ದರ್ಶನ್ ಕೇಸ್‌ಗೆ ಸಂಬಂಧಿಸಿ ಪೂರ್ತಿ ಮಾಹಿತಿ ತನಿಖೆ ನಡೆಸಿರುವ ಬೆಂಗಳೂರು ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿಯಲ್ಲಿ ಸಲ್ಲಿಕೆ ಮಾಡಿದ್ದಾರೆ. ಆಪಾದನಾ ಪಟ್ಟಿನಲ್ಲಿ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರ ಹೇಳಿಕೆಯನ್ನು ಸಾಕ್ಷಿಯಾಗಿ ಪರಿಗಣಿಸಲಾಗಿದೆ ಅಂತಾ ಉಲ್ಲೇಖಿಸಿದ್ದಾರೆ.
ಪೊಲೀಸರ ಚಾರ್ಜ್ಶೀಟ್ ವಿಜಯಲಕ್ಷ್ಮೀ ನೀಡಿರುವ ಮಾಹಿತಿ ಬಗ್ಗೆ ತಿಳಿಸಿದ್ದು, ಅದರಲ್ಲಿ ಪವಿತ್ರಗೌಡ ದರ್ಶನ್ಗೆ ಬ್ಲಾಕ್ ಮೇಲ್ ಮಾಡುತ್ತಿದ್ದರು ಅನ್ನೋ ವಿಚಾರ ಬೆಳಕಿಗೆ ಬಂದಿದೆ. 2014ರ ಜುಲೈನಲ್ಲಿ ದರ್ಶನ್ ಫೋನ್‌ನಲ್ಲಿ ಹುಡುಗಿಯ ಸಂಪರ್ಕ ಇರೋದು ಗೊತ್ತಾಗಿದೆ. ನಿರಂತರ ಸಂಪರ್ಕದಲ್ಲಿದ್ದಿದ್ದರಿಂದ ಪತಿಯ ಮೇಲೆ ಅನುಮಾನ ಬಂದಿತ್ತು. ಅವರು ಬೇರೆ ಯಾರೂ ಅಲ್ಲ. ಅಗಮ್ಯ ಸಿನಿಮಾದಲ್ಲಿ ನಟಿಸಿದ್ದ ಸ್ಮಿತಾ ಗೌಡ ಅಲಿಯಾಸ್ ಪವಿತ್ರಾ ಗೌಡ. ಸಿನಿಮಾದಲ್ಲಿರೋದ್ರಿಂದ ಯಾವುದೋ ವಿಚಾರಕ್ಕೆ ಕರೆ ಅಂದ್ಕೊಂಡಿದ್ದೆ.
2015ರಲ್ಲಿ ಒಬ್ಬ ಅಪರಿಚಿತ ಮಹಿಳೆ ನನಗೆ ಫೋನ್ ಮಾಡಿದ್ದರು. ನಿಮ್ಮ ಗಂಡ ದರ್ಶನ್ ನನ್ನ ಜೊತೆ ಲಿವ್ ಇನ್ ರಿಲೇಷನ್ ಶಿಪ್ನಲ್ಲಿದ್ದಾರೆ. ಪದೇ ಪದೆ ನಮ್ಮ ಮನೆಗೆ ಬರುತ್ತಿರುತ್ತಾರೆ ಅಂತ ಹೇಳಿದ್ದರು. ನಮ್ಮ ಮನೆಗೆ ಬರದಂತೆ ಬುದ್ಧಿ ಹೇಳಿ ಅಂತಲೂ ಆಕೆ ಹೇಳಿದ್ದಳು. ನನಗೆ ಆಶ್ಚರ್ಯವಾಗಿ, ಅವ್ರಿಗೆ ಬೈದು ಫೋನ್ ಕಟ್ ಮಾಡಿದ್ದೆ ಎಂದು ಹೇಳಿದ್ದಾರೆ.
ನನ್ನ ಆಪ್ತ ವಲಯದಿಂದ ದರ್ಶನ್ ಮತ್ತು ಪವಿತ್ರಾ ಬಗ್ಗೆ ಮತ್ತೆ ಮಾಹಿತಿ ಸಿಕ್ಕಿತ್ತು. ಖಾಸಗಿ ಫೋಟೋ ಮತ್ತು ವಿಡಿಯೋಗಳಿರುವ ಹಾರ್ಡ್ ಡಿಸ್ಕ್ ಇತ್ತು. ಅದನ್ನ ಪವಿತ್ರಾ ಗೌಡ ತನ್ನ ತಾಯಿಯ ಮನೆಯಲ್ಲಿ ಇಟ್ಟುಕೊಂಡಿದ್ದಳು. ಮಾಧ್ಯಮಗಳಿಗೆ ನೀಡೋದಾಗಿ ದರ್ಶನ್ಗೆ ಬ್ಲ್ಯಾಕ್ಮೇಲ್ ಮಾಡ್ತಿದ್ದಳು ಎಂದು ಈ ನನಗೆ ನನ್ನ ಆಪ್ತವಲಯದಿಂದ ತಿಳಿದು ಬಂದಿರುತ್ತದೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಅಂತಾ ಉಲ್ಲೇಖ ಮಾಡಲಾಗಿದೆ.