spot_img
spot_img

ವಿಜಯದಶಮಿ ಸಂಭ್ರಮ: ಕನ್ನಡ ಸಿನಿಮಾ ಅಪ್ಡೇಟ್

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ಸಿದ್ದು ಮೂಲಿಮನಿ ನಟಿಸಿರುವ ‘ಸೀಟ್‌ ಎಡ್ಜ್‌’, ಅದ್ವೈರವಿಶಂಕರ್‌ ನಾಯಕರಾಗಿರುವ ‘ಸುಬ್ರಹ್ಮಣ್ಯ’, ಚೈತ್ರಾ ಆಚಾರ್‌, ರಿತ್ವಿಕ್‌ ನಟನೆಯ ‘ಮಾರ್ನಾಮಿ’, ದೇವನೂರ್‌ ಚಂದ್ರು ನಿರ್ದೇಶನದ ‘ಗ್ರಾಮಾಯಣ’, ಸೇರಿದಂತೆ ಹಲವು ಹೊಸ ಸಿನಿಮಾಗಳು ಹೊಸ ಪೋಸ್ಟರ್‌ ರಿಲೀಸ್‌ ಮಾಡಿ ಚಿತ್ರದ ಬಗ್ಗೆ ಕುತೂಹಲ ಮೂಡಿಸಿವೆ.

ಕನ್ನಡ ಚಿತ್ರರಂಗದ ಭರವಸೆಯ ನಿರ್ದೇಶಕರಾದ ‘ಮಹಿರ’ ಸಿನಿಮಾ ಖ್ಯಾತಿಯ ಮಹೇಶ್‌ ಗೌಡ, ‘ಮೇಡ್‌ ಇನ್‌ ಬೆಂಗಳೂರು’ ಸಾರಥಿ ಪ್ರದೀಪ್‌ ಶಾಸ್ತ್ರಿ, ‘ನಿಮಿತ್ತ ಮಾತ್ರ’ ನಿರ್ದೇಶಕ ರೋಷನ್‌, ‘ರಾವಣರಾಜ್ಯದಲ್ಲಿ ನವದಂಪತಿಗಳು’ ಚಿತ್ರದ ನಿರ್ದೇಶಕ ರಂಗ, ‘ಡೇರ್‌ಡೆವಿಲ್‌ ಮುಸ್ತಾಫಾ’ ಖ್ಯಾತಿಯ ಶಶಾಂಕ್‌ ಸೋಗಾಲ್‌ ಸೇರಿದಂತೆ ಹಲವಾರು ನಿರ್ದೇಶಕರು ಶುಭ ಹಾರೈಸಿದ್ದಾರೆ. ಕಮರ್ಷಿಯಲ್‌ ಸಿನಿಮಾಗಳ ನಡುವೆ ಕನ್ನಡದಲ್ಲೊಂದು ಕ್ರಾಂತಿಕಾರಿ ಸಿನಿಮಾ ತಯಾರಾಗಿದೆ. ಅದುವೇ ‘ಸ್ವರಾಜ್ಯ 1942’. ಈ ಹಿಂದೆ ಹತ್ಯೆ ಸಿನಿಮಾ ನಿರ್ದೇಶಿಸಿದ್ದ ವರುಣ್‌ ಗಂಗಾಧರ್‌ ‘ಸ್ವರಾಜ್ಯ 1942’ ಚಿತ್ರಕ್ಕೆ ಆಕ್ಷನ್‌ ಕಟ್‌ ಹೇಳಿದ್ದಾರೆ. ‌

ಹಲವು ಸಾಕ್ಷ್ಯಚಿತ್ರಗಳನ್ನು ನಿರ್ದೇಶಿಸಿರುವ, ಒಂದಷ್ಟು ನಿರ್ದೇಶಕರ ಗರಡಿಯಲ್ಲಿ ನಿರ್ದೇಶನದ ಪಟುಗಳನ್ನು ಕಲಿತಿರುವ ಧೀರಜ್‌ ಎಂ.ವಿ. ಈಗ ಸ್ವತಂತ್ರ ನಿರ್ದೇಶಕರಾಗಿ ಹೆಜ್ಜೆ ಇಡುತ್ತಿದ್ದಾರೆ. ಅವರ ಮೊದಲ ಪ್ರಯತ್ನದ ಸಿನಿಮಾದ ಮುಹೂರ್ತ ಸಮಾರಂಭ ಬೆಂಗಳೂರಿನ ವಿದ್ಯಾಪೀಠದಲ್ಲಿರುವ ರಾಯರ ಮಠದಲ್ಲಿ ನೆರವೇರಿದೆ. ಸದ್ಯ ಮುಹೂರ್ತ ಮುಗಿಸಿ ಚಿತ್ರತಂಡ ಉತ್ತರ ಕರ್ನಾಟದ ಭಾಗದಲ್ಲಿ ಚಿತ್ರೀಕರಣ ಶುರು ಮಾಡಿದೆ.

