New Delhi News:
TRIBUTE TO MAHATMA GANDHI ರಾಷ್ಟ್ರಪತಿ ದ್ರೌಪದಿ ಮುರ್ಮು, ಕೇಂದ್ರದ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರು ದೆಹಲಿಯ ರಾಜ್ಘಾಟ್ನಲ್ಲಿರುವ ಗಾಂಧೀಜಿ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿದರು. ಉಪರಾಷ್ಟ್ರಪತಿ ಜಗದೀಪ್ ಧನಕರ್, ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ಕೇಂದ್ರ ಸಚಿವ ಮನೋಹರ್ ಲಾಲ್ ಖಟ್ಟರ್, ಭೂಸೇನೆ, ನೌಕಾಸೇನೆ ಮತ್ತು ವಾಯುಸೇನೆಯ ಮುಖ್ಯಸ್ಥರು ಸೇರಿದಂತೆ ಇತರ ಗಣ್ಯರು ರಾಷ್ಟ್ರಪಿತನಿಗೆ TRIBUTE TO MAHATMA GANDHI ಅರ್ಪಿಸಿದರು.
ಗಾಂಧೀಜಿ ಸ್ಮರಣಾರ್ಥ ಎರಡು ನಿಮಿಷ ಮೌನಾಚರಣೆ ನಡೆಯಿತು. ಮಹಾತ್ಮ ಗಾಂಧೀಜಿಯ 77ನೇ ಪುಣ್ಯತಿಥಿಯ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಪ್ರಧಾನಿ ಮೋದಿ ಅವರು ದೆಹಲಿಯ ರಾಜ್ಘಾಟ್ನಲ್ಲಿರುವ ಗಾಂಧಿ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿದರು.
ರಾಜ್ಘಾಟ್ನಲ್ಲಿ ನಡೆದ ಸರ್ವಧರ್ಮ ಪ್ರಾರ್ಥನಾ ಕಾರ್ಯಕ್ರಮದಲ್ಲೂ ಅವರು ಭಾಗವಹಿಸಿದರು.ಇದಕ್ಕೂ ಮುನ್ನ ಪ್ರಧಾನಿ ಮೋದಿ ತಮ್ಮ ಎಕ್ಸ್ ಖಾತೆಯಲ್ಲಿ,TRIBUTE TO MAHATMA GANDHI “ಪುಣ್ಯತಿಥಿ ಹಿನ್ನೆಲೆಯಲ್ಲಿ ಪೂಜ್ಯ ಬಾಪು ಅವರಿಗೆ ನಮನಗಳು. ಅವರ ಆದರ್ಶಗಳು ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸಲು ನಮ್ಮನ್ನು ಪ್ರೇರೇಪಿಸುತ್ತವೆ.
ನಮ್ಮ ರಾಷ್ಟ್ರಕ್ಕಾಗಿ ಹುತಾತ್ಮರಾದ ಎಲ್ಲರಿಗೂ ನಾನು ಗೌರವ ಸಲ್ಲಿಸುತ್ತೇನೆ. ಹಾಗೂ ಅವರ ಸೇವೆ ಮತ್ತು ತ್ಯಾಗವನ್ನು ಸ್ಮರಿಸುತ್ತೇನೆ” ಎಂದು ಪೋಸ್ಟ್ ಮಾಡಿದ್ದಾರೆ. ಎಕ್ಸ್ ಪೋಸ್ಟ್ ಹಂಚಿಕೊಂಡಿರುವ ಮಲ್ಲಿಕಾರ್ಜುನ ಖರ್ಗೆ,TRIBUTE TO MAHATMA GANDHI “ನಮ್ಮ ರಾಷ್ಟ್ರದ ಮಾರ್ಗದರ್ಶಕ ಬಾಪು ಅವರಿಗೆ ನಮ್ಮ ಆಳವಾದ ಗೌರವವನ್ನು ಸಲ್ಲಿಸುತ್ತೇವೆ. ಅವರ ಸತ್ಯ, ಅಹಿಂಸೆ, ಸರ್ವೋದಯ ಮತ್ತು ಸರ್ವಧರ್ಮ ಸಂಭವದ ವಿಚಾರಗಳು ನಮ್ಮ ಹಾದಿಯನ್ನು ಬೆಳಗಿಸುತ್ತಲೇ ಇರುತ್ತವೆ. ಅವರು ಸಾರಿದ ಸಮಾನತೆ ಮತ್ತು ಉನ್ನತಿಯ ಆದರ್ಶಗಳನ್ನು ನಾಶಮಾಡಲು ಬಯಸುವವರ ವಿರುದ್ಧ ಹೋರಾಡಲು ನಾವು ಬದ್ಧರಾಗಿರಬೇಕು. ವೈವಿಧ್ಯತೆಯಲ್ಲಿ ಭಾರತದ ಏಕತೆಯನ್ನು ರಕ್ಷಿಸೋಣ ಮತ್ತು ಎಲ್ಲರಿಗೂ ನ್ಯಾಯ ಮತ್ತು ಸಮಾನತೆಯನ್ನು ಖಾತರಿಪಡಿಸೋಣ” ಎಂದು ಬರೆದುಕೊಂಡಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಹಾಗೂ ಸಂಸದ ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ನಾಯಕರು ರಾಜ್ಘಾಟ್ನಲ್ಲಿರುವ ಗಾಂಧಿ ಸ್ಮಾರಕಕ್ಕೆ ಗೌರವ ನಮನ ಸಲ್ಲಿಸಿದರು. ಪ್ರತಿ ವರ್ಷ ಜನವರಿ 30ರಂದು ಮಹಾತ್ಮ ಗಾಂಧೀಜಿಯವರ ಪುಣ್ಯತಿಥಿ ಹಾಗೂ ದೇಶದ ಸ್ವಾತಂತ್ರ್ಯಕ್ಕಾಗಿ ಅವರು ನೀಡಿದ ಕೊಡುಗೆಯನ್ನು ಗೌರವಿಸಲು ಹುತಾತ್ಮರ ದಿನಾಚರಿಸಲಾಗುತ್ತದೆ.
