recruitment : ಸರ್ಕಾರದ ಇಡಿಸಿಎಸ್ ನಿರ್ದೇಶನಾಲಯದ ಇ-ಆಡಳಿತ ಇಲಾಖೆಯ ನಿರ್ದೇಶನದಂತೆ ಜಿಲ್ಲೆಯಲ್ಲಿ ಖಾಲಿ ಇರುವ ಗ್ರಾಮ ಒನ್ ಸೇವಾ ಕೇಂದ್ರಗಳಿಗೆ ಫ್ರಾಂಚೈಸಿಗಳನ್ನು ನೇಮಕ ಮಾಡಲು ಆಸಕ್ತ ಅರ್ಹ ಆಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಅಹ್ವಾನಿಸಲಾಗಿದೆ.
ಜಿಲ್ಲೆಯ 4 ಗ್ರಾಮ – ಒನ್ ಕೇಂದ್ರಗಳಿಗೆ ಫ್ರಾಂಚೈಸಿಯನ್ನು ನೇಮಕ ಮಾಡಲು ಉದ್ದೇಶಿಸಲಾಗಿದೆ.
ಬಳ್ಳಾರಿ ತಾಲ್ಲೂಕಿನ ರೂಪನಗುಡಿ, ಕಂಪ್ಲಿ ತಾಲ್ಲೂಕಿನ ರಾಮಸಾಗರ ಮತ್ತು ಸಿರುಗುಪ್ಪ ತಾಲ್ಲೂಕಿನ ಕೆ.ಸುಗೂರು, ಕೆಂಚನಗುಡ್ಡ ಗ್ರಾಮ ಪಂಚಾಯತಿ.
ಖಾಲಿಯಿರುವ ಗ್ರಾಮ ಒನ್ ಕೇಂದ್ರಗಳ ವಿವರ ಮತ್ತು ಅರ್ಜಿ ಸಲ್ಲಿಸಲು https://kal-mys.gramaone.karnataka.gov.in/ ಗೆ ಭೇಟಿ ನೀಡಬಹುದು.
ನಾಗರೀಕ ಸೇವಾ ಕೇಂದ್ರ ಗ್ರಾಮ ಒನ್ ಫ್ರಾಂಚೈಸಿಯನ್ನು ಬಯಸುವವರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನ ನವೆಂಬರ್ 15 ಆಗಿರುತ್ತದೆ ಎಂದು ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝುಬೇರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲೆಯಾದ್ಯಂತ 182 ಗ್ರಾಮ ಒನ್ ಕೇಂದ್ರಗಳು ಮಂಜೂರು ಮಾಡಲಾಗಿದ್ದು, ಪ್ರಸ್ತುತ 153 ಕೇಂದ್ರಗಳು ಚಾಲನೆಯಲ್ಲಿವೆ. ಇನ್ನುಳಿದ ಕೇಂದ್ರಗಳಿಗೆ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಜುಲೈ 15 ಕೊನೆಯ ದಿನವಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಂಪ್ಯೂಟರ್ ಜ್ಞಾನ ಹೊಂದಿರುವ ಪಿಯುಸಿ II/ಡಿಪ್ಲೊಮಾ/ಐಟಿಐ/ಪದವಿ/ ಸ್ನಾತಕೋತ್ತರ ಪದವಿ ಯಾವುದೇ ವಿಭಾಗದಲ್ಲೂ ಕನಿಷ್ಟ ಅರ್ಹತೆ ಹೊಂದಿರಬೇಕು. ರೂ. 1 ರಿಂದ 2 ಲಕ್ಷ ಬಂಡವಾಳ ಹೂಡಿಕೆ ಮಾಡುವ ಸಾಮಾಥ್ರ್ಯವಿರಬೇಕು. ಗ್ರಾಮಒನ್ ಪೊಲೀಸ್ ತಪಾಸಣಾ ಪ್ರಮಾಣ ಪತ್ರವನ್ನು ಸಲ್ಲಿಸಬೇಕು.
ಸಮುಚ್ಛಯವು ಕೇಂದ್ರ ಸ್ಥಾನದಲ್ಲಿರಬೇಕು ಮತ್ತು ಸಾರ್ವಜನಿಕರು ಸುಲಭವಾಗಿ ಸಂಪರ್ಕಿಸುವಂತಿರಬೇಕು (ದೊರೆಯುವಂತಿರಬೇಕು).
