spot_img
spot_img

ರಾಹುಲ್​ ದ್ರಾವಿಡ್​ ಬೆನ್ನಿಗೆ ಬಿದ್ದ ಟಾಪ್​ IPL ಫ್ರಾಂಚೈಸಿಗಳು.. ಬ್ಲ್ಯಾಂಕ್ ಚೆಕ್ ಆಫರ್ ತಿರಸ್ಕರಿಸಿದ ಕನ್ನಡಿಗ ಏಕೆ ಗೊತ್ತಾ..?

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ಬೆಂಗಳೂರು :ಕೊನೆಗೂ ‘ನಿರುದ್ಯೋಗಿ’ ರಾಹುಲ್ ದ್ರಾವಿಡ್​​​​ ಉದ್ಯೋಗಿ ಆಗಿದ್ದಾರೆ. ರಾಜಸ್ಥಾನ ರಾಯಲ್ಸ್​ ತಂಡದ ಮುಖ್ಯ ತರಬೇತಿಯ ಹುದ್ದೆ ಅರಸಿ ಬಂದಿದೆ. ಆದ್ರೆ ದಿ ವಾಲ್​​ ರಾಜಸ್ಥಾನ ಕೋಚ್​​​​​​​​​​​​​ ಆಗೋದು ಅಷ್ಟೊಂದು ಸುಲಭವಿರಲಿಲ್ಲ. ಅದರ ಹಿಂದೆ ಒಂದು ಆಸಕ್ತಿಕರ ಕಹಾನಿ ಇದೆ.‌

ಇದನ್ನೂ ಓದಿ : Sandalwood Queen ರಮ್ಯಾ ಮದುವೆ ಫಿಕ್ಸ್.? ಹುಡುಗ ಯಾರು ಗೊತ್ತಾ.?

ಟೀಮ್ ಭಾರತಕ್ಕೆ ಐತಿಹಾಸಿಕ ​ ಟಿ20 ವಿಶ್ವಕಪ್ ಗೆಲ್ಲಿಸಿ, ಹೆಡ್​ಕೋಚ್​ ಹುದ್ದೆಗೆ ವಿದಾಯ ಹೇಳಿದ ರಾಹುಲ್​ ದ್ರಾವಿಡ್ ಮುಂದೇನ್ ಮಾಡ್ತಾರೆ ಅನ್ನೋ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. 140 ಕೋಟಿ ಭಾರತೀಯರ ಮನಗೆದ್ದ ಮಹಾರಾಜ ಮತ್ತೆ ಐಪಿಎಲ್​​ಗೆ ರಿಟರ್ನ್​ ಆಗಿದ್ದಾರೆ. ರಾಜಸ್ಥಾನ ರಾಯಲ್ಸ್​ ತಂಡದ ಹೆಡ್​ಕೋಚ್ ಆಗಿ ದಿ ವಾಲ್​ ನೇಮಕಗೊಂಡಿದ್ದಾರೆ. ಆ ಮೂಲಕ ಮಿಲಿಯನ್ ಡಾಲರ್ ಟೂರ್ನಿಯಲ್ಲಿ ಮತ್ತೆ ರಾಹುಲ್​ ದ್ರಾವಿಡ್​ ದರ್ಬಾರ್ ಶುರುವಾಗಿದೆ.

ರಾಹುಲ್ ದ್ರಾವಿಡ್​ಗೆ ಹೈ ಪ್ರೊಫೈಲ್​​ ತಂಡಗಳಿಂದ ಬ್ಲ್ಯಾಂಕ್​ ಚೆಕ್ ಆಫರ್​​​..!

