Washington News:
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ TRUMP ಅಧಿಕಾರ ಸ್ವೀಕರಿಸಲಿದ್ದಾರೆ. ಪದಗ್ರಹಣ ಸಮಾರಂಭಕ್ಕೆ ಎಲ್ಲ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ.ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಅಮೆರಿಕಕ್ಕೆ ಹೊಸ ಅಧ್ಯಕ್ಷ ಆಗಮನವಾಗುತ್ತದೆ. ಈ ಬಾರಿ ಡೊನಾಲ್ಡ್ TRUMP ಅಮೆರಿಕ ಅಧಕ್ಷರಾಗಿ 2ನೇ ಬಾರಿಗೆ ಅಮೆರಿಕ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಲಿ್ದಾರೆ. ಇದಕ್ಕಾಗಿ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿವೆ. TRUMP 47 ನೇ ಅಧ್ಯಕ್ಷರಾಗಿ ಅಧಿಕಾರದ ಗದ್ದುಗೆ ಏರಲಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಕ್ಯಾಪಿಟಲ್‌ನ ರಮಣೀಯ ವೆಸ್ಟ್ ಲಾನ್‌ನಲ್ಲಿ ಹಾಕಿರುವ ವೇದಿಕೆಯಲ್ಲಿ ಹೊಸ ಅಧ್ಯಕ್ಷರು ಪ್ರಮಾಣ ವಚನ ಸ್ವೀಕರಿಸುತ್ತಾ ಬಂದಿದ್ದಾರೆ. ಆದರೆ ಈ ಬಾರಿಯ ಪ್ರಮಾಣವಚನ ಸ್ವೀಕಾರ ಸಮಾರಂಭ ಫ್ರಿಜಿಡ್ ಮುನ್ಸೂಚನೆಯ ಕಾರಣದಿಂದಾಗಿ ಕ್ಯಾಪಿಟಲ್ ರೋಟುಂಡಾದಲ್ಲಿ ನಡೆಯುತ್ತದೆ.ಅಮೆರಿಕದ ಚುನಾವಣೆಯಲ್ಲಿ ಆಯ್ಕೆ ಆಗುವ ಅಧ್ಯಕ್ಷರು, ಜನವರಿ 20 ರಂದು ಅಧಿಕೃತವಾಗಿ ಪ್ರಮಾಣ ಸ್ವೀರಿಸುವ ಮೂಲಕ ತಮ್ಮ ಅಧಿಕಾರವಧಿಯನ್ನು ಶುರು ಮಾಡಲಿದ್ದಾರೆ.
ಜನವರಿ 20 ರಂದು (ಅಂದರೆ ಭಾನುವಾರದಂದು ಈ ದಿನ ಬಂದರೆ ಬಂದರೆ ಮರುದಿನ) ಮಧ್ಯಾಹ್ನ ನೂತನ ಅಧ್ಯಕ್ಷರು ಪ್ರಮಾಣ ವಚನ ಸ್ವೀಕರಿಸಬೇಕು ಎಂದು ಅಮೆರಿಕದ ಸಂವಿಧಾನದಲ್ಲಿ ಹೇಳಲಾಗಿದೆ.ಪ್ರಮಾಣ ಸ್ವೀಕಾರದ ಬಳಿಕ ಹೊಸ ಅಧ್ಯಕ್ಷರು ಉದ್ಘಾಟನಾ ಭಾಷಣವನ್ನು ಮಾಡುತ್ತಾರೆ. ಮುಂದಿನ ನಾಲ್ಕು ವರ್ಷಗಳ ಯೋಜನೆಗಳನ್ನು ಅಮೆರಿಕನ್ನರ ಮುಂದೆ ಇಡಲಿದ್ದಾರೆ. TRUMP ತಮ್ಮ ಮೊದಲ ಅವಧಿಯಲ್ಲಿ ಅಂದರೆ 2017 ರಲ್ಲಿ “ಅಮೆರಿಕನ್ ಕಾರ್ನೇಜ್” ಪ್ರಚೋದಿಸುವ ಪ್ರಖರ ಭಾಷಣ ಮಾಡಿದ್ದರು.
