spot_img
spot_img

VIRAT KOHLI RANJI TROPHY:ವಿರಾಟ್ ಕೊಹ್ಲಿ ಔಟ್ ಮಾಡುವುದರ ಹಿಂದೆ ಬಸ್ ಚಾಲಕನ ಮಾಸ್ಟರ್ ಪ್ಲಾನ್.

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

New Delhi News:

ಇದರೊಂದಿಗೆ ಕೇವಲ 6 ರನ್​ಗಳಿಗೆ ಪೆವಿಲಿಯನ್​ ಸೇರಿಕೊಂಡಿದ್ದರು. ಕೊಹ್ಲಿ ವಿಕೆಟ್​ ಪಡೆಯುತ್ತಿದ್ದಂತೆ ಹಿಮಾಂಶು ಸಾಂಗ್ವಾನ್​ ಕುರಿತು ಭಾರೀ ಚರ್ಚೆಯಾಗಿದ್ದವು. ವಿಶ್ವದ ಶ್ರೇಷ್ಠ ಬ್ಯಾಟರ್​ನನ್ನೇ ಔಟ್​ ಮಾಡಿದ ಹಿಮಾಂಶು ಸಾಂಗ್ವಾನ್​ಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿತ್ತು.ಇತ್ತೀಚೆಗೆ 12 ವರ್ಷಗಳ ನಂತರ ರಣಜಿ ಪಂದ್ಯವನ್ನು ಆಡಿದ್ದ VIRAT KOHLIಗೆ ಕಹಿ ಅನುಭವವಾಗಿತ್ತು.

ರೈಲ್ವೇಸ್​ ವಿರುದ್ಧ ನಡೆದಿದ್ದ ಪಂದ್ಯದಲ್ಲಿ ದೆಹಲಿ ಪರ ಕಣಕ್ಕಿಳಿದಿದ್ದ VIRAT KOHLI, ಹಿಮಾಂಶು ಸಾಂಗ್ವಾನ್​ ಎಸೆದ ಬೌಲಿಂಗ್​ನಲ್ಲಿ ಕ್ಲೀನ್​ ಬೋಲ್ಡ್​ ಆಗಿದ್ದರು.ಇತ್ತೀಚೆಗೆ ರಣಜಿ ಟ್ರೋಫಿಯಲ್ಲಿ VIRAT KOHLI ಅವರನ್ನು ಕ್ಲೀನ್​ ಬೋಲ್ಡ್​ ಮಾಡಿ ಭಾರೀ ಸದ್ದು ಮಾಡಿದ್ದ ಹಿಮಾಂಶು ಸಾಂಗ್ವಾನ್ ಕೊಹ್ಲಿ ವಿಕೆಟ್​ ಪಡೆದಿದ್ದರ ಹಿಂದಿನ ಪ್ಲಾನ್​ ಬಗ್ಗೆ ತಿಳಿಸಿದ್ದಾರೆ.ಇದೀಗ ಸ್ವತಃ ಸಾಂಗ್ವಾನ್​, VIRAT KOHLI ವಿಕೆಟ್​ ಕುರಿತು ಕೆಲ ಆಸಕ್ತಿಕರ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.

ರಣಜಿ ಪಂದ್ಯ ಆರಂಭಕ್ಕೂ ಮುನ್ನವೇ ದೆಹಲಿ ಪರ VIRAT KOHLI ಮತ್ತು ರಿಷಭ್​ ಪಂತ್​ ಆಡುತ್ತಿದ್ದಾರೆ ಎಂದು ನಮ್ಮ ತಂಡಕ್ಕೆ ತಿಳಿಸಲಾಗಿತ್ತು. ಆದರೆ ಈ ಪಂದ್ಯವನ್ನು ನೇರ ಪ್ರಸಾರ ಮಾಡಲಾಗುತ್ತಿದೆ ಎಂಬುದು ಮೊದಲಿಗೆ ನಮಗ್ಯಾರಿಗೂ ಗೊತ್ತಿರಲಿಲ್ಲ. ಬಳಿಕ ಈ ಬಗ್ಗೆಯೂ ನಮಗೆ ತಿಳಿಸಲಾಯಿತು. ಅಲ್ಲದೆ ಅವರ ವಿಕೆಟ್​ ಪಡೆಯುವುದು ಹೇಗೆ ಎಂದು ತಂಡದ ಸದಸ್ಯರೆಲ್ಲ ಚರ್ಚಿಸಿದೆವು.

