದು. ಇದಕ್ಕೆ ಲ್ಯಾಪ್‌ಟಾಪ್ ಮತ್ತು ಇಂಟರ್ನೆಟ್ ಸಂಪರ್ಕ ಇರುವುದು ಅತ್ಯಗತ್ಯ. ಅಮೆಜಾನ್‌ನಂತಹ ಕಂಪನಿಗಳು ಆನ್‌ಲೈನ್‌ನಲ್ಲಿ ಮಾರಾಟ ಮಾಡುವ ಉತ್ಪನ್ನಗಳಿಗೆ ಅಫಿಲಿಯಟ್ ಮಾರ್ಕೆಟಿಂಗ್ ಮಾಡಬಹುದು.
ಇ-ಕಾಮರ್ಸ್ ಈಗ ತನ್ನ ವ್ಯಾಪ್ತಿಯನ್ನು ಅಗಾದವಾಗಿ ಹೆಚ್ಚಿಸಿಕೊಂಡಿದೆ. ಜನರು ಹೆಚ್ಚಿನ ಸಂಖ್ಯೆಯಲ್ಲಿ ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡುತ್ತಿದ್ದಾರೆ. ಈ ಬದಲಾವಣೆಯನ್ನು BUSINESSESವಾಗಿ ಮಾಡಲು ಬಯಸುವವರು ಅಫಿಯಿಲೆಟ್ ಮಾರ್ಕೆಟಿಂಗ್ ಮಾಡಬೇಕು.
Virtual Fitness Trainer:ಈ ಕೆಲಸಕ್ಕೆ ನಿಮಗೆ ಬೇಕಾಗಿರುವುದು ಲ್ಯಾಪ್‌ಟಾಪ್, ಸ್ಮಾರ್ಟ್ ಫೋನ್ ಮತ್ತು ಇಂಟರ್ನೆಟ್ ಸಂಪರ್ಕ. ನಿಮಗೆ ಫಿಟ್‌ನೆಸ್, ಯೋಗ, ಧ್ಯಾನ ಇತ್ಯಾದಿಗಳಲ್ಲಿ ಅನುಭವವಿದೆಯೇ? ಹಾಗಾದರೆ ಅಂತಹವರು ಆನ್‌ಲೈನ್‌ನಲ್ಲಿ ಫಿಟ್‌ನೆಸ್ ಟ್ರೈನರ್ ಆಗಿ.
Organic Farming:ಸಾವಯವ ಪದ್ಧತಿಯಲ್ಲಿ ಬೆಳೆದ ತರಕಾರಿಗಳು, ಗಿಡಮೂಲಿಕೆಗಳು ಮತ್ತು ಹಣ್ಣುಗಳಿಗೆ ಭಾರಿ ಬೇಡಿಕೆಯಿದೆ. ಮೇಲ್ವರ್ಗದವರು ಇವುಗಳಿಗೆ ಯಾವುದೇ ದರ ಕೊಡಲು ಸಿದ್ಧ.
ಮನೆಯ ಮೇಲ್ಛಾವಣಿ ಮತ್ತು ಹಿತ್ತಲಲ್ಲಿ ಸಾವಯವ ಕೃಷಿ ಮಾಡಬಹುದು.ಈಗೀಗ ಸಾವಯವ ಕೃಷಿಗೆ ಬೇಡಿಕೆ ಹೆಚ್ಚುತ್ತಿದೆ. ರಾಸಾಯನಿಕ ರಹಿತ ಕೃಷಿಯಿಂದ ಸಾವಯವ ಬೆಳೆ ಹಾಗೂ ಆಹಾರ ಉತ್ಪನ್ನಗಳ ಸೇವನೆಗೆ ಜನ ಆಸಕ್ತಿ ತೋರಿಸುತ್ತಿದ್ದಾರೆ.
Insurance Agent:ನೀವು ಉತ್ತಮ ಸಂವಹನ ಕೌಶಲ್ಯವನ್ನು ಹೊಂದಿದ್ದರೆ, ನೀವು ವಿಮಾ ಏಜೆಂಟ್ ಆಗಬಹುದು. ವಿಮಾ ಪಾಲಿಸಿಗಳನ್ನು ಮಾರಾಟ ಮಾಡುವ ಮೂಲಕ ಆಕರ್ಷಕ ಕಮಿಷನ್ ಕೂಡಾ ಗಳಿಸಬಹುದು.
Drop Shipping:ನೀವು ಗ್ರಾಹಕರಿಂದ ಕರೆಗಳನ್ನು ಸ್ವೀಕರಿಸುತ್ತೀರಿ. ನೀವು ಆ ವಿವರಗಳನ್ನು ಪೂರೈಕೆದಾರರಿಗೆ ತಲುಪಿಸುತ್ತೀರಿ. ಪೂರೈಕೆದಾರರು ನೇರವಾಗಿ ಗ್ರಾಹಕರಿಗೆ ಸರಕು ಅಥವಾ ಉತ್ಪನ್ನಗಳನ್ನು ಪೂರೈಕೆ ಮಾಡುತ್ತಾರೆ.
ಡ್ರಾಪ್ ಶಿಪ್ಪಿಂಗ್ ದಾಸ್ತಾನು (ಸ್ಟಾಕ್) ಅನ್ನು ಸಾಗಿಸದೇ ಆನ್‌ಲೈನ್‌ನಲ್ಲಿ ಉತ್ಪನ್ನಗಳನ್ನು ಮಾರಾಟ ಮಾಡಲು ಅವಕಾಶ ನೀಡುತ್ತದೆ. ಡ್ರಾಪ್ ಶಿಪ್ಪರ್‌ಗಳು ಆನ್‌ಲೈನ್‌ನಲ್ಲಿ ಸರಕು/ಉತ್ಪನ್ನಗಳನ್ನು ಖರೀದಿಸಿ ಸರಬರಾಜು ಮಾಡುವ ಮಧ್ಯವರ್ತಿಗಳಾಗಿರುತ್ತಾರೆ.
ಇದನ್ನು ಓದಿರಿ :Qualcomm Launches 4nm Snapdragon 6 Gen 4 Chipset