Apple iPhone: ಕೇಂದ್ರ ಸರ್ಕಾರದ ಇಂಡಿಯನ್ ಕಂಪ್ಯೂಟರ್ ಎಮೆರ್ಜೆನ್ಸ್ ರೆಸ್ಪಾನ್ಸ್ ಟೀಂ (CERT-In) ಐಫೋನ್ ಮತ್ತು ಇತರ ಆಪಲ್ ಸಾಧನ ಬಳಕೆದಾರರಿಗೆ ಎಚ್ಚರಿಕೆ ಸಂದೇಶ ರವಾನಿಸಿದೆ. ಹಳೆಯ ಸಾಫ್ಟ್‌ವೇರ್ ಆವೃತ್ತಿಗಳನ್ನು ಬಳಸುತ್ತಿರುವ ಸಾಧನಗಳಿಗೆ ವಿಶೇಷವಾಗಿ ಈ ಎಚ್ಚರಿಕೆಯನ್ನು ನೀಡಲಾಗಿದೆ.
ವರದಿಯ ಪ್ರಕಾರ, ಈ ಸಾಧನಗಳಲ್ಲಿ ಗಂಭೀರವಾದ ಭದ್ರತಾ ದೋಷಗಳು ಕಂಡುಬಂದಿವೆ. ಇದು ಸೈಬರ್ ಬೆದರಿಕೆಗಳನ್ನು ಉತ್ತೇಜಿಸುತ್ತದೆ.
ಆಪಲ್ ಸಾಫ್ಟ್‌ವೇರ್‌ನ ಹಳೆಯ ಆವೃತ್ತಿಯನ್ನು ಆಧರಿಸಿದ ಸಾಧನಗಳಿಗೆ ಈ ಎಚ್ಚರಿಕೆಯನ್ನು ನೀಡಲಾಗಿದೆ. ಅಂದ್ರೆ ಐಫೋನ್, ಐಪ್ಯಾಡ್, ಮ್ಯಾಕ್ ಮತ್ತು ಸಫಾರಿನಂತಹ ಉತ್ಪನ್ನಗಳನ್ನು ಸಹ ಈ ಪಟ್ಟಿಯಲ್ಲಿ ಸೇರಿಸಲಾಗಿದೆ.
iOS: ಆವೃತ್ತಿ 18.1.1 ಗಿಂತ ಹಳೆಯ ಆವೃತ್ತಿಗಳು
iPadOS: ಆವೃತ್ತಿ 17.7.2 ಗಿಂತ ಹಳೆಯ ಆವೃತ್ತಿಗಳು
macOS: ಆವೃತ್ತಿ 15.1.1 ಗಿಂತ ಹಳೆಯ ಆವೃತ್ತಿಗಳು
Safari: ಆವೃತ್ತಿ 18.1.1 ಗಿಂತ ಹಳೆಯ ಆವೃತ್ತಿಗಳು
ನಿಮ್ಮ ಸಾಧನವು ಈ ಯಾವುದೇ ಆವೃತ್ತಿಗಳಲ್ಲಿ ರನ್ ಆಗುತ್ತಿದ್ದರೆ ಅದು ಸೈಬರ್ ಬೆದರಿಕೆಗಳಿಗೆ ಗುರಿಯಾಗಬಹುದಾಗಿದೆ.
ಹಳೆಯ ಸಾಫ್ಟ್‌ವೇರ್‌ನಲ್ಲಿ ಕೆಲವೊಂದು ನ್ಯೂನತೆಗಳು ಕಂಡುಬಂದಿವೆ. ಸೈಬರ್ ಅಪರಾಧಿಗಳು ಅದರ ಲಾಭವನ್ನು ಪಡೆಯಬಹುದು. ಬಳಕೆದಾರರು ತಕ್ಷಣವೇ ತಮ್ಮ ಸಾಧನಗಳನ್ನು ಇತ್ತೀಚಿನ ಆವೃತ್ತಿಗೆ ಅಪ್‌ಡೇಟ್ ಮಾಡಲು CERT-In ಸಲಹೆ ನೀಡಿದೆ. ನಿಮ್ಮ ಸಾಧನಕ್ಕೆ ಸಾಫ್ಟ್‌ವೇರ್ ಅಪ್‌ಡೇಟ್ ಇನ್ನು ಮುಂದೆ ಲಭ್ಯವಿಲ್ಲದಿದ್ದರೆ ನೀವು ಹೊಸ ಸಾಧನವನ್ನು ಖರೀದಿಸುವುದು ಸೂಕ್ತ.
Settings: ನಿಮ್ಮ ಐಫೋನ್ನ ಸೆಟ್ಟಿಂಗ್‌ಗಳ ಅಪ್ಲಿಕೇಶನ್ ಆಯ್ಕೆ ಮಾಡಿ.
General: ಇಲ್ಲಿಂದ General ಆಯ್ಕೆ ಕ್ಲಿಕ್ ಮಾಡಿ.
Software Update: ಈಗ ಸಾಫ್ಟ್‌ವೇರ್ ಅಪ್‌ಡೇಟ್ ಆಯ್ಕೆ ಆಯ್ದುಕೊಳ್ಳಿ.
Download and Install: ಅಪ್‌ಡೇಟ್ ಲಭ್ಯವಿದ್ದರೆ ಅದನ್ನು ಡೌನ್‌ಲೋಡ್ ಮಾಡಿ ಮತ್ತು ಇನ್ಸ್ಟಾಲ್ ಮಾಡಿ. ಈ ರೀತಿಯಲ್ಲಿ ನಿಮ್ಮ ಫೋನ್ ಅಪ್‌ಡೇಟ್ ಆಗುತ್ತದೆ.