Mangalore News:
ಪ್ರಶಾಂತ್ ನೀಲ್ ಹಾಗೂ ಜೂನಿಯರ್ ಎನ್‌ಟಿಆರ್ ಕಾಂಬಿನೇಷನ್ನ ಸಿನಿಮಾದಲ್ಲಿ ಮಲಯಾಳಂ ನಟ TOVINO THOMAS ಕಾಣಿಸಿಕೊಳ್ಳಲಿದ್ದಾರೆ. ಟಾಲಿವುಡ್ ಸೂಪರ್ ಸ್ಟಾರ್ ಜೂನಿಯರ್ ಎನ್‌ಟಿಆರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಈ ಸಿನಿಮಾ ಮೂಲಕ ಮಲಯಾಳಂ ನಟ TOVINO THOMAS ತೆಲುಗು ಚಿತ್ರರಂಗ ಪ್ರವೇಶಿಸಲು ಸಜ್ಜಾಗಿದ್ದಾರೆ.
ಈಗಾಗಲೇ ಸಿನಿಮಾ ತನ್ನ ನಿರ್ದೇಶಕ, ತಾರಾಬಳಗದ ಸಲುವಾಗಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದೆ. ಭಾರತೀಯ ಚಿತ್ರರಂಗದ ಸ್ಟಾರ್ ಡೈರೆಕ್ಟರ್ ಪ್ರಶಾಂತ್ ನೀಲ್ ಸಾರಥ್ಯದ ಮುಂದಿನ ಬಿಗ್ – ಬಜೆಟ್ ಪ್ಯಾನ್ – ಇಂಡಿಯಾ ಸಿನಿಮಾ ‘ಎನ್‌ಟಿಆರ್ ನೀಲ್’ (‘ಡ್ರ್ಯಾಗನ್’).
Share a post on Instagram:
ಬುಧವಾರ ಸೌತ್ ಇಂಡಿಯನ್ ಇಂಟರ್‌ನ್ಯಾಷನಲ್ ಮೂವಿ ಅವಾರ್ಡ್ಸ್ (SIIMA) ತನ್ನ ಅಧಿಕೃತ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಒಂದನ್ನು ಶೇರ್ ಮಾಡಿದೆ. ನಿರ್ದೇಶಕ ಪ್ರಶಾಂತ್ ನೀಲ್ ಅವರೊಂದಿಗೆ ನಟ TOVINO THOMAS ಇರುವ ಫೋಟೋವನ್ನು ಹಂಚಿಕೊಂಡಿದ್ದು, ನಿರ್ದೇಶಕ-ನಟನ ಮೊದಲ ಕೊಲಾಬರೇಶನ್ನನ್ನು ದೃಢಪಡಿಸಿದೆ.TOVINO THOMAS ಇತ್ತೀಚಿನ ವರದಿಗಳ ಪ್ರಕಾರ, ಜೂನಿಯರ್ ಎನ್‌ಟಿಆರ್ ಈಗಾಗಲೇ ಮಂಗಳೂರಿನಲ್ಲಿ ಚಿತ್ರೀಕರಣ ಪ್ರಾರಂಭಿಸಿದ್ದಾರೆ.
ಇತರ ಪಾತ್ರವರ್ಗ ಕೂಡಾ ಚಿತ್ರತಂಡ ಸೇರುವ ವದಂತಿಗಳಿವೆ.ನಟಿ ರುಕ್ಮಿಣಿ ವಸಂತ್ ಕೂಡಾ ಈ ಸಿನಿಮಾ ಮೂಲಕ ತೆಲುಗು ಚಿತ್ರರಂಗ ಪ್ರವೇಶಿಸಲಿದ್ದಾರೆ. ಬಹುಬೇಡಿಕೆ ನಟಿ ಕೊನೆಯದಾಗಿ ಪ್ರಶಾಂತ್ ನೀಲ್ ಬರೆದ ಆ್ಯಕ್ಷನ್ ಥ್ರಿಲ್ಲರ್ ‘ಬಘೀರ’ದಲ್ಲಿ ಕಾಣಿಸಿಕೊಂಡರು. ಇನ್ನೂ, ಅನುಭವಿ ನಟ ಬಿಜು ಮೆನನ್ ಸಹ ಸುಮಾರು ಎರಡು ದಶಕಗಳ ನಂತರ ತೆಲುಗು ಚಿತ್ರರಂಗಕ್ಕೆ ಮರಳಿದ್ದಾರೆ.