ಅಮೆರಿಕ ಉಪಾಧ್ಯಕರಾಗಿ( ವೈಸ್ ಪ್ರೆಸಿಡೆಂಟ್) ಆಗಿ ಜೆಡಿ ವ್ಯಾನ್ಸ್ ಕೂಡ ನಾಳೆಯೇ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳು ಪ್ರಮಾಣವಚನ ಸಮಾರಂಭ ನಡೆಸಿ ಕೊಡಲಿದ್ದಾರೆ. ಸೋಮವಾರ ಜಾನ್ ರಾಬರ್ಟ್ಸ್ ಅವರು TRUMP ಅವರಿಗೆ ಪ್ರಮಾಣವಚನ ಬೋಧಿಸಲಿದ್ದಾರೆ. 2ನೇ ಬಾರಿಗೆ ಅಮೆರಿಕ ಅಧ್ಯಕ್ಷರಾಗಿ TRUMP ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ಸ್ವೀಕರಿಸಲಿದ್ದಾರೆ.
Who will be attending tomorrow’s event?; ರಿಪಬ್ಲಿಕನ್ ಪಕ್ಷದ ಟೆಕ್ ಟೈಟಾನ್‌ಗಳನ್ನು ಉದ್ಘಾಟನಾ ಸಮಾರಂಭಕ್ಕೆ ಹಾಜರಾಗಲು ಆಹ್ವಾನ ನೀಡಲಾಗಿದೆ. ಬಿಲಿಯನೇರ್‌ಗಳಾದ ಎಲೋನ್ ಮಸ್ಕ್, ಜೆಫ್ ಬೆಜೋಸ್ ಮತ್ತು ಮಾರ್ಕ್ ಜುಕರ್‌ಬರ್ಗ್ ಹಾಗೂ ಚೀನಾದ ಸಾಮಾಜಿಕ ಮಾಧ್ಯಮ ದೈತ್ಯ ಟಿಕ್‌ಟಾಕ್‌ನ ಮುಖ್ಯಸ್ಥ ಶೌ ಚೆವ್ ಕೂಡಾ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದು ಅಮೆರಿಕ ಮಾಧ್ಯಮಗಳು ವರದಿ ಮಾಡಿವೆ.
Biden Attends Trump Event: 2020 ರಲ್ಲಿ TRUMP ಅವರನ್ನು ಸೋಲಿಸಿ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ಬೈಡನ್ ಅವರ ಸಮಾರಂಭದಲ್ಲಿ ಭಾಗವಹಿಸಲು TRUMP ನಿರಾಕರಿಸಿದ್ದರು. ಆದರೆ ನಿರ್ಗಮಿತ ಅಧ್ಯಕ್ಷ ಜೋ ಬೈಡನ್ TRUMP ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
2016ರ ಅಧ್ಯಕ್ಷೀಯ ಚುನಾವಣೆಯಲ್ಲಿ TRUMP ಸೋಲಿಸಿದ ಹಿಲರಿ ಕ್ಲಿಂಟನ್, 2024ರ ನವೆಂಬರ್ ಚುನಾವಣೆಯಲ್ಲಿ ಪರಾಭವಗೊಂಡ ನಿರ್ಗಮಿತ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಸಹ ಉದ್ಘಾಟನಾ ಸಮಾರಂಭದಲ್ಲಿ ಕಾಣಿಸಿಕೊಳ್ಳಲಿದ್ದಾರೆ.ಮಾಜಿ ಅಧ್ಯಕ್ಷರುಗಳಾದ ಬಿಲ್ ಕ್ಲಿಂಟನ್, ಜಾರ್ಜ್ ಡಬ್ಲ್ಯೂ ಬುಷ್ ಮತ್ತು ಬರಾಕ್ ಒಬಾಮಾ ಸಹ ಪದಗ್ರಹಣ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ.
ಬಲಪಂಥೀಯ ವಿಚಾರಧಾರೆ ಹೊಂದಿರುವ ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ TRUMP ಪ್ರಮಾಣ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಅವರ ಕಚೇರಿ ಶನಿವಾರ ದೃಢಪಡಿಸಿದೆ. ಹಂಗೇರಿಯ ವಿಕ್ಟರ್ ಓರ್ಬನ್, ಅರ್ಜೆಂಟೀನಾದ ಅಧ್ಯಕ್ಷ ಜೇವಿಯರ್ ಮಿಲೀ ಮತ್ತು ಚೀನಾದ ಕ್ಸಿ ಜಿನ್‌ಪಿಂಗ್ ಅವರನ್ನು ಸಹ ಆಹ್ವಾನಿಸಲಾಗಿದೆ.
