spot_img
spot_img

ಮುಸ್ಲಿಂ ಮುಖಂಡರ ಸವಾಲಿಗೆ ವಿಎಚ್‌ಪಿ ಮತ್ತು ಭಜರಂಗದಳ ಬಿಸಿ ರೋಡ್ ಚಲೋಗೆ ಕರೆ .!

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ಬಿಸಿ ರೋಡ್ ಚಲೋಗೆ ಸಾವಿರ ಸಂಖ್ಯೆಯಲ್ಲಿ ಸೇರಿದ ಹಿಂದೂ ಕಾರ್ಯಕರ್ತರು. ಸ್ಥಳದಲ್ಲಿ ಬಿಗುವಿನ ವಾತಾವರಣ

ಭಜರಂಗದಳ-ವಿ.ಎಚ್.ಪಿಯಿಂದ ಬಿ‌.ಸಿ.ರೋಡ್ ಚಲೋ ಕರೆ ಹಿನ್ನೆಲೆ ಹಿಂದು ಸಂಘಟನೆ ಕಾರ್ಯಕರ್ತರು ಬಿ.ಸಿ ರೋಡ್​​ನಲ್ಲಿ ಇಂದು ಜಮಾಯಿಸಿದ್ದಾರೆ. ಕೇಸರಿ ಶಾಲು ಹಾಕಿ ಕಾಣಿಸಿಕೊಂಡಿದ್ದಾರೆ. ಸದ್ಯ ಬಿ.ಸಿ.ರೋಡ್ ನಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಹೆಚ್ಚುವರಿ ಪೊಲೀಸರ ನಿಯೋಜನೆ ಮಾಡಲಾಗಿದೆ. ಎಸ್ಪಿ ಯತೀಶ್ ನೇತೃತ್ವದಲ್ಲಿ ಜಿಲ್ಲೆಯಲ್ಲಿ ಬಂದೋಬಸ್ತ್ ಮಾಡಿದ್ದಾರೆ.

ಸದ್ಯ ಬಿ‌.ಸಿ.ರೋಡ್​​ನಲ್ಲಿ ಪರಿಸ್ಥಿತಿ ಬಿಗಡಾಯಿಸುವ ಆತಂಕ ಸೃಷ್ಟಿಯಾಗಿದೆ. ಭಾರೀ ಸಂಖ್ಯೆಯಲ್ಲಿ ಹಿಂದು ಸಂಘಟನೆ ಕಾರ್ಯಕರ್ತರು ಜಮಾಯಿಸಿದ್ದಾರೆ. ಬಿ.ಸಿ.ರೋಡ್​​​​​​ನ ರಕ್ತೇಶ್ವರಿ ದೇವಸ್ಥಾನದ ಬಳಿ ಜನ ಸೇರಿದ್ದಾರೆ. ಸ್ಥಳಕ್ಕೆ ಶರಣ್ ಪಂಪ್ ವೆಲ್, ಪುನೀತ್ ಅತ್ತಾವರ ಬಂದಿದ್ದಾರೆ.

ಭಾರೀ ಸಂಖ್ಯೆಯಲ್ಲಿ ಪೊಲೀಸರ ನಿಯೋಜನೆ ಕೂಡ ಮಾಡಲಾಗಿದೆ. ಕೆ.ಎಸ್.ಆರ್.ಪಿ ತುಕಡಿಗಳು, ಆರ್ಮ್ ರಿಸರ್ವ್ ಫೋರ್ಸ್ ಸೇರಿದಂತೆ ವಿವಿಧ ತುಕಡಿಗಳ ಮುಕ್ಕಾಂ ಹೂಡಿವೆ. ಹಿರಿಯ ಪೊಲೀಸ್ ಅಧಿಕಾರಿಗಳು ಕೂಡ ಸ್ಥಳದಲ್ಲೇ ಬೀಡುಬಿಟ್ಟಿದ್ದಾರೆ.

​ಮಂಡ್ಯ ಜಿಲ್ಲೆಯ ನಾಗಮಂಗಲ ಘಟನೆ ಬೆನ್ನಲ್ಲೇ ಈದ್ ಮಿಲಾದ್ ಮೆರವಣಿಗೆ ತಡೆಯುವ ಎಚ್ಚರಿಕೆಯನ್ನು ವಿಎಚ್‌ಪಿ ಮುಖಂಡ ಶರಣ್ ಪಂಪ್‌ವೆಲ್ ನೀಡಿದ್ದರು. ಅದಕ್ಕೆ ಮುಸ್ಲಿಂ ಮುಖಂಡರು ಈದ್ ಮಿಲಾದ್ ಮೆರವಣಿಗೆ ತಡೆಯುವಂತೆ ಸವಾಲೆಸೆದಿದ್ದರು.