ಪ್ರಾಂಚೈನ್ ಮೂಲಕ ಸ್ಥಾಪಿಸಲಾಗುವ ಗ್ರಾಮ ಒನ್ ಕೇಂದ್ರವು ಒಂದು ವಿಶೇಷ (ಪ್ರತ್ಯೇಕ) ಪ್ರವೇಶವುಳ್ಳ ವಿಶೇಷ ವಿಭಜನೆ (ಪಾರ್ಟಿಷನ್) ಹೊಂದಿರಬೇಕು.
ಒಂದು ಕೌಂಟರ್‍ವುಳ್ಳ ಗ್ರಾಮಒನ್ ಕೇಂದ್ರಗಳು ಕನಿಷ್ಟ 100 ಚ.ಅಡಿಗಳ ಅಳತೆ ಹೊಂದಿರಬೇಕು. ಗ್ರಾಹಕರು ಕುಳಿತುಕೊಳ್ಳಲು ನಾಲ್ಕು ಕುರ್ಚಿಗಳು ಇರಬೇಕು.
ಬ್ರಾಂಡಿಂಗ್ (ಮುದ್ರೆಗಳು)ಗಳು ಗ್ರಾಮಒನ್ ಯೋಜನೆಯ ಬ್ರಾಂಡಿಂಗ್ ಗುಣಮಟ್ಟದ ರೀತಿಯಲ್ಲಿರಬೇಕು (ಹೆಸರಿನ ಫಲಕ/ದರಪಟ್ಟಿ/ ಕಟ್ಟಡದ ಬಣ್ಣ/ ಗ್ರಾಮಒನ್ ದ ಮನೋಗ್ರಾಂ). ಫ್ರಾಂಚೈಸಿಗಳು ತಮ್ಮ ಸಮುಚ್ಛಯವನ್ನು ಸ್ವಚ್ಛ ಮತ್ತು ಅಚ್ಚುಕಟ್ಟಾಗಿ ಇರಿಸಿರಬೇಕು.
ಕೊಠಡಿಯ ನೆಲಹಾಸು ಟೈಲ್ಸ್/ಗ್ರಾನೈಟ್‍ನಿಂದ ಕೂಡಿರಬೇಕು, ಆರ್.ಸಿ.ಸಿ. ಮೇಲ್ಛಾವಣಿ ಇರಬೇಕು ಮತ್ತು ಸೀಮೆಂಟ್ ಇಟ್ಟಿಗೆ/ ಸೀಮೆಂಟ್ ಕಲ್ಲಿನಿಂದ ಗೋಡೆಗಳು ನಿರ್ಮಾನವಾಗಿರಬೇಕು. ಯಾವುದೇ ಭಾಗದಲ್ಲೂ ನೀರು ಸೋರಿಕೆ ಕಂಡುಬರಬಾರದು.
ಕೊಠಡಿಯಲ್ಲಿ ಉತ್ತಮ ಗಾಳಿ ಬೆಳಕಿನ ವ್ಯವಸ್ಥೆ ಇರಬೇಕು ಹೊರಗಡೆ ವಾಹನ ನಿಲುಗಡೆಗೆ ಬೋರ್ಡ್‍ಗಳನ್ನು ಪ್ರದರ್ಶಿಸುವುದು ಇತ್ಯಾದಿಗಳಿಗಾಗಿ ಸಾಕಷ್ಟು ಸ್ಥಳಾವಕಾಶ ಇರಬೇಕು.
ಪೀಠೋಪಕರಣಗಳು ಗ್ರಾಮಒನ್‍ನಲ್ಲಿ ನಿರ್ಧಿಷ್ಟಗೊಳಿಸಿರದ ರೀತಿಯಲ್ಲಿರಬೇಕು (ಕೌಂಟರ್‍ಟೇಬಲ್/ ಆಪರೇಟರ್‍ರ ಕುರ್ಚಿ/ ಪ್ರಿಂಟರ್‍ಟೇಬಲ್/ ಗ್ರಾಹಕರು ಕಾಯುವ ಕುರ್ಚಿ). ಪ್ರಾಂಚೈಸಿಗಳು ಸಿ.ಸಿ.ಟಿ.ವಿ. ಕಣ್ಗಾವಲು ಮತ್ತು ಎಲ್.ಸಿ.ಡಿ.ಟಿ.ವಿ. ಯನ್ನು ಹೊಂದಿರಬೇಕು.