ಉತ್ತರ ಪ್ರದೇಶ ದೇಶದಲ್ಲಿಯೇ ಅತಿದೊಡ್ಡ ರಾಜ್ಯವಾಗಿ ಗುರುತಿಸಿಕೊಂಡಿದೆ. ಈ ರಾಜ್ಯದ ಒಡಲಲ್ಲಿ ಒಟ್ಟು 75 ಜಿಲ್ಲೆಗಳಿವೆ. ಈಗ ಮತ್ತೊಂದು ಹೊಸ ಜಿಲ್ಲೆಯನ್ನು ಸೃಷ್ಟಿಸಲು ಉತ್ತರಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ ಚಿಂತನೆ ನಡೆಸಿದೆ.
ಪ್ರಯಾಗರಾಜ್ ಜಿಲ್ಲೆಯಲ್ಲಿ ನಡೆಯುವ ಮಹಾಕುಂಭಮೇಳ ಪ್ರದೇಶವನ್ನೇ ಹೊಸ ಜಿಲ್ಲೆಯನ್ನಾಗಿ ಘೋಷಿಸಲು ಯೋಗಿ ಸರ್ಕಾರ ನಿರ್ಧರಿಸಿದೆ. ಜಿಲ್ಲೆಗೆ ಮಹಾಕುಂಭಮೇಳ ಎಂದೇ ಹೆಸರಿಡಲು ಸಿದ್ಧತೆಗಳು ನಡೆಇದೆ. ಈಗಾಗಲೇ 75 ಜಿಲ್ಲೆಗಳನ್ನು ಹೊಂದಿರುವ ಉತ್ತರಪ್ರದೇಶ ಮಹಾಕುಂಭಮೇಳದ ಮೂಲಕ 76 ಜಿಲ್ಲೆಗಳನ್ನು ಹೊಂದಿದ ರಾಜ್ಯವಾಗಲಿದೆ.
ಮಹಾಕುಂಭಮೇಳ ನಡೆಯುವ ಪ್ರದೇಶ ಹಾಗೂ ಅದರ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಹಳ್ಳಿಗಳನ್ನು ಸೇರಿ ಅನುಬಂಧ 1 ರ ಅನ್ವಯ ಜಿಲ್ಲೆಯೆಂದು ಘೋಷಿಸಲಾಗಿದೆ.
ಜಿಲ್ಲಾ ಮ್ಯಾಜಿಸ್ಟ್ರೆಟ್, ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಹಾಗೂ ಎಕ್ಸಿಕ್ಯೂಟಿವ್ ಮ್ಯಾಜಿಸ್ಟ್ರೇಟ್ನ ಎಲ್ಲ ಅಧಿಕಾರಗಳು ಪ್ರಯಾಗರಾಜ್ ಜಿಲ್ಲೆಯ ವ್ಯಾಪ್ತಿಗೆ ಒಳಪಡುತ್ತವೆ. ಸೆಕ್ಷನ್ 14 (1) ಸಿವಿಲ್ ಡಿಫೆನ್ಸ್ ಕೋಡ್ 2023ರ ಇತರ ಸೆಕ್ಷನ್ಗಳ ಅನ್ವಯ ಈ ನಿರ್ಧಾರಕ್ಕೆ ಬರಲಾಗಿದೆ.
ಪ್ರತಿ ಬಾರಿ ನಡೆಯುವು ಮಹಾಕುಂಭಮೇಳವನ್ನು ಸಮರ್ಥವಾಗಿ ನಿಭಾಯಿಸಲು ಹಾಗೂ ನಿರ್ವಹಿಸಲು ಅಂತಲೇ ಈ ಒಂದು ಜಿಲ್ಲೆಯನ್ನು ಅಭಿವೃದ್ಧಿ ಮಾಡಿ ಆಡಳಿತ ವ್ಯವಸ್ಥೆಗೆ ಚುರುಕುಮುಟ್ಟಿಸುವ ಕಾರ್ಯ ಮಾಡುವ ಉದ್ದೇಶದಿಂದ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ ಎಂದು ಹೇಳಲಾಗಿದೆ.
ಮಹಾಕುಂಭಮೇಳ ಪ್ರತಿ 12 ವರ್ಷಗಳಿಗೊಮ್ಮೆ ನಡೆಯುತ್ತದೆ. 2025ರ ಜನವರಿಯಲ್ಲಿ ಮಹಾಕುಂಭಮೇಳವನ್ನು ನಡೆಸಲಾಗುವುದು ಹೀಗಾಗಿ ಈ ಒಂದು ಮಹಾ ಸಂಭ್ರಮವನ್ನು ಸಮರ್ಥವಾಗಿ ನಿಭಾಯಿಸಲು ಹೊಸ ಜಿಲ್ಲೆಯನ್ನು ಘೋಷಿಸಲು ಯುಪಿ ಸರ್ಕಾರ ಸಜ್ಜಾಗಿದೆ.
ಈ ಬಾರಿ ಅಂದ್ರೆ 2025ರಲ್ಲಿ ನಡೆಯುವ ಮಹಾಕುಂಭಮೇಳದ ವೈಭವನ್ನು ನೋಡಲು ದೇಶದ ಎಲ್ಲಾ ರಾಜ್ಯಗಳ ಸಿಎಂಗಳಿಗೆ ಆಹ್ವಾನ ನೀಡಲು ಉತ್ತರ ಪ್ರದೇಶ ಸರ್ಕಾರ ನಿರ್ಧರಿಸಿದೆ. ಲಖನೌನ ಲೋಕಸಭಾ ಭವನದಲ್ಲಿ ನವೆಂಬರ್ 29 ರಂದು ನಡೆದ ಸಭೆಯಲ್ಲಿ ಈ ಒಂದು ನಿರ್ಧಾರಕ್ಕೆ ಸಿಎಂ ಯೋಗಿ ಆದಿತ್ಯನಾಥ್ ಬಂದಿದ್ದಾರೆ ಎಂದು ಹೇಳಲಾಗಿದೆ.
ಕುಂಭಮೇಳೆ ಪ್ರತಿ ಮೂರು ವರ್ಷಕ್ಕೊಮ್ಮೆ , ಅರ್ಧ ಕುಂಭಮೇಲೆ ಪ್ರತಿ ಆರು ವರ್ಷಕ್ಕೊಮ್ಮೆ ಮತ್ತು ಮಹಾಕುಂಭಮೇಳ ಪ್ರತಿ 12 ವರ್ಷಕ್ಕೊಮ್ಮೆ ನಡೆಯುತ್ತವೆ. 2013ರಲ್ಲಿ ಈ ಹಿಂದೆ ಮಹಾಕುಂಭಮೇಳ ನಡೆದಿತ್ತು. ಇದಾದ ಮೇಲೆ 2019ರಲ್ಲಿ ಅರ್ಧಕುಂಭಮೇಳ ನಡೆಸಲಾಗಿತ್ತು.
2025 ಜನವರಿಯಲ್ಲಿ ಮಹಾಕುಂಭಮೇಳ ಆಯೋಜನೆ ಮಾಡಲಾಗುತ್ತದೆ. ಕಳೆದ ಬಾರಿ ನಡೆದ ಮಹಾಕುಂಭಮೇಳದಲ್ಲಿ ಸುಮಾರು 5 ಕೋಟಿಗೂ ಅಧಿಕ ಜನರು ಭಾಗಿಯಾಗಿ ಪುನೀತರಾಗಿದ್ದರು. ಈ ಬಾರಿಯೂ ಕೂಡ ದೇಶದ ಮೂಲೆ ಮೂಲೆಯಿಂದ, ವಿದೇಶದಿಂದ ಈ ಮಹಾಕುಂಭಮೇಳಕ್ಕೆ ಭಕ್ತಾದಿಗಳು ಸಾಕ್ಷಿಯಾಗಲಿದ್ದಾರೆ. ಹೀಗಾಗಿ ಇದನ್ನು ಮಹಾಸಂಗಮ ಎಂತಲೂ ಕರೆಯುತ್ತಾರೆ. ಜನವರಿ 13 2025ರಿಂದ ಮಹಾಕುಂಭಮೇಳ ಮಹೋತ್ಸವ ಶುರುವಾಗಲಿದೆ.