Washington, USA News:
ರಷ್ಯಾದ ಜೊತೆ ನೇರ ಮಾತುಕತೆ ಮೂಲಕ ಯುದ್ಧವನ್ನು ಕೊನೆಗಾಣಿಸಲು ಮುಂದಾಗಿರುವ ಟ್ರಂಪ್, ಕಳೆದ ವಾರ ನಡೆದ ಪ್ರಾಥಮಿಕ ಮಾತುಕತೆಯಲ್ಲಿ ಉಕ್ರೇನ್ ಮತ್ತು ಯುರೋಪಿಯನ್ ರಾಷ್ಟ್ರಗಳ ಬೆಂಬಲವನ್ನು ಹೊರಗೆ ಇಟ್ಟು ಚರ್ಚೆ ನಡೆಸಿದ್ದರು.ಕಳೆದ ಮೂರು ವರ್ಷಗಳಿಂದ ನಡೆಯುತ್ತಿರುವ ಉಕ್ರೇನ್ – ರಷ್ಯಾ ಯುದ್ಧದಲ್ಲಿ ಆರಂಭದಿಂದಲೂ ಅಮೆರಿಕ ಉಕ್ರೇನ್ ಪರ ನಿಂತಿತ್ತು. ಆದರೆ, ಇದೀಗ ನಾಟಕೀಯ ಬೆಳವಣಿಗೆಯಲ್ಲಿ ಅಮೆರಿಕ ವಿಶ್ವಸಂಸ್ಥೆ ನಿರ್ಣಯದಲ್ಲಿ ರಷ್ಯಾದ ಪರ ಹಾಗೂ ನಿರ್ಣಯದ ವಿರುದ್ಧ ಮತ ಹಾಕುವ ಮೂಲಕ ಗಮನ ಸೆಳೆದಿದೆ.
Adoption of United Nations Resolution:“ಉಕ್ರೇನ್‌ನಲ್ಲಿ ಸಮಗ್ರ, ನ್ಯಾಯಯುತ ಮತ್ತು ಶಾಶ್ವತ ಶಾಂತಿ ಸ್ಥಾಪಿಸಬೇಕು ” ಎಂಬ ಕರಡು ನಿರ್ಣಯ ಕೈಗೊಳ್ಳಲಾಗಿತ್ತು 193 ಸದಸ್ಯರ ವಿಶ್ವಸಂಸ್ಥೆ ಸಾಮಾನ್ಯಸಭೆಯು UKRAINE ಮತ್ತು ಅದರ ಯುರೋಪಿಯನ್ ಮಿತ್ರರಾಷ್ಟ್ರಗಳು ಮಂಡಿಸಿದ ನಿರ್ಣಯದ ಮೇಲೆ ಮತ ಚಲಾಯಿಸಿದವು.
What is the content of the resolution?:ಮೂರು ವರ್ಷಗಳ ಹಿಂದೆ ರಷ್ಯಾ UKRAINE ಮೇಲೆ ಆಕ್ರಮಣ ಮಾಡಿದ ನಂತರ ಇದೇ ಮೊದಲ ಬಾರಿಗೆ ವಿಶ್ವಸಂಸ್ಥೆಯಲ್ಲಿ UKRAINE ಕರಡು ನಿರ್ಣಯ ತಡೆಯುವ ಪ್ರಯತ್ನದಲ್ಲಿ ಅಮೆರಿಕ ರಷ್ಯನ್ನರೊಂದಿಗೆ ಮತ ಚಲಾಯಿಸಿ ಎಲ್ಲರ ಹುಬ್ಬೇರುವಂತೆ ಮಾಡಿತು.
ಕರಡು ನಿರ್ಣಯದ ಪರವಾಗಿ ಯುರೋಪಿಯನ್ನರು ಮತ್ತು G7 ( ಅಮೆರಿಕ ಹೊರತು ಪಡಿಸಿ) ರಾಷ್ಟ್ರಗಳು ಮತ ಚಲಾಯಿಸುವುದರೊಂದಿಗೆ ನಿರ್ಣಯವನ್ನು ಬಹುಮತದಿಂದ ಅಂಗೀಕರಿಸಲಾಯಿತು.ಈ ನಿರ್ಣಯವು ವಿಶ್ವಸಂಸ್ಥೆಯ ಚಾರ್ಟರ್ ಮತ್ತು ಅಂತಾರಾಷ್ಟ್ರೀಯ ಕಾನೂನಿಗೆ ಅನುಗುಣವಾಗಿ ನಾಗರಿಕ ಸಮಾಜ ಒಳಗೊಂಡಂತೆ ಅಗಾಧವಾದ ವಿನಾಶ ಮತ್ತು ಮಾನವ ಸಂಕಟದಿಂದ ಗುರುತಿಸಲ್ಪಟ್ಟಿರುವ UKRAINE ವಿರುದ್ಧದ ಯುದ್ಧದ ಆರಂಭಿಕ ನಿಲುಗಡೆ ಮತ್ತು ಶಾಂತಿ ಕಾಪಾಡಬೇಕು ಎಂಬ ನಿರ್ಣಯಕ್ಕೆ ಕರೆ ನೀಡಿದೆ.