ಈ ವೇಳೆ ನನ್ನ ಸಹ ಆಟಗಾರರು ಕೊಹ್ಲಿ ಅವರ ವಿಕೆಟ್​ ಪಡೆಯುವ ಜವಾಬ್ದಾರಿ ನಿನ್ನ ಮೇಲಿದೆ. ಹೇಗಾದರೂ ಮಾಡಿ ಅವರನ್ನು ಔಟ್​ ಮಾಡಬೇಕು ಎಂದು ಹೇಳಿದರು.

Bus Driver Advice:ನಂತರ ಕೊಹ್ಲಿ ಅವರೇ ಸ್ವತಃ ನನ್ನನ್ನು ತಡೆದು ಕೈಕುಲುಕಿ, ನೀವು ತುಂಬಾ ಅದ್ಭುತವಾಗಿ ಬೌಲಿಂಗ್ ಮಾಡಿದ್ದೀರಿ. ನಿಮ್ಮ ಬೌಲಿಂಗ್​ ಶೈಲಿಯೂ ಉತ್ತಮವಾಗಿದೆ ಎಂದು ಹುರಿದುಂಬಿಸಿದರು. ನಂತರ ಊಟದ ವಿರಾಮದ ವೇಳೆ ನಿಮ್ಮೊಂದಿಗೆ ಒಂದು ಫೋಟೋ ಬೇಕು ಎಂದು VIRAT KOHLIಗೆ ಕೇಳಿದೆ. ಅದಕ್ಕೆ ಅವರು ಅವಕಾಶ ಮಾಡಿಕೊಟ್ಟರು ಎಂದು ಹಿಮಾಂಶು ಸಾಂಗ್ವಾನ್​ ತಿಳಿಸಿದರು.

ನನಗೆ ನಮ್ಮ ಸಹ ಆಟಗಾರರು ಮಾತ್ರವಲ್ಲದೆ ಬಸ್​ ಚಾಲಕ ಕೂಡ ಸಲಹೆ ನೀಡಿದ್ದರು. ನಾವು ಬಸ್ಸಿನಲ್ಲಿ ಮೈದಾನಕ್ಕೆ ಪ್ರಯಾಣಿಸುತ್ತಿದ್ದಾಗ, ಬಸ್​ ಚಾಲಕ ನನ್ನೊಂದಿಗೆ ಮಾತನಾಡುತ್ತ, ನೀವು VIRAT KOHLIಯನ್ನು ಔಟ್​ ಮಾಡಬೇಕಾದರೆ ನಾಲ್ಕನೇ ಅಥವಾ ಐದನೇ ಸ್ಟಂಪ್​ ಲೈನ್​ನಲ್ಲಿ ಬೌಲಿಂಗ್​ ಮಾಡಿ.

ಆಗ ಅವರ ವಿಕೆಟ್​ ಪಡೆಯಬಹುದು ಎಂದಿದ್ದರು.ವಿಕೆಟ್​ ಬಳಿಕ VIRAT KOHLI ಪ್ರತಿಕ್ರಿಯೆ ಕುರಿತು ಮಾತನಾಡಿದ ಅವರು, ನಮ್ಮ ಇನ್ನಿಂಗ್ಸ್ ಮುಗಿದ ಬಳಿಕ ನಾನು ಡ್ರೆಸ್ಸಿಂಗ್ ರೂಂನತ್ತ ಹೋಗುತ್ತಿದ್ದೆ. ಈ ವೇಳೆ ಆಯುಷ್​ ಬಡೋನಿ ಮತ್ತು VIRAT KOHLI​ ಜೊತೆಯಾಗಿ ಮೈದಾನಕ್ಕೆ ಬರುತ್ತಿದ್ದರು.ಕೊನೆಯಲ್ಲಿ ನಾನು ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ಬೌಲಿಂಗ್​​ ಮಾಡಿ VIRAT KOHLI ವಿಕೆಟ್​ ಪಡೆಯುವಲ್ಲಿ ಯಶಸ್ವಿಯಾದೆ ಎಂದು ಹಿಮಾಂಶು ಸಾಂಗ್ವಾನ್​ ತಿಳಿಸಿದರು.