ಹುಬ್ಬಳ್ಳಿ ಮೂಲದ ಬಾಲಕನೊಬ್ಬ ಹುಬ್ಬಳ್ಳಿಯಲ್ಲಿ ನಡೆಯುತ್ತಿದ್ದ ಕ್ವಿಟ್‌ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಲು ಹೊರಟಾಗ ಬ್ರಿಟಿಷರ ಗುಂಡೇಟಿಗೆ ಗುರಿಯಾಗಿ ಹುತಾತ್ಮನಾದ ಕಥೆಯೇ ‘ಸ್ವರಾಜ್ಯ 1942’. ಈ ಚಿತ್ರದ ಬಗ್ಗೆ ನಿರ್ದೇಶಕ ವರುಣ್‌ ಗಂಗಾಧರ್‌, ‘1942ರಲ್ಲಿಯೇ ಹುಬ್ಬಳ್ಳಿಯ ಹುಡುಗ ಸ್ವಾತಂತ್ರ್ಯ ಹೋರಾಟಗಾರನಾಗಿದ್ದ ಎಂಬುದನ್ನು ಜಗತ್ತಿಗೆ ಪರಿಚಯಿಸಲು ಈ ಚಿತ್ರ ಮಾಡಿದ್ದೇನೆ. ಶಾಲೆಯ ಪಠ್ಯಪುಸ್ತಕವನ್ನು ಸಿನಿಮಾ ರೂಪಕ್ಕೆ ತಂದಿದ್ದೇನೆ. ಶಾಲಾ ಮಕ್ಕಳಿಗೂ ಈ ಚಿತ್ರ ತೋರಿಸುವ ಐಡಿಯಾ ಇದೆ’ ಎಂದು ಹೇಳಿದ್ದಾರೆ. 14ನೇ ವಯಸ್ಸಿನಲ್ಲಿ ದೇಶಕ್ಕಾಗಿ ಹೋರಾಡುವ ಉತ್ಸಾಹ ತೋರಿದ ಆ ಹುತಾತ್ಮರ ಮಾಹಿತಿ ಕಲೆ ಹಾಕಿ ಕುಟುಂಬದವರ ಒಪ್ಪಿಗೆ ಮೇರೆಗೆ ಸಿನಿಮಾ ಮಾಡಲಾಗಿದೆ. ನಿರ್ದೇಶಕ ವರುಣ್‌ ಗಂಗಾಧರ್‌ ಈ ಚಿತ್ರದ ಮೂಲಕ ತಮ್ಮ ಮಗ ಮಾಸ್ಟರ್‌ ವರುಣ್‌ನನ್ನು ಇಂಡಸ್ಟ್ರಿಗೆ ಪರಿಚಯಿಸಿದ್ದಾರೆ.