Voting for and against the resolution:ಇನ್ನು ಭಾರತ, ಚೀನಾ ಮತ್ತು ಬ್ರೆಜಿಲ್ ಸೇರಿದಂತೆ 65 ರಾಷ್ಟ್ರಗಳು ಗೈರಾಗಿದ್ದವು. ಯುದ್ಧ ಭುಗಿಲೆದ್ದ ಆರಂಭದಿಂದಲೇ ರಷ್ಯಾದ ಅತ್ಯಂತ ನಿಕಟ ಮಿತ್ರರಾಷ್ಟ್ರಗಳಲ್ಲಿ ಪ್ರಮುಖವಾಗಿರುವ ಭಾರತ ಮತ್ತು ಚೀನಾ ಇಂತಹ ನಿರ್ಣಯಗಳಿಂದ ದೂರವಿದ್ದವು.
ಜರ್ಮನಿ, UK, ಫ್ರಾನ್ಸ್ ಮತ್ತು G7 ( US ಹೊರತುಪಡಿಸಿ) ನಂತಹ ಪ್ರಮುಖ ಯುರೋಪಿಯನ್ ರಾಷ್ಟ್ರಗಳು ಸೇರಿದಂತೆ 93 ದೇಶಗಳು ಪರವಾಗಿ ಮತ ಹಾಕಿದವು. ರಷ್ಯಾ, ಅಮೆರಿಕ, ಇಸ್ರೇಲ್ ಮತ್ತು ಹಂಗೇರಿ ಸೇರಿದಂತೆ 18 ರಾಷ್ಟ್ರಗಳು ವಿರುದ್ಧ ಮತ ಚಲಾಯಿಸಿದವು.
America, which had supported Ukraine till now – now reversed:ಅಮೆರಿಕದಲ್ಲಿ ಬೈಡನ್ ಆಡಳಿತ ಕೊನೆಗೊಂಡು, ಟ್ರಂಪ್ ಯುಗ ಶುರುವಾದಾಗಿನಿಂದ UKRAINE ನಿಲುವನ್ನು ವಿರೋಧಿಸಲಾಗುತ್ತಿದ
ಇಲ್ಲಿಯವರೆಗೆ ರಷ್ಯಾ-UKRAINE ಯುದ್ಧದ ಕೊನೆಯ ಮೂರು ವರ್ಷಗಳಲ್ಲಿ US ಯಾವಾಗಲೂ ಯುರೋಪಿಯನ್ನರೊಂದಿಗೆ ಮತ ಚಲಾಯಿಸುತ್ತಿತ್ತು.ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ರಿಯಾದ್‌ನಲ್ಲಿ ರಷ್ಯಾದೊಂದಿಗೆ ನೇರ ಮಾತುಕತೆಯಲ್ಲಿ ತೊಡಗಿಸಿಕೊಂಡಿದ್ದು, ಉಕ್ರೇನ್ ಮತ್ತು ಯುರೋಪ್ ಮಿತ್ರ ರಾಷ್ಟ್ರಗಳನ್ನು ಹೊರಗಿಟ್ಟು ಮಾತುಕತೆ ನಡೆಸುತ್ತಿದ್ದಾರೆ.
No wonder India abstained from voting on the resolution:ಭಾರತ ಮತದಾನದಿಂದ ದೂರ ಇರುವುದು ಅದರ ರಾಜತಾಂತ್ರಿಕ ಬಿಗಿಯಾದ ನಡಿಗೆಯ ಅಭಿವ್ಯಕ್ತಿಯಾಗಿದೆ. ಈ ಹಿಂದೆ ರಷ್ಯಾ-UKRAINE ಯುದ್ಧದ ಕುರಿತು ವಿಶ್ವಸಂಸ್ಥೆಯ ನಿರ್ಣಯಗಳಿಂದ ಭಾರತ ದೂರವಿರುವುದರಿಂದ ಆಶ್ಚರ್ಯವೇನಿಲ್ಲ.ಅದು ಯಾವುದೇ ರಾಷ್ಟ್ರದ ಪರ ಅಥವಾ ವಿರೋಧವಾಗಿಲ್ಲ. ಈ ಮೂಲಕ ದೆಹಲಿ ತಟಸ್ಥತೆ ನೀತಿ ಪ್ರದರ್ಶಿಸುವ ಮೂಲಕ ಶಾಂತಿಯನ್ನು ಬಯಸುತ್ತಿದೆ. ಅಮೆರಿಕ ತನ್ನ ನಿಲುವನ್ನು ಬದಲಾಯಿಸಿದರೂ ದೆಹಲಿ ತನ್ನ ತಟಸ್ಥತೆ ಉಳಿಸಿಕೊಳ್ಳಲು ಬಯಸುತ್ತಿದೆ.
ಇದನ್ನು ಓದಿರಿ :World Bank Says India Will Continue To Be Fastest Growing Economy: Modi