spot_img
spot_img

Tungabhadra Dam News -ಕರ್ನಾಟಕ, ಆಂಧ್ರ,ತೆಲಂಗಾಣ ರೈತರ ಜೀವನಾಡಿ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

Vijayanagar (Hosapete) :

ಸೆಪ್ಟೆಂಬರ್‌ ಮತ್ತು ಅಕ್ಟೋಬರ್‌ ತಿಂಗಳಲ್ಲಿ ತುಂಗಭದ್ರಾ ಜಲಾನಯನ ಪ್ರದೇಶ, ಮಲೆನಾಡು ಪ್ರದೇಶದಲ್ಲಿ ಉತ್ತಮ rain ಸುರಿದ ಪರಿಣಾಮ ಮತ್ತೊಮ್ಮೆ dam ಸಂಪೂರ್ಣ ಭರ್ತಿಯಾಗಿತ್ತು.ಗೇಟ್ ದುರಂತವನ್ನೂ ಮೀರಿ, ತುಂಗಭದ್ರಾ ಜಲಾಶಯದಲ್ಲಿ ಮತ್ತೆ ನೀರು ತುಂಬಿದೆ. ಎರಡನೇ ಬೆಳೆಗೂ ಭರಪೂರ ನೀರು ಸಿಗಲಿದ್ದು, ಮೂರು ರಾಜ್ಯಗಳ ರೈತರ ಮುಖದಲ್ಲಿ ಮಂದಹಾಸ ಮೂಡಿದೆ.

1961, 2022 ರ ಬಳಿಕ ಇದೇ ಮೊದಲ ಬಾರಿಗೆ ಅತಿಹೆಚ್ಚು ನೀರು ಸಂಗ್ರಹವಾಗಿದೆ..ಕಳೆದ ವರ್ಷ ಬರಕ್ಕೆ ನಲುಗಿ ಒಂದೇ ಬೆಳೆಗೆ ಸೀಮಿತರಾಗಿದ್ದ ರೈತರಿಗೆ ಈ ಬಾರಿ ಟಿಬಿ ಡ್ಯಾಂನ Crustgate 19ರ ದುರಂತ ಸಂಭವಿಸಿ 30 ಟಿಎಂಸಿಗೂ ಅಧಿಕ ನೀರು ವ್ಯರ್ಥವಾಗಿ ನದಿಗೆ ಹರಿದುಹೋದರೂ ಮತ್ತೊಮ್ಮೆ ತುಂಬಿದ ಜಲಾಶಯ ಎರಡನೇ ಬೆಳೆಗೂ ಭರಪೂರ ನೀರು ನೀಡಲು ಸಿದ್ಧವಾಗಿ, ರೈತರಿಗೆ ಯಾವುದೇ ತೊಂದರೆ ಉಂಟಾಗದಿರುವುದು ವಿಶೇಷ.

ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳ ರೈತರ ಜೀವನಾಡಿ ತುಂಗಭದ್ರಾ ಜಲಾಶಯಕ್ಕೆ ಪ್ರಸಕ್ತ ಸಾಲಿನಲ್ಲಿ ಈವರೆಗೆ ಒಟ್ಟು 478 ಟಿಎಂಸಿ ನೀರು ಹರಿದು ಬಂದಿದೆ. 2022ರಲ್ಲಿ ಇತಿಹಾಸದಲ್ಲಿಯೇ ಎರಡನೇ ಬಾರಿಗೆ 600 ಟಿಎಂಸಿಗೂ ಹೆಚ್ಚು ನೀರು ಬಂದಿತ್ತು. ಇದೀಗ ಮತ್ತೊಮ್ಮೆ ಈ ಬಾರಿ ಹೆಚ್ಚಿನ ನೀರು ತುಂಗಭದ್ರೆ ಒಡಲು ಸೇರಿರುವುದು ವಿಶೇಷವಾಗಿದೆ.

Dependence on Agriculture:

ಡ್ಯಾಂ ನೀರನ್ನು ನೆಚ್ಚಿಕೊಂಡು ಮೂರು ರಾಜ್ಯಗಳಲ್ಲಿ15 ಲಕ್ಷಕ್ಕೂ ಅಧಿಕ ಹೆಕ್ಟೆರ್‌ ಕೃಷಿಭೂಮಿಯಲ್ಲಿ ಕೃಷಿ ಚಟುವಟಿಕೆಗಳನ್ನು ಮಾಡುತ್ತಿದ್ದಾರೆ. 2022ರಲ್ಲಿ, 1961 ರ ಬಳಿಕ ಎರಡನೇ ಬಾರಿ ಅತಿ ಹೆಚ್ಚಿನ ನೀರು ಹರಿದುಬಂದಿತ್ತು.ವಿಜಯನಗರ, ಬಳ್ಳಾರಿ, ಕೊಪ್ಪಳ, ರಾಯಚೂರು ಜಿಲ್ಲೆಗಳ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯವನ್ನು ನೆಚ್ಚಿಕೊಂಡು ಈ ಭಾಗದ ಅನೇಕ ಗ್ರಾಮಗಳ ರೈತರು ಕೃಷಿ ಅವಲಂಬಿಸಿದ್ದಾರೆ.