ಗಾಂಧೀಜಿ ಸತ್ಯ ಮತ್ತು ಅಹಿಂಸೆಯಲ್ಲಿ ಬಲವಾದ ನಂಬಿಕೆ ಇಟ್ಟವರು. ಅವರ ಅಹಿಂಸಾತ್ಮಕ ಪ್ರತಿಭಟನೆಗಳು ಹಾಗೂ ಉಪವಾಸ ಸತ್ಯಾಗ್ರಹಗಳು ಬ್ರಿಟಿಷ್ ಆಳ್ವಿಕೆಯ ವಿರುದ್ಧ ಮುಖ್ಯ ಸಾಧನಗಳಾಗಿದ್ದವು. ಭಾರತದ ಸ್ವಾತಂತ್ರ್ಯ ಚಳವಳಿಯ ಮುಖ್ಯ ರೂವಾರಿಯಾಗಿದ್ದ ಗಾಂಧೀಜಿ ಅವರನ್ನು 1948, ಜನವರಿ 30ರಂದು ಮಹಾರಾಷ್ಟ್ರದ ಹಿಂದುತ್ವವಾದಿ ನಾಥುರಾಮ್ ಗೋಡ್ಸೆ ಹತ್ಯೆಗೈದರು.
ಕಾಂಗ್ರೆಸ್ ನಾಯಕ ರಾಹುಲ್ ಅವರು ತಮ್ಮ ಎಕ್ಸ್ ಖಾತೆಯಲ್ಲಿ, ವಿಡಿಯೋವೊಂದನ್ನು ಹಂಚಿಕೊಂಡು “ಗಾಂಧಿ ಕೇವಲ ಒಬ್ಬ ವ್ಯಕ್ತಿಯಲ್ಲ. ಅವರು ಭಾರತದ ಆತ್ಮ. ಅವರು ಪ್ರತಿಯೊಬ್ಬ ಭಾರತೀಯನಲ್ಲೂ ಇನ್ನೂ ಜೀವಂತವಾಗಿದ್ದಾರೆ. ಸತ್ಯ, ಅಹಿಂಸೆ ಮತ್ತು ನಿರ್ಭಯತೆಯ ಶಕ್ತಿಯಿಂದ ಮಹಾನ್ ಸಾಮ್ರಾಜ್ಯಗಳ ಬೇರುಗಳನ್ನೂ ಸಹ ಅಲುಗಾಡಿಸಬಹುದು. ಇಡೀ ಜಗತ್ತಿಗೆ ಈ ಆದರ್ಶವನ್ನು ಸಾರಿದ ನಮ್ಮ ಬಾಪು, ಮಹಾತ್ಮರಿಗೆ ಅವರ ಪುಣ್ಯಸ್ಮರಣೆಯ ದಿನದಂದು ನಮನಗಳು” ಎಂದು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಹುತಾತ್ಮರ ದಿನದ ಈ ಸಂದರ್ಭದಲ್ಲಿ ನ್ಯಾಷನಲ್ ಆರ್ಕೈವ್ ಆಫ್ ಇಂಡಿಯಾ (ಎನ್ಐಎ) ಮತ್ತು ರಾಷ್ಟ್ರೀಯ ಗಾಂಧಿ ವಸ್ತುಸಂಗ್ರಹಾಲಯ (ಎನ್ಜಿಎಂ) ಮತ್ತು ನ್ಯಾಷನಲ್ ಫಿಲ್ಮ್ ಆರ್ಕೈವ್ ಆಫ್ ಇಂಡಿಯಾ ಮತ್ತು ಪ್ರಸಾರ ಭಾರತಿ ಆರ್ಕೈವ್ ಸಹಯೋಗದಲ್ಲಿ “Journey of the Mahatma: Through His Own Documents” ಹೆಸರಿನ ವಿಶೇಷ ಪ್ರದರ್ಶನವನ್ನು ಆಯೋಜಿಸಿದೆ.
ಗಾಂಧೀಜಿಯ ಮೊಮ್ಮಗಳು ಹಾಗೂ ರಾಷ್ಟ್ರೀಯ ಗಾಂಧಿ ವಸ್ತುಸಂಗ್ರಹಾಲಯ ಅಧ್ಯಕ್ಷೆಯಾಗಿರುವ ತಾರಾ ಗಾಂಧಿ ಭಟ್ಟಾಚಾರ್ಯ ಅವರು ಇಂದು ಮಧ್ಯಾಹ್ನ 3 ಗಂಟೆಗೆ ರಾಜ್ಘಾಟ್ನಲ್ಲಿರುವ ರಾಷ್ಟ್ರೀಯ ಗಾಂಧಿ ವಸ್ತುಸಂಗ್ರಹಾಲಯದ ಪ್ರದರ್ಶನ ಸಭಾಂಗಣದಲ್ಲಿ ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
ಇದನ್ನು ಓದಿರಿ : SATELLITE TOWNSHIP : ಬಿಡದಿ, ಹಾರೋಹಳ್ಳಿಯಲ್ಲಿ ಟೌನ್ಶಿಪ್ ನಿರ್ಮಾಣಕ್ಕೆ ಗ್ರೇಟರ್