New Delhi News:
ರಾಷ್ಟ್ರ ರಾಜಧಾನಿಯಲ್ಲಿ ಬುಧವಾರ ನಡೆದ WAQF JPC ಜಂಟಿ ಸಂಸದೀಯ ಸಮಿತಿ (ಜೆಪಿಸಿ) ಸಭೆಯಲ್ಲಿ ವಕ್ಫ್ ಕರಡು ಮಸೂದೆಯನ್ನು ಸ್ವೀಕರಿಸಲಾಗಿದೆ. ಮಸೂದೆಯ ಪರವಾಗಿ 14 ಹಾಗೂ ವಿರುದ್ಧ 11 ಮತಗಳು ಚಲಾವಣೆಯಾದವು. ಜೆಪಿಸಿಯ ವಿರೋಧ ಪಕ್ಷದ ಸದಸ್ಯರು ಇಂದು (ಜ.29) ಸಂಜೆ 4 ಗಂಟೆಯೊಳಗೆ ತಮ್ಮ ಭಿನ್ನಾಭಿಪ್ರಾಯಗಳನ್ನು ದಾಖಲಿಸಬಹುದು.
WAQF JPC ಸಭೆ ಬುಧವಾರ ಬೆಳಗ್ಗೆ ಮುಕ್ತಾಯಗೊಂಡಿದೆ. ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್ಡಿಎ) ಸದಸ್ಯರು ಪ್ರಸ್ತಾಪಿಸಿದ 14 ತಿದ್ದುಪಡಿಗಳೊಂದಿಗೆ ವಕ್ಫ್ ತಿದ್ದುಪಡಿ ಮಸೂದೆಯನ್ನುWAQF JPC ಸೋಮವಾರ ಅಂಗೀಕರಿಸಿತ್ತು.
ವಿರೋಧ ಪಕ್ಷದ ಸಂಸದರು 44 ಬದಲಾವಣೆಗಳನ್ನು ಪ್ರಸ್ತಾಪಿಸಿದ್ದರು. ಆದರೆ, ಅವುಗಳನ್ನು ತಿರಸ್ಕರಿಸಲಾಯಿತು. ಇದು ರಾಜಕೀಯ ಪಕ್ಷಗಳ ಕೋಲಾಹಲಕ್ಕೆ ಕಾರಣವಾಗಿತ್ತು. ಸದ್ಯ ಪ್ರಸ್ತಾವಿತ ಬದಲಾವಣೆಗಳ ಮೇಲೆ ಇಂದು ಮತದಾನ ನಡೆಯಿತು. ಸಭೆಗೂ ಮುನ್ನ ಮಾತನಾಡಿದ ವಕ್ಫ್ (ತಿದ್ದುಪಡಿ) ಮಸೂದೆಯನ್ನು ಪರಿಶೀಲಿಸುತ್ತಿರುವ ಸಂಸತ್ತಿನ ಜಂಟಿ ಸಮಿತಿಯ ಅಧ್ಯಕ್ಷ ಜಗದಾಂಬಿಕಾ ಪಾಲ್, ಸಮಿತಿಯ ಕರಡು ವರದಿ ಮತ್ತು ಪ್ರಸ್ತಾವಿತ ಕಾನೂನಿನ ತಿದ್ದುಪಡಿ ಆವೃತ್ತಿಯನ್ನು ಬುಧವಾರದ ಸಭೆಯಲ್ಲಿ ಅಂಗೀಕರಿಸಲಾಗುವುದು ಎಂದು ಹೇಳಿದ್ದರು.
ಬಹುಶಃ ಈ ಸಭೆಯು ಸಮಿತಿಯ ಕೊನೆಯ ಸಭೆಯಾಗಬಹುದು ಎನ್ನಲಾಗಿದೆ. ಪ್ರಸ್ತಾವಿತ ಮಸೂದೆಯಲ್ಲಿನ ಒಂದು ತಿದ್ದುಪಡಿಯು ಆಸ್ತಿಯು ವಕ್ಫ್ ಆಸ್ತಿಯೇ ಅಥವಾ ಅಲ್ಲವೇ ಎಂಬುದನ್ನು ನಿರ್ಧರಿಸಲು ಅಧಿಕಾರಿಯೊಬ್ಬರನ್ನು ನೇಮಿಸಲು ರಾಜ್ಯ ಸರ್ಕಾರಕ್ಕೆ ಅಧಿಕಾರ ನೀಡುವ ಗುರಿ ಹೊಂದಿದೆ. ಹಿಂದಿನ ಕಾನೂನಿನ ಪ್ರಕಾರ ಈ ಅಧಿಕಾರ ಜಿಲ್ಲಾಧಿಕಾರಿಗಳಿಗೆ ಇದೆ.
