‘Virat Sir Great’News:
ಬಾಲಿವುಡ್ನ ಉದಯೋನ್ಮುಖ ತಾರೆ ವೀರ್ ಪಹಾರಿಯಾ ತಮ್ಮ ಚೊಚ್ಚಲ ಚಿತ್ರ ‘ಸ್ಕೈ ಫೋರ್ಸ್’ ಮೂಲಕ ಸಖತ್ ಸುದ್ದಿಯಲ್ಲಿದ್ದಾರೆ. ಬಿಡುಗಡೆ ನಂತರವೂ ತಂಡ ಪ್ರಚಾರದಲ್ಲಿ ನಿರತರಾಗಿದ್ದು, ನೆಟ್ಟಿಗರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ತಮ್ಮ ಚೊಚ್ಚಲ ಚಿತ್ರ ‘ಸ್ಕೈ ಫೋರ್ಸ್’ನಲ್ಲಿ ವೀರ್ ವಾಯುಪಡೆ ಅಧಿಕಾರಿ ಪಾತ್ರವನ್ನು ನಿರ್ವಹಿಸಿದ್ದಾರೆ.
ಇತ್ತೀಚೆಗೆ ಪ್ರಚಾರ ಸಂದರ್ಭ, ಭಾರತ ತಂಡದ ಶ್ರೇಷ್ಠ ಕ್ರಿಕೆಟ್ ಆಟಗಾರ ವಿರಾಟ್ KOHLI ಅವರ ಜೀವನ ಚರಿತ್ರೆಯಲ್ಲಿ ಅವರ ಪಾತ್ರವನ್ನು ನಿರ್ವಹಿಸುವ ಬಗ್ಗೆ ನಟನಲ್ಲಿ ಕೇಳಲಾಯಿತುವಿರಾಟ್ KOHLI ಪಾತ್ರದಲ್ಲಿ ನಟಿಸಲು ಆಸಕ್ತಿ ಇದೆಯೇ ಮತ್ತು ಕ್ರಿಕೆಟಿಗನ ಜೀವನ ಚರಿತ್ರೆಯನ್ನು ನಿರ್ಮಿಸಬಹುದೇ ಎಂದು ವೀರ್ ಅವರಲ್ಲಿ ಕೇಳಲಾಯಿತು. ಅದಕ್ಕೆ ಪ್ರತಿಕ್ರಿಯಿಸಿ, ‘ವಿರಾಟ್ ಸರ್ ಬಹಳಾನೇ ಗ್ರೇಟ್’.
ಅವರೋರ್ವ ಲೆಜೆಂಡ್. ಕೆಲಸದ ಬಗ್ಗೆ ಉತ್ಸಾಹ ಹೊಂದಿರುವ ವ್ಯಕ್ತಿ. ನೀವು ಹೇಳುತ್ತಿರುವ ವಿಚಾರ ತುಂಬಾನೇ ಎಕ್ಸೈಟಿಂಗ್ ಆಗಿದೆ. ಮುಂಬರುವ ವರ್ಷಗಳಲ್ಲಿ ನಾನು ಅದಕ್ಕೆ ಯೋಗ್ಯ ಎಂದೆನಿಸಿದರೆ, ನಾನು ನನ್ನ ಸಂಪೂರ್ಣ ಶ್ರಮ ಹಾಕುತ್ತೇನೆ.
ನಿರ್ಮಾಪಕರು ಎಂದಾದರೂ ಈ ಒಂದು ಚಿತ್ರವನ್ನು ನಿರ್ಮಿಸಿದರೆ, ನಾನದಕ್ಕೆ ಯೋಗ್ಯ ಎಂದು ಅವರಿಗೆ ಅನಿಸಿದರೆ, ನಾನು ಅದರ ಭಾಗವಾಗಲು ಇಷ್ಟಪಡುತ್ತೇನೆ ಎಂದು ತಿಳಿಸಿದರು.ಮತ್ತೊಂದು ಸಂದರ್ಶನದಲ್ಲಿ, ರಿಯಲ್ ಲೈಫ್ ಹೀರೋಗಳ ಶೌರ್ಯ ಮತ್ತು ತ್ಯಾಗವನ್ನು ಪ್ರದರ್ಶಿಸುವ ಪಾತ್ರವನ್ನು ನಿರ್ವಹಿಸಲು ಬಹಳ ಹೆಮ್ಮೆ ಪಡುತ್ತೇನೆ.
