WhatsApp Group
Join Now
Telegram Group
Join Now
Instagram Account
Follow Now
Facebook Page
Follow Now
New York, America News:
ಪ್ಯಾರಿಸ್ ಬಳಿಕ ಅಮೆರಿಕಕ್ಕೆ ತೆರಳುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ವಾಷಿಂಗ್ಟನ್ ಭೇಟಿಗೆ ಮುನ್ನ ಲಿಸಾ ಕರ್ಟಿಸ್ ಈ ಹೇಳಿಕೆ ನೀಡಿದ್ದಾರೆ. ಲೀಸಾ, TRUMP ಮೊದಲ ಅವಧಿ ಆಡಳಿತದಲ್ಲಿ 2017 ರಿಂದ 2021ರವರೆಗೆ ರಾಷ್ಟ್ರೀಯ ಭದ್ರತಾ ಮಂಡಳಿಯ ದಕ್ಷಿಣ ಮತ್ತು ಕೇಂದ್ರ ಏಷ್ಯಾದ ಹಿರಿಯ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದರು.
ಡೋನಾಲ್ಡ್ TRUMP ಆಡಳಿತದಲ್ಲಿ ಭಾರತ ಸಂಬಂಧಕ್ಕೆ ಆದ್ಯತೆ ನೀಡಲಾಗುತ್ತಿದೆ. ಇಂಡೋ ಫೆಸಿಫಿಕ್ ಪ್ರದೇಶದಲ್ಲಿ ಭಾರತ ಸಾಮರ್ಥ್ಯದಾಯಕ ಪರಿವರ್ತನೆ ಹೊಂದುತ್ತಿದ್ದು, ಚೀನಾದ ವಿರುದ್ಧ ಪರಿಣಾಮಕಾರಿ ಸ್ಪರ್ಧೆ ನೀಡುವಲ್ಲಿ ಪ್ರಮುಖ ಭಾಗಿದಾರ ದೇಶವಾಗಿದೆ ಎಂದು ಶ್ವೇತಭವನದ ಮಾಜಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
India’s Hegemony in the Indo-Pacific:ಜಾಗತಿಕ ಶಕ್ತಿಯಾಗಿ ಹೊರಹೊಮ್ಮುವಲ್ಲಿ ಭಾರತವೂ ಪ್ರಮುಖವಾಗಿದೆ ಎಂದು ಗುರುತಿಸಲಾಗಿದೆ. ಅಲ್ಲದೇ ಜಗತ್ತು ಮತ್ತು ಇಂಡೋ ಫೆಸಿಫಿಕ್ ಪ್ರದೇಶದಲ್ಲಿ ಇದು ಸಾಮರ್ಥ್ಯದಾಯಕ ಪರಿವರ್ತನೆ ಹೊಂದಿದೆ ಎಂದಿದ್ದಾರೆ. ಮೋದಿ ಆಗಮನದ ಮುನ್ನಾ ದಿನ ಸಂಜೆ ವಾಷಿಂಗ್ಟನ್ ಡಿಸಿ ಮೂಲದ ಥಿಂಕ್ ಟಾಂಕ್ನ ಹೊಸ ಅಮೆರಿಕ ಭದ್ರತಾ ಕೇಂದ್ರ (ಸಿಎನ್ಎಎಸ್) ಆನ್ಲೈನ್ ಭಾಷಣದಲ್ಲಿ ಕರ್ಟಿಸ್ ಮಾತನಾಡಿದ್ದು, ಭಾರತದೊಂದಿಗಿನ ಸಂಬಂಧವನ್ನು TRUMP ಆಡಳಿತ ಸ್ಪಷ್ಟ ಆದ್ಯತೆಯನ್ನಾಗಿಸಿಕೊಂಡಿದೆ ಎಂದು ಅವರು ಹೇಳಿದ್ದಾರೆ.
