spot_img
spot_img

ಐಫೋನ್​, ಐಪ್ಯಾಡ್​, ಮ್ಯಾಕ್​ ಬಳಕೆದಾರರಿಗೆ ಎಚ್ಚರಿಕೆ: CERT-In

spot_img
spot_img

Share post:

Apple iPhone: ಕೇಂದ್ರ ಸರ್ಕಾರದ ಇಂಡಿಯನ್​ ಕಂಪ್ಯೂಟರ್ ಎಮೆರ್ಜೆನ್ಸ್​ ರೆಸ್ಪಾನ್ಸ್​ ಟೀಂ (CERT-In) ಐಫೋನ್​ ಮತ್ತು ಇತರ ಆಪಲ್​ ಸಾಧನ ಬಳಕೆದಾರರಿಗೆ ಎಚ್ಚರಿಕೆ ಸಂದೇಶ ರವಾನಿಸಿದೆ. ಹಳೆಯ ಸಾಫ್ಟ್‌ವೇರ್ ಆವೃತ್ತಿಗಳನ್ನು ಬಳಸುತ್ತಿರುವ ಸಾಧನಗಳಿಗೆ ವಿಶೇಷವಾಗಿ ಈ ಎಚ್ಚರಿಕೆಯನ್ನು ನೀಡಲಾಗಿದೆ.

ವರದಿಯ ಪ್ರಕಾರ, ಈ ಸಾಧನಗಳಲ್ಲಿ ಗಂಭೀರವಾದ ಭದ್ರತಾ ದೋಷಗಳು ಕಂಡುಬಂದಿವೆ. ಇದು ಸೈಬರ್ ಬೆದರಿಕೆಗಳನ್ನು ಉತ್ತೇಜಿಸುತ್ತದೆ.

ಆಪಲ್​ ಸಾಫ್ಟ್‌ವೇರ್‌ನ ಹಳೆಯ ಆವೃತ್ತಿಯನ್ನು ಆಧರಿಸಿದ ಸಾಧನಗಳಿಗೆ ಈ ಎಚ್ಚರಿಕೆಯನ್ನು ನೀಡಲಾಗಿದೆ. ಅಂದ್ರೆ ಐಫೋನ್​, ಐಪ್ಯಾಡ್​, ಮ್ಯಾಕ್​ ಮತ್ತು ಸಫಾರಿನಂತಹ ಉತ್ಪನ್ನಗಳನ್ನು ಸಹ ಈ ಪಟ್ಟಿಯಲ್ಲಿ ಸೇರಿಸಲಾಗಿದೆ.

iOS: ಆವೃತ್ತಿ 18.1.1 ಗಿಂತ ಹಳೆಯ ಆವೃತ್ತಿಗಳು
iPadOS: ಆವೃತ್ತಿ 17.7.2 ಗಿಂತ ಹಳೆಯ ಆವೃತ್ತಿಗಳು
macOS: ಆವೃತ್ತಿ 15.1.1 ಗಿಂತ ಹಳೆಯ ಆವೃತ್ತಿಗಳು
Safari: ಆವೃತ್ತಿ 18.1.1 ಗಿಂತ ಹಳೆಯ ಆವೃತ್ತಿಗಳು

ನಿಮ್ಮ ಸಾಧನವು ಈ ಯಾವುದೇ ಆವೃತ್ತಿಗಳಲ್ಲಿ ರನ್ ಆಗುತ್ತಿದ್ದರೆ ಅದು ಸೈಬರ್ ಬೆದರಿಕೆಗಳಿಗೆ ಗುರಿಯಾಗಬಹುದಾಗಿದೆ.

ಹಳೆಯ ಸಾಫ್ಟ್‌ವೇರ್‌ನಲ್ಲಿ ಕೆಲವೊಂದು ನ್ಯೂನತೆಗಳು ಕಂಡುಬಂದಿವೆ. ಸೈಬರ್ ಅಪರಾಧಿಗಳು ಅದರ ಲಾಭವನ್ನು ಪಡೆಯಬಹುದು. ಬಳಕೆದಾರರು ತಕ್ಷಣವೇ ತಮ್ಮ ಸಾಧನಗಳನ್ನು ಇತ್ತೀಚಿನ ಆವೃತ್ತಿಗೆ ಅಪ್​ಡೇಟ್​ ಮಾಡಲು CERT-In ಸಲಹೆ ನೀಡಿದೆ. ನಿಮ್ಮ ಸಾಧನಕ್ಕೆ ಸಾಫ್ಟ್‌ವೇರ್ ಅಪ್​ಡೇಟ್​ ಇನ್ನು ಮುಂದೆ ಲಭ್ಯವಿಲ್ಲದಿದ್ದರೆ ನೀವು ಹೊಸ ಸಾಧನವನ್ನು ಖರೀದಿಸುವುದು ಸೂಕ್ತ.