ಅಕ್ಷಯ್ ಕುಮಾರ್ ಅವರೊಂದಿಗೆ ಕೆಲಸ ಮಾಡಿದ್ದು ತಮ್ಮ ಚೊಚ್ಚಲ ಚಿತ್ರವನ್ನು ಇನ್ನಷ್ಟು ವಿಶೇಷವಾಗಿಸಿದೆ ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಫೈಟರ್ ಪೈಲಟ್ ಪಾತ್ರವನ್ನು ನಿರ್ವಹಿಸಲು ವೀರ್ ವ್ಯಾಯಾಮ ಸೇರಿ ಹಲವು ತರಬೇತಿಗಳನ್ನು ಪಡೆದಿದ್ದಾರೆ. ಪಾತ್ರಕ್ಕೆ ಅವರ ಸಮರ್ಪಣೆ ಸ್ಪಷ್ಟವಾಗಿದೆ. ಈ ಪಾತ್ರ ಪ್ರೇಕ್ಷಕರನ್ನು ತಲುಪುವಲ್ಲಿ ಯಶಸ್ವಿಯಾಗಿದೆ.
ಸಿನಿಮಾ ಬಿಡುಗಡೆಗೂ ಮುನ್ನ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ‘ಸ್ಕೈ ಫೋರ್ಸ್’ ವಿಶೇಷ ಪ್ರದರ್ಶನದಲ್ಲಿ ಭಾಗಿಯಾಗಿದ್ದರು. ಅಕ್ಷಯ್ ಕುಮಾರ್, ವೀರ್ ಪಹಾರಿಯಾ ಮತ್ತು ಅನಿಲ್ ಚೌಹಾಣ್ ಒಟ್ಟಿಗೆ ಸಿನಿಮಾ ವೀಕ್ಷಿಸಿದರು. ಚಿತ್ರದಲ್ಲಿ ಭಾರತೀಯ ವಾಯುಪಡೆಯ ಶೌರ್ಯವನ್ನು ಗೌರವಿಸಿದ್ದಕ್ಕಾಗಿ, ರಾಷ್ಟ್ರೀಯ ರಕ್ಷಣೆಯ ಮಹತ್ವವನ್ನು ಎತ್ತಿ ಹಿಡಿದಿದ್ದಕ್ಕಾಗಿ ಸ್ಕೈ ಫೋರ್ಸ್ ತಂಡವನ್ನು ರಕ್ಷಣಾ ಸಚಿವರು ಶ್ಲಾಘಿಸಿದರು. ಸ್ಕೈ ಫೋರ್ಸ್ ಕಳೆದ ಶುಕ್ರವಾರ, ಜನವರಿ 24ರಂದು ಚಿತ್ರಮಂದಿರ ಪ್ರವೇಶಿಸಿತು.
Ready to take on the challenge:ಈ ಪ್ರಶ್ನೆಗೆ ಉತ್ತರಿಸಿದ ನಟ, ವಿಶ್ವದ ಪ್ರಸಿದ್ಧ ಕ್ರಿಕೆಟ್ ಆಟಗಾರನನ್ನು ಹೊಗಳಿದರು. ಆ ಪಾತ್ರಕ್ಕೆ ತಾನು ಸೂಕ್ತ ಎಂದು ನಿರ್ದೇಶಕರಿಗೆ ಅನಿಸಿದರೆ, ಕಷ್ಟಪಟ್ಟು ಕೆಲಸ ಮಾಡಲು ಮತ್ತು ಸವಾಲನ್ನು ಸ್ವೀಕರಿಸಲು ಸಿದ್ಧ ಎಂದು ತಿಳಿಸಿದರು.
ಇದನ್ನು ಓದಿರಿ :MS DHONI:ಚಾಂಪಿಯನ್ಸ್ ಟ್ರೋಫಿಗೆ ಸಿದ್ಧಗೊಳ್ಳುತ್ತಿರುವ ಭಾರತ.