 

ಇದನ್ನು ಓದಿರಿ :

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

RASHMIKA MANDANNA – ‘ನಾನು ಹೈದರಾಬಾದ್ನವಳು’: ರಶ್ಮಿಕಾ ಮಂದಣ್ಣ ಹೇಳಿಕೆ ವಿಚಾರ; ಮುಂದುವರಿದ ಪರ – ವಿರೋಧ ಚರ್ಚೆ

'ನ್ಯಾಷನಲ್ ಕ್ರಶ್' ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಜನಪ್ರಿಯ ನಟಿ RASHMIKA MANDANNA, ಭಾರತೀಯ ಚಿತ್ರರಂಗದಲ್ಲಿ ಮೋಡಿ ಮಾಡಿದ್ದಾರೆ. ತಮ್ಮ ನಟನಾ ಕೌಶಲ್ಯದಿಂದ ದೇಶಾದ್ಯಂತ ಅಭಿಮಾನಿಗಳ...

IPL SUBSCRIPTION PLANS – ಕೆಲವೇ ದಿನಗಳಲ್ಲಿ IPL ಹವಾ ಶುರು: ಈ ಕಂಪನಿಗಳ ಗ್ರಾಹಕರಿಗೆ ಅಗ್ಗದಲ್ಲಿ ಲಭ್ಯ!

JioHotstar Subscription: ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್‌ ಟೂರ್ನಿ ಮುಗೀತು. ಮುಂದಿನ ಕೆಲವೇ ದಿನಗಳಲ್ಲಿ ಐಪಿಎಲ್​ ಜಾತ್ರೆ ಆರಂಭವಾಗಲಿದೆ. ಇದಕ್ಕಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ...

IPHONE 17 SERIES – ಐಫೋನ್ 17 ಸೀರಿಸ್ ಡಿಟೆಲ್ಸ್ ಲೀಕ್ – ಇದರ ಸ್ಪೆಷಾಲಿಟಿ ಏನ್ ಗೊತ್ತಾ?

iPhone 17 Series: ಟೆಕ್ ದೈತ್ಯ ಆಪಲ್ ತನ್ನ ಹೊಸ ಐಫೋನ್ ಸೀರಿಸ್​ ಅನ್ನು ಪ್ರತಿ ವರ್ಷ ಮಾರುಕಟ್ಟೆಗೆ ಪರಿಚಯಿಸುತ್ತದೆ. ಈ ಕ್ರಮದಲ್ಲಿ ಈ ವರ್ಷವೂ...

BSNL HOLI OFFERS – ಗ್ರಾಹಕರಿಗೆ ಹೋಳಿ ಬಿಗ್ ಗಿಫ್ಟ್ ಕೊಟ್ಟ ಬಿಎಸ್ಎನ್ಎಲ್: 30 ದಿನಗಳ ಉಚಿತ ವ್ಯಾಲಿಡಿಟಿ, ಡೇಟಾ !!

BSNL Holi Prepaid Plans Offers: ಬಿಎಸ್​ಎನ್​ಎಲ್​ ಬಳಕೆದಾರರಿಗೆ ಸಿಹಿ ಸುದ್ದಿ. ಹೋಳಿ ಹಬ್ಬದ ಸಂದರ್ಭದಲ್ಲಿ ಕಂಪನಿಯು ಬಂಪರ್ ಆಫರ್ ನೀಡುತ್ತಿದೆ. ಇದು ತನ್ನ ರೀಚಾರ್ಜ್...