ಅವರು ಕೊನೆಯ ಬಾರಿಗೆ 2006ರಲ್ಲಿ ಬಿಡುಗಡೆಯಾದ ರಣಮ್ ಮತ್ತು ಖತರ್ನಾಕ್ ಚಿತ್ರಗಳಲ್ಲಿ ಕಾಣಿಸಿಕೊಂಡರು. ಕೆಜಿಎಫ್ ಫ್ರಾಂಚೈಸ್ ಮತ್ತು ಸಲಾರ್‌ನಂತಹ ಬ್ಲಾಕ್‌ಬಸ್ಟರ್ ಹಿಟ್‌ಗಳಿಂದ ಜನಪ್ರಿಯರಾಗಿರುವ ಪ್ರಶಾಂತ್ ನೀಲ್, ಸದ್ಯ ಇಂಡಿಯನ್ ಸಿನಿಮಾ ಇಂಡಸ್ಟ್ರಿಯಲ್ಲಿ ಅತ್ಯಂತ ಬೇಡಿಕೆಯ ನಿರ್ದೇಶಕರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ.
ಎನ್‌ಟಿಆರ್‌ನೀಲ್/ಡ್ರ್ಯಾಗನ್ ಮುಂದಿನ ವರ್ಷ ಜನವರಿ 9 ರಂದು ಥಿಯೇಟರ್‌ಗಳಲ್ಲಿ ಸಖತ್ ಗ್ರ್ಯಾಂಡ್ ಆಗಿ ಬಿಡುಗಡೆ ಆಗಲಿದ್ದು, ಪ್ರೇಕ್ಷಕರು ಉತ್ಸುಕರಾಗಿದ್ದಾರೆ. ಆರ್ಆರ್ಆರ್, ದೇವರ ಸಿನಿಮಾಗಳಿಂದ ಸದ್ದು ಮಾಡಿರುವ ಜೂನಿಯರ್ ಎನ್‌ಟಿಆರ್ ಅವರ ಹೊಸ ಸಿನಿಮಾ ವೀಕ್ಷಣೆಗೆ ಪ್ರೇಕ್ಷಕರು ಕಾತರರಾಗಿದ್ದಾರೆ.
ಮಲಯಾಳಂ ನಟ TOVINO THOMAS ಅವರ ಸಿನಿಮಾಗಳನ್ನು ಗಮನಿಸೋದಾದ್ರೆ, 2025ರ ಜನವರಿ 2ರಂದು ಐಡೆಂಟಿಟಿ ಸಿನಿಮಾ ತೆರೆಕಂಡು ಚಿತ್ರಮಂದಿರಗಳಲ್ಲಿ ಉತ್ತಮ ಕಲೆಕ್ಷನ್ ಮಾಡುತ್ತಿದೆ. ಟೊವಿನೋ ಥಾಮಸ್, ಜೂನಿಯರ್ ಎನ್‌ಟಿಆರ್ ಮತ್ತು ಪ್ರಶಾಂತ್ ನೀಲ್ ಕಾಂಬಿನೇಷನ್ನ ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ಒಂದು ಪ್ರಮುಖ ಮೈಲಿಗಲ್ಲನ್ನು ಸೃಷ್ಟಿಸುವ ಭರವಸೆ ಇದೆ.
ಇದನ್ನು ಓದಿರಿ : Massive Whale Skeleton Main Crowd-Puller At CMFRI Fest