Settings: ನಿಮ್ಮ ಐಫೋನ್​ನ ಸೆಟ್ಟಿಂಗ್‌ಗಳ ಅಪ್ಲಿಕೇಶನ್ ಆಯ್ಕೆ ಮಾಡಿ.

General: ಇಲ್ಲಿಂದ General ಆಯ್ಕೆ ಕ್ಲಿಕ್ ಮಾಡಿ.

Software Update: ಈಗ ಸಾಫ್ಟ್‌ವೇರ್ ಅಪ್‌ಡೇಟ್ ಆಯ್ಕೆ ಆಯ್ದುಕೊಳ್ಳಿ.

Download and Install​: ಅಪ್​ಡೇಟ್​ ಲಭ್ಯವಿದ್ದರೆ ಅದನ್ನು ಡೌನ್‌ಲೋಡ್ ಮಾಡಿ ಮತ್ತು ಇನ್​ಸ್ಟಾಲ್​ ಮಾಡಿ. ಈ ರೀತಿಯಲ್ಲಿ ನಿಮ್ಮ ಫೋನ್ ಅಪ್​ಡೇಟ್​ ಆಗುತ್ತದೆ.

Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

MOTOROLA EDGE 60 FUSION – ಅದ್ಭುತವಾದ ಕ್ಯಾಮೆರಾ ಸೆಟಪ್, ವಾಟರ್ ಪ್ರೊಟೆಕ್ಷನ್ – ಮೊಟೊರೊಲಾದ ಹೊಸ ಫೋನ್ನ ಬೆಲೆ ಕೇವಲ ಇಷ್ಟೇ!

Motorola Edge 60 Fusion: ಬಹುನಿರೀಕ್ಷಿತ ' MOTOROLA EDGE 60 FUSION' ಕೊನೆಗೂ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಕಂಪನಿಯು ಇದನ್ನು ' MOTOROLA EDGE...

RASHMIKA MANDANNA – ‘ನಾನು ಹೈದರಾಬಾದ್ನವಳು’: ರಶ್ಮಿಕಾ ಮಂದಣ್ಣ ಹೇಳಿಕೆ ವಿಚಾರ; ಮುಂದುವರಿದ ಪರ – ವಿರೋಧ ಚರ್ಚೆ

'ನ್ಯಾಷನಲ್ ಕ್ರಶ್' ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಜನಪ್ರಿಯ ನಟಿ RASHMIKA MANDANNA, ಭಾರತೀಯ ಚಿತ್ರರಂಗದಲ್ಲಿ ಮೋಡಿ ಮಾಡಿದ್ದಾರೆ. ತಮ್ಮ ನಟನಾ ಕೌಶಲ್ಯದಿಂದ ದೇಶಾದ್ಯಂತ ಅಭಿಮಾನಿಗಳ...

IPL SUBSCRIPTION PLANS – ಕೆಲವೇ ದಿನಗಳಲ್ಲಿ IPL ಹವಾ ಶುರು: ಈ ಕಂಪನಿಗಳ ಗ್ರಾಹಕರಿಗೆ ಅಗ್ಗದಲ್ಲಿ ಲಭ್ಯ!

JioHotstar Subscription: ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್‌ ಟೂರ್ನಿ ಮುಗೀತು. ಮುಂದಿನ ಕೆಲವೇ ದಿನಗಳಲ್ಲಿ ಐಪಿಎಲ್​ ಜಾತ್ರೆ ಆರಂಭವಾಗಲಿದೆ. ಇದಕ್ಕಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ...

IPHONE 17 SERIES – ಐಫೋನ್ 17 ಸೀರಿಸ್ ಡಿಟೆಲ್ಸ್ ಲೀಕ್ – ಇದರ ಸ್ಪೆಷಾಲಿಟಿ ಏನ್ ಗೊತ್ತಾ?

iPhone 17 Series: ಟೆಕ್ ದೈತ್ಯ ಆಪಲ್ ತನ್ನ ಹೊಸ ಐಫೋನ್ ಸೀರಿಸ್​ ಅನ್ನು ಪ್ರತಿ ವರ್ಷ ಮಾರುಕಟ್ಟೆಗೆ ಪರಿಚಯಿಸುತ್ತದೆ. ಈ ಕ್ರಮದಲ್ಲಿ ಈ ವರ್ಷವೂ...