ಮೊಬೈಲ್ಗೆ ರೀಚಾರ್ಜ್ ಮಾಡಿ ಮಾಡಿ ಸಾಕಾಗಿ ಹೋಯ್ತು. 10, 20 ರೂಪಾಯಿ ಆಗಿದ್ದರೆ ಮಾಡಬಹುದಾಗಿತ್ತು, ಮೂನ್ನೂರು, ನಾಲ್ಕು ನೂರು ರೂಪಾಯಿಗಳನ್ನು ಎಲ್ಲಿಂದ ತರೋದು ಎಂದು ಚಿಂತೆಯಲ್ಲಿದ್ದವರಿಗೆ ಸದ್ಯದಲ್ಲೇ ಗುಡ್ನ್ಯೂಸ್ ಸಿಗಲಿದೆ.
ದೇಶದ ಟೆಲಿಕಾಂ ನಿಯಂತ್ರಕ ಟ್ರಾಯ್ ಟೆಲಿಕಾಂ ಕಂಪನಿಗಳ ಮುಂದೆ ಹೊಸ ಪ್ರಸ್ತಾವನೆ ಇಟ್ಟಿದೆ. ಬಡವರ ಅನುಕೂಲಕ್ಕಾಗಿ ಡೇಟಾ ಇಲ್ಲದೆ ಪ್ಲಾನ್ಗಳನ್ನು ಪ್ರಾರಂಭಿಸುವಂತೆ ಕಂಪನಿಗಳಿಗೆ ಕೇಳಿಕೊಂಡಿದೆ. ಒಂದು ವೇಳೆ ಇದು ಕಾರ್ಯರೂಪಕ್ಕೆ ಬಂದರೆ ಗ್ರಾಹಕರ ಮೇಲಿನ ರೀಚಾರ್ಜ್ ಹೊರೆ ಕಡಿಮೆ ಆಗಲಿದೆ.
TRAI ಪ್ರಸ್ತಾಪ ಏನು..?
ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (TRAI) ನೀಡಿರುವ ಮಾಹಿತಿ ಪ್ರಕಾರ.. ಡೇಟಾ, ಧ್ವನಿ, SMS ಮತ್ತು OTT ಸೇವೆಗಳನ್ನು ಒಳಗೊಂಡಿರುವ ಬಂಡಲ್‌ಗಳಲ್ಲಿ ಪ್ಲಾನ್ಗಳು ಮಾರುಕಟ್ಟೆಗೆ ಬರುತ್ತಿವೆ. ಈ ಬಂಡಲ್ ಆಫರ್‌ಗಳು ಹೆಚ್ಚಿನ ಸಂಖ್ಯೆಯ ಚಂದಾದಾರರನ್ನು ಪೂರೈಸುವುದಿಲ್ಲ. ಏಕೆಂದರೆ ಎಲ್ಲಾ ಚಂದಾದಾರರು ಎಲ್ಲಾ ಸೇವೆಗಳನ್ನು ಬಳಸುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ತಾವು ಬಳಸದ ಸೇವೆಗಳಿಗೂ ಹಣ ನೀಡಬೇಕಾಗುತ್ತದೆ ಎಂಬ ಬೇಸರ ಗ್ರಾಹಕರಲ್ಲಿದೆ.
ಇದನ್ನೂ ಓದಿ:ರೇಣುಕಸ್ವಾಮಿ ಕುಟುಂಬಸ್ಥರನ್ನು ಭೇಟಿಯಾಗಿ 1 ಲಕ್ಷ ರೂ. ಚೆಕ್ ನೀಡಿದ ನಟ ವಿನೋದ್ ರಾಜ್
ವಾಸ್ತವವಾಗಿ ಇಂದಿಗೂ ಸ್ಮಾರ್ಟ್ ಫೋನ್ ಬಳಸದ ಮೊಬೈಲ್ ಬಳಕೆದಾರರು ಇದ್ದಾರೆ. ಸಾಧಾರಣ ಫೋನ್ ಬಳಸುವ ಜನ OTT ಸೇವೆಗಳನ್ನು ಬಳಸುವುದಿಲ್ಲ, ಅವರಿಗೆ ಡೇಟಾ ಅಗತ್ಯ ಇಲ್ಲ. ಇವರಿಗೆ ಬೇರೆ ಆಯ್ಕೆಗಳಿಲ್ಲದ ಕಾರಣ ಬಂಡಲ್ ಆಫರ್ ಆರಿಸಿಕೊಳ್ಳಬೇಕಾಗುತ್ತದೆ. ಅಂತಹ ಬಳಕೆದಾರರು ಇದರ ಪ್ರಯೋಜನ ಪಡೆಯುತ್ತಾರೆ ಎಂದು ಟ್ರಾಯ್ ಹೇಳಿದೆ.
ಪ್ರಸ್ತುತ ಪ್ರಮುಖ ಮೂರು ಟೆಲಿಕಾಂ ಕಂಪನಿಗಳು ಮೊಬೈಲ್ ಬಳಕೆದಾರರಿಗೆ ಬಂಡಲ್ ಯೋಜನೆಗಳನ್ನು ನೀಡುತ್ತಿವೆ. ಅಗ್ಗದ ಪ್ಲಾನ್‌ಗಳಲ್ಲಿಯೂ ಡೇಟಾವನ್ನು ಒದಗಿಸುತ್ತಿವೆ. ಬೇಸಿಕ್ ಮೊಬೈಲ್ ಬಳಸೋರಿಗೆ ಅದರ ಅಗತ್ಯವೇ ಇರೋದಿಲ್ಲ. ಒಂದು ವೇಳೆ TRAIನ ಈ ಪ್ರಸ್ತಾವನೆಯನ್ನು ಟೆಲಿಕಾಮ್ ಕಂಪನಿಗಳು ಜಾರಿಗೆ ತಂದರೆ ಗ್ರಾಹಕರು ಲಾಭ ಪಡೆಯಲಿದ್ದಾರೆ.