Virat Kohli News :
ಮೊದಲ ನಾಲ್ಕು ಟೆಸ್ಟ್ ಪಂದ್ಯಗಳಲ್ಲಿ ವಿಫಲವಾದ ನಂತರ, ಶರ್ಮಾ ಅವರನ್ನು ಐದನೇ ಟೆಸ್ಟ್ ಪಂದ್ಯದಿಂದ ಕೈಬಿಡಲಾಗಿತ್ತು. ರೋಹಿತ್ ಅನುಪಸ್ಥಿತಿಯಲ್ಲಿ, ಬುಮ್ರಾ ಭಾರತ ತಂಡವನ್ನು ಮುನ್ನಡೆಸಿದ್ದರು. ಇದೇ ವಿಚಾರ ಭಾರೀ ಚರ್ಚೆ ಆಗ್ತಿದೆ.
ಬಿಸಿಸಿಐ ಬುಮ್ರಾ ಅವರಿಗೆ ನಾಯಕತ್ವ ನೀಡುವುದಕ್ಕೂ ಮೊದಲು VIRAT KOHLIಗೆ ತಂಡವನ್ನು ಮುನ್ನಡೆಸುವಂತೆ ಮನವಿ ಮಾಡಿಕೊಂಡಿತ್ತು. ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಟೀಂ ಇಂಡಿಯಾ 3-1 ಅಂತರದಿಂದ ಸೋಲನ್ನು ಎದುರಿಸಿತು.
ಈ ಪ್ರವಾಸದ ಅವಧಿಯಲ್ಲಿ ನಾಯಕ ರೋಹಿತ್ ಶರ್ಮಾ ಭಾರೀ ಟೀಕೆಗೆ ಗುರಿಯಾದರು. ಕೊಹ್ಲಿ ನಾಯಕತ್ವದ ಪ್ರಸ್ತಾಪ ತಿರಸ್ಕರಿಸೋದು ಇದೇ ಮೊದಲಲ್ಲ. ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಣಜಿ ಟ್ರೋಫಿಯಲ್ಲಿ ದೆಹಲಿ ತಂಡವನ್ನು ಮುನ್ನಡೆಸಲು ನಿರಾಕರಿಸಿದ್ದರು. ಕೊಹ್ಲಿ ತಮ್ಮ ಬ್ಯಾಟಿಂಗ್ ಮೇಲೆ ಗಮನಹರಿಸಲು ಬಯಸಿದ್ದರು ಎನ್ನಲಾಗಿದೆ.
ವಿರಾಟ್ ಕೊಹ್ಲಿಗೆ ನಾಯಕತ್ವದ ಆಫರ್ ಸಿಕ್ಕಿರೂ ತಿರಸ್ಕರಿಸಿದರು ಎಂಬ ವಿಚಾರ ಬೆಳಕಿಗೆ ಬಂದಿದೆ. ಕೋಚ್ ಗಂಭೀರ್, ಐದನೇ ಟೆಸ್ಟ್ ಪಂದ್ಯಕ್ಕೆ ವಿರಾಟ್ ಕೊಹ್ಲಿ ನಾಯಕತ್ವ ವಹಿಸಬೇಕೆಂದು ಬಯಸಿದರು. ಆದರೆ ಕೊಹ್ಲಿ ಗೌತಮ್ ಗಂಭೀರ್ ಅವರ ಮಾತುಗಳನ್ನು ತಿರಸ್ಕರಿಸಿದರು. ನಂತರ ಬುಮ್ರಾ ನಾಯಕತ್ವ ವಹಿಸಿಕೊಂಡರು.
ಇದನ್ನು ಓದಿರಿ : MAHAKUMBHMELA : 16 ಸಾವಿರ ಕೆಲಸಗಾರರು, 80 ದಿನದಲ್ಲಿ 26 ಹೆಕ್ಟರ್ ಹೆಚ್ಚುವರಿ ಭೂಮಿ ರೆಡಿ!