spot_img
spot_img

VIVO V50 LAUNCH DATE:ದೇಶದ ಮಾರುಕಟ್ಟೆಗೆ ಲಗ್ಗೆಯಿಡಲು ಸಜ್ಜಾದ ವಿವೋ ವಿ50, ಇದರ ಸಂಭಾವ್ಯ ಫೀಚರ್ಸ್, ಬೆಲೆ ಹೀಗಿದೆ!

spot_img
spot_img

Share post:

 

Vivo V50 to Launch in India News:

VIVO V50 ತನ್ನ ಮುಂಬರುವ ಸ್ಮಾರ್ಟ್​ಫೋನ್​ ಅನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಲು ಸಿದ್ಧವಾಗಿದೆ. ಈ ಹಿನ್ನೆಲೆ ಬಿಡುಗಡೆ ದಿನಾಂಕವನ್ನು ಪ್ರಕಟಿಸಿದೆ.ಈ VIVO V50 ಸ್ಮಾರ್ಟ್‌ಫೋನ್ ಕುರಿತು ಕಳೆದ ಕೆಲವು ದಿನಗಳಿಂದ ಹಲವು ವರದಿಗಳು ಹೊರಬರುತ್ತಲೇ ಇವೆ.

ಇವುಗಳಲ್ಲಿ ಈ ಫೋನಿನ ಸ್ಪೆಸಿಫಿಕೇಶನ್​ ಕುರಿತು ಹಲವು ರೀತಿಯ ಊಹಾಪೋಹಗಳು ಕೇಳಿಬರುತ್ತಿವೆ. VIVO V50 ಕಂಪನಿಯ ಈ ಫೋನ್ ಕಳೆದ ವರ್ಷ ಬಿಡುಗಡೆ ಮಾಡಿದ ವಿವೋ ವಿ40 ಸ್ಮಾರ್ಟ್‌ಫೋನ್​ನ ಮುಂದುವರಿದ ಭಾಗವಾಗಿದೆ. ಕೊನೆಗೂ VIVO V50 ತನ್ನ ಮುಂಬರುವ ಹೊಸ ಸ್ಮಾರ್ಟ್​ಫೋನ್​ ಸ್ವದೇಶಿ ಮಾರುಕಟ್ಟೆಗೆ ಪರಿಚಯಿಸುವ ದಿನಾಂಕವನ್ನು ಪ್ರಕಟಿಸಿದೆ. ಹೌದು, ಕಂಪನಿ VIVO V50 ಬಿಡುಗಡೆ ದಿನಾಂಕವನ್ನು ಬಹಿರಂಗಪಡಿಸಿದೆ. ಇದರ ಬಿಡುಗಡೆ ದಿನಾಂಕ ಮತ್ತು ಫೀಚರ್ಸ್​ ಜೊತೆ ಇತರೆ ಮಾಹಿತಿ ಇಲ್ಲಿದೆ.

Potential Features of Vivo V50:ವರದಿಗಳ ಪ್ರಕಾರ, ಈ VIVO V50 ಫೋನ್‌ನ ವಿನ್ಯಾಸವು ಕಳೆದ ವರ್ಷ ಬಿಡುಗಡೆಯಾದ ವಿ40 ಮಾದರಿಯಲ್ಲಿರುತ್ತದೆ. ಇದರೊಂದಿಗೆ, ಈ ಫೋನ್ IP68 ಮತ್ತು 69 ರೇಟಿಂಗ್ ಸರ್ಟಿಫಿಕೇಶನ್​ ಜೊತೆ ಬರಬಹುದು.

VIVO V50 ಸ್ಮಾರ್ಟ್‌ಫೋನ್ ಬಗ್ಗೆ ಹೇಳಲಾಗುತ್ತಿದ್ದು, ಇದು ಕ್ವಾಡ್ ಕರ್ವ್ ಡಿಸ್​ಪ್ಲೇಯನ್ನು ಹೊಂದಿರುತ್ತದೆ. ಈ ಫೋನ್ ರೋಸ್ ರೆಡ್, ಟೈಟಾನಿಯಂ ಗ್ರೇ ಮತ್ತು ಸ್ಟಾರಿ ಬ್ಲೂ ಬಣ್ಣಗಳಲ್ಲಿ ಬಿಡುಗಡೆಯಾಗಲಿದೆ.ಈ VIVO V50 ಫೋನ್‌ನಲ್ಲಿ ಝೈಸ್-ಬ್ರಾಂಡೆಡ್ ಡ್ಯುಯಲ್ 50MP ರಿಯರ್​ ಕ್ಯಾಮರಾ ಸೆಟಪ್ ಅಳವಡಿಸಲಾಗಿದೆ. ಇದರೊಂದಿಗೆ ವಿಡಿಯೋ ಮತ್ತು ಸೆಲ್ಫಿಗಾಗಿ 50MP ಮುಂಭಾಗದ ಕ್ಯಾಮರಾವನ್ನು ಸಹ ಒದಗಿಸಬಹುದು.

ಈ ಫೋನ್ ಅನ್ನು ಎಲ್ಲಾ ಫೋಟೋಗ್ರಫಿ ವೈಶಿಷ್ಟ್ಯಗಳೊಂದಿಗೆ ಬಿಡುಗಡೆ ಮಾಡಬಹುದು. ಬೆಲೆಯ ಬಗ್ಗೆ ಹೇಳುವುದಾದರೆ, ಕಳೆದ ವರ್ಷ ಕಂಪನಿಯು Vivo V40 ಸ್ಮಾರ್ಟ್‌ಫೋನ್ ಅನ್ನು 34,999 ರೂ. ಆರಂಭಿಕ ಬೆಲೆಗೆ ಬಿಡುಗಡೆ ಮಾಡಿತು. ಕಂಪನಿಯು ತನ್ನ ಬೆಲೆಯನ್ನು ಕಡಿತಗೊಳಿಸಿ ಅದೇ ಬೆಲೆಗೆ ಹೊಸ ಫೋನ್ ಅನ್ನು ಬಿಡುಗಡೆ ಮಾಡುವ ಸಾಧ್ಯತೆಯಿದೆ ಎಂಬ ವರದಿಗಳು ನಮ್ಮ ಸುತ್ತ ಸುತ್ತಾಡುತ್ತಿವೆ..