ಕೆ.ಗುರುಸಾವನ್‌ ನಿರ್ದೇಶಿಸುತ್ತಿರುವ ಕಲ್ಟ್‌ ಲವ್‌ ಸ್ಟೋರಿ ‘ಮನೋರಮಾ’ ಚಿತ್ರ ಸದ್ಯದಲ್ಲೇ ಚಿತ್ರೀಕರಣಕ್ಕೆ ತೊಡಗಲಿದೆ. ಇದರ ಫಸ್ಟ್‌ ಲುಕ್‌ ರಿಲೀಸ್‌ ಮಾಡಲಾಗಿದೆ. ಒಂದು ರಾತ್ರಿಯಲ್ಲಿ ನಡೆಯವ ಪ್ರೀತಿಯ ಕಥೆ ಈ ‘ಮನೋರಮಾ’. ಇದರ ಬಗ್ಗೆ ನಿರ್ದೇಶಕರು, ‘ನಮ್ಮ ಚಿತ್ರದ ಕಥೆಗೆ ಚಳಿಗಾಲದ ರಾತ್ರಿಯ ತಂಪಾದ ವಾತಾವರಣ ಬೇಕು. ಹೀಗಾಗಿ ನವೆಂಬರ್‌ ಹಾಗೂ ಡಿಸೆಂಬರ್‌ನಲ್ಲಿ ಚಿತ್ರೀಕರಣ ಪ್ರಾರಂಭಿಸಲಿದ್ದೇವೆ. ಇಡೀ ಚಿತ್ರದ ಚಿತ್ರೀಕರಣ ಬೆಂಗಳೂರಿನಲ್ಲೇ ನಡೆಯುತ್ತದೆ. ಚಿತ್ರದಲ್ಲಿ ನಾಯಕ, ನಾಯಕಿ ಸೇರಿದಂತೆ ಕೇವಲ ಐದು ಪಾತ್ರಗಳು ಮಾತ್ರ ಇರುತ್ತವೆ. ಹಿರಿಯ ನಟ ರಮೇಶ್‌ ಭಟ್‌ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ’ ಎಂದು ಹೇಳಿದ್ದಾರೆ.

ತೆಲುಗು ಚಿತ್ರರಂಗದಲ್ಲಿ ಹಲವು ಹೊಸ ಸಿನಿಮಾಗಳ ಕುರಿತ ಹೊಸ ಮಾಹಿತಿ ದಸರಾ ಹಬ್ಬದ ಪ್ರಯುಕ್ತ ಹೊರಬಂದಿವೆ. ‘ದಸರಾ’ ಸಿನಿಮಾ ಬಳಿಕ ನಾನಿ ಹಾಗೂ ಶ್ರೀಕಾಂತ್‌ ಒಡೆಲಾ ಕಾಂಬಿನೇಶನ್‌ನ ಹೊಸ ಚಿತ್ರದ ಮುಹೂರ್ತ ನೆರವೇರಿದೆ. ರಾಮ್‌ ಪೋತಿನೇನಿ ನಾಯಕರಾಗಿ ನಟಿಸುತ್ತಿರುವ ಮುಂದಿನ ಚಿತ್ರ ಘೋಷಣೆಯಾಗಿದ್ದು, ಇದನ್ನು ಪಿ.ಮಹೇಶ್‌ಬಾಬು ನಿರ್ದೇಶನ ಮಾಡಲಿದ್ದಾರೆ. ನವೆಂಬರ್‌ನಿಂದ ಚಿತ್ರೀಕರಣ ಶುರುವಾಗಲಿದೆ. ಬಾಲಯ್ಯ ನಟಿಸುತ್ತಿರುವ ಮುಂದಿನ ಚಿತ್ರಕ್ಕೆ ‘ಸರ್ಕಾರ್‌ ಸೀತಾರಾಮ್‌’ ಎಂದು ಹೆಸರಿಟ್ಟು ಘೋಷಿಸಲಾಗಿದೆ. ಸಿದ್ದು ನಟನೆಯ ಮುಂದಿನ ಚಿತ್ರ ‘ಕೊಹಿನೂರ್‌’ ಕೂಡ ಘೋಷಣೆಯಾಗಿದೆ. ಹಾಗೆಯೇ ಬಾಲಿವುಡ್‌ನಲ್ಲಿ‘ಗದರ್‌’ ಹಾಗೂ ‘ಗದರ್‌ 2’ ಸಿನಿಮಾ ಖ್ಯಾತಿಯ ಅನಿಲ್‌ ನಿರ್ದೇಶನದ ಮುಂದಿನ ಚಿತ್ರ ‘ವನವಾಸ್‌’ ಘೋಷಣೆಯಾಗಿದೆ. ‘ತುಂಬಾಡ್‌’ ನಟ ಸೋಹಮ್‌ ಮುಂದಿನ ಚಿತ್ರಕ್ಕೆ ‘ಕ್ರೇಝಿಎಕ್ಸ್‌ವೈ’ ಎಂದು ಹೆಸರಿಡಲಾಗಿದ್ದು, 6 ವರ್ಷಗಳ ಬಳಿಕ ಮತ್ತೆ ನಟಿಸುತ್ತಿದ್ದಾರೆ.

