spot_img
spot_img

UNION BUDGET 2025 : ಕೇಂದ್ರ ಬಜೆಟ್ಗೆ ದಿನಗಣನೆ ಆರಂಭ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

Union Budget 2025 Expectations:

ಕೇಂದ್ರದ UNION BUDGET 2025 ದಿನಗಣನೆ ಆರಂಭವಾಗಿದೆ. ಎಲ್ಲರ ಚಿತ್ತ ಈಗ ಸಚಿವೆ ನಿರ್ಮಲಾ ಸೀತಾರಾಮನ್​ ಅವರ ಮೇಲಿದೆ. ಈ ಬಾರಿಯ ಬಜೆಟ್​ನಲ್ಲಿ ಆಟೋಮೊಬೈಲ್​ ವಲಯ ಸುಧಾರಣೆ ಕಾಣಬಹುದು ಎಂಬ ನಿರೀಕ್ಷೆಯಿದೆ.

ಹೈಬ್ರಿಡ್ – ಎಲೆಕ್ಟ್ರಿಕ್ ವಾಹನಗಳ ಮೇಲಿನ ಜಿಎಸ್‌ಟಿ ದರಗಳಲ್ಲಿನ ಕಡಿತದಿಂದ ಹಿಡಿದು ವಾಹನ ಸ್ಕ್ರ್ಯಾಪಿಂಗ್‌ಗೆ ಪ್ರೋತ್ಸಾಹದವರೆಗೆ ಹಲವು ವಿಷಯಗಳಲ್ಲಿ ಬದಲಾವಣೆಗಳು ಕಾಣಬಹುದಾಗಿದೆ. ಈ ಬಾರಿ ಬಜೆಟ್‌ನಲ್ಲಿ ಸರ್ಕಾರವು ಆಟೋಮೊಬೈಲ್ ವಲಯಕ್ಕೆ ಯಾವ ಯೋಜನೆಗಳನ್ನು ಘೋಷಿಸಬಹುದು ಎಂದು ತಿಳಿಯೋಣ ಬನ್ನಿ.

UNION BUDGET 2025 ಇನ್ನು ಕೆಲವು ದಿನಗಳಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಬಜೆಟ್ ಮಂಡಿಸಲಿದ್ದಾರೆ. ಈ ಬಾರಿಯ ಬಜೆಟ್​ನಲ್ಲಿ ಆಟೋಮೊಬೈಲ್ ವಲಯವು ಅನೇಕ ದೊಡ್ಡ ಸುಧಾರಣೆಗಳನ್ನು ನಿರೀಕ್ಷಿಸುತ್ತಿದೆ.

Extension of PLI Scheme:

ಫೆಬ್ರವರಿ 1ರಂದು ಮಂಡಿಸಲಾಗುವ ಬಜೆಟ್‌ನಲ್ಲಿ ಪ್ರೊಡಕ್ಷನ್ ​- ಲಿಂಕ್ಡ್​ ಇನ್ಸೆಂಟಿವ್​​ ಅಂದರೆ ಪಿಎಲ್ಐ ಯೋಜನೆಯನ್ನು ವಿಸ್ತರಿಸುವ ಸಾಧ್ಯತೆಯಿದೆ. ಇದರಲ್ಲಿ ನಿರ್ದಿಷ್ಟವಾಗಿ ವಿದ್ಯುತ್ ವಾಹನ (ಇವಿ) ಯುನಿಟ್​ಗಳು ಮತ್ತು ಬ್ಯಾಟರಿಗಳ ತಯಾರಿಕೆಯ ಯೋಜನೆಯ ವಿಸ್ತರಣೆಯೂ ಸೇರಿದೆ.

UNION BUDGET 2025 ಇದು ಭಾರತವನ್ನು ಜಾಗತಿಕ ಇವಿ ಉತ್ಪಾದನಾ ಕೇಂದ್ರವನ್ನಾಗಿ ಮಾಡಲು ಮತ್ತು ಹಸಿರು ಚಲನಶೀಲತೆ ಪರಿಹಾರಗಳನ್ನು ವೇಗಗೊಳಿಸಲು ಸಹಾಯ ಮಾಡುತ್ತದೆ. ಹೈಡ್ರೋಜನ್ ಇಂಧನ ಮತ್ತು ಉನ್ನತ ಚಲನಶೀಲತೆಯ ಸಂಶೋಧನೆಗೆ ವಿಶೇಷ ಪ್ರೋತ್ಸಾಹ ನೀಡುವ ನಿರೀಕ್ಷೆಯಿದೆ.

ಇದರೊಂದಿಗೆ ದೇಶಾದ್ಯಂತ ಬಲವಾದ ಚಾರ್ಜಿಂಗ್ ಮೂಲ ಸೌಕರ್ಯವನ್ನು ಅಭಿವೃದ್ಧಿಪಡಿಸಲು ನೀತಿಗಳನ್ನು ತರಬಹುದು. ಇದರಿಂದಾಗಿ ವಿದ್ಯುತ್ ಚಾಲಿತ ವಾಹನಗಳನ್ನು ಅಳವಡಿಸಿಕೊಳ್ಳುವ ಪ್ರಕ್ರಿಯೆಯನ್ನು ಮತ್ತಷ್ಟು ವೇಗಗೊಳಿಸಬಹುದು. ಈಗ ಕೇಂದ್ರ ಸರ್ಕಾರ ಈ ಬಾರಿ ಬಜೆಟ್‌ನಲ್ಲಿ ಆಟೋ ಕ್ಷೇತ್ರದ ನಿರೀಕ್ಷೆಗಳನ್ನು ಪೂರೈಸುತ್ತವೆಯೇ ಅಥವಾ ಇಲ್ಲವೇ ಎಂಬುದನ್ನು ಕಾದು ನೋಡಬೇಕಾಗಿದೆ.