ಮುಸ್ಲಿಂ ಮುಖಂಡರ ಸವಾಲಿಗೆ ವಿಎಚ್‌ಪಿ ಮತ್ತು ಭಜರಂಗದಳ ಬಿಸಿ ರೋಡ್ ಚಲೋಗೆ ಕರೆ ಕೊಟ್ಟಿದ್ದರು. ಇದರ ನಡುವೆ ನಿನ್ನೆ ಮಂಗಳೂರು ಹೊರವಲಯದ ಕಾಟಿಪಳ್ಳ 3 ನೇ ಬ್ಲಾಕಿನ ಬದ್ರಿಯಾ ಮಸೀದಿ ಮೇಲೆ ದುಷ್ಕರ್ಮಿಗಳ ತಂಡವೊಂದು ರಾತ್ರಿ 2 ಬೈಕ್ ಗಳಲ್ಲಿ ಬಂದ ನಾಲ್ವರು ಕಲ್ಲು ತೂರಾಟ ನಡೆಸಿರುವ ಬಗ್ಗೆ ವರದಿಯಾಗಿದೆ. ಈ ಸಂಬಂಧ ಪೊಲೀಸರು ಶಿಸ್ತಿನ ಕ್ರಮ ತೆಗೆದುಕೊಂಡಿದ್ದಾರೆ.

 

WhatsApp Group Join Now
Telegram Group Join Now
Instagram Account Follow Now
spot_img

Related articles

KIREN RIJIJU WAQF BILL:ವಕ್ಫ್ ತಿದ್ದುಪಡಿ ಮಸೂದೆಗೆ ಚಂದ್ರಬಾಬು, ನಿತೀಶ್, ಮುಸ್ಲಿಮ್ ಸಂಸದರಿಂದ ಬೆಂಬಲ

Srinagar (Jammu-Kashmir) News : ಬಿಜೆಪಿ ಹೊರತಾಗಿ ಎನ್​ಡಿಎ ಕೂಟದಲ್ಲಿ WAQF ಮಸೂದೆ ತಿದ್ದುಪಡಿಗೆ ಸಮ್ಮತಿ ಇಲ್ಲ ಎಂಬ ವಿಪಕ್ಷಗಳ ಆರೋಪಕ್ಕೆ ಸ್ಪಷ್ಟನೆ ನೀಡಿರುವ ಕೇಂದ್ರ...

AMARTYA SEN DESCRIBE MANMOHAN:ಮನಮೋಹನ್ ಸಿಂಗ್ ಒಬ್ಬ ಮಹಾನ್ ವ್ಯಕ್ತಿ, ಅದ್ಭುತ ಅರ್ಥಶಾಸ್ತ್ರಜ್ಞ

Kolkata (West Bengal) News: ಪಶ್ಚಿಮ ಬಂಗಾಳದ ಬಿರ್ಭೂಮ್​​ನಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, MANMOHAN​ ಸಿಂಗ್​ ಮತ್ತು ನಾನು ಕೇಂಬ್ರಿಡ್ಜ್‌ನಲ್ಲಿ ಓದುತ್ತಿರುವ ವೇಳೆ ಉತ್ತಮ...

H D DEVE GOWDA:ರಾಜ್ಯದಲ್ಲಿ ಕೃಷ್ಣ, ಕಾವೇರಿ, ಗೋದಾವರಿ ನದಿ ಜೋಡಣೆಗೆ ಎಲ್ಲರೂ ಧ್ವನಿ ಎತ್ತಬೇಕಿದೆ

Bangalore News: ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿಂದು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ''ರಾಜ್ಯಸಭೆಯಲ್ಲಿ ಗೋದಾವರಿ, ಕೃಷ್ಣ, ಕಾವೇರಿ ನದಿ ಜೋಡಣೆ ಬಗ್ಗೆ ತಮಿಳುನಾಡಿನ ರಾಜ್ಯಸಭಾ...

MAHINDRA ELECTRIC SUV BOOKING OPEN:ಅಬ್ಬಬ್ಬಾಂದ್ರೆ ಎಷ್ಟಿರಬಹುದು?

Mahindra Electric SUV Booking Open News: ಇವುಗಳನ್ನು ನವೆಂಬರ್ 2024ರಲ್ಲಿ 'XEV 9E' ಮತ್ತು 'BE 6' ಎಂಬ ಹೆಸರಿನಲ್ಲಿ ಬಿಡುಗಡೆ ಮಾಡಿತ್ತು. ಎಲೆಕ್ಟ್ರಿಕ್...