TULASI GABBARD :
TULASI GABBARD, ಈಗ ಅಮೆರಿಕಾದ ರಾಷ್ಟ್ರೀಯ ಗುಪ್ತಚರ ದಳ ನಿರ್ದೇಶನದ ನೂತನ ಮುಖ್ಯಸ್ಥೆಯಾಗಿ ಆಯ್ಕೆಯಾಗಿದ್ದಾರೆ. ಭಾರತದೊಂದಿಗೆ ಅವರಿಗಿರುವ ನಂಟಿನ ಬಗ್ಗೆಯೂ ಕೂಡ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ.
ಅವರ ಹಿಂದೂ ಹೆಸರು ಈಗ ಜಾಗತಿಕವಾಗಿ ಹೆಡ್ಲೈನ್ ಆಗಿ ಮೂಡಿ ಬರುತ್ತಿದೆ. ಅದರಲ್ಲೂ ಅವರು ಭಗವದ್ಗೀತೆಯ ಮೇಲೆ ಪ್ರಮಾಣ ವಚನ ಸ್ವೀಕಾರ ಮಾಡಿದ್ದನ್ನು ಇಡೀ ಜಗತ್ತು ನಿಬ್ಬೆರಗಾಗಿ ನೋಡಿತ್ತು. ಅದು ಅಲ್ಲದೇ ಅವರು ಯುಎಸ್ ಹೌಸ್ನ ಪ್ರತಿನಿಧಿಯಾಗಿ ಆಯ್ಕೆಯಾಗಿರುವ ಮೊದಲ ಹಿಂದೂ ಅಮೆರಿಕನ್ ಅವರು ಎನ್ನಲಾಗುತ್ತಿದೆ.
Is Tulsi Gabbard Indian?
TULASI GABBARD ಹುಟ್ಟಿದ್ದು ಅಮೆರಿಕನ್ ಸಾಮೊನ್ ಕುಟುಂಬದಲ್ಲಿ, ತುಳಸಿಯವರಿಗೂ ಭಾರತಕ್ಕೂ ನೇರ ಸಂಬಂಧವಿಲ್ಲ. ಅವರು ಬೆಳೆದಿದ್ದು ಹವಾಯಿಯಲ್ಲಿ. 43 ವರ್ಷದ ಇವರು ಭಾರತೀಯ ಸಂಸ್ಕೃತಿ ಮತ್ತು ಅದರ ಭಾವದೊಂದಿಗೆ ಹಾಗೂ ಭಗವದ್ಗೀತೆಯಲ್ಲಿ ಅಪಾರ ನಂಬಿಕೆಯುಳ್ಳವರು. ಅದರಲ್ಲೂ ಭಗವದ್ಗೀತೆಯ ಕರ್ಮಯೋಗ ಹಾಗೂ ಭಕ್ತಿಯೋಗದಿಂದ ತುಂಬಾ ಪ್ರಭಾವಿತರಾದವರು.
ತಮ್ಮ ಹದಿಹರೆಯದ ವಯಸ್ಸಿನಿಂದಲೂ TULASI GABBARD ಹಿಂದೂ ತತ್ವಗಳನ್ನು ತಮ್ಮ ಬದುಕಿನಲ್ಲಿ ಹಾಗೂ ವೃತ್ತಿ ಬದುಕಿನಲ್ಲಿ ಅಳವಡಿಸಿಕೊಂಡವರು. ಅನೇಕ ಬಾರಿ ಅವರ ಭಗವದ್ಗೀತೆ ನನ್ನ ಬದುಕಿನ ಮೌಲ್ಯಗಳನ್ನ ಹಾಗೂ ಬದುಕಿನ ಕ್ರಮಗಳನ್ನು ಬದಲಾಯಿಸಿದ ಪುಸ್ತಕ ಎಂದು ಹೇಳಿಕೊಂಡಿದ್ದಾರೆ. 2016ರಲ್ಲಿ ವಾಷಿಂಗ್ಟನ್ನಲ್ಲಿ ನಡೆದ ಇಸ್ಕಾನ್ನ 50ನೇ ವಾರ್ಷೀಕೋತ್ಸವದಲ್ಲಿ ಪ್ರಮುಖ ಅತಿಥಿಯಾಗಿ ಹಾಗೂ ಭಾಷಣಗಾರ್ತಿಯಾಗಿ ಕಾಣಿಸಿಕೊಂಡಿದ್ದರು ತುಳಸಿ.
ತುಳಸಿ ಗಬ್ಬಾರ್ಡ್ ಬುಧವಾರದಂದು ಡಿಎನ್ಐ ಮುಖ್ಯಸ್ಥೆಯಾಗಿ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಅವರು ಈಗ ಸಿಐಎ ಮತ್ತು ಎನ್ಎಸ್ಎ ಸೇರಿ ಒಟ್ಟು ಅಮೆರಿಕಾದ 18 ಗುಪ್ತಚರ ಇಲಾಖೆಗಳ ಜೊತೆ ಕಾರ್ಯನಿರ್ವಹಿಸಬೇಕಿದೆ.ಅವರ ಪ್ರಮುಖ ಜವಾಬ್ದಾರಿಯೆಂದರೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಗುಪ್ತಚರ ಸಲಹೆಗಾರರಾಗಿ ಕಾರ್ಯನಿರ್ವಹಿಸುವುದು ಮತ್ತು ಯುಎಸ್ನ ರಾಷ್ಟ್ರೀಯ ಭದ್ರತಾ ನೀತಿಗಳಿಗೆ ಹೊಸ ರೂಪುರೇಷೆಗಳನ್ನು ನೀಡುವುದು .
ನನಗೆ ಸಾರ್ವಜನಿಕ ಸೇವೆಯನ್ನು ಮಾಡಲು ವಿಪರೀತ ಪ್ರೇರಣೆ ನೀಡಿದ್ದೇ ಭಗದ್ಗೀತೆಯಿಂದ ಕಲಿತ ನಿಸ್ವಾರ್ಥ ಸೇವೆಯ ಪಾಠದಿಂದಾಗಿ ಎಂದು ಅವರು ಇಂದಿಗೂ ಕೂಡ ಹೇಳುತ್ತಾರೆ. ಅವರ ಕುಟುಂಬವೂ ಕೂಡ ವೈಷ್ಣವ ಸಂಪ್ರದಾಯದೊಂದಿಗೆ ತುಂಬಾ ಆಳವಾಗಿ ಅಂಟಿಕೊಂಡಿದೆ.
ತುಳಸಿ ಅವರ ತಾಯಿ ಕಾರೊಲ್ ಪಾರ್ಟರ್ ಗಬ್ಬಾರ್ಡ್ ಅವರು ಕೂಡ ಹಿಂದೂ ಸಂಸ್ಕೃತಿಯನ್ನು ಪಾಲಿಸುತ್ತಾರೆ.TULASI GABBARDಯವರಿಗೆ ಇಬ್ಬರು ಒಡಹುಟ್ಟಿದವರು ಇದ್ದಾರೆ ಸಹೋದರಿ ವೃಂದಾವನ ಮತ್ತು ಸಹೋದರರಾದ ಜಯ, ಭಕ್ತಿ ಮತ್ತು ಆರ್ಯನ್
ಇದನ್ನು ಓದಿರಿ : Maha Kumbh 2025: Jharkhand Govt Gears Up To Tackle Overcrowding At Railway Stations