ಕಳೆದ ಹತ್ತು ವರ್ಷಗಳ ಅಂಕಿ ಅಂಶಗಳನ್ನು ಗಮನಿಸಿದಾಗ ಈ ವರ್ಷDam ಗೆ ಕನಿಷ್ಠ 170 ಟಿಎಂಸಿ ನೀರು ಹರಿದು ಬರುತ್ತದೆ ಎಂದು ಎಂಜಿನಿಯರರು ಅಂದಾಜಿಸಿದ್ದರು. ಜೂನ್‌ 1ರಿಂದ ಆರಂಭವಾದ ಒಳಹರಿವು 270 ಕ್ಯುಸೆಕ್‌ ನೀರು ಡ್ಯಾಂ ಸೇರಿತ್ತು.

ಆಗ 3.33 ಟಿಎಂಸಿ ನೀರಿನ ಸಂಗ್ರಹವಿತ್ತು. ಜುಲೈ 1ಕ್ಕೆ 7.709 ಟಿಎಂಸಿ ನೀರು ಸಂಗ್ರಹವಾಗಿತ್ತು. ಆಗಸ್ಟ್‌ ಆರಂಭಕ್ಕೆ ಡ್ಯಾಂನಲ್ಲಿ97 ಟಿಎಂಸಿ ನೀರಿನ ಸಂಗ್ರಹದೊಂದಿಗೆ 1.5 ಲಕ್ಷ ಕ್ಯುಸೆಕ್‌ ನೀರಿನ ಒಳಹರಿವು ಇತ್ತು. ಗರಿಷ್ಠ ಮಟ್ಟದ ಸಂಗ್ರಹ ದಾಖಲಾಗಿದ್ದ ಅದೇ ತಿಂಗಳ 10 ರಂದು ಡ್ಯಾಂ ಗೇಟ್‌ ಮುರಿದು ಬಿದ್ದು ದುರಂತ ಸಂಭವಿಸಿತ್ತು. ಈ ಬಾರಿ ಗೇಟ್‌ ದುರಂತವನ್ನೂ ದಾಟಿ ಡ್ಯಾಂ ಎರಡು ಬಾರಿ ಭರ್ತಿಯಾಗಿರುವುದು ವಿಶೇಷವಾಗಿದೆ. ಪ್ರತಿ ವರ್ಷ ಜೂನ್‌ 1ರಿಂದ ತುಂಗಭದ್ರಾ ನೀರಿನ ವರ್ಷ ಆರಂಭವಾಗುತ್ತದೆ.

ಒಂದೇ ವಾರದಲ್ಲಿ ದುರಸ್ತಿ ಮಾಡಿದ ಬಳಿಕ 72 ಟಿಎಂಸಿ ನೀರಿನ ಸಂಗ್ರಹ ಉಳಿದಿತ್ತು. ಸೆಪ್ಟೆಂಬರ್‌ ಮತ್ತು ಅಕ್ಟೋಬರ್‌ ತಿಂಗಳಲ್ಲಿ ತುಂಗಭದ್ರಾ ಜಲಾನಯನ ಪ್ರದೇಶ, ಮಲೆನಾಡು ಪ್ರದೇಶದಲ್ಲಿ ಉತ್ತಮ ಮಳೆ ಸುರಿದ ಪರಿಣಾಮ ಮತ್ತೊಮ್ಮೆ ಡ್ಯಾಂ ಸಂಪೂರ್ಣ ಭರ್ತಿಯಾಗಿತ್ತು.

Water to the river :

ಈ ವರೆಗೆ ಸುಮಾರು 120 ಟಿಎಂಸಿ ನೀರು ಕಾಲುವೆಗಳ ಮೂಲಕ ಮೊದಲ ಬೆಳೆಗೆ ಹರಿಸಲಾಗಿದೆ. 90 ಟಿಎಂಸಿ ನೀರು ಸದ್ಯ ಡ್ಯಾಂನಲ್ಲಿ ಸಂಗ್ರಹಣೆಯಾಗಿದೆ. ಇನ್ನು 2,941 ಕ್ಯುಸೆಕ್‌ ಒಳಹರಿವಿದ್ದು, 6,154 ಕ್ಯುಸೆಕ್‌ ನೀರು ಸದ್ಯ ಕಾಲುವೆಗಳ ಮೂಲಕ ನೀರು ಹರಿಸಲಾಗುತ್ತಿದೆ.105.788 ಸಂಗ್ರಹ ಸಾಮರ್ಥ್ಯದ ಟಿಬಿ ಡ್ಯಾಂಗೆ ಈ ವರ್ಷದಲ್ಲಿಒಟ್ಟು 478.79 ಟಿಎಂಸಿ ನೀರು ಹರಿದು ಬಂದಿದೆ. ಇದರಲ್ಲಿ ಈವರೆಗೆ ಸುಮಾರು 260 ಟಿಎಂಸಿ ಯಷ್ಟು ನೀರು ಕ್ರಸ್ಟ್‌ಗೇಟ್‌ ಮೂಲಕ ನದಿಗೆ ಹರಿಸಲಾಗಿದೆ.

