New Delhi News:
VANDE BHARAT SLEEPER TRAIN ಒಳಗೆ ಮೊಬೈಲ್ ಪಕ್ಕದಲ್ಲಿ ನೀರಿನಿಂದ ಪೂರ್ಣ ತುಂಬಿದ ಗ್ಲಾಸ್ ಇರಿಸಿರುವುದು ಹಾಗೂ ರೈಲು ಗಂಟೆಗೆ 180 ಕಿ.ಮೀ ಗರಿಷ್ಠ ವೇಗದಲ್ಲಿ ಚಲಿಸುತ್ತಿರುವಾಗಲೂ ಗ್ಲಾಸ್ನಲ್ಲಿನ ನೀರು ಸ್ಥಿರವಾಗಿರುವುದು ವಿಡಿಯೋದಲ್ಲಿ ಕಾಣಿಸುತ್ತದೆ.
ಜನವರಿ 2 ರಂದು ಮುಕ್ತಾಯಗೊಂಡ 3 ದಿನಗಳ ಯಶಸ್ವಿ ಪ್ರಯೋಗಗಳ ನಂತರ ಸಚಿವರು ಈ ವೀಡಿಯೊ ಶೇರ್ ಮಾಡಿದ್ದಾರೆ. VANDE BHARAT SLEEPER TRAIN ಅದರ ಲೋಡ್ ಸ್ಥಿತಿಯಲ್ಲಿ ಗರಿಷ್ಠ ವೇಗವನ್ನು ಮುಟ್ಟಿದೆ ಎಂದು ಸಚಿವಾಲಯ ಈ ಪೋಸ್ಟ್ನಲ್ಲಿ ತಿಳಿಸಿದೆ.VANDE BHARAT SLEEPER TRAIN ಕಳೆದ ಮೂರು ದಿನಗಳಲ್ಲಿ ನಡೆದ ಪ್ರಯೋಗಗಳಲ್ಲಿ ಗಂಟೆಗೆ 180 ಕಿ.ಮೀ ಗರಿಷ್ಠ ವೇಗವನ್ನು ಸಾಧಿಸಿದೆ ಎಂದು ಸರ್ಕಾರ ಶುಕ್ರವಾರ ತಿಳಿಸಿದೆ.
ಈ ವಿಶ್ವದರ್ಜೆಯ ಪ್ರಯಾಣ ದೇಶಾದ್ಯಂತದ ರೈಲು ಪ್ರಯಾಣಿಕರಿಗೆ ಲಭ್ಯವಾಗುವ ಮೊದಲು ಈ ತಿಂಗಳ ಅಂತ್ಯದವರೆಗೆ ಪ್ರಯೋಗಗಳು ಮುಂದುವರಿಯಲಿವೆ ಎಂದು ರೈಲ್ವೆ ಸಚಿವಾಲಯ ತಿಳಿಸಿದೆ. ಕೋಟಾ ವಿಭಾಗದಲ್ಲಿ ಯಶಸ್ವಿ ಪ್ರಯೋಗದ ವಿಡಿಯೋ ಒಂದನ್ನು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಶೇರ್ ಮಾಡಿದ್ದಾರೆ.
The train that recorded the maximum speed: ಅದೇ ದಿನ, ಕೋಟಾ-ನಾಗ್ಡಾ ಮತ್ತು ರೋಹಲ್ ಖುರ್ದ್-ಚೌ ಮಹ್ಲಾ ವಿಭಾಗಗಳಲ್ಲಿ ಗಂಟೆಗೆ 170 ಕಿ.ಮೀ ಮತ್ತು 160 ಕಿ.ಮೀ ವೇಗವನ್ನು ಸಾಧಿಸಲಾಯಿತು. ಗುರುವಾರ, ರಾಜಸ್ಥಾನದ ಬುಂಡಿ ಜಿಲ್ಲೆಯ ಕೋಟಾ ಮತ್ತು ಲಾಬಾನ್ ನಡುವೆ 30 ಕಿ.ಮೀ ಉದ್ದದ ಪಯಣದಲ್ಲಿ ರೈಲು ಗಂಟೆಗೆ 180 ಕಿ.ಮೀ ಗರಿಷ್ಠ ವೇಗ ತಲುಪಿತ್ತು.
