spot_img
spot_img

ಆಸ್ತಿ ವಿವರ ಸಲ್ಲಿಸದ 13 ಲಕ್ಷ ಸರ್ಕಾರಿ ನೌಕರರ ವೇತನ ತಡೆ ಹಿಡಿದ ಉತ್ತರ ಪ್ರದೇಶ ಸರ್ಕಾರ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ಲಕ್ನೋ: ಉತ್ತರ ಪ್ರದೇಶ ಸರ್ಕಾರವೂ ತನ್ನ ನೌಕರರಿಗೆ ತಮ್ಮ ಆಸ್ತಿ ಘೋಷಣೆ ಮಾಡಲು ಆದೇಶಿಸಿದ್ದು, ಆಸ್ತಿ ಘೋಷಣೆ ಮಾಡದ ಒಟ್ಟು 13 ಲಕ್ಷಕ್ಕೂ ಅಧಿಕ ನೌಕರರ ಆಗಸ್ಟ್ ತಿಂಗಳ ವೇತನವನ್ನು ತಡೆ ಹಿಡಿದಿದೆ ಎಂದು ವರದಿ ಆಗಿದೆ. ಸರ್ಕಾರಿ ನೌಕರರು ತಮ್ಮ ಸ್ಥಿರ ಹಾಗೂ ಚರಾಸ್ತಿಯನ್ನು ಸರ್ಕಾರಿ ಪೋರ್ಟಲ್ ಮಾನವ ಸಂಪದದಲ್ಲಿ ದಾಖಲಿಸುವಂತೆ ಸರ್ಕಾರ ಆದೇಶಿಸಿತ್ತು. ಆಗಸ್ಟ್ 31ರೊಳಗೆ ತಮ್ಮ ಆಸ್ತಿಯನ್ನು ಮಾನವ ಸಂಪದದಲ್ಲಿ ಘೋಷಿಸಿ ಇಲ್ಲದೇ ಹೋದರೆ ಈ ತಿಂಗಳ ಸಂಬಳ ಪಾವತಿಯಾಗುವುದಿಲ್ಲ ಎಂದು ನೌಕರರಿಗೆ ಸೂಚಿಸಿತ್ತು ಎನ್ನಲಾಗಿದೆ. ಸರ್ಕಾರದ ಈ ಆದೇಶವನ್ನು ಪಾಲಿಸದೇ ಇದ್ದಲ್ಲಿ ಪ್ರಮೋಷನ್ ಮೇಲೂ ಇದು ಪರಿಣಾಮ ಬೀರಲಿದೆ ಎಂದು ಆದೇಶದಲ್ಲಿ ಹೇಳಲಾಗಿತ್ತು.

ಇದನ್ನೂ ಓದಿ : ಗೌರಿ ಗಣೇಶ ಹಬ್ಬದ ನಿಮಿತ್ತ ಪ್ರಯಾಣಿಕ ಅನುಕೂಲಕ್ಕೆ KSRTC ಶುಭ ಸುದ್ದಿ : ಹಬ್ಬದ ಪ್ರಯುಕ್ತ ಹೆಚ್ಚುವರಿಯಾಗಿ ವಿಶೇಷ ಬಸ್ಸಿನ ವ್ಯವಸ್ತೆ..!

ಆದರೆ 13 ಲಕ್ಷದಷ್ಟು ಉದ್ಯೋಗಿಗಳು ಇನ್ನೂ ಮಾನವ ಸಂಪದ ಪೋರ್ಟಲ್ನಲ್ಲಿ ತಮ್ಮ ಆಸ್ತಿ ಬಗ್ಗೆ ಘೋಷಣೆ ಮಾಡದ ಹಿನ್ನೆಲೆಯಲ್ಲಿ ಅವರಿಗೆ ಆಗಸ್ಟ ತಿಂಗಳ ವೇತನ ಆಗುವುದಿಲ್ಲ ಎನ್ನಲಾಗುತ್ತಿದೆ. ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರವು ತನ್ನ ಉದ್ಯೋಗಿಗಳಿಗೆ ಆಗಸ್ಟ್ 31 ರೊಳಗೆ ತಮ್ಮ ಆಸ್ತಿಯನ್ನು ಘೋಷಿಸಬೇಕು ಅಥವಾ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ತನ್ನ ಅಂತಿಮ ಆದೇಶದಲ್ಲಿ ತಿಳಿಸಿದೆ ಎನ್ನಲಾಗಿದೆ. ಈ ಆದೇಶವನ್ನು ಕಳೆದ ವರ್ಷವೇ ಮಾಡಲಾಗಿತ್ತು. ಕಳೆದ ವರ್ಷ ಡಿಸೆಂಬರ್ 31ಕ್ಕೆ ಇದನ್ನು ಪಾಲಿಸುವುದಕ್ಕೆ ಅಂತಿಮ ಕಾಲಾವಧಿ ನೀಡಲಾಗಿತ್ತು. ಆದರೆ ಈ ಆದೇಶವನ್ನು ಹಲವು ಬಾರಿ ವಿಸ್ತರಣೆ ಮಾಡಲಾಗಿತ್ತು. ಆದರೂ ಶೇಕಡಾ 26 ರಷ್ಟು ನೌಕರರು ಮಾತ್ರ ತಮ್ಮ ಆಸ್ತಿ ವಿವರವನ್ನು ಸಂಪದ ಪೋರ್ಟಲ್ನಲ್ಲಿ ದಾಖಲಿಸಿದ್ದರು.