ಬ್ಯಾಟರಿಯ ಬಗ್ಗೆ ಹೇಳುವುದಾದರೆ, ಈ ಒನ್‌ಪ್ಲಸ್ ಫೋನ್‌ನಲ್ಲಿ 6000mAh ನ ಪವರ್​ಫುಲ್​ ಬ್ಯಾಟರಿಯನ್ನು ಒದಗಿಸಬಹುದು. ಆದರೂ ಕಂಪನಿಯು ಕಳೆದ ವರ್ಷ ಬಿಡುಗಡೆಯಾದ VIVO V50ವಿ 40 ಸ್ಮಾರ್ಟ್‌ಫೋನ್‌ನಲ್ಲಿ 5500mAh ಬ್ಯಾಟರಿಯನ್ನು ಒದಗಿಸಿತ್ತು. ಈ ಫೋನಿನ ಸಾಫ್ಟ್‌ವೇರ್ ಬಗ್ಗೆ ಹೇಳುವುದಾದರೆ, ಈ ಫೋನನ್ನು ಕಂಪನಿಯ ಇತ್ತೀಚಿನ ಕಸ್ಟಮ್ ಸ್ಕಿನ್, ಆಂಡ್ರಾಯ್ಡ್ 15 ಆಧಾರಿತ ಫಂಟೌಚ್ ಓಎಸ್ 15 ನೊಂದಿಗೆ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಬಹುದು ಎಂದು ಹೇಳಲಾಗುತ್ತಿದೆ.

 

ಇದನ್ನು ಓದಿರಿ :FOODS TO REDUCE MENOPAUSE BELLY:40 ವರ್ಷದ ಬಳಿಕ ಮಹಿಳೆಯರಿಗೆ ಬೆಲ್ಲಿ ಫ್ಯಾಟ್ ಹೆಚ್ಚಾಗುತ್ತದೆಯೇ?

Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

MOTOROLA EDGE 60 FUSION – ಅದ್ಭುತವಾದ ಕ್ಯಾಮೆರಾ ಸೆಟಪ್, ವಾಟರ್ ಪ್ರೊಟೆಕ್ಷನ್ – ಮೊಟೊರೊಲಾದ ಹೊಸ ಫೋನ್ನ ಬೆಲೆ ಕೇವಲ ಇಷ್ಟೇ!

Motorola Edge 60 Fusion: ಬಹುನಿರೀಕ್ಷಿತ ' MOTOROLA EDGE 60 FUSION' ಕೊನೆಗೂ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಕಂಪನಿಯು ಇದನ್ನು ' MOTOROLA EDGE...

RASHMIKA MANDANNA – ‘ನಾನು ಹೈದರಾಬಾದ್ನವಳು’: ರಶ್ಮಿಕಾ ಮಂದಣ್ಣ ಹೇಳಿಕೆ ವಿಚಾರ; ಮುಂದುವರಿದ ಪರ – ವಿರೋಧ ಚರ್ಚೆ

'ನ್ಯಾಷನಲ್ ಕ್ರಶ್' ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಜನಪ್ರಿಯ ನಟಿ RASHMIKA MANDANNA, ಭಾರತೀಯ ಚಿತ್ರರಂಗದಲ್ಲಿ ಮೋಡಿ ಮಾಡಿದ್ದಾರೆ. ತಮ್ಮ ನಟನಾ ಕೌಶಲ್ಯದಿಂದ ದೇಶಾದ್ಯಂತ ಅಭಿಮಾನಿಗಳ...

IPL SUBSCRIPTION PLANS – ಕೆಲವೇ ದಿನಗಳಲ್ಲಿ IPL ಹವಾ ಶುರು: ಈ ಕಂಪನಿಗಳ ಗ್ರಾಹಕರಿಗೆ ಅಗ್ಗದಲ್ಲಿ ಲಭ್ಯ!

JioHotstar Subscription: ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್‌ ಟೂರ್ನಿ ಮುಗೀತು. ಮುಂದಿನ ಕೆಲವೇ ದಿನಗಳಲ್ಲಿ ಐಪಿಎಲ್​ ಜಾತ್ರೆ ಆರಂಭವಾಗಲಿದೆ. ಇದಕ್ಕಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ...

IPHONE 17 SERIES – ಐಫೋನ್ 17 ಸೀರಿಸ್ ಡಿಟೆಲ್ಸ್ ಲೀಕ್ – ಇದರ ಸ್ಪೆಷಾಲಿಟಿ ಏನ್ ಗೊತ್ತಾ?

iPhone 17 Series: ಟೆಕ್ ದೈತ್ಯ ಆಪಲ್ ತನ್ನ ಹೊಸ ಐಫೋನ್ ಸೀರಿಸ್​ ಅನ್ನು ಪ್ರತಿ ವರ್ಷ ಮಾರುಕಟ್ಟೆಗೆ ಪರಿಚಯಿಸುತ್ತದೆ. ಈ ಕ್ರಮದಲ್ಲಿ ಈ ವರ್ಷವೂ...