ಕಮರ್ಷಿಯಲ್‌ ಸಿನಿಮಾಗಳ ನಡುವೆ ಕನ್ನಡದಲ್ಲೊಂದು ಕ್ರಾಂತಿಕಾರಿ ಸಿನಿಮಾ ತಯಾರಾಗಿದೆ. ಅದುವೇ ‘ಸ್ವರಾಜ್ಯ 1942’. ಈ ಹಿಂದೆ ಹತ್ಯೆ ಸಿನಿಮಾ ನಿರ್ದೇಶಿಸಿದ್ದ ವರುಣ್‌ ಗಂಗಾಧರ್‌ ‘ಸ್ವರಾಜ್ಯ 1942’ ಚಿತ್ರಕ್ಕೆ ಆಕ್ಷನ್‌ ಕಟ್‌ ಹೇಳಿದ್ದಾರೆ.

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

ಸ್ಟೀಲ್ ನಟ್​ಗಳಲ್ಲಿ ಅರಳಿದ ಆದಿಯೋಗಿಯ ವಿಗ್ರಹ : ಉಡುಪಿ ಕಲಾವಿದನ ಕೈಚಳಕ

ಉಡುಪಿ: ಉಡುಪಿಯ ಮಟ್ಟು ಗ್ರಾಮದ ಡಿಪ್ಲೋಮಾ ಪದವೀಧರರೊಬ್ಬರು ಮೈಲ್ಡ್ ಸ್ಟೀಲ್ ನಟ್ಸ್​ಗಳಿಂದ 58 ಕೆ.ಜಿ. ತೂಕದ ಆದಿಯೋಗಿಯ ವಿಗ್ರಹ ತಯಾರಿಸಿ ಇಂಡಿಯನ್ ಬುಕ್ ಆಫ್...

ಭರತನಾಟ್ಯದ 52 ಮುದ್ರೆ 3 ವರ್ಷದ ಮಗು ಪ್ರದರ್ಶನ : ಗಿನ್ನಿಸ್ ದಾಖಲೆ ನಿರ್ಮಾಣ

ಕೇರಳ: ಭರತನಾಟ್ಯದ ಎಲ್ಲ 52 ಮುದ್ರೆಗಳನ್ನು ಪ್ರದರ್ಶಿಸುವ ಮೂಲಕ ಕೇರಳದ 3 ವರ್ಷದ ಪುಟ್ಟ ಮಗುವೊಂದು ಇಂಡಿಯಾ ಬುಕ್​ ಆಫ್​ ರೆಕಾರ್ಡ್ಸ್​ನಲ್ಲಿ ದಾಖಲೆ ನಿರ್ಮಿಸಿದೆ. "ನನ್ನ...

ಅಂಚೆ ಚೀಟಿ ಸಂಗ್ರಹ : ಗಿನ್ನೆಸ್​ ಬುಕ್​ ಆಫ್​ ರೆಕಾರ್ಡ್ ನಿಮಿಸಿದ ನಿವೃತ್ತ ನೌಕರ

ಉಡುಪಿ: ಕೆಲವೊಮ್ಮೆ ವ್ಯಕ್ತಿಗಳ ಹವ್ಯಾಸವೇ ಅವರನ್ನು ದೊಡ್ಡ ಸಾಧನೆಯತ್ತ ಕೊಂಡೊಯ್ಯುತ್ತದೆ. ಅದರಂತೆ ಕಾಲೇಜೊಂದರ ನಿವೃತ್ತ ಕಚೇರಿ ಸಹಾಯಕ ಡೇನಿಯಲ್​ ಮೊಂತೇರೊ ಅವರು ಅಂಚೆ ಚೀಟಿ...

ಎಸ್ ಸಿ ಎಸ್ ಟಿ ಗಳ ದೌರ್ಜನ್ಯ : ಸರ್ಕಾರದ ಬ್ರಹ್ಮಾಸ್ತ್ರ

ಬೆಂಗಳೂರು: SC/ ST ಸಮುದಾಯದ ಜನರ ಮೇಲೆ ನಡೆಯುವ ದೌರ್ಜನ್ಯ ಪ್ರಕರಣಗಳ ತಡೆಗೆ ಸರ್ಕಾರ ಬ್ರಹ್ಮಾಸ್ತ್ರ ರೆಡಿ ಮಾಡಿದೆ. SC/ST ಸಮುದಾಯದ ಜನರ ಮೇಲೆ...