Vijayawada (Andhra Pradesh) News:
ಫೆಬ್ರವರಿ 26 ರಂದು ಕೊನೆಗೊಳ್ಳುವ ಕುಂಭಮೇಳ ಕಣ್ತುಂಬಿಕೊಳ್ಳಲು ಭಕ್ತರ ದಂಡು ಪ್ರಯೋಗರಾಜ್ ಗೆ ಆಗಮಿಸುತ್ತಿದೆ. ಭಾರತೀಯ ರೈಲ್ವೇಸ್ ಇದುವರೆಗೂ 3.09 ಕೋಟಿ ಭಕ್ತರನ್ನು ಸಾಗಿಸಿದೆ.ಅವರ ಅನಕೂಲಕ್ಕೆ ಎಂದೇ ದಕ್ಷಿಣ ಮಧ್ಯ TRAINS ವಲಯದ ವಿಜಯವಾಡ ವಿಭಾಗವು TRAINS ಮೂಲಕ ಸುಮಾರು 60,000 ಪ್ರಯಾಣಿಕರನ್ನು ಇಲ್ಲಿಂದ ಪ್ರಯಾಣಿಸಲು ಅನುಕೂಲ ಮಾಡಿಕೊಟ್ಟಿದೆ.
ಇಲ್ಲಿಂದ ಸುಮಾರು 60 ಸಾವಿರ ಭಕ್ತರು ಪ್ರಯಾಣಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಇದೇ 26ರ ಶಿವರಾತ್ರಿಯೆಂದು ಮಹಾಕುಂಭ ಮೇಳಕ್ಕೆ ತೆರೆ ಬೀಳಲಿದೆ. ಈ ಹಿನ್ನೆಲೆಯಲ್ಲಿ ಪ್ರಯಾಗರಾಜ್ ಗೆ ಭಕ್ತರ ದಂಡೇ ಹರಿದು ಬರುತ್ತಿದೆ. 144 ವರ್ಷಗಳಿಗೊಮ್ಮೆ ನಡೆಯುವ ಕುಂಭ ಮೇಳೆ ಕಣ್ತುಂಬಿಕೊಳ್ಳಬೇಕು ಎಂಬುದು ಬಹುತೇಕರ ಆಶಯ. ಹೀಗಾಗಿ ಎಲ್ಲರೂ ಜೀವನದಲ್ಲಿ ಒಮ್ಮೆ ಕುಂಭಮೇಳದಲ್ಲಿ ಭಾಗವಹಿಸಬೇಕು ಎಂಬ ಆಶೆ ಹೊಂದಿರುತ್ತಾರೆ.
ಒಟ್ಟು 115 ನಿಯಮಿತ ಮತ್ತು ವಿಶೇಷ ರೈಲು ಸೇವೆಗಳ ಮೂಲಕ ಭಕ್ತರು ಜನವರಿ ಮತ್ತು ಫೆಬ್ರವರಿಯಲ್ಲಿ ಮೆಗಾ ತೀರ್ಥಯಾತ್ರೆಗಾಗಿ ಪ್ರಯಾಗರಾಜ್‌ಗೆ ತೆರಳಿದ್ದಾರೆ ಎಂದು ದಕ್ಷಿಣ ಮಧ್ಯ TRAINS ಹೇಳಿದೆ. ಅಷ್ಟೇ ಅಲ್ಲ ಫೆಬ್ರವರಿ 21 ರ ಹೊತ್ತಿಗೆ ವಿಜಯವಾಡ ವಿಭಾಗದಿಂದ ಸುಮಾರು 60,000 ಪ್ರಯಾಣಿಕರು ಪ್ರಯಾಗರಾಜ್ ಗೆ ಪ್ರಯಾಣಿಸಿದ್ದಾರೆ ಎಂದು ಶುಕ್ರವಾರ ಅಧಿಕೃತ ಪ್ರಕಟಣೆ ತಿಳಿಸಿದೆ.ವಿಶ್ವದ ಮಹಾ ದೊಡ್ಡ ಜಾತ್ರೆ ಎಂದೇ ಪ್ರಸಿದ್ಧಿ ಪಡೆದುಕೊಂಡಿರುವ ಪ್ರಯಾಗರಾಜ ಮಹಾ ಕುಂಭಮೇಳಕ್ಕೆ ಇದುವರೆಗೂ 50ಕೋಟಿಗೂ ಹೆಚ್ಚು ಭಕ್ತರು ಆಗಮಿಸಿ ಪುಣ್ಯ ಸ್ನಾನ ಮಾಡಿದ್ದಾರೆ. ಇದು ದಾಖಲೆ ಎಂದೇ ಹೇಳಬಹುದು.
ವಿಜಯವಾಡ, ಗುಂಟೂರು, ಮಚಲಿಪಟ್ಟಣ, ಕಾಕಿನಾಡ, ನರಸಾಪುರ ಸೇರಿದಂತೆ ವಿವಿಧ ನಿಲ್ದಾಣಗಳಿಂದ ವಿಶೇಷ ರೈಲುಗಳನ್ನು ವ್ಯವಸ್ಥೆ ಮಾಡಲಾಗಿತ್ತು. ಜನವರಿ 13 ರಿಂದ ಭಾರತೀಯ TRAINS 3.09 ಕೋಟಿ ಯಾತ್ರಾರ್ಥಿಗಳನ್ನು ಪ್ರಯಾಗರಾಜ್‌ಗೆ ಸಾಗಿಸಿದೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.
ಇದನ್ನು ಓದಿರಿ :Tough Choices For India On Reciprocal US Tariffs Despite Modi-Trump Meet