ದಿ ವಾಲ್​ ಖ್ಯಾತಿಯ ದ್ರಾವಿಡ್​ 9 ವರ್ಷಗಳ ಬಳಿಕ ಮತ್ತೆ ಕೋಚ್​​​​​​​​​​​​ ಆಗಿ ಐಪಿಎಲ್​​​ಗೆ ಪ್ರವೇಶ ಕೊಟ್ಟಿದ್ದಾರೆ. ಅದು ತಮ್ಮ ನೆಚ್ಚಿನ ರಾಜಸ್ಥಾನ ರಾಯಲ್ಸ್​ ತಂಡಕ್ಕೆ. ಇದು ಸದ್ಯಕ್ಕೆ ಎಲ್ಲರಿಗೂ ಗೊತ್ತಿರೋ ಸಂಗತಿ. ಆದ್ರೆ ಇದೀಗ ನಿಮಗೆ ಗೊತ್ತಿರದ ಬಿಗ್​​ಅಪ್​ಡೇಟ್ ನ್ಯೂಸ್​​​​ವೊಂದು ಹೊರಬಿದ್ದಿದೆ. ಅದೇನಂದ್ರೆ ರಾಯಲ್ಸ್​​​ ತಂಡದ ಹೆಡ್​ಕೋಚ್​​ ಆಗಿ 2025ನೇ ಐಪಿಎಲ್ ಸೀಸನ್​ನಲ್ಲಿ ಅದ್ಭುತ ಮಾಡಲು ಸಜ್ಜಾಗಿರೋ ರಾಹುಲ್​ ದ್ರಾವಿಡ್​ ಸೆಳೆಯಲು ಹೈ ಪ್ರೊಫೈಲ್​ ಫ್ರಾಂಚೈಸಿಗಳು ಬ್ಲ್ಯಾಂಕ್​​ ಚೆಕ್​​​​ ಆಫರ್​ ನೀಡಿದ್ವಂತೆ. ಆದ್ರೆ ಅದನ್ನು ತಿರಸ್ಕರಿಸಿ ಮತ್ತೆ ರಾಜಸ್ಥಾನದ ಗೂಡಿಗೆ ಮರಳಿದ್ದಾರೆ.

ಇದನ್ನೂ ಓದಿ : ಚಿಕ್ಕೋಡಿ : ಕೋಮುವಾದವೇ ತುಂಬಿರುವ ಸಮಾಜದಲ್ಲಿ ಮುಸ್ಲಿಂ ಬಾಂಧವರು ಮಾಡಿದ ಈ ಕಾರ್ಯ ಶ್ಲಾಘನಿಯ..!

ಬ್ಲ್ಯಾಂಕ್​​ ಚೆಕ್​​ ಆಫರ್​​​ ಬಿಟ್ಟು,’ರಾಯಲ್’​​​​​ ಸಂಬಂಧಕ್ಕೆ ಜೈ..!

ರಾಹುಲ್​ ದ್ರಾವಿಡ್​​​​​​ ತಂಡ ಇಂಡಿಯಾಗೆ ವಿಶ್ವಕಪ್ ಗೆಲ್ಲಿಸಿಕೊಟ್ಟ ಬೆನ್ನಲ್ಲೆ ದಿ ವಾಲ್​​​​ಗೆ ಫುಲ್ ಡಿಮ್ಯಾಂಡ್ ಬಂತು. ಕೆಲ ಬಲಿಷ್ಠ ಐಪಿಎಲ್ ಫ್ರಾಂಚೈಸಿಗಳು ಚಾಂಪಿಯನ್ ಕೋಚ್​​ನನ್ನ ಸೆಳೆಯಲು ಖಾಲಿ​ ಚೆಕ್​ ಆಫರ್​​ ನೀಡಿದ್ವು. ನಿಮಗೆ ಎಷ್ಟು ಬೇಕೋ ಅಷ್ಟು ಬರೆದುಕೊಳ್ಳಿ. ನಮ್ಮ ತಂಡಕ್ಕೆ ಬನ್ನಿ ಅನ್ನೋ ಬಿಗ್​ ಆಫರ್​ ಮುಂದಿಟ್ಟಿದ್ವು. ಆದ್ರೆ ​  ಬ್ಲ್ಯಾಂಕ್​ ಚೆಕ್​ ಆಫರ್​​​​​ ಸಾರಸಗಟವಾಗಿ ತಿರಸ್ಕರಿಸಿದ ದ್ರಾವಿಡ್​​ ರಾಜಸ್ಥಾನ ಜತೆಗಿನ ರಾಯಲ್ ಸಂಬಂಧಕ್ಕೆ ಜೈ ಅಂದಿದ್ದಾರೆ.