1995ರ ವಕ್ಫ್ ಕಾಯ್ದೆಯಲ್ಲಿ ಆಸ್ತಿಯ ಮಾಲೀಕತ್ವ ನಿರ್ಧರಿಸುವ ಅಧಿಕಾರವನ್ನು ಸರ್ವೇ ಆಯುಕ್ತರು ಮತ್ತು ಹೆಚ್ಚುವರಿ ಆಯುಕ್ತರಿಗೆ ನೀಡಲಾಗಿತ್ತು. ದೇಶಾದ್ಯಂತ ವಕ್ಫ್ ಮಂಡಳಿಗಳನ್ನು ನಿರ್ವಹಿಸುವ ವಿಧಾನದಲ್ಲಿ ಸುಧಾರಣೆಗಳನ್ನು ತರಲು ಉದ್ದೇಶಿಸಲಾದ WAQF JPC ತಿದ್ದುಪಡಿ ಮಸೂದೆಯನ್ನು ಸೋಮವಾರ ಜೆಪಿಸಿ 16:10 ಸದಸ್ಯರ ಮತಗಳ ಅಂತರದಿಂದ (ಎನ್ಡಿಎಯಿಂದ 16 ಮತ್ತು ವಿರೋಧ ಪಕ್ಷಗಳಿಂದ 10) ಅಂಗೀಕರಿಸಿತ್ತು.
ತಿದ್ದುಪಡಿ ಮಸೂದೆಯಲ್ಲಿ ‘ಕಡ್ಡಾಯ’ ಎಂಬ ಪದವನ್ನು ಕೈಬಿಡಲಾಗಿದ್ದು, ಓರ್ವ ವಿದ್ವಾಂಸ ಸೇರಿದಂತೆ ಮಂಡಳಿಯ ಸದಸ್ಯರ ಸಂಖ್ಯೆಯನ್ನು ಮೂರಕ್ಕೆ ಹೆಚ್ಚಿಸುವ ಬಗ್ಗೆ ಪ್ರಸ್ತಾಪಿಸಲಾಗಿದೆ. ವರದಿಗಳ ಪ್ರಕಾರ,WAQF JPC ಮಸೂದೆಯಲ್ಲಿ ಒಟ್ಟು 66 ತಿದ್ದುಪಡಿಗಳನ್ನು ಪ್ರಸ್ತಾಪಿಸಲಾಗಿದೆ.
ಇದರಲ್ಲಿ ಆಡಳಿತಾರೂಢ ಬಿಜೆಪಿ ಸಂಸದರು 23 ಮತ್ತು ವಿರೋಧ ಪಕ್ಷದ ಸಂಸದರು 44 ಬದಲಾವಣೆಗಳನ್ನು ಪ್ರಸ್ತಾಪಿಸಿದ್ದರು. ಪ್ರಸ್ತುತ ಕೇಂದ್ರ ವಕ್ಫ್ ಮಂಡಳಿ ಮತ್ತು ರಾಜ್ಯ ವಕ್ಫ್ ಮಂಡಳಿಗಳಲ್ಲಿ ಇಬ್ಬರು ಮುಸ್ಲಿಮೇತರ ಸದಸ್ಯರನ್ನು ಸೇರಿಸುವುದನ್ನು ಕಡ್ಡಾಯಗೊಳಿಸುವ ಪ್ರಸ್ತಾವನೆಯನ್ನೂ ಸಮಿತಿ ಅನುಮೋದಿಸಿದೆ.
ಇದನ್ನು ಓದಿರಿ : DAVID MILLER:ಐಸಿಸಿ ಚಾಂಪಿಯನ್ಸ್ ಟ್ರೋಫಿಗೂ ಮೊದಲೇ ದಕ್ಷಿಣ ಆಫ್ರಿಕಾಗೆ ದೊಡ್ಡ ಆಘಾತ!