GST rate reduction on these vehicles:

ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ವಾಹನಗಳ ಮೇಲಿನ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ದರವನ್ನು ಶೇ 28 ರಿಂದ ಶೇ 18ಕ್ಕೆ ಇಳಿಸಬೇಕು ಎಂದು ಆಟೋಮೊಬೈಲ್ ಉದ್ಯಮವು ಒತ್ತಾಯಿಸುತ್ತಿದೆ. ಈ ಕ್ರಮವು ಪರಿಸರ ಸ್ನೇಹಿ ವಾಹನಗಳ ಅಳವಡಿಕೆ ಉತ್ತೇಜಿಸುತ್ತದೆ ಮತ್ತು ಇದು ಸರ್ಕಾರದ ಹಸಿರು ಮತ್ತು ಸುಸ್ಥಿರ ಭವಿಷ್ಯದ ದೃಷ್ಟಿಕೋನಕ್ಕೆ ಅನುಗುಣವಾಗಿದೆ.

ಹಳೆಯ ವಾಹನಗಳನ್ನು ಸ್ಕ್ರ್ಯಾಪ್ ಮಾಡುವುದನ್ನು ಉತ್ತೇಜಿಸಲು ಬಜೆಟ್‌ನಲ್ಲಿ ಹೊಸ ಯೋಜನೆಗಳು ಮತ್ತು ಸ್ಪಷ್ಟ ನೀತಿಗಳನ್ನು ಘೋಷಿಸಬಹುದು. ಇದು ಹೊಸ ವಾಹನಗಳ ಬೇಡಿಕೆಯನ್ನು ಹೆಚ್ಚಿಸುವುದಲ್ಲದೇ ಪರಿಸರ ಮಾಲಿನ್ಯವನ್ನು ಕಡಿಮೆ ಮಾಡುತ್ತದೆ.

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

SRI SUBUDHENDRA SWAMIJI : ‘ಕುಂಭಮೇಳ ಸಮಸ್ತ ಹಿಂದೂಗಳ ಶ್ರದ್ಧಾ ಉತ್ಸವ, ರಾಜಕೀಯ ನಾಯಕರು ಟೀಕಿಸುವ ವಿಚಾರವಲ್ಲ’

Raichur News: ಮಹಾ ಕುಂಭಮೇಳದ ಕುರಿತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿSRI SUBUDHENDRA SWAMIJI ತೀರ್ಥರು ಪ್ರತಿಕ್ರಿಯಿಸಿದ್ದಾರೆ....

BIGG BOSS WINNER HANUMANTU : ಅದ್ಧೂರಿ ಮೆರವಣಿಗೆ ಮೂಲಕ ಸ್ವಾಗತಿಸಲು ಸಿದ್ಧತೆ

Haveri News: ಅದ್ಧೂರಿ ಮೆರವಣಿಗೆ ಮೂಲಕ BIGG BOSS WINNER HANUMANTU ಅವರನ್ನು ಸ್ವಾಗತಿಸಲು ಅಭಿಮಾನಿಗಳು ಮತ್ತು ಗ್ರಾಮಸ್ಥರು ಸಿದ್ಧತೆ ಮಾಡಿಕೊಂಡಿದ್ದಾರೆ. ದಾಖಲೆಯ ಮತಗಳನ್ನು ಪಡೆದು...

GAVISIDDESHWARA FAIR : 25 ಲಕ್ಷಕ್ಕೂ ಹೆಚ್ಚು ಭಕ್ತರಿಂದ ಪ್ರಸಾದ ಸ್ವೀಕಾರ

Koppala News: ಜನವರಿ 12ರಿಂದ ಕೊಪ್ಪಳದ GAVISIDDESHWARA FAIR ದೇವಾಲಯದಲ್ಲಿ ಆರಂಭವಾದ ಮಹಾದಾಸೋಹ ಬುಧವಾರ ಸಂಪನ್ನಗೊಂಡಿತು. ದಕ್ಷಿಣ ಭಾರತದ ಮಹಾಕುಂಭಮೇಳ ಎಂದೇ ಖ್ಯಾತಿ ಹೊಂದಿರುವ ಕೊಪ್ಪಳದ ಗವಿಸಿದ್ದೇಶ್ವರ...

DELHI ASSEMBLY ELECTION 2025 : ಕೇಜ್ರಿವಾಲ್ ವಿರುದ್ಧ ಮೋದಿ ಗುಡುಗು

New Delhi News : DELHI ವಿಧಾನಸಭಾ ಚುನಾವಣೆ ಹಿನ್ನೆಲೆ ಪ್ರಚಾರ ಸಭೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿಗೆ ಒಂದು ಅವಕಾಶ ನೀಡುವಂತೆ ದಿಲ್ಲಿ...