ಇದನ್ನೂ ಓದಿ : ಸೋಡಾ ಕುಡಿಯುವುದರಿಂದ ಆರೋಗ್ಯದ ಮೇಲಾಗುವ ಪರಿಣಾಮಗಳೇನು ಗೊತ್ತೇ.?

ದ್ರಾವಿಡ್​​ ರಾಜಸ್ಥಾನ ತಂಡದ ಹೆಡ್​ಕೋಚ್​ ಆಫರ್​ ಒಪ್ಪಿದ್ದೇಕೆ..?

ಒಂದು ವೇಳೆ ದ್ರಾವಿಡ್​ ಹೈ ಫ್ರೊಫೈಲ್​ ಫ್ರಾಂಚೈಸಿಗಳ ಬ್ಲ್ಯಾಂಕ್​​​​ ಚೆಕ್​​​​ ಆಫರ್​ ಒಪ್ಪಿದ್ರೆ ಅವರು ಬಯಸಿದಷ್ಟು ಹಣ ಸಿಗ್ತಿತ್ತು. ಬಹುಶಃ ಐಪಿಎಲ್​​​​ ಕೋಚ್​ಗಳ ಪೈಕಿ ಹೆಚ್ಚಿನ ವೇತನ ಪಡೆಯಬಹುದಿತ್ತು. ಆದ್ರೆ ದ್ರಾವಿಡ್ ಹಾಗೆ ಮಾಡಲಿಲ್ಲ. ಹಣಕ್ಕಿಂತ, ಬಾಂಧವ್ಯಕ್ಕೆ ಹೆಚ್ಚು ಒತ್ತು ನೀಡಿ ರಾಜಸ್ಥಾನ ರಾಯಲ್ಸ್​​ ತಂಡದ ಕೋಚಿಂಗ್ ಹುದ್ದೆಯನ್ನ ಒಪ್ಪಿಕೊಂಡಿದ್ದಾರೆ. ಇದಕ್ಕೆ ಅನೇಕ ಕಾರಣಗಳಿವೆ.

ಇದನ್ನೂ ಓದಿ : ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನದ ‘ಯುಐ’ ಚಿತ್ರದಲ್ಲಿ ನಟಿ ಸನ್ನಿ ಲಿಯೋನ್?

ದ್ರಾವಿಡ್​​ ರಾಜಸ್ಥಾನ ಹೆಡ್​​​ ಕೋಚ್​ ಆಗಿದ್ದೇಕೆ..?
  • ದ್ರಾವಿಡ್​​​-ರಾಜಸ್ಥಾನ ನಡುವೆ ಅವಿನಾಭಾವ ಸಂಬಂಧ
  • 2011ರ ಹರಾಜಿನಲ್ಲಿ ದ್ರಾವಿಡ್​ ಖರೀದಿಸಿದ್ದ ರಾಜಸ್ಥಾನ
  • 2011 ರಿಂದ 2013ರ ತನಕ ರಾಯಲ್ಸ್​​​ ಪರ ಕಣಕ್ಕೆ
  • 2014 ಹಾಗೂ 2015 ರಲ್ಲಿ ಕೋಚ್ ಆಗಿ ಕಾರ್ಯ ನಿರ್ವಹಣೆ
  • ದ್ರಾವಿಡ್​ ಶಿಷ್ಯ ಸ್ಯಾಮ್ಸನ್​ ರಾಜಸ್ಥಾನ ತಂಡದ ನಾಯಕರು

ಇದನ್ನೂ ಓದಿ :  3 ವರ್ಷದ ಹಿಂದೆ ಸಾವಾಗಿದ್ದ ವ್ಯಕ್ತಿಯ ಬಗ್ಗೆ ಮಹತ್ವದ ಅಪ್‌ಡೇಟ್‌ : ಏನ್‌ ವಿಷ್ಯಾ ಗೊತ್ತಾ..?

