spot_img
spot_img

ಬಿಗ್​ಬಾಸ್​ ಮನೆಗೆ ಎರಡು ವೈಲ್ಡ್ ಕಾರ್ಡ್ ಎಂಟ್ರಿ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ಕನ್ನಡದ ಬಿಗ್​ಬಾಸ್​ ಸೀಸನ್​ 11 8ನೇ ವಾರಕ್ಕೆ ಕಾಲಿಡುತ್ತಿದೆ. ಇದೇ ಹೊತ್ತಲ್ಲಿ ಬಿಗ್​ಬಾಸ್​ ಮನೆಗೆ ಮತ್ತೆರೆಡು ವೈಲ್ಡ್ ಕಾರ್ಡ್ ಎಂಟ್ರಿ ಆಗಮನವಾಗಿದೆ. ಹೌದು, ಇಷ್ಟು ದಿನ ಬಿಗ್​ಬಾಸ್​ ಮನೆಯಲ್ಲಿದ್ದ ಸ್ಪರ್ಧಿಗಳಿಗೆ ನಡುಕ ಹುಟ್ಟಿಸಲು ಇಬ್ಬರು ಸಖತ್​ ಸ್ಟ್ರಾಂಗ್​ ಕಂಟೆಸ್ಟೆಂಟ್​ಗಳ ಎಂಟ್ರಿಯಾಗಿದೆ.

ಕನ್ನಡದ ಬಿಗ್​ಬಾಸ್​ ಸೀಸನ್​ 11ಕ್ಕೆ ಶೋಭಾ ಶೆಟ್ಟಿ ಅವರು ಎಂಟ್ರಿ ಕೊಟ್ಟಿದ್ದಾರೆ. ಕನ್ನಡ ಕಿರುತೆರೆ ನಟಿ ಶೋಭಾ ಶೆಟ್ಟಿ ಅವರು ಅಗ್ನಿಸಾಕ್ಷಿ ಧಾರಾವಾಹಿ ಮೂಲಕ ವೀಕ್ಷಕರ ಗಮನ ಸೆಳೆದಿದ್ದರು.

ಕನ್ನಡ ಸೀರಿಯಲ್​ನಲ್ಲಿ ಮಿಂಚಿದ್ದ ಶೋಭಾ ಅವರು ತೆಲುಗಿನ ಸೀರಿಯಲ್​ನಲ್ಲಿ ನಟಿಸಿ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ. ಅಲ್ಲದೇ ಬಿಗ್​​ಬಾಸ್ ಸೀಸನ್ 7 ತೆಲುಗಿನಲ್ಲಿ ಸ್ಪರ್ಧಿಯಾಗಿ ಇನ್ನೂ ಹೆಚ್ಚು ಫ್ಯಾನ್ಸ್​ಗಳ ಮನಸ್ಸನ್ನು ಗೆದ್ದುಕೊಂಡಿದ್ದಾರೆ. ಆದರೆ ಈಗ ಕನ್ನಡದ ಬಿಗ್​ಬಾಸ್​ಗೆ ಖಡಕ್​ ಆಗಿ ಎಂಟ್ರಿ ಕೊಟ್ಟಿದ್ದಾರೆ.

ಇನ್ನೂ, 2013ರಲ್ಲಿ ಕನ್ನಡ ಕಿರುತೆರೆಯ ರಿಯಾಲಿಟಿ ಶೋ ಮೂಲಕ ಜನರಿಗೆ ಪರಿಚಯವಾದ ರಜತ್ ಬುಜ್ಜಿ ಅವರು ಬಿಗ್​ಬಾಸ್​ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.

ನಟ ರಜತ್ ಬುಜ್ಜಿ ಅವರು ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದಾರೆ. ಪಕ್ಕಾ ಫ್ಯಾಮಿಲಿ ಮ್ಯಾನ್ ಆಗಿ ಬ್ಯುಸಿನೆಸ್ ನೋಡಿಕೊಳ್ಳುತ್ತಿರುವ ರಜತ್ ಕೆಲವು ದಿನಗಳ ಹಿಂದೆ ದರ್ಶನ್-ರೇಣುಕಾಸ್ವಾಮಿ ಘಟನೆ ಬಗ್ಗೆ ಧ್ವನಿ ಎತ್ತಿದ್ದರು.