ಇದನ್ನೂ ಓದಿ :ಚಾಮುಂಡೇಶ್ವರಿ ದೇವಸ್ಥಾನ ನಮ್ಮ ಆಸ್ತಿ; ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಮೋದಾದೇವಿ

ಉತ್ತರ ಪ್ರದೇಶ ರಾಜ್ಯದಲ್ಲಿ ಒಟ್ಟು 17 ಲಕ್ಷದ 88 ಸಾವಿರದ 429 ಸರ್ಕಾರಿ ನೌಕರರಿದ್ದಾರೆ. ಇವರಲ್ಲಿ ಸುಮಾರು 13 ಲಕ್ಷದಷ್ಟು ಜನ ಇನ್ನೂ ತಮ್ಮ ಆಸ್ತಿ ವಿವರವನ್ನು ಘೋಷಿಸಿಕೊಂಡಿಲ್ಲ, ಈ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಮುಖ್ಯ ಕಾರ್ಯದರ್ಶಿ ಮನೋಜ್ ಕುಮಾರ್ ಸಿಂಗ್ ಅವರು ಈ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಆಗ್ರಹಿಸಿದ್ದಾರೆ, ವರದಿಗಳ ಪ್ರಕಾರ ಹೊಸ ಗಡುವಿನ ಮೊದಲು ತಮ್ಮ ಆಸ್ತಿ ವಿವರಗಳನ್ನು ಸಲ್ಲಿಸುವವರಿಗೆ ಮಾತ್ರ ಅವರ ವೇತನವನ್ನು ವಿತರಿಸಲಾಗುತ್ತದೆ. ಈ ನಿಯಮವು ಎಲ್ಲಾ ವರ್ಗದ ಅಧಿಕಾರಿಗಳು ಮತ್ತು ನೌಕರರಿಗೆ ಅನ್ವಯಿಸುತ್ತದೆ. ಈ ನಿಯಮ ಮೀರಿದ ಅಧಿಕಾರಿಗಳು, ತಮ್ಮ ಆಸ್ತಿಯನ್ನು ಘೋಷಿಸದವರೂ ಬಡ್ತಿಗೆ ಅನರ್ಹರಾಗಬಹುದು ಎಂದು ಅವರು ಹೇಳಿದ್ದಾರೆ.

WhatsApp Group Join Now
Telegram Group Join Now
Instagram Account Follow Now
spot_img

Related articles

ಕಾರ್ಪೊರೇಟ್ ಯುಗದಲ್ಲಿ Ratan Tata ವ್ಯಾಪಾರ ಸಾಮ್ರಾಜ್ಯ ಕಟ್ಟಿದ್ದು ಹೇಗೆ ?

Ratan Tata Death ವಿಶ್ವದ ಅತ್ಯಂತ ಪ್ರಭಾವಿ ಕೈಗಾರಿಕೋದ್ಯಮಗಳಲ್ಲಿ ಒಬ್ಬರಾದ ರತನ್ ಟಾಟಾ. ೧೦೦ ಕ್ಕೂ ಹೆಚ್ಚು ದೇಶಗಳಲ್ಲಿ ೩೦ ಕ್ಕೂ ಹೆಚ್ಚು ಕಂಪನಿಗಳನ್ನು ಹೊಂದಿದ್ದು...

ಎರಡನೇ ಟೆಸ್ಟ್‌ಗೆ ತಂಡ ಹೇಗೆ ಇರಲಿದೆ ಎಂಬ ಪ್ರಶ್ನೆ ಉದ್ಭವಿಸಿದೆ ? ಸ್ಟಾರ್​ ಆಟಗಾರನಿಗೆ ಕೊಕ್​​̤!

ಬಾಂಗ್ಲಾದೇಶ ತಂಡ ಟೆಸ್ಟ್ ಮತ್ತು ಟಿ20 ಸರಣಿಗಾಗಿ ಭಾರತದ ಪ್ರವಾಸ ಕೈಗೊಂಡಿದೆ. ಈಗಾಗಲೇ ಟೀಮ್​ ಇಂಡಿಯಾ 2 ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ 1-0 ಮುನ್ನಡೆ...

ತಿರುಪತಿ ವಿಚಾರ : ಡಿಸಿಎಂ ಪವನ್ ಕಲ್ಯಾಣ್‌ಗೆ ಕ್ಷಮೆ ಕೇಳಿದ ನಟ ಯಾರು ?

ತಿರುಪತಿ-ತಿರುಮಲ ಲಡ್ಡು ಪ್ರಸಾದದಲ್ಲಿ ಕಲಬೆರಕೆ ವಿಚಾರ ದೇಶಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವಂತೆಯೇ ಲಡ್ಡು ವಿಚಾರವಾಗಿ ಸಾಕಷ್ಟು ರೀಲ್ಸ್ ಗಳು ಮತ್ತು ಮೀಮ್ಸ್ ಗಳು ಹರಿದಾಡುತ್ತಿವೆ....

ನಿಮ್ಮ ಮನೆಯಲ್ಲಿರುವ ತುಪ್ಪ ಶುದ್ಧವಾಗಿದೆಯಾ ಕಲಬೆರಕೆವಾಗಿದೆಯಾ ? ಇಲ್ಲಿವೆ ಸರಳವಾದ ಉಪಾಯಗಳು.!

ತಿರುಪತಿ ಬಾಲಾಜಿಯ ಪ್ರಸಾದದಲ್ಲಿ ಕಲಬೆರಕೆ ಆಗಿದೆ ಎಂಬ ವಿಷಯ ತಿಳಿದಾಗಿನಿಂದ ತುಪ್ಪದ ವಿಚಾರದಲ್ಲಿ ಅನೇಕ ಸಂಶಯಗಳು ಮೂಡುತ್ತಿವೆ. ನಂದಿನಿ ತುಪ್ಪದ ಬಿಟ್ರೆ ಬೇರೆ ಯಾವ...