ಭಾರತ ತಂಡಕ್ಕೆ 17 ವರ್ಷಗಳ ಬಳಿಕ ಟಿ20 ವಿಶ್ವಕಪ್ ಗೆಲ್ಲಿಸಿದ ದಿ ವಾಲ್ ಕೋಚ್​ ಆದ ಬೆನ್ನಲ್ಲೆ ಅಪಾರ ನಿರೀಕ್ಷೆಗಳು ಗರಿಗೆದರಿವೆ. ಗುರು ದ್ರಾವಿಡ್​​​​, ಶಿಷ್ಯ ಸ್ಯಾಮ್ಸನ್​​ ಕೆಮಿಸ್ಟ್ರಿಯಲ್ಲಿ ಹೊಸ ಯುಗಾರಂಭಗೊಳ್ಳಲಿದೆ ಅನ್ನೋ ಟಾಕ್ಸ್ ಕೇಳಿ ಬರ್ತಿದೆ. ಚಾಂಪಿಯನ್ ಕ್ಯಾಪ್ಟನ್​ ದ್ರಾವಿಡ್​​ ಬ್ಲೂ ಜರ್ಸಿಯಲ್ಲಿ ಸಕ್ಸಸ್ ಕಂಡಂತೆ ಐಪಿಎಲ್​ ಕೋಚ್ ಸಕ್ಸಸ್​ ಕಾಣಲಿ ಅನ್ನೋದು ಎಲ್ಲ ಕನ್ನಡಿಗರ ಆಶಯವಾಗಿದೆ.

 

 

WhatsApp Group Join Now
Telegram Group Join Now
Instagram Account Follow Now
spot_img

Related articles

STOCK MARKET: ಸೆನ್ಸೆಕ್ಸ್ 425 ಅಂಶ ಕುಸಿತ, 22,795ಕ್ಕಿಳಿದ ನಿಫ್ಟಿ

Mumbai News: ಎನ್ಎಸ್ಇ ನಿಫ್ಟಿ 50 ಕೂಡ 127.25 ಪಾಯಿಂಟ್ ಅಥವಾ ಶೇಕಡಾ 0.51 ರಷ್ಟು ಕುಸಿದು 22,795.90 ರಲ್ಲಿ ಕೊನೆಗೊಂಡಿದೆ. ನಿಫ್ಟಿ 50 ದಿನದ...

PRE BUDGET MEETING:ಮುಂಬರುವ 2025-26ರ ರಾಜ್ಯ ಬಜೆಟ್ನಲ್ಲಿ ಕಾಸಿಯಾದ ನಿರೀಕ್ಷೆಗಳೇನು?

Bangalore News : ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಾಣಿಜ್ಯ ಸಂಘ ಸಂಸ್ಥೆಗಳ ಪ್ರತಿನಿಧಿಗಳ ಜೊತೆಗೆ BUDGET ಪೂರ್ವ ಸಭೆ ನಡೆಸಿ...

TRAINS KUMBH MELA: ಇಲ್ಲಿ ತನಕ 3 ಕೋಟಿಗೂ ಹೆಚ್ಚು ಭಕ್ತರ ರೈಲು ಯಾನ!!

Vijayawada (Andhra Pradesh) News: ಫೆಬ್ರವರಿ 26 ರಂದು ಕೊನೆಗೊಳ್ಳುವ ಕುಂಭಮೇಳ ಕಣ್ತುಂಬಿಕೊಳ್ಳಲು ಭಕ್ತರ ದಂಡು ಪ್ರಯೋಗರಾಜ್​ ಗೆ ಆಗಮಿಸುತ್ತಿದೆ. ಭಾರತೀಯ ರೈಲ್ವೇಸ್​ ಇದುವರೆಗೂ 3.09...

AYODHYA SHRI RAM TEMPLE:ತಡರಾತ್ರಿವರೆಗೂ ರಾಮನ ದರ್ಶನಕ್ಕೆ ಅವಕಾಶ

Ayodhya (Uttar Pradesh) News: ಭಗವಾನ್ ರಾಮನ ಶಿಶು ರೂಪವಾದ ರಾಮ್ ಲಲ್ಲಾನನ್ನು ನೋಡಲು ದೇಶದ ಮೂಲೆಮೂಲೆಗಳಿಂದ ಭಕ್ತರು AYODHYA ಆಗಮಿಸುತ್ತಿದ್ದಾರೆ. ಶುಕ್ರವಾರ ಮುಂಜಾನೆ 5...