ಆದರೆ ಎಲ್ಲರೂ ಭಾಗವಹಿಸುವುದಿಲ್ಲ.ವಿದೇಶಗಳ ಮುಖ್ಯಸ್ಥರನ್ನು ಸಾಂಪ್ರದಾಯಿಕವಾಗಿ ಪದಗ್ರಹಣ ಸಮಾರಂಭಕ್ಕೆ ಆಹ್ವಾನಿಸಲಾಗುವುದಿಲ್ಲ. ಆದರೆ ಟ್ರಂಪ್ ಅವರು ಬಲಪಂಥೀಯ ಒಲವು ಹೊಂದಿರುವ ಕೆಲವರು ಸೇರಿದಂತೆ ಬೆರಳೆಣಿಕೆಯ ವಿದೇಶಿ ನಾಯಕರಿಗೆ ಆಹ್ವಾನಗಳನ್ನು ಕಳುಹಿಸಿದ್ದಾರೆ.
Shift to indoor instead of open ceremony: ಈ ಬಗ್ಗೆ ಮಾತನಾಡಿರುವ TRUMP, ಅತಿಯಾದ ತಾಪಮಾನ ಇಳಿಕೆಯಿಂದಾಗಿ ಈ ಬದಲಾವಣೆ ಮಾಡಲಾಗಿದೆ ಎಂದು ತಿಳಿಸಿರುವ ಡೊನಾಲ್ಡ್ TRUMP, ಬೆಂಬಲಿಗರು ವಾಷಿಂಗ್ಟನ್‌ನ ಕ್ಯಾಪಿಟಲ್ ಒನ್ ಸ್ಪೋರ್ಟ್ಸ್ ಅರೇನಾದಿಂದ ಲೈವ್ ಫೀಡ್ ವೀಕ್ಷಿಸಬಹುದು ಎಂದು ಮನವಿ ಮಾಡಿದ್ದಾರೆ.
ಬಾರೀ ಶೀತಗಾಳಿಯ ಹಿನ್ನೆಲೆಯಲ್ಲಿ ಪ್ರಮಾಣವಚನ ಸಮಾರಂಭ ಕ್ಯಾಪಿಟಲ್ ರೊಟುಂಡಾಕ್ಕೆ ಬದಲಾಯಿಸಲಾಗಿದೆ. ಇಲ್ಲಿ ಕೇವಲ 600 ಜನರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಶುಕ್ರವಾರ ಈ ನಿರ್ಧಾರ ಕೈಗೊಳ್ಳುವ ಮುನ್ನ 22ಸಾವಿರ ಟಿಕೆಟ್ ಗಳನ್ನು ಸಾರ್ವಜನಿಕರಿಗೆ ಹಂಚಿಕೆ ಮಾಡಲಾಗಿತ್ತು.
Possibility of issuing several important orders: ಸಾಮೂಹಿಕ ಗಡೀಪಾರು ಯೋಜನೆ ಪ್ರಾರಂಭಿಸುವುದಾಗಿ ಘೋಷಿಸಿದ್ದಾರೆ. ಪ್ರಮಾಣವಚನ ಸಮಾರಂಭದ ಬಳಿಕ ಅಮೆರಿಕದ ಅಧಿಕಾರಿಗಳು ಮತ್ತು ಜಪಾನ್, ಭಾರತ ಮತ್ತು ಆಸ್ಟ್ರೇಲಿಯಾದ ವಿದೇಶಾಂಗ ಮಂತ್ರಿಗಳ ನಡುವೆ ಮಹತ್ವದ ಸಭೆ ಆಯೋಜಿಸಲಾಗಿದೆ.
ಬೈಡನ್ ಆಡಳಿತದ ಹಲವು ನೀತಿಗಳನ್ನು ರದ್ದುಗೊಳಿಸುವ ಗುರಿಯನ್ನು ಹೊಂದಿರುವ TRUMP, ತಮ್ಮ ಮೊದಲ ದಿನ ಅನೇಕ ಕಾರ್ಯನಿರ್ವಾಹಕ ಆದೇಶಗಳಿಗೆ ಸಹಿ ಹಾಕಲು ತಯಾರಿ ನಡೆಸುತ್ತಿದ್ದೇನೆ ಎಂದು ಹೇಳಿದ್ದಾರೆ.
ಇದನ್ನು ಓದಿರಿ : TRUMP FIRST DAY SIGNATURES PLAN : 100 ಕಾರ್ಯಾದೇಶಗಳಿಗೆ ಸಹಿ ಹಾಕಲು ಪ್ಲಾನ್