ಅದಾದ ಮೇಲೆ ವರುಣ್- ವರ್ಷ ಕಾವೇರಿ ಕಾಂಟ್ರವರ್ಸಿಗೂ ರಿಯಾಕ್ಟ್ ಮಾಡಿದ್ದರು. ಇದೀಗ ಅಚ್ಚರಿಯ ರೀತಿಯಲ್ಲಿ ಬಿಗ್​ಬಾಸ್​ ಮನೆಗೆ ಎಂಟ್ರಿ ಕೊಟ್ಟು ಎಲ್ಲರಿಗೂ ಶಾಕ್​ ನೀಡಿದ್ದಾರೆ.

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

ಕ್ರೋಮ್​ಒಎಸ್​ ಅನ್ನು ಆಂಡ್ರಾಯ್ಡ್​ ಆಗಿ ಬದಲಾವಣೆ : ಗೂಗಲ್​

ಟೆಕ್​ ದೈತ್ಯೆ ಗೂಗಲ್​ ಪ್ರಮುಖ ಬದಲಾವಣೆಯೊಂದನ್ನು ಮಾಡುತ್ತಿದೆ. ಕ್ರೋಮ್​ ಒಎಸ್​ ಅನ್ನು ಆಂಡ್ರಾಯ್ಡ್​ ಆಗಿ ಪರಿವರ್ತಿಸಲು ಕಾರ್ಯ ನಿರ್ವಹಿಸುತ್ತಿದೆ. ವಿಶ್ವದ ಅತಿದೊಡ್ಡ ಟೆಕ್​ ಕಂಪನಿಗಳಲ್ಲಿ ಒಂದಾದ...

ಟೆಕ್ ಸಮ್ಮಿಟ್ 2024 : ‘ಕರ್ನಾಟಕದ ಐಟಿ ರತ್ನ’ ಪ್ರಶಸ್ತಿ

ಬೆಂಗಳೂರು: ಬೆಂಗಳೂರು ತಂತ್ರಜ್ಞಾನ ಸಮಾವೇಶದಲ್ಲಿ ರಾಜ್ಯದ ವಿವಿಧ ಐಟಿ ಕಂಪನಿಗಳಿಗೆ ಭಾರತೀಯ ಸಾಫ್ಟ್​​ವೇರ್​​ ಪಾರ್ಕ್​ಗಳ ಕೂಟ (ಎಸ್.ಟಿ.ಪಿ.ಐ) ನೀಡುವ ಪುರಸ್ಕಾರ ನೀಡಲಾಯಿತು. ಅತ್ಯುತ್ತಮ ಸಾಧನೆ ಮಾಡಿರುವ...

ಗ್ರಾಮೀಣ ಪ್ರದೇಶದಲ್ಲಿ ಟೆಲಿಮೆಡಿಸಿನ್, ಟೆಲಿ – ಐಸಿಯುಗಳತ್ತ ಚಿತ್ತ

ಬೆಂಗಳೂರು: ಗ್ರಾಮೀಣ ಪ್ರದೇಶಗಳಲ್ಲಿ ಎಐ, ಟೆಲಿಮೆಡಿಸಿನ್ ಮತ್ತು ಟೆಲಿ - ಐಸಿಯುಗಳ ಸಮರ್ಪಕ ಬಳಕೆಯೊಂದಿಗೆ ಅತ್ಯಾಧುನಿಕ ಆರೋಗ್ಯ ಸೇವೆ ನೀಡಲು ನಮ್ಮ ಸರ್ಕಾರ ಶ್ರಮಿಸುತ್ತಿದೆ...

ರೋಗಿಗಳಿಗೆ ಸರ್ಕಾರದಿಂದಲೇ ತಜ್ಞ ವೈದ್ಯರಿಂದ ‘ಉಚಿತ ಸೆಕೆಂಡ್ ಒಪಿನಿಯನ್’

ಬೆಂಗಳೂರು: ರಾಜ್ಯದಲ್ಲಿ ಸರ್ಜರಿಗಳ ಕುರಿತು ಆತಂಕದಲ್ಲಿರುವವರಿಗೆ ನೆರವಾಗಲು 'ಸೆಕೆಂಡ್ ಒಪಿನಿಯನ್' ಯೋಜನೆ ಜಾರಿಗೆ ತರಲಾಗಿದೆ. ರೋಗಿಗಳಿಗೆ ಸೂಕ್ತ ಮಾರ್ಗದರ್ಶನ ಹಾಗೂ ಆತ್ಮವಿಶ್ವಾಸ ತುಂಬುವ ನೂತನ...