ಅಮೆರಿಕದ 47ನೇ ಅಧ್ಯಕ್ಷರಾಗಿ ಅಮೆರಿಕದ ನಾಯಕ ಅಧಿಕಾರ ಸ್ವೀಕರಿಸಿದ ಕೆಲವೇ ವಾರಗಳಲ್ಲಿ TRUMP ಅವರನ್ನು ಭೇಟಿ ಮಾಡಿದ ನಾಲ್ಕನೇ ವಿದೇಶಿ ನಾಯಕ ಮೋದಿ ಅವರಾಗಲಿದ್ದಾರೆ.TRUMP ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಜಪಾನ್ ಪ್ರಧಾನಿ ಶಿಗೆರು ಇಶಿಬ ಮತ್ತು ಜೋರ್ಡನ್ ರಾಜ ಅಬ್ದುಲ್ಲಾ 2 ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
Important Talks in Thursday’s Meeting:TRUMP ಆಡಳಿತದಲ್ಲಿ ಜಪಾನ್, ಇಂಡಿಯಾ, ಆಸ್ಟ್ರೇಲಿಯಾ ಹಾಗೂ ಅಮೆರಿಕಗಳನ್ನೊಳಗೊಂಡ ಕ್ವಾಡ್ ಸಂಘಟನೆ ಪ್ರಮುಖವಾಗಿದೆ. TRUMP ಅಧಿಕಾರಕ್ಕೆ ಬಂದ ದಿನವೇ ಕ್ವಾಡ್ನ ವಿದೇಶಾಂಗ ಸಚಿವರ ಸಭೆ ಕರೆದಿದ್ದನ್ನು ಈಗಾಗಲೇ ನಾವು ನೋಡಿದ್ದೇವೆ.
ಇದರಲ್ಲಿ TRUMP ಆಡಳಿತವು ಭಾರತ ಮತ್ತು ಕ್ವಾಡ್ ಪಾತ್ರದ ಪ್ರಾಮುಖ್ಯತೆಯನ್ನು ತೋರಿಸುತ್ತದೆ ಎಂದು ಕರ್ಟಿಸ್ ವಿವರಿಸಿದ್ದಾರೆ.TRUMP ಹೊಸ ಆಡಳಿತ, ಅಮೆರಿಕದಲ್ಲಿ ತೆಗೆದುಕೊಳ್ಳುತ್ತಿರುವ ನಿರ್ಧಾರಗಳ ಬಗ್ಗೆ ಭಾರತವೂ ಅತ್ಯಂತ ಸೂಕ್ಷ್ಮವಾಗಿ ಗಮನಿಸುತ್ತಿದೆ. ಈ ಬಗ್ಗೆ ಗ್ರೌಂಡ್ವರ್ಕ್ ಮಾಡಿರುವ ಭಾರತ ಸರ್ಕಾರ ಈ ಸಂಬಂಧ ಸಕಾರಾತ್ಮಕ ಹೆಜ್ಜೆ ಇಟ್ಟಿದ್ದು, ಸಂಬಂಧ ಸುಧಾರಣೆಗೆ ಮತ್ತಷ್ಟು ಆದ್ಯತೆ ನೀಡುವ ಬಗ್ಗೆ ಗುರುವಾರ ಸಭೆ ನಡೆಯಲಿದೆ ಎಂದು ಇದೇ ವೇಳೆ ಕರ್ಟಿಸ್ ಹೇಳಿದ್ದಾರೆ.
ಜನವರಿ 21ರಂದು TRUMP ಅಧಿಕಾರ ಸ್ವೀಕಾರ ದಿನ ವಿದೇಶಾಂಗ ಸಚಿವ ಎಸ್ ಜೈಶಂಕರ್, ಅಮೆರಿಕ ರಾಜ್ಯ ಕಾರ್ಯದರ್ಶಿ ಮ್ಯಾಕ್ರೊ ರುಬಿಯೊ ದ್ವಿಪಕ್ಷೀಯ ಸಭೆ ಕೂಡಾ ನಡೆಸಿದ್ದರು. ಈ ವೇಳೆ ರುಬಿಯೊ ಆಸ್ಟ್ರೇಲಿಯಾದ ವಿದೇಶಾಂಗ ಸಚಿವ ಪೆನ್ನಿ ವಾಂಗ್ ಮತ್ತು ಜಪಾನ್ ವಿದೇಶಾಂಗ ಸಚಿವ ಇವಾಯಾ ತಕೇಶಿ ಅವರನ್ನು ಕ್ವಾಡ್ ಗುಂಪಿನ ಇತರ ವಿದೇಶಾಂಗ ಮಂತ್ರಿಗಳನ್ನು ಭೇಟಿ ಮಾಡಿ ಮಹತ್ವದ ಮಾತುಕತೆ ನಡೆಸಿದ್ದರು.
ಇದನ್ನು ಓದಿರಿ :’This Is Right Time To Come To India’: PM Modi Invites French Businesses To Invest