ಡ್ಯಾಂ ಸುತ್ತಲಿನ ಗ್ರಾಮಗಳಲ್ಲೇ ಕುಡಿಯುವ ನೀರಿನ ಸಮಸ್ಯೆ ಇರುವುದು ಶೋಚನೀಯ ಎಂದು ಸಿ.ಎ.ಗಾಳೆಪ್ಪ, ಜಿಲ್ಲಾಧ್ಯಕ್ಷ, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ವಿಜಯನಗರ ಇವರು ಹೇಳಿದ್ದಾರೆ.ತುಂಗಭದ್ರಾ ಜಲಾಶಯಕ್ಕೆ ಅತಿ ಹೆಚ್ಚಿನ ನೀರು ಹರಿದು ಬಂದಿರುವುದು ಖುಷಿಯ ಸಂಗತಿ. ಆದರೆ, ಸರಕಾರ ಆದಷ್ಟು ಬೇಗ ನವಲಿ ಸಮಾನಾಂತರ ಜಲಾಶಯ ನಿರ್ಮಾಣ ಮಾಡುವತ್ತ ಸರಕಾರ ಗಮನಹರಿಸಬೇಕು.

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

SHIVASENA SUPPORT TO BJP : ಬಿಜೆಪಿ ಅಭ್ಯರ್ಥಿಗಳಿಗೆ ಶಿಂಧೆ ಬಣದ ಶಿವಸೇನೆ ಬೆಂಬಲ ಘೋಷಣೆ

New Delhi News: ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಔಪಚಾರಿಕವಾಗಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೂ, ಮಿತ್ರ ಪಕ್ಷ ಬಿಜೆಪಿಗೆ ಬೆಂಬಲ ನೀಡುವುದಾಗಿ SHIVASENA SUPPORT TO BJP...

SIGANDUR BRIDGE : ಅಂತಿಮ ಹಂತದಲ್ಲಿ ಸಿಗಂದೂರು ಸೇತುವೆ ಕಾಮಗಾರಿ, ಕೆಲವೇ ತಿಂಗಳಲ್ಲಿ ಲೋಕಾರ್ಪಣೆShimoga News: ಸಾಗರ ತಾಲೂಕಿನ ಸಿಗಂದೂರು ಸೇತುವೆ ನಿರ್ಮಾಣ ಕಾರ್ಯ ಬಿರುಸಿನಿಂದ ಸಾಗುತ್ತಿದ್ದು, ಇದೇ ವರ್ಷದ ಏಪ್ರಿಲ್ ಅಥವಾ...

Shivamogga News: ಸಾಗರ ತಾಲೂಕಿನ SIGANDUR BRIDGE ನಿರ್ಮಾಣ ಕಾರ್ಯ ಬಿರುಸಿನಿಂದ ಸಾಗುತ್ತಿದ್ದು, ಇದೇ ವರ್ಷದ ಏಪ್ರಿಲ್ ಅಥವಾ ಮೇ ನಲ್ಲಿ ಲೋಕಾರ್ಪಣೆಯಾಗಲಿದೆ. ಹೌದು ನಾಡಿಗೆ...

HOW TO AWARE OF CYBER FRAUD : ಹಾಗಿದ್ರೆ ಮಾತ್ರ ಸೈಬರ್ ವಂಚನೆಯಿಂದ ಬಚಾವ್ ಆಗಲು ಸಾಧ್ಯ

Hyderabad News: ನಿಜವೆಂದು ತೋರುವ ಈ ನಕಲಿ ವೆಬ್​​ಸೈಟ್​ ಪತ್ತೆ ಮಾಡುವುದು ಹೇಗೆ, ಎಚ್ಚರಿಕೆ ಹೇಗೆ ವಹಿಸಬೇಕು, ವಂಚನೆಗೆ ಗುರಿಯಾಗದಂತೆ ಇರುವುದು ಹೇಗೆ ಎಂಬ ಇಲ್ಲಿದೆ...

COFFEE EXPORTS : 1.29 ಶತಕೋಟಿ ಡಾಲರ್ಗೆ ತಲುಪಿದ ಭಾರತದ ಕಾಫಿ ರಫ್ತು

New Delhi News: ಭಾರತದ COFFEE ರಫ್ತು ದ್ವಿಗುಣಗೊಂಡಿದೆ. ಈ ಮೂಲಕ ದೇಶದ ರಫ್ತಿನ ಪ್ರಮಾಣ ಹೆಚ್ಚಿಸಲು ತನ್ನದೇ ಕೊಡುಗೆ ನೀಡಿದೆ.ಉತ್ತಮ ಗುಣಮಟ್ಟ ಮತ್ತು ಅನನ್ಯ...