ಇದಕ್ಕೂ ಒಂದು ದಿನ ಮೊದಲು, ರೋಹಲ್ ಖುರ್ದ್ ಮತ್ತು ಕೋಟಾ ನಡುವಿನ 40 ಕಿ.ಮೀ ಉದ್ದದ ಪ್ರಾಯೋಗಿಕ ಸಂಚಾರದಲ್ಲಿ VANDE BHARAT SLEEPER TRAIN ಗಂಟೆಗೆ 180 ಕಿ.ಮೀ ಗರಿಷ್ಠ ಮಟ್ಟ ಮುಟ್ಟಿತ್ತು.
First priority for safe travel:“ಹೊಸ ವರ್ಷದಲ್ಲಿ ಭಾರತದ ಪ್ರಯಾಣಿಕರಿಗೆ ವೇಗದ ಮತ್ತು ಸುರಕ್ಷಿತ ರೈಲು ಪ್ರಯಾಣದ ಸೌಲಭ್ಯ ನೀಡಲು ಸಜ್ಜಾಗುತ್ತಿದ್ದೇವೆ. ಕಡಿಮೆ ಮತ್ತು ಮಧ್ಯಮ ದೂರದ ಚೇರ್ ಕಾರ್ ರೈಲುಗಳಲ್ಲಿ ಪ್ರಯಾಣಿಸುವ ಜನರಿಗೆ ವೇಗದ, ಸುರಕ್ಷಿತ ಮತ್ತು ವಿಶ್ವ ದರ್ಜೆಯ ಪ್ರಯಾಣದ ಅನುಭವವನ್ನು ಯಶಸ್ವಿಯಾಗಿ ನೀಡಿದ ನಂತರ, ಭಾರತೀಯ ರೈಲ್ವೆ ಇದನ್ನು ದೂರದ ರೈಲುಗಳಿಗೂ ವಾಸ್ತವಗೊಳಿಸುತ್ತಿದೆ” ಎಂದು ಸಚಿವರು ಹೇಳಿದರು.
ಅಂತಿಮ ಹಂತವನ್ನು ದಾಟಿದ ನಂತರವೇ VANDE BHARAT SLEEPER TRAINಗಳನ್ನು ಅಧಿಕೃತವಾಗಿ ಪ್ರಮಾಣೀಕರಿಸಲಾಗುವುದು ಹಾಗೂ ಸೇರ್ಪಡೆ ಮತ್ತು ನಿಯಮಿತ ಸೇವೆಗಾಗಿ ಭಾರತೀಯ ರೈಲ್ವೆಗೆ ಹಸ್ತಾಂತರಿಸಲಾಗುವುದು ಎಂದು ಸಚಿವಾಲಯ ತಿಳಿಸಿದೆ.
ಮಧ್ಯಮ ಮತ್ತು ಕಡಿಮೆ ದೂರಗಳಲ್ಲಿ ದೇಶಾದ್ಯಂತ ಚಲಿಸುವ 136 VANDE BHARAT SLEEPER TRAINಗಳ ಮೂಲಕ ಪ್ರಯಾಣಿಕರು ಈಗಾಗಲೇ ಮಲಗುವ ಆಸನಗಳು ಮತ್ತು ವಿಶ್ವದರ್ಜೆಯ ಪ್ರಯಾಣದ ಅನುಭವವನ್ನು ಆನಂದಿಸುತ್ತಿದ್ದಾರೆ.ಈ ಪ್ರಯೋಗಗಳು ಮುಗಿದ ನಂತರ, ರೈಲನ್ನು ರೈಲ್ವೆ ಸುರಕ್ಷತಾ ಆಯುಕ್ತರು ಗರಿಷ್ಠ ವೇಗದಲ್ಲಿ ಮೌಲ್ಯಮಾಪನ ಮಾಡಲಿದ್ದಾರೆ.ವಂದೇ ಭಾರತ್ ರೈಲು ಗಂಟೆಗೆ ಗರಿಷ್ಠ 180 ಕಿಮೀ ವೇಗವನ್ನು ಸಾಧಿಸಿದೆ.
ಇದನ್ನು ಓದಿರಿ : TRUMP SLAMS BIDEN : ‘ಇತಿಹಾಸದಲ್ಲೇ ಅತ್ಯಂತ ಕೆಟ್ಟ ಅಧ್ಯಕ್ಷ’: